ಮೈಟಾಸಿಸ್
ಮೈಟಾಸಿಸ್ ಎಂಬುದು ಒಂದುಬಗೆಯ ಜೀವಕೋಶ ವಿಭಜನೆ. ಇದು ಜೀವಕೋಶದ ಕಾಲಚಕ್ರದ ಒಂದು ಅಂಗ. ಮೂಲಕೋಶದಲ್ಲಿನ ಪ್ರತಿಯೊಂದು ವರ್ಣತಂತುವಿನ ಯಥಾರೂಪವೊಂದು ಸೃಷ್ಟಿಯಾಗುತ್ತದೆ. ಎರಡು ಕೇಂದ್ರಗಳು (ನ್ಯೂಕ್ಲಿಯಸ್) ಸೃಷ್ಟಿಯಾಗಿ ವರ್ಣತಂತುಗಳ ಮೂಲ ಮತ್ತು ಪ್ರತಿ ವಿವಿಧ ಕೇಂದ್ರಗಳನ್ನು ಸೇರುತ್ತವೆ. ಸಾಧಾರಣವಾಗಿ ಮೈಟಾಸಿಸ್ ಪ್ರಕ್ರಿಯೆಯ ನಂತರ ಸೈಟೋಕೈನೆಸಿಸ್ ಎಂಬ ಪ್ರಕ್ರಿಯೆ ನಡೆಯುತ್ತದೆ; ಇಲ್ಲಿ ಜೀವಕೋಶದ ಸೈಟೋಪ್ಲಾಸಮ್ ಮತ್ತಿತರ ಅಂಗಾಂಗಗಳು ಹಾಗೂ ಹೊರಕವಚವೂ ಇಬ್ಭಾಗವಾಗಿ ಎರಡು ಮರಿಕೋಶಗಳ ಜನನವಾಗುತ್ತದೆ. ಕೆಳಗಿರುವ ಚಿತ್ರದಲ್ಲಿ ಮೂಲಕೋಶದ ವರ್ಣತಂತುಗಳು ಮೈಟಾಸಿಸ್ ಮೂಲಕ ಹೇಗೆ ವಿಭಜಿತವಾಗುತ್ತವೆ ಎಂಬುದನ್ನು ತೋರಿಸಲಾಗಿದೆ.
ಉದಾಹರಣೆ
ಬದಲಾಯಿಸಿಈರುಳ್ಳಿಯಲ್ಲಿ ವಿವಿಧ ಜೀವಕೋಶಗಳು ಮೈಟಾಸಿಸ್ ವಿವಿಧ ಘಟ್ಟಗಳಲ್ಲಿ ಇರುವುದನ್ನು ಕೆಳಗಿನ ಚಿತ್ರ ತೋರಿಸುತ್ತದೆ. ಇಲ್ಲಿ a ಬಗೆಯ ಜೀವಕೋಶಗಳು ವಿಭಜನೆಯಾಗುತ್ತಿಲ್ಲ. b ಬಗೆಯ ಕೋಶಗಳಲ್ಲಿ ಕೇಂದ್ರವು ವಿಭಜನೆಯ ಮೊದಲ ಹಂತದಲ್ಲಿದೆ. c ಎಂಬ ಕೋಶಗಳಲ್ಲಿ ಕೇಂದ್ರ ವಿಭಜನೆ ಸಂಪೂರ್ಣಗೊಂಡಿದೆ. e ಎಂಬುದು ಈಗ ತಾನೇ ವಿಭಜನೆಯ ಪ್ರಕ್ರಿಯೆ ಮುಗಿಸಿದ ಮರಿಕೋಶಗಳು.
ಜೀವಿಗಳಲ್ಲಿ ಎರಡು ಮುಖ್ಯ ಬಗೆಗಳನ್ನು ಗುರುತಿಸಬಹುದು.
- ಪ್ರೋಕಾರಿಯೋಟ್ಸ್ ಅಥವಾ ನ್ಯೂಕ್ಲಿಯಸ್ ಇಲ್ಲದ ಏಕಾಣುಜೀವಿಗಳು - ಇಂಥ ಜೀವಿಗಳಲ್ಲಿ ಒಂದೇ ಜೀವಕೋಶವಿರುತ್ತದೆ; ಈ ಜೀವಕೋಶದಲ್ಲಿ ಹೊರಕವಚವುಳ್ಳ ಕೇಂದ್ರ (ನ್ಯೂಕ್ಲಿಯಸ್) ಆಗಲೀ ಅಂಗಾಂಗಗಳಾಗಲೀ ಇರುವುದಿಲ್ಲ. ಉದಾ - ಬ್ಯಾಕ್ಟೀರಿಯಾ ಇಂಥ ಜೀವಿಗಳು ಇಬ್ಭಾಗವಾಗುವ ಮೂಲಕ (ಬೈನರಿ ಫಿಷನ್) ಮೂಲಕ ಪುನರುತ್ಪತ್ತಿ ಹೊಂದುತ್ತವೆ.
- ಯೂಕಾರಿಯೋಟ್ಸ್ ಅಥವಾ ಪ್ರತ್ರಿ ಜೀವಕೋಶದಲ್ಲಿ ಕೇಂದ್ರ ಮತ್ತಿತರ ಅಂಗಾಂಗಗೆಲ್ಲಾ ಸರಿಯಾಗಿರುವ ಜೀವಿಗಳು - ಇಂಥ ಜೀವಿಗಳಲ್ಲಿ ಒಂದಕ್ಕಿಂತ ಹೆಚ್ಚು ಜೀವಕೋಶಗಳಿರುತ್ತವೆ ಮತ್ತು ಪ್ರತಿಯೊಂದು ಜೀವಕೋಶದಲ್ಲೂ ಒಂದು ನ್ಯೂಕ್ಲಿಯಸ್ ಅಥವಾ ಕೇಂದ್ರ ಹಾಗೂ ಸೈಟೋಪ್ಲಾಸಮ್ ಮತ್ತಿತರ ಅಂಗಾಂಗಗಳಿರುತ್ತವೆ. ಕೇಂದ್ರ, ಸೈಟೋಪ್ಲಾಸಮ್ ಮತ್ತು ಅಂಗಾಂಗಗಳು ಒಂದು ತೆಳ್ಳನೆಯ ರಕ್ಷಾಕವಚದ ಒಳಗೆ ಇರುತ್ತವೆ. ಮೈಟಾಸಿಸ್ ಪ್ರಕ್ರಿಯೆ ಕಂಡುಬರುವುದು ಈ ಜೀವಿಗಳಲ್ಲಿ ಮಾತ್ರ.
ಕಂಡು ಹಿಡಿದವರು
ಬದಲಾಯಿಸಿಆಟೋ ಬುಷ್ಲಿ ಎಂಬ ಜರ್ಮನ್ ಜೀವವಿಜ್ಞಾನಿ ಎಂಬುವನು ಮೈಟಾಸಿಸ್ ಪ್ರಕ್ರಿಯೆಯನ್ನು ಮೊದಲು ಗಮನಿಸಿದ ಎಂದು ನಂಬಲಾಗುತ್ತದೆ [೧]. ಮೈಟಾಸಿಸ್ ಎಂಬ ಹೆಸರನ್ನು ನೀಡಿದವನು ವಾಲ್ತರ್ ಫ್ಲೆಮಿಂಗ್ (೧೮೮೨).[೨]
ಮಹತ್ವ
ಬದಲಾಯಿಸಿಒಂದು ಜೀವಕೋಶವು ಎರಡಾದಾಗ ಎರಡೂ ಮರಿಕೋಶಗಳು ಮೂಲ ಕೋಶದ ವರ್ಣತಂತುಗಳ ತದ್ರೂಪನ್ನು ಹೊಂದಿರುತ್ತವೆ. ಇದರಿಂದಲೇ ಮೂಲಕೋಶವನ್ನು ಎರಡೂ ಮರಿಕೋಶಗಳು ಸಂಪೂರ್ಣವಾಗಿ ಹೋಲುತ್ತವೆ. ಮೂಲಕೋಶದಲ್ಲಿ ಇದ್ದಷ್ಟೇ ಸಂಖ್ಯೆಯಲ್ಲಿ ಮರಿಕೋಶಗಳಲ್ಲೂ ವರ್ಣತಂತುಗಳು ಇರುತ್ತವೆ. ಇದು ಮೈಟಾಸಿಸ್ ಮಹತ್ವ. ಮೈಟಾಸಿಸ್ ನಡೆಯುವುದು ಕೆಳಗಿನ ಸಂದರ್ಭಗಳಲ್ಲಿ:
- ಜೀವಿಯ ಬೆಳವಣಿಗೆ - ಪ್ರಜನನ ಕ್ರಿಯೆಯಲ್ಲಿ ಜೈಗೋಟ್ ಎಂಬ ಒಂದೇ ಕೋಶವಾಗಿದ್ದ ಒಂದು ಜೀವಿಯು ಮೈಟಾಸಿಸ್ ಮೂಲಕ ವಿಭಜನೆಯಾಗುತ್ತಾ ಬೆಳೆಯುತ್ತದೆ. ಮಗು ಬೆಳೆದು ದೊಡ್ಡ ಆಕಾರ ಪಡೆದುಕೊಳ್ಳುವುದು ಮೈಟಾಸಿಸ್ ಕಾರಣವೇ.
- ಹೊಸ ಜೀವಕೋಶಗಳ ಸೇರ್ಪಡೆ - ದೇಹದಲ್ಲಿರುವ ಜೀವಕೋಶಗಳಲ್ಲಿ ಪ್ರತಿದಿನ ಹಲವು ಸಾಯುತ್ತವೆ ಉದಾ. ಚರ್ಮದ ಜೀವಕೋಶಗಳು. ಇವುಗಳ ಬದಲು ಹೊಸ ಜೀವಕೋಶಗಳು ಮೈಟಾಸಿಸ್ ಮೂಲಕ ಸೇರ್ಪಡೆಯಾಗುತ್ತವೆ. ಇವು ಹಿಂದಿದ್ದ ಜೀವಕೋಶಗಳ ತದ್ರೂಪುಗಳು. ನಮ್ಮ ದೇಹದಲ್ಲಿರುವ ಕೆಂಪು ರಕ್ತಕಣಗಳು ಪ್ರತಿ ನಾಲ್ಕುತಿಂಗಳ ನಂತರ ಪುನರುತ್ಪತ್ತಿಯಾಗುತ್ತವೆ; ಇದಕ್ಕೂ ಮೈಟಾಸಿಸ್ ಪ್ರಕ್ರಿಯೆಯೇ ಮೂಲ.
- ಹೊಸ ಅಂಗಾಂಗಗಳ ಪುನರ್ಸೃಷ್ಟಿ - ಕೆಲವು ಜೀವಿಗಳು ತಮ್ಮ ಅಂಗಾಂಗಗಳು ಕಳೆದು ಹೋದಾಗ ಮತ್ತೆ ಸೃಷ್ಟಿಸಿಕೊಳ್ಳಬಲ್ಲವು, ಉದಾ. ನಕ್ಷತ್ರಮೀನು ತನ್ನ ಕತ್ತರಿಸಿ ಹೋದ ಭುಜಗಳನ್ನು ಮತ್ತೆ ಬೆಳೆಸಿಕೊಳ್ಳಬಲ್ಲದು. ಇದು ಮೈಟಾಸಿಸ್ ಮೂಲಕ ಸಾಧ್ಯ.
- ಅಲೈಂಗಿಕ ಪುನರುತ್ಪತ್ತಿ - ಹೈಡ್ರಾ ಎಂಬ ಜೀವಿ ತನ್ನ ತದ್ರೂಪವೇ ಆದ ಇನ್ನೊಂದು ಜೀವಿಯನ್ನು ಲೈಂಗಿಕ ಪ್ರಕ್ರಿಯೆ ಇಲ್ಲದೆ ಸೃಷ್ಟಿಸಬಲ್ಲದು. ಹೈಡ್ರಾದ ಹೊರಮೈಯಲ್ಲಿರುವ ಜೀವಕೋಶಗಳು ಮೈಟಾಸಿಸ್ ಮೂಲಕ ದ್ವಿಗುಣಗೊಳ್ಳಲು ಪ್ರಾರಂಭಿಸುತ್ತವೆ. ಆಗ ಒಂದು "ಮೊಗ್ಗು" ರೂಪಗೊಳ್ಳುತ್ತದೆ. ಈ ಮೊಗ್ಗು ಒಂದು ಸಂಪೂರ್ಣ ಹೈಡ್ರಾ ಜೀವಿಯಾಗಿ ಬೆಳೆದು ಮೂಲಜೀವಿಯಿಂದ ಪ್ರತ್ಯೇಕವಾಗುತ್ತದೆ. ಅನೇಕ ಸಸ್ಯಗಳಲ್ಲೂ ಈ ಬಗೆಯ ಅಲೈಂಗಿಕ ಪುನರುತ್ಪತ್ತಿ ಕಾಣಸಿಕ್ಕುತ್ತದೆ.
ಇದನ್ನೂ ನೋಡಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ Fokin, S. I. (2013). Otto Bütschli (1848–1920): Where we will genuflect? Archived 2014-08-08 ವೇಬ್ಯಾಕ್ ಮೆಷಿನ್ ನಲ್ಲಿ. Protistology, 8 (1), 22–35.
- ↑ Sharp, L. W. (1921). Introduction To Cytology. New York: McGraw Hill Book Company Inc. p. 143.