ಮೈಗಾಲೊಮಾರ್ಫ ಎಂಬುದು ಕೆಲತರದ ಜಾತಿಯ ಜೇಡಗಳನ್ನು ಕೂಡಿದ ಉಪಗಣ, ಆರ್ತೊಗ್ನಾತ ಪರ್ಯಾಯ ನಾಮ.

ಮೈಗಾಲೊಮಾರ್ಫ
Temporal range: Anisian–Recent
ಮಿಸುಲೆನಾ ಬ್ರ್ಯಾಡ್‍ಲೇಯಿ, ಒಂದು ಮೌಸ್ ಸ್ಪೈಡರ್
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಆರ್ಥ್ರೊಪೋಡಾ
ಉಪವಿಭಾಗ: ಚೆಲಿಸರೇಟಾ
ವರ್ಗ: ಅರಾಕ್ನಿಡಾ
ಗಣ: ಅರಾನಿಯೀ
ಉಪಗಣ: ಒಪಿಸ್ತೊಥೀಲೀ
ಕೆಳಗಣ: ಮೈಗಾಲೊಮಾರ್ಫ
Pocock, 1892[]
ಉಪವಿಭಾಗಗಳು
  • ಅಟೈಪಾಯ್ಡೀ
  • ಏವಿಕ್ಯುಲಾರಿಯಾಯ್ಡೀ

ಈ ಗುಂಪಿಗೆ ಸೇರಿದ ಜೇಡಗಳ ಗಾತ್ರ ಹಿರಿದಾಗಿದ್ದು ಇವುಗಳಲ್ಲಿ ಶ್ವಾಸನಳಿಕೆಗಳಿರುವುದಿಲ್ಲ. ಉಸಿರಾಡಲು 2-4 ಜೊತೆ ಫುಪ್ಪುಸ ಸಂಪುಟಗಳಿವೆ. ತುಂಬ ಪ್ರಾಚೀನಕಾಲದವು ಎಂದು ಪರಿಗಣಿಸಲ್ಪಡುವ ಈ ಗುಂಪಿಗೆ ಸೇರಿದ ಜೇಡಗಳಲ್ಲಿ ಶಿರೋಕ್ಷಕವಚದ (ಕ್ಯಾರಪೆಸ್) ಮುಂಭಾಗದಲ್ಲಿ ಕಾಣಬರುವ ಕೆಲಿಸರಿ ಸಮಾಂತರವಾಗಿ ಚಲಿಸುವ ಕಾರಣ ಇವುಗಳನ್ನು ಆರ್ತೊಗ್ನಾತಗಳೆಂದು ಪರಿಗಣಿಸುತ್ತಾರೆ. ಇವುಗಳ ಉದರದ ಭಾಗಗಳಲ್ಲಿ ಯಾವಾಗಲೂ 4 ಜೊತೆಗಿಂತ ಕಡಿಮೆ ಸ್ನಾಯುಗಳಿರುತ್ತವೆ. ಬಲೆಯನ್ನು ರಚಿಸಲು ಬೇಕಾದ ಸ್ಪಿನರೆಟ್ಸ್ ದೇಹದ ಹಿಂಭಾಗದಲ್ಲಿರುತ್ತದೆ. ಮೈಗಾಲೊಮಾರ್ಫ ಜೇಡಗಳು ಆಲಿಕೆ ಆಕಾರದ ಬಲೆಯನ್ನು ಇಲ್ಲವೇ ನೆಲವನ್ನು ಕೊರೆದು ಗೂಡನ್ನು ರಚಿಸಿ ಜೀವಿಸುತ್ತವೆ. ಈ ಜೇಡಗಳು ಆಹಾರವಿಲ್ಲದೆ ಎರಡು ವರ್ಷಗಳ ಕಾಲ ಬದುಕಬಲ್ಲ ಸಾಮರ್ಥ್ಯ ಪಡೆದಿವೆ ಎಂದು ಬರ್ಗೆ ಎಂಬಾತ ವಿವರಿಸಿದ್ದಾನೆ.

ಪ್ರಸಿದ್ಧ ಪ್ರಭೇದಗಳು

ಬದಲಾಯಿಸಿ

ಮೈಗಾಲೊಮಾರ್ಫ ತರದ ಜೇಡಗಳಲ್ಲಿ ಬೋನಬಾಗಿಲ ಜೇಡ (ಟ್ರ್ಯಾಪ್ ಡೋರ್ ಸ್ಪೈಡರ್) ಹಾಗೂ ಟರ‍್ಯಾಂಟುಲ ಜೇಡಗಳು ಬಲು ಪ್ರಸಿದ್ಧವಾದವು.

  • ಬೋನಬಾಗಿಲ ಜೇಡ, ಸುಮಾರು 15 ಸೆಂ.ಮೀ. ಆಳದಷ್ಟು ದೊಡ್ಡ ಸುರಂಗವನ್ನು ಕೊರೆದು ಒಳಗಡೆಗೆ ರೇಷ್ಮೆದಾರದ ಹಾಸಿಗೆಯನ್ನು ರಚಿಸಿ ಉತ್ತಮ ತರದ ಕೀಲುಗಳಿರುವ ಬಾಗಿಲನ್ನು ರೂಪಿಸಿ ವೈರಿಗಳ ಕಣ್ಣುಮರೆಸಿ, ಸೊಳ್ಳೆಗಳನ್ನು ಉಪಾಯದಿಂದ ಹಿಡಿದು ತಿನ್ನುವುದು. ಉಷ್ಣವಲಯ ಹಾಗೂ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
  • ಜೇಡಜಗತ್ತಿನ ರಾಕ್ಷಸನೆಂದು ಕರೆಯಲ್ಪಡುವ, ವಿಷಕಾರಿ ಟರ‍್ಯಾಂಟುಲ, ಚಿಕ್ಕಪುಟ್ಟ ಪ್ರಾಣಿಗಳನ್ನು ಬೆನ್ನಟ್ಟಿ ಬೇಟೆಯಾಡಿ ತಿನ್ನುತ್ತವೆ. ಅಮೆರಿಕದ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತದೆ. ಇದರ ಕಡಿತದಿಂದ ಆಗುವ ಪರಿಣಾಮಕ್ಕೆ ಟರ‍್ಯಾಂಟಿಸಮ್ ಎಂದು ಹೆಸರು.

ಉಲ್ಲೇಖಗಳು

ಬದಲಾಯಿಸಿ
  1. Dunlop, Jason A. & Penney, David (2011). "Order Araneae Clerck, 1757" (PDF). In Zhang, Z.-Q. (ed.). Animal biodiversity: An outline of higher-level classification and survey of taxonomic richness. Zootaxa. Auckland, New Zealand: Magnolia Press. ISBN 978-1-86977-850-7. Retrieved 2015-10-31.

ಸಾಮಾನ್ಯ ಉಲ್ಲೇಖಗಳು

ಬದಲಾಯಿಸಿ

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: