ಮೇರಿ ಚಡ್ಲೀಗಘ್ ರವರು ಆಗಸ್ಟ್ ೧೬೫೬ ರಲ್ಲಿ ವಿನ್ಸ್ಲೇಡ್,ಡೆವನ್ ಎಂಬ ನಗರದಲ್ಲಿ ಜನಿಸಿದರು. ಇವರು ಒಬ್ಬ ಆಂಗ್ಲದ ಪ್ರಖ್ಯಾತ ಕವಯಿತ್ರಿ. ಇವರ ಬಹುಪಾಲು ಕವಿತೆಗಳು ಕೃತಿಗಳು ಹಾಗು ಲೇಖನಗಳು ಸ್ತ್ರೀ ವಾದವನ್ನು ಪ್ರತಿಪಾದಿಸುತ್ತವೆ. ಅವರ ಜೀವನದ ಕಡೆಯ ಹತ್ತು ವರ್ಷದಲ್ಲಿ ಎರಡು ಪುಸ್ತಕಗಳು ನಾಲ್ಕು ಆವೃತ್ತಿಗಳಲ್ಲಿ ಪ್ರಕಟವಾದವು.ಮಾನವ ಸಂಭಂದಗಳು ಹಾಗೂ ಮಾನವನ ಪ್ರತಿಕ್ರಿಯೆ ಬಗ್ಗೆ ಅವರು ರಚಿಸಿರುವ ಕವಿತೆಗಳು ಹಾಗು ಸ್ತ್ರೀ ವಾದದ ಬಗ್ಗೆ ಅವರು ಬರೆದಿರುವ ಲೇಖನಗಳು ಈಗಲೂ ಮುದ್ರಿತವಾಗುತ್ತಿವೆ.[][]

ವೈಯಕ್ತಿಕ ಜೀವನ

ಬದಲಾಯಿಸಿ

ಇವರು ರಿಚರ್ಡ್ ಲೀ ಹಾಗೂ ಮೇರಿ ಸಿಡೆನ್ಹ್ಯಾಮ್ ರ ದಂಪತಿಗಳ ಮಗಳಾಗಿ ಜನಿಸಿದರು.ಇವರ ಮೂರು ಜನ ಮಕ್ಕಳಲ್ಲಿ ಮೇರಿಯವರು ಹಿರಿಯರು. ಇವರ ಹುಟ್ಟು ಹೆಸರು ಮೇರಿ ಲೀ.ಇವರ ಚಿಕ್ಕಪ್ಪ ವಿಲಿಯಮ್ ಸಿಡೆನ್ಹ್ಯಾಮ್ ಇಂಗ್ಲೀಷ್ ಸಂಸಿತ್ತಿನ ಪರವಾಗಿ ಸಿವಿಲ್ ವಾರ್ ನಲ್ಲಿ ಪಾಲ್ಗೊಂಡಿದ್ದರು.ಇವರ ಇನ್ನೊಬ್ಬ ಚಿಕ್ಕಪ್ಪ ಡಾ.ಥಾಮಸ್ ಸಿಡೆನ್ಹ್ಯಾಮ್ರವರು ಸಾಂಕ್ರಾಮಿಕ ರೋಗಗಳ ಅಧ್ಯಯನದಲ್ಲಿ ತುಂಬಾ ಪ್ರಖ್ಯಾತಿಯನ್ನು ಪಡೆದಿದ್ದರು.[]

 
ಸೇಂಟ್ ಮೇರಿ ಚೇಡ್ಲೇಘ್

ವೈವಾಹಿಕ ಜೀವನ

ಬದಲಾಯಿಸಿ

ಇವರು ಸರ್ ಜಾರ್ಜ್ ಚಡ್ಲೀಘ್ ಎಂಬುವವರನ್ನು ೨೫ ಮಾರ್ಚ್ ೧೬೨೪ ರಲ್ಲಿ ವಿವಾಹವಾದರು.ಅವರ ಮದುವೆ ಅವರಿಗೆ ಇಷ್ಟವಿರಲಿಲ್ಲವೆಂದು ಅವರ ಜೀವನಚರಿತ್ರೆ ಬರೆದ ಚರಿತ್ರಾಕಾರರು ವಾದ ಮಾಡುತ್ತಾರೆ,ಏಕೆಂದರೆ ಇವರು ಸ್ತ್ರೀ ವಾದದ ಬಗ್ಗೆ ಹೆಚ್ಚು ಬರೆಯುತ್ತರಿಂದ ಇದು ಅವರ ಗಂಡನಿಗೆ ಇಷ್ಟವಿರಲಿಲ್ಲವೆಂದು ಕೆಲವರು ತಿಳಿಸುತ್ತಾ ಹೋಗುತ್ತಾರೆ.ಆದರೂ ಇವರು ಕೆಲವು ಸ್ತ್ರೀ ವಾದದ ಬಗ್ಗೆ ಪುಸ್ತಕಗಳನ್ನು ಪ್ರಕಟಿಸಲು ಅನುಮತಿ ಕೊಟ್ಟಿದ್ದರು.ಇವರ ಜೀವನದಲ್ಲಿ ನಡೆದ ಇನ್ನೊಂದು ಕಹಿ ಘಟನೆಯೆಂದರೆ ಇವರ ಒಬ್ಬ ಮಗಳು ಚಿಕ್ಕ ವಯಸ್ಸಿನಲ್ಲಿಯೇ ಮರಣಹೊಂದಿದ್ದರು,ಅವರ ಮಗಳ ಮರಣದ ದುಃಖವನ್ನು ಅವರ ಕೆಲವೊಂದು ಪತ್ರಗಳಲ್ಲಿ ಹಾಗೂ ಕವಿತೆಗಳಲ್ಲಿ ವ್ಯಕ್ತವಾಗಿದೆ.ಇವರು ಆ ಕಾಲದಲ್ಲಿ ಬೇರೆ ಹೆಣ್ಣುಮಕ್ಕಳ ರೀತಿ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆಯದಿದ್ದರೂ, ಇವರು ದೇವತಾಶಾಸ್ತ್ರ ಹಾಗೂ ತತ್ವಶಾಸ್ತ್ರವನ್ನು ಅದ್ಯಯನ ಮಾಡುವ ಮೂಲಕ ಅಗಾಧವಾದ ‌‍‍ಜ್ಞಾನವನ್ನು ಪಡೆದಿದ್ದರು.[]

ಇವರು ತೀವ್ರವಾದ ಸಂಧಿವಾತ ಕಾಯಿಲೆಯಿಂದ ಬಳಲುತ್ತಿದ್ದರಿಂದ ಡಿಸೆಂಬರ್ ೧೫ ೧೭೧೦ ರಂದು ಕೊನೆಯುಸಿರೆಳೆದರು.ಅಂದಿಗೆ ಆಂಗ್ಲ ಭಾಷೆಯ ಒಳ್ಳೆಯ ಕವಿಯ ಪ್ರಾಣಪಕ್ಷಿಯು ಹಾರಿಹೋಗಿತ್ತು.

 
ಸೆವೆರಲ್ ಒಕೆಶನ್ಸ್

ಸಾಹಿತ್ಯ ಕೃತಿಗಳು

ಬದಲಾಯಿಸಿ

ಇವರ ಕೃತಿ ಹಾಗೂ ಕವನಗಳಲ್ಲಿ ಮೇರಿ ಅಸ್ಟೆಲ್ಲ್ ರವರ ಪ್ರಭಾವವು ಎದ್ದು ಕಾಣುತ್ತದೆ. ಮೇರಿ ಅಸ್ಟೆಲ್ಲ್ ರವರು ಸಹ ಸ್ತ್ರೀವಾದ ವನ್ನು ಪ್ರತಿಪಾದಿಸುತ್ತಿದ್ದ ಕವಯಿತ್ರಿ.೧) ದ ಲೇಡಿಸ್ ಡಿಫ಼ೆನ್ಸ್[] ಅಥವಾ ದ್ ಬ್ರೈಡ್-ವಮೆನ್'ಸ್ ಕೌನ್ಸಿಲರ್ ಆನ್ಸರ್ಡ್(೧೯೦೧,ಲಂಡನ್) (ದ ಲೇಡೀಸ್ ಡಿಫೆನ್ಸ್ )- ಇದು ಸರ್ ಜಾನ್ ಬ್ರೂಟ್, ಸರ್ ವಿಲಿಯಮ್ ಲೊವೆಲ್ಲ್, ಮೆಲಿಸ್ಸ, ಮತ್ತು ಪಾರ್ಸನ್ ರ ನಡುವೆ ನಡೆದ ಸಂಭಾಷಣೆಯ ಕವಿತೆಯಾಗಿದೆ. ಈ ಕವಿತೆಯಲ್ಲಿ ಹೆಣ್ಣು ಮದುವೆಯ ಬಗ್ಗೆ ಯಾವ ರೀತಿಯ ದೃಷ್ಟಿಕೋನ ಇಟ್ಟುಕೊಂಡಿರುತ್ತಾರೆ ಎಂಬ ಕುರಿತು ರಚಿಸಲಾಗಿರುವ ಪದ್ಯವಾಗಿದೆ.೨) ಪೋಯೆಮ್ಸ್ ಅನ್ ಸೆವೆರಲ್ ಒಕೆಶೆನ್ಸ್(೧೭೦೩) (ಪೋಯಮ್ಸ್ ಆನ್ ಸೆವೆರಲ್ ಒಕೇಷನ್ಸ್)[]-ಈ ಕವಿತೆಯನ್ನು ಕ್ವೀನ್ ಅನ್ನೆ ರವರಿಗೆ ಸಮರ್ಪಿಸಿ ಬರೆದಿದ್ದಾರೆ. ೩) ಎಸ್ಸೆಯ್ಸ್ ಅಪಾನ್ ಸೆವೆರಲ್ ಸಬ್ಜೆಕ್ಟ್ಸ್[](ಲಂಡನ್ ೧೭೧೦) (ಎಸ್ಸೇಸ್ ಆನ್ ಸೆವೆರಲ್ ಸಬ್ಎಕ್ಟ್ಸ್) - ಇದರಲ್ಲಿ ಮೇರಿಯವರು ಸ್ತ್ರೀಯರು ಹಣ ಆಸ್ತಿ ಹಾಗು ಅಂತಸ್ತಿನ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳಬಾರದು ಎಂದು ಹೇಳಿದ್ದಾರೆ. ಇದು ಇವರ ಕೆಲವು ಕೃತಿಗಳು ಇವರ ಕೆಲವೊಂದು ಕೃತಿಗಳು ಬೆಳಕಿಗೆ ಬಂದಿಲ್ಲ.

ಜೀವನಚರಿತ್ರೆ

ಬದಲಾಯಿಸಿ

ಜಾರ್ಜ್ ಬಲ್ಲಾರ್ಡ್, ಮೆಮೋಯಿರ್ಸ್ ಆಫ್ ಸೆವೆರಿಲ್ ಲೇಡೀಸ್ ಆಫ್ ಗ್ರೇಟ್ ಬ್ರಿಟನ್, ಅವರ ಬರಹಗಳು ಅಥವಾ ಕೌಶಲ್ಯಕ್ಕಾಗಿ ಕಲಿತ ಭಾಷೆಗಳು, ಕಲೆ ಮತ್ತು ವಿಜ್ಞಾನದಲ್ಲಿ ಸಂಭ್ರಮಿಸಲಾಗಿದೆ - ೧೯೮೫ .[]

ಉಲ್ಲೇಖಗಳು

ಬದಲಾಯಿಸಿ
  1. https://plato.stanford.edu/entries/astell/
  2. https://en.wikipedia.org/wiki/Mary_Chudleigh
  3. "ಆರ್ಕೈವ್ ನಕಲು". Archived from the original on 2020-01-31. Retrieved 2020-01-12.
  4. https://www.poemhunter.com/lady-mary-chudleigh/biography/
  5. http://famouspoetsandpoems.com/poets/lady_mary_chudleigh/poems/7783
  6. https://digital.library.upenn.edu/women/chudleigh/poems/poems.html
  7. https://www.amazon.in/Essays-Several-Subjects-Written-Chudleigh/dp/1379924480
  8. https://www.poemhunter.com/lady-mary-chudleigh/biography/