ಮುಖವಾಸ
ಮುಖವಾಸ ವರ್ಣರಂಜಿತ ಊಟದ ನಂತರದ ಲಘು ಆಹಾರ ಅಥವಾ ಜೀರ್ಣ ಸಹಾಯಕವಾಗಿದೆ. ಇದನ್ನು ಬಾಯಿಯನ್ನು ಶುದ್ಧಗೊಳಿಸುವ ಆಹಾರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ, ವಿಶೇಷವಾಗಿ ಊಟದ ನಂತರ.[೧] ಇದನ್ನು ವಿವಿಧ ಬೀಜಗಳು ಮತ್ತು ನಟ್‍ಗಳಿಂದ ತಯಾರಿಸಬಹುದು, ಉದಾಹರಣೆಗೆ ಹಲವುವೇಳೆ ಸೊಂಪು, ಸಾಲೇಯ, ಕೊಬ್ಬರಿ, ಕೊತ್ತುಂಬರಿ ಬೀಜ ಮತ್ತು ಎಳ್ಳು. ಸಕ್ಕರೆ ಮತ್ತು ಪುದೀನಾ ಎಣ್ಣೆ ಸೇರಿದಂತೆ ವಿವಿಧ ಸಾರತೈಲಗಳನ್ನು ಸೇರಿಸಿರುವುದರಿಂದ ಇದು ರುಚಿಯಲ್ಲಿ ಸಿಹಿಯಾಗಿದ್ದು ಬಹಳ ಸುವಾಸನೆಯುಕ್ತವಾಗಿರುತ್ತದೆ. ಬೀಜಗಳು ಉಪ್ಪ/ಖಾರವಾಗಿ ಅಥವಾ ಸಿಹಿಯಾಗಿರಬಹುದು—ಸಕ್ಕರೆಯಿಂದ ಲೇಪಿತವಾಗಿರುತ್ತವೆ ಮತ್ತು ಹೊಳೆಯುವ ಬಣ್ಣಗಳನ್ನು ಹೊಂದಿರುತ್ತದೆ.[೨]
ಈ ಪದವು ಮುಖ (ಅಂದರೆ ಬಾಯಿ) ಮತ್ತು ವಾಸ (ಅಂದರೆ ಗಂಧ) ಗಳ ಸಂಯೋಜನೆಯಾಗಿದೆ.
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2017-08-18. Retrieved 2020-08-02.
- ↑ Pursell, JJ (2015). The Herbal Apothecary: 100 Medicinal Herbs and How to Use Them. Portland: Timber Press. p. 36. ISBN 9781604696622. Retrieved 20 June 2016.