ಮೂಡುಕೇರಿ ಸೋಮೇಶ್ವರ ದೇವಸ್ಥಾನ, ಬಾರ್ಕೂರು

ಮೂಡುಕೇರಿ ಸೋಮೇಶ್ವರ ದೇವಸ್ಥಾನ, ಬಾರ್ಕೂರು ಮೂಡುಕೇರಿಯ ಸೋಮೇಶ್ವರ ದೇವಸ್ಥಾನ, ಪ್ರಸಿದ್ಧ್ವಾದ ಮತ್ತು ಕಾರಣಿಕವಾದ ದೇವಸ್ಥಾನ. ಮುನಿ ಶ್ರೇಷ್ಟರಿಂದ ಸ್ಥಾಪಿತವಾಗಿದೆಯೆಂಬುದು ಜನರ ಅಭಿಪ್ರಾಯವಾಗಿದೆ. ಶಿಲಾ ಹಾಗೂ ತಾಮ್ರ ಶಾಸನಗಳು ಈ ಮಾತನ್ನು ಪುಷ್ಟೀಕರಿಸುತ್ತದೆ.

ಬಾರ್ಕೂರು ಪೇಟೆ.

ಬಾರ್ಕೂರು ಬದಲಾಯಿಸಿ

[೧] ಬಾರ್ಕೂರು ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಒಂದು ಐತಿಹಾಸಿಕ ಸ್ಥಳವಾಗಿದೆ. ಬಾರ್ಕೂರು ತುಳುನಾಡಿನ ರಾಜಧಾನಿಯಾಗಿತ್ತು, ತುಳು ಮಾತನಾಡುವ ಜನರು ಬಹುಸಂಖ್ಯಾತರು. ಬಾರ್ಕೂರಿನ ಬಹುತೇಕ ಪುರಾತನ ರಚನೆಗಳು ಪಾಳು ಬಿದ್ದಿವೆ. ಬಾರ್ಕೂರು ಒಂದು ಕಾಲದಲ್ಲಿ ತುಳುನಾಡಿನ ರಾಜಧಾನಿಯಾಗಿತ್ತು. ತುಳುನಾಡು (ತುಳುನಾಡು) ಕರ್ನಾಟಕದ ಕರಾವಳಿಯ ಒಂದು ಪ್ರದೇಶವಾಗಿದ್ದು, ತುಳು ಭಾಷೆ ಬಹುಪಾಲು ಜನರ ಮಾತೃಭಾಷೆಯಾಗಿದೆ. ತುಳು ರಾಜರು ಮತ್ತು ನಾಯಕರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದರು. ತುಳುನಾಡ್ ಇಂದಿನ ಉಡುಪಿ, ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡಿದೆ. ತುಳುನಾಡು ಪ್ರದೇಶವು ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ಕರಾವಳಿಯ ನಡುವೆ ಇದೆ. ತುಳುನಾಡ್ ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಹೊಂದಿದೆ, ಇದು ಕರ್ನಾಟಕದ ಇತರ ಪ್ರದೇಶಗಳಿಗಿಂತ ಭಿನ್ನವಾಗಿದೆ. ಬಾರ್ಕೂರು ಗ್ರಾಮವು ಸೀತಾ ನದಿಯ ಉತ್ತರ ದಡದಲ್ಲಿದೆ.

 
ಸೀತಾನದಿ

ಹಿನ್ನಲೆ ಬದಲಾಯಿಸಿ

ಬಾರ್ಕೂರು ಉಡುಪಿ ಜಿಲ್ಲೆ , ಕರ್ನಾಟಕ , ಭಾರತವು ಶತಮಾನಗಳ ಕಾಲ ಅಳುಪ ರಾಜರ ರಾಜಧಾನಿಯಾಗಿತ್ತು. ಹೊಯ್ಸಳ ಮತ್ತು ವಿಜಯನಗರ ಅವಧಿಯಲ್ಲಿ ಇದು ಪ್ರಾದೇಶಿಕ ರಾಜಧಾನಿಯಾಗಿತ್ತು . ಬಾರ್ಕೂರು ನಗರವು ಹತ್ತು ಕೇರಿಗಳ(ಕೇರಿ-ನಗರದ ಬೀದಿಗಳನ್ನು ಒಳಗೊಂಡಿತ್ತು)ಮೂಡುಕೇರಿ ಹತ್ತು ನಗರದ ಬೀದಿಗಳಲ್ಲಿ ಒಂದಾಗಿದೆ. ಸೋಮನಾಥ ದೇವಾಲಯ ಬಾರ್ಕೂರಿನ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಬಾರ್ಕೂರು ಉಡುಪಿಯಿಂದ ೧೨ ಕಿ.ಮೀ ದೂರದಲ್ಲಿದೆ. ಮೂಡುಕೇರಿ ಸೋಮೇಶ್ವರ ದೇವಸ್ಥಾನ ಬಾರ್ಕೂರು ರೈಲು ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿದೆ. ವಿಜಯನಗರ ಅರಸರ ಆಳ್ವಿಕೆಯಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಈ ದೇವಸ್ಥಾನಕ್ಕೆ ಉಂಬಳಿ ಭೂಮಿ ಸಾಕಷ್ಟಿದ್ದು, ೩ ಹೊತ್ತಿನ ಪೂಜೆ, ಅನ್ನ ನೈವೇದ್ಯ ಬಲಿ ಎಲ್ಲವೂ ನಡೆಯುತ್ತಿತ್ತು. ಇಲ್ಲಿ ಭದ್ರ ಕೋಣೆಯೂ ಇದ್ದು, ಚಿನ್ನಾಭರಣಗಳನ್ನು ಇಡುವುದು, ಕಾವಲಿಗೆ ಅರ್ಚಕರಲ್ಲದೆ ಇನ್ನಿಬ್ಬರು ಚಾಕರಿಯವರು ರಾತ್ರಿ ಅಲ್ಲಿಯೇ ಮಲಗುತ್ತಿದ್ದರು.ಮೂಡುಕೇರಿಯ ಸೋಮನಾಥೇಶ್ವರ ದೇವಸ್ಥಾನದಲ್ಲಿ (ಕ್ರಿ.ಶ ೧೦ನೇ ಶತಮಾನ) ಸರಸ್ವತಿ ಮತ್ತು ಜನಾರ್ದನರ ಪೂರ್ವದ ಹೊಯ್ಸಳ ಚಿತ್ರಗಳಿವೆ.[೨]

ಮೂಡುಕೇರಿ ದೇವಸ್ಥಾನದಲ್ಲಿ ಬಹು ಉತ್ಸವಗಳು ಬದಲಾಯಿಸಿ

ಮೂಡುಕೇರಿ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಹಾರಂಗಪೂಜೆ, ದೀಪೋತ್ಸವ, ಕೆರೆ ದೀಪೋತ್ಸವ, ರಥೋತ್ಸವ ನಡೆಯುತ್ತದೆ.


ಉಲ್ಲೇಖಗಳು ಬದಲಾಯಿಸಿ

  1. https://en.wikivoyage.org/wiki/Barkur
  2. https://www.barkuronline.com/news/post/top-news/multiple-festivities-moodukeri-temple