ಮುತ್ತುಲಕ್ಷ್ಮಿ ರೆಡ್ಡಿ

ಸಮಾಜ ಸುಧಾರಕಿ, ಮಹಿಳಾ ಹಕ್ಕುಗಳ ಕಾರ್ಯಕರ್ತೆ, ಬರಹಗಾರ್ತಿ

ಡಾ. ಮುತ್ತುಲಕ್ಷ್ಮಿ ರೆಡ್ಡಿ ಭಾರತೀಯ ವೈದ್ಯೆ ಮತ್ತು ಪತ್ರಕರ್ತೆ,ಸಾಮಾಜಿಕ ಸುಧಾರಕಿ ಮತ್ತು ಪದ್ಮಭೂಷಣ ಪ್ರಶಸ್ತಿ ವಿಜೇತೆ. ಅವರು ಭಾರತದ ಮೊದಲ ಮಹಿಳಾ ಶಾಸಕಿ. ಮುತ್ತುಲಕ್ಷ್ಮಿ ರೆಡ್ಡಿ ೧೯೨೭ರಲ್ಲಿ ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಇವರು ಬ್ರಿಟಿಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿ. ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿಯ ಮೊದಲ ಮಹಿಳಾ ಶಾಸಕಿ. ಮಹಿಳಾ ಕಾಲೇಜು, ಸರ್ಕಾರಿ ಹೆರಿಗೆ ಮತ್ತು ನೇತ್ರಶಾಸ್ತ್ರೀಯ ಆಸ್ಪತ್ರೆಯಲ್ಲಿನ ಮೊದಲ ಮಹಿಳಾ ಸರ್ಜನ್.

ಮುತ್ತುಲಕ್ಷ್ಮಿ ರೆಡ್ಡಿ
Born೩೦-೦೭-೧೮೮೬
ಪುದುಕೊಟ್ಟಾಯಿ, ಮದ್ರಾಸ್
Died22 July 1968(1968-07-22) (aged 81)
Spouseಡಾ. ಸುಂದರ್ ರೆಡ್ಡಿ

ಬಾಲ್ಯ ಮತ್ತು ಶಿಕ್ಷಣ

ಬದಲಾಯಿಸಿ

ಮುತ್ತುಲಕ್ಷ್ಮಿ ಅವರ ತಂದೆ ಮಹಾರಾಜ ಕಾಲೇಜಿನ ಪ್ರಿನ್ಸಿಪಾಲ್ ಎಸ್.ನಾರಾಯಣಸ್ವಾಮಿ, ತಾಯಿ ಚಂದ್ರಮಳಲ್. ತಮಿಳುನಾಡಿನ ಪುದುಕೋಟೆಯ ರಾಜವಂಶದ ರಾಜ್ಯದಲ್ಲಿ ಜನಿಸಿದರು. ಅವರ ಕಾಲದಲ್ಲಿ ಭಾರತದಲ್ಲಿ ಹುಡುಗಿಯರು ಎದುರಿಸುವ ಹಲವಾರು ಅಡಚಣೆಗಳ ಹೊರತಾಗಿಯೂ, ಅವರು ತಮ್ಮ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದರು. ೧೯೦೭ರಲ್ಲಿ ಅವರು ಮದ್ರಾಸ್ ಮೆಡಿಕಲ್ ಕಾಲೇಜು ಸೇರಿದರು. ೧೯೧೨ ರಲ್ಲಿ ಪದವಿ ಪಡೆದರು ಮತ್ತು ಭಾರತದಲ್ಲಿ ಮೊದಲ ಮಹಿಳಾ ವೈದ್ಯರಾಗಿದ್ದರು. ಮುತ್ತುಲಕ್ಷ್ಮಿ ಅವರು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್ಗೆ ತೆರಳಿದರು ಮತ್ತು ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್ಗೆ ಪ್ರವೇಶಿಸಲು ಮಹಿಳೆಯರ ಇಂಡಿಯನ್ ಅಸೋಸಿಯೇಷನ್ (WIA) ಯ ಮನವಿಗೆ ಪ್ರತಿಕ್ರಿಯೆಯಾಗಿ ಅವರು ಅದರ ಉಪಾಧ್ಯಕ್ಷರಾಗಿ ಅವರು ಅವಿರೋಧವಾಗಿ ಆಯ್ಕೆಯಾದರು. ಮಹಿಳೆಯರಿಗೆ ಪುರಸಭಾ ಮತ್ತು ಶಾಸಕಾಂಗ ಫ್ರ್ಯಾಂಚೈಸ್ಗಾಗಿ ಅವರು ಆಂದೋಲನವನ್ನು ನಡೆಸಿದರು. ಅನಾಥರು ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳ ವ್ಯವಸ್ಥೆಗಾಗಿ ಚೆನ್ನೈನಲ್ಲಿ ಅವವೈ ಹೋಮ್ ಅನ್ನು ಪ್ರಾರಂಭಿಸಲಾಗಿದೆ.[][]

ರಾಜಕೀಯ

ಬದಲಾಯಿಸಿ

೧೯೨೬ರಲ್ಲಿ ಮದ್ರಾಸ್ ಶಾಸನ ಸಭೆಗೆ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರಾಗಿ ನಾಮನಿರ್ದೇಶನಗೊಂಡರು. ಭಾರತದ ಶಾಸಕಾಂಗದ ಸದಸ್ಯರಾದ ಮೊದಲ ಮಹಿಳೆಯಾಗಿದ್ದಾರೆ. ದೇವದಾಸಿ ವ್ಯವಸ್ಥೆಯನ್ನು ನಿಷೇದಿಸುವಲ್ಲಿ ಪಾತ್ರ ವಹಿಸಿದ್ದಾರೆ. ೧೯೩೦ರಲ್ಲಿ ಅವರು ಮದ್ರಾಸ್ ಶಾಸನ ಸಭೆಗೆ ರಾಜೀನಾಮೆ ನೀಡಿದರು. ಅವರು ಮಹಿಳಾ ಸಂಘದ (WIA) ಸಂಸ್ಥಾಪಕ-ಅಧ್ಯಕ್ಷರಾಗಿದ್ದರು ಮತ್ತು ಮದ್ರಾಸ್ ಕಾರ್ಪೊರೇಶನ್ನ ಮೊದಲ ಆಲ್ಡರ್ ವುಮನ್ ಆಗಿ ಹೊರಹೊಮ್ಮಿದರು.

೧೯೩೫ರ ಭಾಷಣದಲ್ಲಿ, ಅವರು ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಯನ್ನು ಪ್ರಾರಂಭಿಸಬೇಕೆಂದು ಆಶಿಸಿದರು. ಅಡ್ಯಾರ್ ಕ್ಯಾನ್ಸರ್ ೧೯೫೪ರ ಜೂನ್ ೧೮ ರಂದು ಪ್ರಾರಂಭವಾಯಿತು.[]

ಪ್ರಶಸ್ತಿಗಳು ಮತ್ತು ಪುಸ್ತಕಗಳು

ಬದಲಾಯಿಸಿ

ಮೈ ಎಕ್ಸ್ಪೀರಿಯನ್ಸ್ ಆಸ್ ಎ ಲೆಜಿಸ್ಲೇಟರ್ ಅವರು ಬರೆದ ಪುಸ್ತಕವಾಗಿದೆ. ೧೯೫೬ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "Avvai Home". www.avvaihome.org. Retrieved 2019-02-15.
  2. "ಆರ್ಕೈವ್ ನಕಲು". Archived from the original on 2011-08-10. Retrieved 2019-03-10.
  3. Viswanathan, S. "The Pioneers: Dr. Muthulakshmi Reddy". Frontline. The Hindu. Retrieved 26 April 2013.
  4. "Padma Awards" (PDF). Ministry of Home Affairs, Government of India. 2015. Archived from the original (PDF) on ಅಕ್ಟೋಬರ್ 15, 2015. Retrieved July 21, 2015.