ಮೂರೆಲೆ ಹೊನ್ನೆ

ಸಸ್ಯಗಳ ಜಾತಿಗಳು

ಮೂರೆಲೆ ಹೊನ್ನೆ

ಬದಲಾಯಿಸಿ

ಸಂ: ಶಾಲಪರ್ಣಿ

ಹಿಂ: ಸಾರಿವನ್

ಮ: ಸಲಾವನ್

ಗು: ಶಾಲ್ವಾನ್

ತೆ: ಮುಯ್ಯಾರುಪೊನ್ನ

ತ: ವರಿಲಾ

ವರ್ಣನೆ

ಬದಲಾಯಿಸಿ

ನೀಳವಾಗಿ ಬೆಳೆಯುವ ಪೊದೆ, ಅರ್ಧದಿಂದ ಒಂದು ಮೀಟರ್ ಉದ್ದ ಬೆಳೆಯುವುದು. ಕವಲುಗಳ ತುಂಬಾ ಮೇಲಕ್ಕೆ ಬಾಗಿರುವ ನವಿರಾದ ಮಾಸುಬಣ್ಣದ ರೋಮಗಳಿರುವುವು.ಒಂದೊಂದು ತೊಟ್ಟಿನಲ್ಲಿ ಮೂರು ಎಲೆಗಳಿರುವುವು. ಎಲೆಗಳ ಮೂಲತೊಟ್ಟಿನ ತುದಿಯಲ್ಲಿ ಹೂಗುಚ್ಚವಿರುವುದು. ಹೂಗಳು ಬಿಳಿ ಗೋಪುರಾಕಾರದ ತಿಳಿ ರೋಜಾ ಅಥವಾ ತಿಳಿನೀಲಿ ವರ್ಣ ಹೊಂದಿರುವುವು. ಬೀಜಗಳು ಚಪ್ಪಟೆ ಮತ್ತು ಹೂವು, ಹಣ್ಣು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಬಿಡುವುವು. ಹೂಗಳಿಗೆ ವಿಶಿಷ್ಟ ವಾಸನೆಯಿರುವುದು.

ಸರಳ ಚಿಕಿತ್ಸೆಗಳು

ಬದಲಾಯಿಸಿ

ಜ್ವರ ಅತಿಸಾರ, ಶ್ವಾಸಕೋಶದ ತೊಂದರೆ, ಮೂಲವ್ಯಾಧಿ, ಕ್ರಿಮಿ, ಧಾತು ಕ್ಷೀಣತೆ, ಶೀಘ್ರಸ್ಖಲನ, ವಾಂತಿ ಮತ್ತು ಮಲೇರಿಯಾ ಜ್ಚರ ಶಾಯಿಪರ್ಣಿ ಘೃತ ಮೇಲಿನ ವ್ಯಾಧಿಗಳನ್ನು ಪರಿಹರಿಸುವುದು.

ಕೆಮ್ಮು. ಕಫ, ವಾತ ಜ್ವರಕ್ಕೆ

ಬದಲಾಯಿಸಿ

ದಶಮೂಲಗಳು ಅಂದರೆ ಮೂರೆಲೆ ಹೊನ್ನೆ, ಹೆಗ್ಗುಳ್ಳ ನೆಲಗುಳ್ಳ, ನೆಗ್ಗಿಲು ಮತ್ತು ಒಂದೆಲೆ ಹೊನ್ನೆ, ಪಾದರಿ, ಬಿಲ್ವ ಪತ್ರೆ, ನರುವಲು, ಹಿಮ್ಮರ ಮತ್ತು ನೆಲಗುಂಬಳದಿಂದ ಮಾಡಿದ ಕ್ವಾಥವನ್ನು ವೇಳೆಗೆ ಅರ್ಧ ಟೀ ಚಮಚ ಸೇವಿಸುವುದು. ಇದಕ್ಕೆ ಸ್ವಲ್ಪ ತುಪ್ಪ ಮತ್ತು ಹಿಪ್ಪಲಿ ಪುಡಿಯನ್ನು ಸೇರಿಸುವುದು.

ಸನ್ನಿವಾತ ಮತ್ತು ಸನ್ನಿ ಜ್ಚರಕ್ಕೆ

ಬದಲಾಯಿಸಿ

ಮೂರೆಲೆ ಹೊನ್ನೆ, ಗುಳ್ಳ, ನೆಲಗುಳ್ಳ, ನೆಗ್ಗಿಲ ಬೇರು ಹತ್ತು ಗ್ರಾಂ ನಷ್ಟು ತೆಗೆದುಕೊಂಡು ನುಣ್ಣಗೆ ಚೂರ್ಣಿಸುವುದು. ಈ ಚೂರ್ಣ ಅಷ್ಟಾಂಶ ಕಷಾಯ ಮಾಡಿ ದಿವಸಕ್ಕೆ ಒಂದೇ ವೇಳೆ ನಾಲ್ಕು ಟೀ ಚಮಚ ಹಿಪ್ಪಲಿ ಪುಡಿಯೊಂದಿಗೆ ಸೇವಿಸುವುದು.

ವಾತಜ್ಚರ ಮತ್ತು ವಾತ ಸಂಬಂಧವಾದ ವ್ಯಾಧಿಗಳಲ್ಲಿ

ಬದಲಾಯಿಸಿ

ಮೂರೆಲೆ ಹೊನ್ನೆ, ಅಮೃತಬಳ್ಳಿ, ನೆಲಗುಳ್ಳ, ಹೆಗ್ಗುಳ್ಳ, ಶುಂಠಿ, ನೆಗ್ಗಿಲು, ಚಿರಾಯಿತ ಮತ್ತು ತುಂಗಮಸ್ತೆ ಇವೆಲ್ಲಾ ಸಮತೂಕ ಸೇರಿಸಿ, ನುಣ್ಣಗೆ ಅರೆದು ನಯವಾಗಿ ಪುಡಿ ಮಾಡುವುದು. ಎರಡು ಚಮಚ ಈ ಚೂರ್ಣವನ್ನು ಒಂದು ಲೋಟ ನೀರಿಗೆ ಹಾಕಿ ಕಷಾಯ ಮಾಡುವುದು. ಒಂದು ಟೀ ಚಮಚ ಕಷಾಯವನ್ನು ಜೇನು ಸೇರಿಸಿ ಸೇವಿಸುವುದು.

ಅಪಸ್ಮಾರ, ಉನ್ಮಾದ, ಜ್ವರ, ಅತಿಸಾರ, ಅರಕ್ತತೆ

ಬದಲಾಯಿಸಿ

ಮೂರೆಲೆ ಹೊನ್ನೆ, ತಾಳೇಪತ್ರೆ, ಅಳಲೆಕಾಯಿಸಿಪ್ಪೆ, ನೆಲ್ಲಿ ಚೆಟ್ಟು, ತಾರೇಕಾಯಿ, ಏಲಕ್ಕಿ ಒಂದೆಲೆ ಹೊನ್ನೆ, ನಾಗಕೇಸರ ಇವೆಲ್ಲವೂ ಸಮತೂಕ ತಂದು ಚೆನ್ನಾಗಿ ಕುಟ್ಟಿ ನಯವಾಗಿ ಪುಡಿ ಮಾಡುವುದು. 100 ಗ್ರಾಂ ಹಸುವಿನ ತುಪ್ಪದಲ್ಲಿ ಮೇಲಿನ ಚೂರ್ಣವನ್ನು ಹಾಕಿ, ಮಂದಾಗ್ನಿಯಿಂದ ಕಾಯಿಸಿ ಘೃತ ಪಾಕ ಮಾಡಿ ಇಳಿಸುವುದು. ದಿವಸಕ್ಕೆ ಒಂದೇ ವೇಳೆ ಒಂದು ಟೀ ಚಮಚ ಘೃತವನ್ನು ಸೇವಿಸುವುದು.