ಮೆಟ್ರೊ ಸಂಚಾರ ಮತ್ತು ಅದರ ಕಾಮಗಾರಿ

ಈ ಲೇಖನವನ್ನು ವಿಶ್ವಕೋಶದ ಲೇಖನಕ್ಕೆ ತಕ್ಕ ಶೈಲಿಯಲ್ಲಿ ಬರೆಯಲಾಗಿಲ್ಲ.
ದಯವಿಟ್ಟು ಇದನ್ನು ಉತ್ತಮಗೊಳಿಸಿ, ಅಥವಾ ಚರ್ಚೆ ಪುಟದಲ್ಲಿ ಚರ್ಚಿಸಿ. ಸಲಹೆಗಳಿಗಾಗಿ ವಿಕಿಪೀಡಿಯದ ಉತ್ತಮ ಲೇಖನಗಳನ್ನು ಬರೆಯಲು ಮಾರ್ಗದರ್ಶನ ಲೇಖನವನ್ನು ನೋಡಿ.


(*) ಮೆಟ್ರೊ ಕಾಮಗಾರಿ: ಭೂ ಸ್ವಾಧೀನ ಸಮಸ್ಯೆ, ಮರ ಕಡಿಯಲು ಆಕ್ಷೇಪ, ಖಾಸಗಿಯವರಿಂದ ತಕರಾರು, ಸುರಂಗ ಕಾಮಗಾರಿ,ಸಂತ್ರಸ್ತರ ಸಮಸ್ಯೆ ಹೀಗೆ ಸಾಲು ಸಾಲು ಸಮಸ್ಯೆಗಳಿಂದ ಮೆಟ್ರೊ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಬೆಂಗಳೂರಿನ ನಾಲ್ಕೂ ಭಾಗದಲ್ಲಿ ಮೆಟ್ರೊ ರೈಲು ಓಡಾಡಲು ಇನ್ನೂ ಒಂದೂವರೆ ವರ್ಷ ಬೇಕಾಗುತ್ತದೆ. ಬೆಂಗಳೂರಿನ ನಾಗರೀಕರಂತೂ ಮೆಟ್ರೊ ಎಂದು ಪೂರ್ಣಗೊಳ್ಳುವುದೋ ಎಂದು ಕಣ್ಣರಳಿಸಿ ಕಾಯುತ್ತಿದ್ದಾರೆ. ಮೊದಲ ಹಂತದ ಕಾಮಗಾರಿಕೆ ೧೧,೬೦೯ ಕೋಟಿ ರೂ. ಅಂದಾಜು ತಯಾರಿಸಲಾಗಿತ್ತು. ಕಾಮಗಾರಿಗೆ ಇವರಿಗೆ ೭,೧೬೮ ಕೋಟಿ ರೂ. ವೆಚ್ಚವಾಗಿದೆ. ಮೆಟ್ರೊ ಕಾಮಗಾರಿ ಪೂರ್ಣಗೊಂಡರೆ ಪ್ರತಿನಿತ್ಯ ೪೦ ಸಾವಿರ ಜನರ ಸಂಚಾರ ಸಾಧ್ಯವಾಗುತ್ತದೆ. ಬೆಂಗಳೂರಿನಲ್ಲಿ ನಿತ್ಯ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವುದರಲ್ಲಿ ಸಂದೇಹವಿಲ್ಲ.

(*) ಬೆಂಗಳೂರಿನಲ್ಲಿ ಮಟ್ರೊ ಸಂಚಾರ: ಸಧ್ಯಕ್ಕೆ ೬.೭ ಕಿ.ಮೀ. ಮಾತ್ರ ಮೆಟ್ರೊ ಸಂಚಾರಿಸುತ್ತಿದೆ, ಅಂದರೆ ಎಂ.ಜಿ ರಸ್ತೆಯಿಂದ ಬಯ್ಯಪ್ಪನಹಳ್ಳಿವರೆಗೆ. ಇನ್ನೂ ೩೫ ಕಿ.ಮೀ. ಸಂಚಾರ ಕಾಮಗಾರಿ ಬಾಕಿ ಇದೆ. ಬಯ್ಯಪ್ಪನಹಳ್ಳಿ ಯಿಂದ ಮೈಸೂರು ರಸ್ತೆ ತನಕ, ಮೆಲ್ಬಾಗದಲ್ಲಿ ೩೩ ನಿಲ್ದಾಣ ನಿರ್ಮಿಸಲಾಗಿದ್ದು ಸುರಂಗದಲ್ಲಿ ೭ ನಿಲ್ದಾಣಗಳಿವೆ. ಒಟ್ಟು ೧೮.೧೦ ಕಿ.ಮೀ. ಉದ್ದದ ಕಾರಿಡಾರ್ನಲ್ಲಿ ೪೦ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಮೆಟ್ರೊ ಕಾಮಗಾರಿಗೆ ಅದೆಷ್ಟೊ ಮರಗಳು ಬಲಿಯಾಗುತ್ತಾ ಇವೆ. ಮೊದಲ ಹಂತದ ಮೆಟ್ರೊ ಕಾಮಗಾರಿಯಲ್ಲಿ ೧೫೦೦ ಮರಗಳನ್ನು ಕಡಿಯಲಾಗಿದೆ. ಆದರೆ ಇದಕ್ಕೆ ಪರ್ಯಾಯವಾಗಿ ೧೫,೦೦೦ ಸಸಿಗಳನ್ನು ನೆಡಲಾಗಿದೆ ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೊ ಕಾಮಗಾರಿಗೆ ಕೇಂದ್ರ ಸರ್ಕಾರಕ್ಕೆ ಸೇರಿದ್ದ ೧೩೮ ಎಕರೆ,ರಕ್ಷಣಾ ಇಲಾಖೆಯ ೧೦೨ ಎಕರೆ, ರಾಜ್ಯ ಸರ್ಕಾರದ ೩೩ ಎಕರೆ, ನ್ಯಾಷನಲ್ ಪವರ್ ಕಾರ್ಪೊರೇಷನ್ ನ ೨೬ ಎಕರೆ , ಹಿಂದೂಸ್ತಾನ್ ಏರೋನಾಟಿಕಲ್ಸ್ ನ ೪ ಎಕರೆ ಜಾಗ ಹಾಗೂ ಖಾಸಗಿಯವರ ೨೭ ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನೂ ಮೊದಲನೆ ಹಂತದ ಕಾಮಗಾರಿ ಪೂರ್ಣಗೊಳ್ಳದೆ ಬೆಂಗಳೂರು ಮೆಟ್ರೊ ರೈಲು ನಿಗಮ, ೭೨ ಕಿ.ಮೀ. ಉದ್ದದ ೨೬,೪೦೫ ಕೋಟಿ ರೂ ವೆಚ್ಚದ ಎರಡನೆ ಹಂತದ ಕಾಮಗಾರಿಗೆ ಹೆಜ್ಜೆ ಹಾಕಿದೆ. ಎರಡನೆ ಹಂತದ ಯೋಜನೆಗೆ ಡಿಪಿಆರ್ ಕೂಡ ತಯಾರಿಸಲಾಗಿದೆ. ಮೊದಲ ಹಂತದಲ್ಲಿ ಮುಗಿದಿರುವಷ್ಟು ಕಾಮಗಾರಿಗೆ ಸರ್ಕಾರದ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಬಾಕಿ ಉಳಿದಿರುವ ಕಾಮಗಾರಿ ಚುರುಕುಗೊಳ್ಳಬೇಕೆಂದು ತಾಕೀತು ಮಾಡಲಾಗಿದೆ.

ಅತ್ಯುನ್ನತ ತಂತ್ರಜ್ಞಾನ: ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿ ಸುರಂಗ ಮಾರ್ಗ ಕೆಲಸಗಳನ್ನು ಮಾಡಲಾಗುತ್ತಿದೆ.ನಮ್ಮ ಮೆಟ್ರೊ ಕೆಲಸಗಳನ್ನು ಮಾಡಲಾಗುತ್ತಿದೆ. ನಮ್ಮ ಮೆಟ್ರೊ ಕೆಲಸವನ್ನು ನಿಗದಿತ ಸಮಯದೊಳಗೆ ಮುಗಿಸುವುದು ಮುಖ್ಯ. ಪ್ರಥಮ ಹಂತದ ಯೋಜನೆಯ ಜತೆಗೆ ದ್ವಿತೀಯ ಹಂತದ ಯೋಜನೆಯನ್ನೂ ಆದಷ್ಟು ಬೇಗನೆ ಮಾಡಿ ಮುಗಿಸಲು ಪ್ರಯತ್ನಿಸಲಾಗುವುದು ಎಂದರು. ಏರ್‌ಪೋರ್ಟ್‌ಗೆ ಸಂಪರ್ಕ:: ಆದಷ್ಟು ಬೇಗನೆ ಟ್ರಾಫಿಕ್ ಸಮಸ್ಯೆಗೆ ಮುಕ್ತಾಯ ಹಾಡಬೇಕು. ಮೂರನೇ ಹಂತದ ಯೋಜನೆಯಲ್ಲಿ ನಮ್ಮ ಮೆಟ್ರೋ ಮಾರ್ಗ ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದಾಗಿ ಏರ್‌ಪೋರ್ಟ್ ಸಂಪರ್ಕಕ್ಕೆ ಹೈಸ್ಪೀಡ್ ರೈಲಿನ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.ಮೆಟ್ರೋ ಸುರಂಗ ಮಾರ್ಗದ ವೀಕ್ಷಣೆ ಉತ್ತಮ ಅನುಭವ. ಸುರಂಗ ಮಾರ್ಗದ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದೆ ಎಂದು ವೀಕ್ಷಿಸಲು ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರು ಅವಕಾಶ ಕಲ್ಪಿಸಿದ್ದಾರೆ. ನಮ್ಮ ಮೆಟ್ರೋ ಕಾರ್ಯಗಳೆಲ್ಲಾ ಮುಗಿದು ಆದಷ್ಟು ಬೇಗನೆ ಸಂಚಾರ ಸಮಸ್ಯೆಗಳಿಗೆ ಪರಿಹಾರವಾಗಬೇಕು ಎಂದರು.

ಸಿಟಿ ಮಾರ್ಕೆಟ್‌ನಿಂದ ಚಿಕ್ಕಪೇಟೆವರೆಗಿನ ೪೫೦ ಮೀಟರ್ ಉದ್ದದ ಸುರಂಗ ಮಾರ್ಗ ಫೆಬ್ರವರಿ ೨೦೧೪, ಚಿಕ್ಕಪೇಟೆಯಿಂದ ಮೆಜೆಸ್ಟಿಕ್‌ವರೆಗಿನ ೭೦೦ ಮೀಟರ್ ಸುರಂಗ ಮಾರ್ಗದ ಸಂಪೂರ್ಣ ಕೆಲಸವನ್ನು ೨೦೧೪ ಆಗಸ್ಟ್ ವೇಳೆಗೆ ಮುಗಿಸಲಾಗುವುದು ಎಂದು ಖರೋಲಾ ಹೇಳಿದ್ದಾರೆ. ಸುರಂಗ ಮಾರ್ಗ ವೀಕ್ಷಣೆಯಲ್ಲಿ ಪಾಲ್ಗೊಂಡ ಬಿಜೆಪಿ ಸಂಸದ ಅನಂತಕುಮಾರ್ ಮಾತನಾಡಿ, ದೆಹಲಿಯಲ್ಲಿ ಸುರಂಗಮಾರ್ಗಕ್ಕೆ ಬಳಸಲಾಗುತ್ತಿರುವ ಟನೆಲ್ ತಂತ್ರಜ್ಞಾನಕ್ಕಿಂತ ನಗರದಲ್ಲಿ ಸುರಂಗಮಾರ್ಗಕ್ಕೆ ಬಳಸುತ್ತಿರುವ ಟನೆಲ್ ತಂತ್ರಜ್ಞಾನ ಉನ್ನತ ಮಟ್ಟದ್ದು ಮತ್ತು ಭಿನ್ನವಾಗಿದೆ.

ಇಲ್ಲಿನ ಮಣ್ಣಿನ ಗುಣಕ್ಕೂ ದೆಹಲಿಯಲ್ಲಿರುವ ಮಣ್ಣಿನ ಗುಣಕ್ಕೂ ವ್ಯತ್ಯಾಸವಿದೆ. ದೆಹಲಿಯಲ್ಲಿ ತುಂಬಾ ಮೃದುವಾದ ಮಣ್ಣು ದೊರಕುತ್ತದೆ. ಆದರೆ ಇಲ್ಲಿನ ಮಣ್ಣಿನ ಗುಣದಿಂದಾಗಿ ಸುರಂಗಮಾರ್ಗ ಕೊರೆಯುವುದು ಸ್ವಲ್ಪ ಕಷ್ಟದ ಕೆಲಸ. ಇಲ್ಲಿ ಜಾಗರೂಕತೆ ಮುಖ್ಯ. ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ ಸಂಪರ್ಕವನ್ನು ಸಾಧ್ಯವಾದಷ್ಟು ಬೇಗನೆ ಕಲ್ಪಿಸಿ ಎಂದು ಮನವಿ ಮಾಡಿದರು.

(*)ಬೆಂಗಳೂರು: ನಗರದ ಮಧ್ಯಭಾಗದಲ್ಲಿ ಸೋವಿಯಲ್ಲಿ ಭೂಮಿ ದೊರೆಯುತ್ತಿದೆ ಎಂದು ಮೆಟ್ರೋ ಸುರಂಗ ಮಾರ್ಗದ ಮೇಲಿನ ಆಸುಪಾಸು ಭೂಮಿ ಖರೀದಿಸಿಬಿಟ್ಟಿದ್ದಾರೆ.ಹಾಗೊಂದು ವೇಳೆ ಮೆಟ್ರೋ ಸುರಂಗ ಮಾರ್ಗ ಹೋಗುವಲ್ಲಿ ಭೂಮಿ ಖರೀದಿಸಿದರೆ, ಅದರ ಮೇಲೆ ನೀವು ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಭೂಮಿ ಬಗೆದು ನೀರು ಕೂಡ ಎತ್ತುವಂತಿಲ್ಲ. ಯಾಕೆಂದರೆ, ಮುಂದಿನ ದಿನಗಳಲ್ಲಿ ಉದ್ದೇಶಿತ ಈ ಮೆಟ್ರೋ ಸುರಂಗ ಮಾರ್ಗದ ಮೇಲಿನ ದಾರಿ 'ನಿರ್ಬಂಧಿತ ವಲಯ' ಎಂದು ಘೋಷಿಸಲ್ಪಡುವ ಸಾಧ್ಯತೆಗಳಿವೆ. ಆದ್ದರಿಂದ ಬೃಹತ್‌ ಯೋಜನೆಯ ದೂರದೃಷ್ಟಿಯಿಂದ ಈ ಮಾರ್ಗದಲ್ಲಿ ಭೂಮಿ ಖರೀದಿಸಿದವರಿಗೆ ನಿರಾಶೆಯಾಗುವುದು ಖಚಿತ. ನಮ್ಮ ಮೆಟ್ರೋ ಮೊದಲ ಹಂತದಲ್ಲಿ ಪೂರ್ವ-ಪಶ್ಚಿಮ ಕಾರಿಡಾರ್‌ನ ೪.೮ ಕಿಲೋ ಮೀಟರ್‌ ಹಾಗೂ ಉತ್ತರ ದಕ್ಷಿಣ ಕಾರಿಡಾರ್‌ನ ೪ ಕಿಲೋ ಮೀಟರ್‌ ಸೇರಿ ಒಟ್ಟು ೮.೮ ಕಿಲೋ ಮೀಟರ್‌ ಸುರಂಗ ಮಾರ್ಗ ನಗರದ ಮಧ್ಯಭಾಗದಲ್ಲಿ ಹಾದುಹೋಗುತ್ತಿದೆ. ಮುಂದಿನ ದಿನಗಳಲ್ಲಿ ಈ ೮.೮ ಕಿಲೋ ಮೀಟರ್‌ ಮಾರ್ಗವು 'ನಿರ್ಬಂಧಿತ ವಲಯ' ಎಂದು ಘೋಷಿಸಲ್ಪಡಲಿದೆ. ಇದರಿಂದಾಗಿ ಇಲ್ಲಿ ಯಾವುದೇ ರೀತಿಯ ಬೃಹತ್‌ ಕಟ್ಟಡಗಳ ನಿರ್ಮಾಣ ಅಸಾಧ್ಯ ಎಂದು ಹೆಳಲಾಗಿದೆ.

ಸಣ್ಣ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸಬಹುದು. ಆದರೆ, ಸುಮಾರು ೧೫ರಿಂದ ೨೦ ಮೀಟರ್‌ ಆಳದಲ್ಲಿ ಮೆಟ್ರೋ ಸುರಂಗ ಕೊರೆಯಲಾಗಿದೆ. ಇದರ ಮೇಲ್ಭಾಗದಲ್ಲಿ ಯಾವುದಾದರೂ ಬೃಹತ್‌ ಕಟ್ಟಡ ಬಂದಾಗ, ಮೆಟ್ರೋ ಟನಲ್‌ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳು ಹೆಚ್ಚು. ಹಾಗಾಗಿ, ಮೆಟ್ರೋ ಸುರಂಗದ ೩೦ ಮೀಟರ್‌ ಆಸುಪಾಸು ಜಾಗದಲ್ಲಿ ಮೂರು ಮಹಡಿಗಿಂತ ಎತ್ತರದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ ಎಂದು ಇಂಜಿನಿಯರೊಬ್ಬರು ಸ್ಪಷ್ಟಪಡಿಸುತ್ತಾರೆ. ಇಲ್ಲಿ ಸಮಸ್ಯೆ ಇಲ್ಲ: ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಈ ಸಮಸ್ಯೆ ಉದ್ಭವಿಸದು. ಯಾಕೆಂದರೆ, ಮೆಜೆಸ್ಟಿಕ್‌ನಿಂದ ಸೆಂಟ್ರಲ್‌ ಕಾಲೇಜು, ಸರ್‌ ಎಂ. ವಿಶ್ವೇಶ್ವರಯ್ಯ ವೃತ್ತ, ವಿಧಾನಸೌಧ, ಕಬ್ಬನ್‌ಪಾರ್ಕ್‌ನಲ್ಲಿ ಹಾದು ಸುರಂಗ ಮಾರ್ಗದುದ್ದಕ್ಕೂ ಎಲ್ಲಿಯೂ ಖಾಸಗಿ ಜಮೀನು, ಕಟ್ಟಡ ನಿರ್ಮಿತ ಪ್ರದೇಶಗಳಾವುವೂ ಬರುವುದಿಲ್ಲ. ಆದರೆ, ಸಮಸ್ಯೆ ಇರುವುದು ಉತ್ತರ-ದಕ್ಷಿಣ ಕಾರಿಡಾರ್‌ ಮಾರ್ಗದಲ್ಲಿ ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಇತ್ತಿಚೆಗಷ್ಟೇ ಆರಂಭಗೊಂಡ ಎರಡನೇ ಸುರಂಗ ಮಾರ್ಗವು ಕೆ.ಆರ್‌. ಮಾರುಕಟ್ಟೆ, ವಾಣಿವಿಲಾಸ ಆಸ್ಪತ್ರೆ, ಚಿಕ್ಕಪೇಟೆ ಮೂಲಕ ಮೆಜೆಸ್ಟಿಕ್‌ ಸೇರಲಿದೆ. ಈ ಮಾರ್ಗದುದ್ದಕ್ಕೂ ಖಾಸಗಿ ಆಸ್ತಿಗಳು ಬರುತ್ತವೆ. ಮುಂದಿನ ದಿನಗಳಲ್ಲಿ ಈ ಜಾಗದಲ್ಲಿ ಬಹುಮಹಡಿ ಕಟ್ಟಡವಾಗಲಿ, ಕೊಳವೆಬಾವಿಯಾಗಲಿ ಅಥವಾ ಹಳೆಯ ಕಟ್ಟಡ ನೆಲಸಮಗೊಳಿಸಿ, ಬೃಹತ್‌ ಕಟ್ಟಡ ತಲೆಯೆತ್ತುವುದು ಕಷ್ಟ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಾರೆ.

ಸಪ್ತ ದಿಕ್ಕುಗಳಲ್ಲಿ ಮೆಟ್ರೊ: ಮೆಟ್ರೊ ೨ನೇ ಹಂತದ ಯೋಜನೆಯ ಭವಿಷ್ಯ ನಿರ್ಧಾರ ದೃಷ್ಟಿಯಿಂದ ದೆಹಲಿಯಲ್ಲಿ ನಡೆಯಲಿರುವ ಸಾರ್ವಜನಿಕ ಹೂಡಿಕೆ ಮಂಡಳಿ ೨ನೇ ಹಂತಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರುವ ಸಾಧ್ಯತೆಯಿದೆ.ಮೆಟ್ರೊ ೨ನೇ ಹಂತದ ಯೋಜನೆಗೆ ಈಗಾಗಲೇ ರಾಜ್ಯ ಸರ್ಕಾರದ ಅನುಮೋದನೆ ದೊರೆತಿದೆ. ೨೬,೪೦೫ ಕೋಟಿ ರೂ. ವೆಚ್ಚದ ೭೨.೦೯೫ ಕೀ.ಮೀ ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಪೂರ್ವ ತಯಾರಿಯೂ ಆರಂಭವಾಗಿದೆ. ಸಾರ್ವಜನಿಕ ಹೂದಿಕೆ ಮಂಡಳಿ ಸಭೆಯಲ್ಲಿ ಎರಡನೇ ಹಂತಕ್ಕೆ ಒಪ್ಪಿಗೆ ದೊರೆತಲ್ಲಿ ರಜಧಾನಿಯ ಮೆಟ್ರೊ ಸಂಪರ್ಕ ಸಪ್ತ ದಿಕ್ಕುಗಳಿಗೆ ವಿಸ್ತರಣೆಯಾಗಲಿದೆ. ಮೆಟ್ರೊ ರೈಲು ಮೊದಲ ಹಂತದಲ್ಲಿ ೪೨.೩೦ ಕೀ.ಮೀ. ಮಾರ್ಗ ಹೊಂದಿದ್ದು ೨ನೇ ಹಂತದಲ್ಲಿ ೭೨.೦೯೫ ಕಿ.ಮೀ. ಮಾರ್ಗ ವಿಸ್ತರಣೆಗೆ ಉದ್ದೆಶಿಸಲಾಗಿದೆ.ಎಲ್ಲವನ್ನೂ ಒಟ್ಟುಗೂದಿಸಿದರೆ ನಗರದಲ್ಲಿ ಒಟ್ಟು ೧೧೪.೩೯೫ ಕಿ.ಮೀ. ಮೆಟ್ರೊ ಮಾರ್ಗ ಲಭ್ಯವಾಗಲಿದೆ.

ಹಲವು ವಿರೋಧಗಳ ನಡುವೆ ಮೆಟ್ರೊ ಸಂಚಾರದ ೨ನೇ ಹಂತದ ಕಾಮಗಾರಿಗೆ ಒಪ್ಪಿಗೆ ಸಿಗುವುದೇ? ಬೊಮ್ಮಸಂದ್ರ ಮತ್ತು ಆರ್.ವಿ ರಸ್ತೆಯ ಮಾರ್ಗದಲ್ಲಿ ಬರುವ ಜಯದೇವ ಹೃದ್ರೋಗ ಆಸ್ಪತ್ರೆ ಆವರಣದಿಂದ ನಿಲ್ದಾಣಗಳನ್ನು ಸ್ಥಳಾಂತರಿಸುವ ವಿಚಾರ ಸರ್ವಜನಿಕ ಹೂಡಿಕೆ ಮಂಡಳಿ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿಲ್ಲ ಎಂದು ತಿಳಿದು ಬಂದಿದೆ. ಜಯದೇವ ಹೃದ್ರೋಗ ಸಂಸ್ಥೆ ಆವರಣದಿಂದ ಹೊರಭಾಗಕ್ಕೆ ಮಾರ್ಗ ಬದಲಾವಣೆ ಮಾಡುವುದರಿಂದ ಆಗುವ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಹೂಡಿ ಬಳಿ ಶಾಸಕ ಅರವಿಂದ ಲಿಂಬಾವಳಿ ಮನನಿ ಮೇರೆಗೆ ಉನ್ನತಾಧಿಕಾರಿಗಳ ಸಮಿತಿ ಕರೆದು ಮಾರ್ಗ ಬದಲಾವಣೆ ಮಾಡಿರುವ ವಿಚಾರವೂ ೨ನೇ ಹಂತಕ್ಕೆ ಒಪ್ಪಿಗೆ ಪಡೆದುಕ್ಕೊಳ್ಳುವಲ್ಲಿ ತೊಡಕಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ವಿರೋಧದ ನಡುವೆಯು ಈಗಿರುವ ನಕ್ಷೆಯಂತೆ ೨ನೇ ಹಂತದ ಯೋಜನೆಗೆ ಒಪ್ಪೆಗೆ ಪಡೆಯಲು ಮುಂದಾಗಿರುವುದು ಸಾರ್ವಾಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಈ ಅಸಮಾಧಾನಗಳ ನಡುವೆಯು ಮೆಟ್ರೊ ಸಂಚಾರದ ೨ನೇ ಹಂತದ ಕಾಮಗಾರಿ ಪೂರ್ಣ ಗೊಂಡಿತು.

ಸಿಲಿಕಾನ್ ಸಿಟಿಯ ಉತ್ತರ ಭಾಗದಲ್ಲಿ ಮೆಟ್ರೊ ಪರೀಕ್ಷಾರ್ಥ ಸಂಚಾರ ನಡೆದಿದೆ. ಕೇಂದ್ರ ಸರ್ಕಾರದ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ಸುಧೀರ್ ಕೃಷ್ಣ ಮತ್ತಿತರ ಅಧಿಕಾರಿಗಳ ಜೊತೆ ಸಚಿವ ಸುರೆಶ್ ಕುಮಾರ್ ರಾಜ್ಯ ಸರ್ಕಾರದ ಪರವಾಗಿ ಭಾಗಿಯಾಗಿದ್ದಾರೆ. ಒಟ್ಟು ೨.೮ ಕಿ.ಮೀ. ನಷ್ಟು ದೂರ ಮೆಟ್ರೊ ರೈಲು ಯಶಸ್ವಿಯಾಗಿ ಸಂಚಾರ ನಡೆಸಿದೆ. ಹೀಗಿದ್ದು , ಸಧ್ಯ ನಡೆಯುತ್ತಿರುವ ವಿದ್ಯಮಾನಗಳು, ಮೆಟ್ರೊ ಮಾರ್ಗದ ಉದ್ಘಾಟನೆಯ ಹೋಲ್ ಎಂಡ್ ಸೇಲ್ ಕ್ರೆಡಿಟ್ ನಿಂದ ಹಾಲಿ ಸರ್ಕಾರ ವಂಚಿತಗೊಳ್ಳಲಿರುವುದನ್ನು ಬಿಂಬಿಸುತ್ತಿವೆ.

ಸದ್ಯ ಪೂರ್ವ-ಪಷ್ಚಿಮ ಕಾರಿದಡಾರ್ನಲ್ಲಿ ಎರಡು ಸುರಂಗ ಕೊರೆಯುವ ಯಂತ್ರಗಳು ಕಾರ್ಯಾಚರಣೆಯಲ್ಲಿ ಮಿನ್ಸ್ಕ್ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ೨೦೦ ಮೀಟರ್ ಗಳಷ್ಟು ಸುರಂಗ ಕೊರೆಯಲು ದೆಹಲಿಯಿಂದ ಒಂದು ಯಂತ್ರವನ್ನು ನಗರಕ್ಕೆ ತರಿಸಿಕೊಳ್ಳುವ ಸಿದ್ದ್ಧತೆ ನಡೆದಿದೆ. ಇನ್ನು ಉತ್ತರ-ದಕ್ಷಿಣ ಕಾರಿಡಾರ್ ನಲ್ಲಿ ಜಕ್ಕರಾಯನ ಕೆರೆ ಮೈದಾನಾದಿಂದ ಕೆ ಅರ್ ರಸ್ತೆ ಪ್ರವೇಶ ದ್ವಾರದವರೆಗೆ ಸುರಂಗ ಕೊರೆಯಲು ಮೂರು ಯಂತ್ರಗಳು ಮಾರ್ಚ್ ಅಂತ್ಯದ ವೇಳೆಗೆ ನಗರಕ್ಕೆ ಬರಲಿವೆ. ಎರಡು ಯಂತ್ರಗಳು ಚೀನಾದಿಂದ ಹಾಗೂ ಮತ್ತೊಂದು ಯಂತ್ರ ಜರ್ಮನಿಯಿಂದ ಬರಲಿದೆ. ಒಂದು ಯಂತ್ರದ ಬೆಲೆ ೯೦-೯೫ ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ

. ಒಂದು 'ಟಿಬಿಎಂ' ಜತೆ ೮೦ ಜನರ ದುಡಿಮೆ: ಸುರಂಗ ನಿರ್ಮಾಣ ಕಾಮಗಾರಿಯಲ್ಲಿ ಒಂದು 'ಟಿಬಿಎಂ'ನೊಂದಿಗೆ ೮೦ ಮಂದಿ ತಂತ್ರಜ್ನರು ಮತ್ತು ಕುಶಲ ಕಾರ್ಮಿಕರಲ್ಲಿ ತೈವಾನ್, ಯೂರೋಪ್, ಥಾಯ್ಲೆಂಡ್, ಚೀನಾ, ಕೊರಿಯಾ ದೇಶಗಳಿಂದ ಬಂದವರೂ ಇದ್ದಾರೆ. ಪೂರ್ವ-ಪಷ್ಚಿಮ ಕಾರಿಡಾರ್ ನಲ್ಲಿ ಸುರಂಗ ಕೊರೆಯುವ ಕಾಮಗಾರಿಗಾಗಿ ನಿರಂತರ ವಿದ್ಯುತ್ ಪೂರೈಸಲು ತಲಾ ೫೦೦ ಕೆ ವಿ ಸಾಮರ್ಥ್ಯದ ೧೬ ಜನರೇಟರ್ ಗಳನ್ನು ಒಳಗೊಂಡ ೮ ಮೆಗಾ ವಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ. ಇದಕ್ಕೆ ನಿತ್ಯ ೧೪೦೦೦ ಲೀಟರ್ ಡೀಸೆಲ್ ಬೇಕು. ಮೆಜಸ್ಟಿಕ್ ನ ಕಾಮಗಾರಿ ಸ್ಥಳದಲ್ಲಿ ಗುತ್ತಿಗೆದಾರರು ತಮ್ಮದೇ ಆದ ಡೀಸೆಲ್ ಬಂಕ್ ಅನ್ನೇ ಸ್ಥಾಪಿಸಿಕೊಂಡಿದ್ದಾರೆ.

ಉತ್ತರ-ದಕ್ಷಿಣ ಕಾರಿಡಾರ್ ನಲ್ಲೂ ಸುರಂಗ ಕೊರೆಯುವ ಕಾಮಗಾರಿ ಆರಂಭವಾಗಿದ್ದು , ಅದಕ್ಕೂ ಇಷ್ಟೇ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ.

ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳ ಸಾಲಿನಲ್ಲಿ ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗಿರುವುದು ರಾಜಧಾನಿಗೆ ಸೀಮಿತವಾಗಿರುವ ಮೆಟ್ರೊ ರೈಲು ಯೋಜನೆಗೆ. ಮೊದಲ ಹಂತದಲ್ಲಿ ೪೨.೩ ಕಿ.ಮೀ. ಉದ್ದದ ಮೆಟ್ರೊ ರೈಲು ಮಾರ್ಗ ನಿರ್ಮ್ಣಕ್ಕಾಗಿಯೇ ೧೧,೬೦೯ ಕೋಟಿ ವೆಚ್ಚಮಾಡಲಾಗುತ್ತಿದೆ. ಈಗಾಗಲೇ ವಾಣಿಜ್ಯ ಸಂಚಾರ ನಡೆಸುತ್ತಿರುವ ಎಂ. ಜಿ. ರಸ್ತೆ ಹಾಗೂ ಬೈಯಪ್ಪನಹಳ್ಳಿ ಮಾರ್ಗಕ್ಕೆ ಸಿಎಂ ಆಗಿದ್ದ ಯಡಿಯೂರಪ್ಪ ಹಸಿರು ನಿಶಾನೆ ತೋರಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ಭ್ರಷ್ಟಾಚಾರದ ಆರೋಪದ ಮೇಲೆ ಯಡಿಯೂರಪ್ಪ ಜೈಲು ಸೇರಿದರು. ಹಾಗಾಗಿ , ೨೦೧೧ರ ಆ.೨೦ ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಉದ್ಘಾಟನೆಗೆ ಸಾಕ್ಷಿಯಾದವರು ಅಂದಿನ ಸಿಎಂ ಡಿ.ವಿ.ಸದಾನಂದಗೌಡ.

ಇದಾದ ಮೇಲೆ , ವಿಧಾನಮಂಡಲದ ಜಂಟಿ ಆಧಿವೇಶನದಲ್ಲಿ ಮೆಟ್ರೊ ರೀಚ್ - ೩ ಅನ್ನು ೨೦೧೧ರ ಡಿಸೆಂಬರ್ ಗೇ ಉದ್ಘಾಟಿಸಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ ಗಡವು ಕಾಯ್ದುಕೊಳ್ಳಲು ವಿಫಲವಾಗಿರುವುದರಿಂದ ಹಾಲಿ ಸಿಎಂ ಶೆಟ್ಟರ್ , ಮೆಟ್ರೊ ಉದ್ಘಾಟನೆ ಭಾಗ್ಯದಿಂದ ವಂಚಿತರಾಗುವುದು ಬಹುತೇಕ ಖಚಿತವಾಗಿತ್ತು. ಮೆಟ್ರೊ ಮೂಲಗಳ ಮಾಹಿತಿ ಪ್ರಕಾರ , "ಪೀಣ್ಯದಿಂದ ಸಂಪಿಗೆ ರಸ್ತೆ ಸಂಪರ್ಕಿಸುವ ಮೆಟ್ರೊ ಮಾರ್ಗದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕನಿಷ್ಟ ನಾಲ್ಕು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಒಮ್ಮೆ ಕಾಮಗಾರಿ ಪೂರ್ಣಗೊಂಡ ನಂತರ ನಾನಾ ಸುರಕ್ಷತಾ ಪ್ರಮಾಣ ಪತ್ರಗಳನ್ನು ಪಡೆಯುವ ಪ್ರಕ್ರಿಯೆಗೇ ಇನ್ನಷ್ಟು ತಿಂಗಳ ಕಾಲಾವಧಿ ಬೇಕಾಗುತ್ತದೆ.

ಮೆಟ್ರೊ ಕಾಮಗಾರಿಯು ಈಗ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ. ಅದರ ಸಂಚಾರದಿಂದ ಜನರಿಗೂ ಸಹ ಬಹಳ ಸಹಾಯವಾಗುತ್ತಿದೆ,ಎಲ್ಲೆಡೆ ಮೆಟ್ರೊ ಸಂಚಾರವು ಅದ್ದೂರಿಯಿಂದ ನಡೆಯುತ್ತಿದೆ.