ಮೆನ್ನರ್
ಅಗಸ್ಟ್ ಮೆನ್ನರ್- ಇವರು ಭಾರತಕ್ಕೆ ಬಂದ ಬಾಸೆಲ್ ಮಿಶನರಿಗಳಲ್ಲಿ ಒಬ್ಬರು. ಇವರು ಮಂಗಳೂರು,ಮುಲ್ಕಿ, ಉಡುಪಿ ಮುಂತಾದ ಕಡೆಗಳಲ್ಲಿ ಕ್ರೈಸ್ತ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದವರು. ತುಳು ಭಾಷೆಗೆ ಇವರ ಕೊಡುಗೆ ಅಪಾರ . ೧೮೮೮ರಲ್ಲಿ ಪ್ರಕಟವಾದ ತುಳು ನಿಘಂಟಿನ ಲೇಖಕ ಇವರು. ಕೆಮರರ್ ಎಂಬ ಮಿಶನರಿಯೋರ್ವರು ಪ್ರಾರಂಭಿಸಿದ ತುಳು ನಿಘಂಟನ್ನು ಪೂರ್ತಿಗೊಳಿಸಿದವರು ಇವರೇ. ಇದಲ್ಲದೆ ೧೬೫ಕ್ಕೂ ಮಿಕ್ಕಿ ತುಳು ಕ್ರೈಸ್ತ ಗೀತೆಗಳನ್ನು ಬರೆದಿದ್ದಾರೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಕೆವಿನ್ ಜೊಸೆಫ್