ಮೆಸೊಮರಿಕೆ ಎಂದರೆ ಸಂಯುಕ್ತವೊಂದು ಅದರಲ್ಲಿಯ ಎಲೆಕ್ಟ್ರಾನುಗಳ ಸ್ಥಾನಗಳನ್ನು ಆಧರಿಸಿಕೊಂಡು ಒಂದು ಇಲ್ಲವೆ ಹೆಚ್ಚು ರಾಚನಿಕ ರೂಪಗಳಲ್ಲಿ ಇರಬಹುದಾದ ವಿದ್ಯಮಾನ (ಮೆಸೊಮರಿಸಮ್).[೧] ಉದಾಹರಣೆಗೆ R−C(=O)−R' ಅಸಂತೃಪ್ತ ಕೀಟೋನಿನ ಸಂದರ್ಭದಲ್ಲಿ ಹೇಳುವುದಾದರೆ ಆಕ್ಸಿಜನ್ ಪರಮಾಣುವಿನ ಸಾಪೇಕ್ಷ ವಿದ್ಯುತ್ ಋಣಾತ್ಮಕತೆ (ನೆಗೆಟಿವಿಟಿ) ಒಂದು ಎಲೆಕ್ಟ್ರಾನ್ ಜೋಡಿಯನ್ನು ಭಾಗಶಃ ಸ್ಥಳಾಂತರಿಸುತ್ತದೆ. ತತ್ಪರಿಣಾಮವಾಗಿ ಆವೇಶ ಬೇರ್ಪಡಿಕೆ (ಚಾರ್ಚ್ ಸೆಪರೇಷನ್) ಉಂಟಾಗುತ್ತದೆ:

    	                        +	 -
C = C – C = O			C – C =  - O

ಹೈಡ್ರಾಕ್ಸಿಲ್ ಗುಂಪು (--H), ಅಮೈನೊ ಗುಂಪು (--NH2) ಇಲ್ಲವೆ ಹ್ಯಾಲೊಜಿನ್ ಪರಮಾಣು (--Cl) ಮುಂತಾದವುಗಳ ಸನ್ನಿವೇಶಗಳಲ್ಲಿ ಎಲೆಕ್ಟ್ರಾನಿಕ್ ವಿಸ್ಥಾಪನೆಯಾದರೂ ಜೊತೆಗೂಡದ ಎಲೆಕ್ಟ್ರಾನುಗಳಲ್ಲಿ ಉಂಟಾಗುವುದು ಸಾಧ್ಯ. ಹೀಗೆ ವಿನೈಲ್ ಕ್ಲೋರೈಡ್ ಅಣು ಸಂಪೂರ್ಣವಾಗಿ (a) ಕೋವಲಿಂಟ್ ಸೂತ್ರದಿಂದಾಗಲಿ (c) ಸಂಪೂರ್ಣವಾಗಿ ಅಯಾನಿಕ್ ರಚನೆಯಿಂದಾಗಲಿ ಸ್ಪಷ್ಟವಾಗಿ ನಮೂದನೆಗೊಳ್ಳದೆ ಮೆಸೊಮರಿಕ್ ಸ್ಥಿತಿ (b) ಎಂಬುದರಿಂದ ಮಾತ್ರ ನಮೂದಾಗುತ್ತದೆ.

                        8-                      8+
CH2=CH-Cl2		CH2=CH-Cl		CH2-CH=Cl
   (a)			   (b)			  (c)

ಇದರಲ್ಲಿ ಕ್ಲೋರೀನ್ ಪರಮಾಣುವಿನಿಂದ ಎಲೆಕ್ಟ್ರಾನ್ ಜೋಡಿಯ ಸ್ಥಳಾಂತರದ ಪರಿಣಾಮವಾಗಿ ಕ್ಲೋರೀನ್ ಭಾಗಶಃ ಧನಾವೇಶವನ್ನೂ (+) ಅಂತ್ಯದ ಕಾರ್ಬನ್ ಪರಮಾಣು ಭಾಗಶಃ ಋಣಾವೇಶವನ್ನೂ (-) ಹೊಂದಿರುತ್ತದೆ. ಎಲೆಕ್ಟ್ರಾನ್ ರಚನೆಗಳ ಸಂಲಯನ (ಆರಂಭದಲ್ಲಿ ಇದನ್ನು ಅಂತರ್ಬೋಧೆಯಿಂದ ಗ್ರಹಿಸಲಾಗಿತ್ತು) ಅನುರಣನ ಪರಿಕಲ್ಪನೆಗೆ ಎಡೆಮಾಡಿಕೊಟ್ಟಿದೆ. ಈ ಸಂಲಯನದಲ್ಲಿ ಅಣುವಿನ ಶಕ್ತಿ ರಾಸಾಯನಿಕ ಸೂತ್ರಗಳ ಪೈಕಿ ಯಾವುದೇ ಒಂದರಿಂದ ನಿರೀಕ್ಷಿಸಬಹುದಾದ ನಿಮ್ನತಮ ಶಕ್ತಿ ಮಟ್ಟಕ್ಕಿಂತಲೂ ಕೆಳಗಿನದಕ್ಕೆ ಇಳಿದಿರುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. IUPAC, Compendium of Chemical Terminology, 2nd ed. (the "Gold Book") (1997). Online corrected version: (2006–) "Resonance". doi:10.1351/goldbook.R05326

ಹೊರಗಿನ ಕೊಂಡಿಗಳು ಬದಲಾಯಿಸಿ

  • Goudard, N.; Carissan, Y.; Hagebaum-Reignier, D.; Humbel, S. (2008). "HuLiS : Java Applet − Simple Hückel Theory and Mesomery − program logiciel software" (in ಫ್ರೆಂಚ್). Retrieved 29 October 2010.