ಮುಜುಗರ
ಮುಜುಗರ ಅಥವಾ ಪೇಚು ಸೌಮ್ಯದಿಂದ ಗಂಭೀರ ಮಟ್ಟದ ಅಸೌಖ್ಯದೊಂದಿಗೆ ಸಂಬಂಧಿಸಲಾದ ಒಂದು ಭಾವನಾತ್ಮಕ ಸ್ಥಿತಿ. ಇದನ್ನು ಸಾಮಾನ್ಯವಾಗಿ ಇತರರು ನೋಡಿದ ಅಥವಾ ಇತರರಿಗೆ ಬಹಿರಂಗಗೊಂಡ, ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಅಥವಾ ಸಮ್ಮತಿಸಲಾಗದ ಕ್ರಿಯೆ ಅಥವಾ ಸ್ಥಿತಿಯನ್ನು ಹೊಂದಿರುವ ಯಾರಾದರೂ ಅನುಭವಿಸುತ್ತಾರೆ.
ಸಾಮಾನ್ಯವಾಗಿ, ಗೌರವ ಅಥವಾ ಘನತೆಯ ಹಾನಿಯ ಸ್ವಲ್ಪ ಗ್ರಹಿಕೆಯು ಒಳಗೊಂಡಿರುತ್ತದೆ, ಆದರೆ ಮುಜುಗರದ ಪ್ರಮಾಣ ಮತ್ತು ಬಗೆಯು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಸ್ವಲ್ಪ ಅರ್ಥದಲ್ಲಿ ಮುಜುಗರವು ನಾಚಿಕೆಯನ್ನು ಹೋಲುತ್ತದೆ, ಆದರೆ ನಾಚಿಕೆಯನ್ನು ತನಗೆ ಮಾತ್ರ ತಿಳಿದಿರುವ ಕ್ರಿಯೆಗೆ ಅನುಭವಿಸಬಹುದು ಎಂಬುದನ್ನು ಹೊರತುಪಡಿಸಿ. ಜೊತೆಗೆ, ಸಾಮಾನ್ಯವಾಗಿ ಮುಜುಗರವು ನೈತಿಕವಾಗಿ ತಪ್ಪಾಗಿರುವ ಬದಲಾಗಿ, ಕೇವಲ ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲದ ಕ್ರಿಯೆಯಿಂದ ಉಂಟಾಗಿರುವಂಥದ್ದು ಎಂಬ ಅರ್ಥವನ್ನು ಹೊಂದಿರುತ್ತದೆ.
ಉಲ್ಲೇಖಗಳು
ಬದಲಾಯಿಸಿ- Tangney, JP; Miller Flicker Barlow (1996). "Are shame, guilt, and embarrassment distinct emotions?". Journal of Personality and Social Psychology.