ಮುಕ್ತ ಅರ್ಥವ್ಯವಸ್ಥೆ

ಮುಕ್ತ ಅರ್ಥವ್ಯವಸ್ಥೆ (Open Economy)

ಬದಲಾಯಿಸಿ
      
        ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸರಕು ಮತ್ತು ಸೇವೆಗಳ ಹಾಗೂ ಹಣಕಾಸು ಆಸ್ತಿ ಮುಂತಾದವುಗಳ ಆರ್ಥಿಕ ವ್ಯವಹಾರ ಸಂಬಂದಗಳನ್ನು ಕಾಯ್ದುಕೊಂಡ ಅರ್ಥವ್ಯವಸ್ಥೆಯನ್ನು ಮುಕ್ತ ಅರ್ಥವ್ಯವಸ್ಥೆ ಎಂದು ಕರೆಯುತ್ತಾರೆ.

ಮುಕ್ತ ಅರ್ಥವ್ಯವಸ್ಥೆಗಳ ನಡುವೆ ಆಮದು ಮತ್ತು ರಪ್ತು ವ್ಯಾಪಾರವು ಮುಕ್ತವಾಗಿ ನಡೆಯುತ್ತದೆ.ಈ ರೀತಿಯ ಮುಕ್ತ ಅರ್ಥವ್ಯವಸ್ಥೆಗಳು ಬೇರೆ ರಾಷ್ಟ್ರಗಳೊಂದಿಗೆ ಕೊಡುಕೊಳ್ಳುವಿಕೆಯ ವಾಪಾರವನ್ನು ಮಾಡುವರಲ್ಲಿ ಮುಕ್ತವಾಗಿರುತ್ತದೆ. ಮುಕ್ತ ಅರ್ಥವ್ಯವಸ್ಥೆಗಳು ಇತರ ರಾಷ್ಟ್ರಗಳಿಂದ ಸಾಲ ಪಡೆಯುವುದು ಮಾತ್ರವಲ್ಲದೆ ಇತರ ರಾಷ್ಟ್ರಗಳಿಗೆ ಸಾಲ ನೀಡುವ ಪ್ರಕ್ರಿಯೆಯಲ್ಲಿಯೂ ಭಾಗಿಯಾಗುತ್ತವೆ. ಮುಕ್ತ ಅರ್ಥವ್ಯವಸ್ಥೆಗಳು 'ಕೊಡು-ಕೊಳ್ಳುವಿಕೆ' ಪ್ರಕ್ರಿಯೆಯನ್ನು ವಿಸ್ತರಿಸಲು ಮೂರು ರೀತಿಯ ಕೊಂಡಿಗಳನ್ನು ಸೃಷ್ಟಿಸುತ್ತವೆ. ೧.ಸರಕು ಮಾರುಕಟ್ಟೆ ಕೊಂಡಿ:

        ಅನುಭೋಗಿಗಳು ಮತ್ತು ಉದ್ಯಮಗಳು ದೇಶಿಯ ಸರಕುಗಳನ್ನು ಕೊಂಡುಕೊಳ್ಳಬಹುದು. ಅಂತರಾಷ್ಟ್ರೀಯ ವ್ಯಾಪಾರದ ಮೂಲಕ ವ್ಯಾಪಾರವನ್ನುಸಾಧ್ಯವಾಗಿಸುವ ಈ ಕೊಂಡಿಗೆ ಸರಕು ಮಾರುಕಟ್ಟೆ ಕೊಂಡಿ ಎನ್ನುತ್ತಾರೆ.

೨.ಹಣಕಾಸು ಮಾರುಕಟ್ಟೆ ಕೊಂಡಿ:

        ಮುಕ್ತ ಅರ್ಥವ್ಯವಸ್ಥೆ ಹೂಡಿಕೆದಾರರಿಗೆ ದೇಶೀಯ ಹಾಗೂ ವಿದೇಶಿ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತಿದೆ. ಹೂಡಿಕೆದಾರರನ್ನು ಕಹಣಕಾಸು ಮಾರುಕಟ್ಟೆಗೆ ಜೋಡಿಸುವ ಈ ಕೊಂಡಿಯನ್ನು ಹಣಾಕಾಸು

ಮಾರುಕಟ್ಟೆ ಕೊಂಡಿ ಎಂದು ಕರೆಯುತ್ತರೆ. ೩.ಘಟಕ ಮಾರುಕಟ್ಟೆ ಕೊಂಡಿ:

        ಮುಕ್ತ ಅರ್ಥವ್ಯವಸ್ಥೆಯಲ್ಲಿ ಉತ್ಪಾದನಾ ಘಟಕಗಳು ಮುಕ್ತವಾಗಿ ಚಲಿಸುತ್ತವೆ. ಕಾರ್ಮಿಕರು ಎಲ್ಲಿ ಕೆಲಸ ಮಾಡಬೇಕು, ಉದ್ಯಮಗಳು ಎಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕು ಎಂಬುದನ್ನು ಅವರುಗಳೇ ಮುಕ್ತವಾಗಿ ನಿರ್ಧರಿಸಬಹುದು. ಈ ಮುಕ್ತ ಅವಕಾಶವನ್ನು ಘಟಕವನ್ನು ಸ್ಥಾಪಿಸಬೇಕು ಎಂಬುದನ್ನು ಅವರುಗಳೇ ಮುಕ್ತವಾಗಿ ನಿರ್ಧರಿಸಬಹುದು. ಈ ಮುಕ್ತ ಅವಕಾಶವನ್ನು ಘಟಕ ಮಾರುಕಟ್ಟೆ ಕೊಂಡಿ ಎನ್ನುತ್ತಾರೆ.
        ಮುಕ್ತ ಅರ್ಥವ್ಯವಸ್ಥೆಯ ಪರಿಕಲ್ಪನೆ ಹೊಸದೇನಲ್ಲ. ೧೮೭೦ ರಿಂದ ೧೯೧೩ರ ಅವಧಿಯಲ್ಲಿ ಮುಕ್ತ ವ್ಯಾಪಾರ ಬಹುವಾಗಿ ಪ್ರಚಲಿತದಲ್ಲಿತ್ತು. ಆರ್ಥಿಕ ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ಬಹಳಷ್ಟು ದೇಶಗಳು ಮುಕ್ತ ವ್ಯಾಪಾರ ನೀತಿಯನ್ನು ಅಳವಡಿಸಿಕೊಂಡಿದ್ದವು. ವಿವಿಧ ದೇಶಗಳ ನಡುವೆ ವಿನಿಮಯವಾಗುವ ಸರಕು-ಸೇವೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ವಿಧಿಸದ ಒಂದು ವ್ಯಾಪಾರ ನೀತಿಯನ್ನು ಮುಕ್ತ ವ್ಯಾಪಾರ ನೀತಿ ಎನ್ನುತ್ತೇವೆ.

 

ಮುಕ್ತ ಅರ್ಥವ್ಯವಸ್ಥೆಯ ಪ್ರಯೋಜನಗಳು

ಬದಲಾಯಿಸಿ

೧)ಗ್ರಾಹಕನಿಗೆ ಹೆಚ್ಚಿನ ಆಯ್ಕೆಗಳು

ಬದಲಾಯಿಸಿ
       ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಮೂಲಕ ಮುಕ್ತ ಅರ್ಥ ವ್ಯವಸ್ಥೆಯು ಅನುಭೋಗಿಗಳಿಗೆ ತಮ್ಮ ಅಭಿರುಚಿಗನುಗುಣವಾಗಿ ವಿವಿಧ ಬಗೆಯ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವ ಅನುಕೂಲವನೋದಗಿಸಿದೆ.ಉದಾ:ವಾಹನ ಖರೀದಿಸಲಿಚ್ಚಿಸುವ ಭಾರತೀಯ ಗ್ರಾಹಕರು ಕೇವಲ ಮಾರುತಿಯಂತಹ ದೇಶೀಯ ಕಂಪನಿಯ ಕಾರಿನ ಆಯ್ಕೆಗೆ ಮಾತ್ರ ಸೀಮಿತರಾಗಿಲ್ಲ, ಆದರೆ ಅವರು ಅಮೆರೀಕಾ, ಯೂರೋಪ್ ಅಥವಾ ಜಪಾನ್ಗಳಾಲಿ ತಯಾರಾಗುವ ಫೋರ್ಡ್, ಫಿಯೆಟ್, ಟಯೋಟಾ ಮತ್ತು ಹೊಂಡಾ ಕಾರುಗಳನ್ನೂ ಆಯ್ಕೆಮಾಡಿಕೊಲಳ್ಳಬಹುದಾಗಿದೆ.

೨)ಹೆಚ್ಚುತ್ತಿರುವ ಸ್ಪರ್ಧೆ ಮತ್ತು ಕುಗ್ಗುತ್ತಿರುವ ಬೆಲೆ

ಬದಲಾಯಿಸಿ
        ಮುಕ್ತ ಆರ್ಥಿಕತೆಯಿಂದಾಗುವ ಲಾಭವೆಂದರೆ, ಅಧಿಕ ಸಂಖ್ಯೆಯ ಉತ್ಪಾದಕರು ತಮ್ಮ ವ್ಯವಹಾರವನ್ನು ಹೆಚ್ಚಿಸಿಕೊಳ್ಳಲು ಪೈಪೋಟಿ ನಡೆಸಬೇಕಾಗುತ್ತದೆ. ಉತ್ಪಾದಕರಲ್ಲಿನ ಈ ಪೈಪೋಟಿಯು ಕಡಿಮೆ ಬೆಲೆ ಮತ್ತು ಸುಧಾರಿಸಿದ ಸೇವೆಗಳ ಪೂರೈಕೆಗೆ ಕಾರಣವಾಗುತ್ತದೆ. ಈ ಪೈಪೋಟಿಯು ಕಡಿಮೆ ಬೆಲೆ ಮತ್ತು ಸುಧಾರಿಸಿದ ಸೇವೆಗಳ ಪೂರೈಕೆಗೆ ಕಾರಣವಾಗುತ್ತದೆ. ಈ ಪೈಪೋಟಿಯಿಂದ ಗ್ರಾಹಕರ ಮನವೊಲಿಸುವ ಪ್ರಯತ್ನಕ್ಕೆ ಇದು ಸಹಕರಿಸುತ್ತದೆ.

೩)ವಿಸ್ಮ್ರುತ ಮಾರುಕಟ್ಟೆ ಮತ್ತು ಗ್ರಾಹಕ ತಾಣಗಳು

ಬದಲಾಯಿಸಿ
        ಮುಕ್ತ ಮಾರುಕಟ್ಟೆಯು ಕಂಪೆನಿಗಳು ಮತ್ತು ಉದ್ದಿಮೆಗಳಿಗೆ ತಮ್ಮ ವ್ಯವಹಾರವನ್ನು ರಾಷ್ಟ್ರೀಯ ಮಾರುಕಟ್ಟೆಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ವಿದೇಶಿ ಅನುಭೋಗಿಗಳೂ ಸಹ ಇದರಿಂದ ಲಾಭ ಪಡೆಯುತ್ತಾರೆ. ಜಾಗತಿಕ ಅರ್ಥವ್ಯವಸ್ಥೆಯ ಮುಕ್ತ ಮಾರುಕಟ್ಟೆಯ ಪರಿಣಾಮವಾಗಿ ಮ್ಯಾಕ್ ಡೊನಾಲ್ಡ್, ಸ್ಟಾರ್ಬಕ್ಸ್ ಮತ್ತು ನೋಕಿಯಾ ಮುಂತಾದ ವಿದೇಶಿ ಉದ್ದಿಮೆಗಳು ಜಗತ್ತಿನಾದ್ಯಮ್ತ ಬಲಿಷ್ಟ ಗ್ರಾಹಕರ ತಾಣಗಳನ್ನು ಬೆಳೆಸಿವೆ.

೪)ಜಾಗತಿಕ ಹೂಡಿಕೆಯ ಅವಕಾಶಗಳು

ಬದಲಾಯಿಸಿ
        ಮುಕ್ತ ಅರ್ಥವ್ಯವಸ್ಥೆಯು ಬಂಡವಾಳ ಹೂಡಿಕೆಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ. ಸಣ್ಣ ಹಾಗೂ ದೊಡ್ಡ ಹೂಡಿಕೆದಾರರು ದೇಶೀಯ ಅಥವಾ ವಿದೇಶೀ ಕಂಪನಿಗಳಲ್ಲಿ ಬಂಡಾವಾಳ ಹೂಡಬಹುದು. ಮುಕ್ತ ಅರ್ಥವ್ಯವಸ್ಥೆಯು 

ಬಂಡವಾಳ ಮುಕ್ತವಾಗಿ ಚಲಿಸುತ್ತದೆ. ಲ್ಯಾಟಿನ್ ಅಮೇರಿಕ, ಆಫ್ರಿಕಾ ಹಾಗೂ ದಕ್ಷಿಣ ಏಷ್ಯಾ ದಂತಹ ಉದಯೋನ್ಮುಖ ಮಾರುಕಟ್ಟೆಗಳು ಹೂಡಿಕೆದಾರರನ್ನು ಬಹುವಾಗಿ ಆಕರ್ಷಿಸುತ್ತದೆ.

೫)ಅವಿಷ್ಕಾರಕ್ಕೆ ಅವಕಾಶ

ಬದಲಾಯಿಸಿ
        ಮುಕ್ತ ಅರ್ಥವ್ಯವಸ್ಥೆಯು ಸಂಶೋಧನೆ ಮತ್ತು ಅವಿಶ್ಕಾರಗಳ ಅಳವಡಿಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ಕೊಡುತ್ತದೆ. ಇದರಿಂದ ಅವಿಷ್ಕರಿಸಿದ ಉತ್ಪನ್ನಗಳನ್ನು ಬೃಹತ್ ಮಾರುಕಟ್ಟೆಗಳಲ್ಲಿ ಲಾಭದಾಯಕವಾಗಿ ಅಳವಡಿಸಿಕೊಳ್ಳಲು 

ಮತ್ತು ಸಂಶೋಧನೆ ವೆಚ್ಚವನ್ನು ಭರಿಸಲು ವಿಫುಲ ಅವಕಾಶಗಳಿವೆ.

೬)ಆರ್ಥಿಕ ಬೆಳವಣಿಗೆ

ಬದಲಾಯಿಸಿ
        ಕೊನೆಯದಾಗಿ, ಮುಕ್ತ ಅರ್ಥವ್ಯವಸ್ಥೆಯಿಂದಾಗಿ, ಲಭ್ಯವಾಗುವ ಹೆಚ್ಚಿನ ಪ್ರಮಾಣದ ಉತ್ಪಾದನಾ ಘಟಕಗಳು ಆ ದೇಶದ ಜಿ.ಡಿ.ಪಿ.ಯನ್ನು ಹೆಚ್ಚಿಸುತ್ತವೆ. ಹೆಚ್ಚಿದ ವಿದೇಶೀ ಬಂಡಾವಾಳದ ಲಭ್ಯತೆ, ಉತ್ತಮ ದರ್ಜೆಯ ತಂತ್ರಜ್ಞಾನ, ಗುಣಮಟ್ಟದ ಸರಕು ಮತ್ತು ಸೇವೆಗಳು ಮುಂತಾದವುಗಳಿಂದ ದೇಶದ ಆರ್ಥಿಕ ಪ್ರಗತಿ ಉಂಟಾಗುತ್ತದೆ.

ವ್ಯಾಪಾರದ ಮೂಲ ಪರಿಕಲ್ಪನೆಗಳು

ಬದಲಾಯಿಸಿ
         ವ್ಯಾಪಾರವೆಂದರೆ ಎರಡು ವ್ಯಕ್ತಿಗಳ ಅಥವಾ ಎರಡು ದೇಶಗಳ ನಡುವಿನಸರಕು ಮತ್ತು ಸೇವೆಗಳ ವಿನಿಮಯ. ವ್ಯಾಪಾರವನ್ನು ದೇಶೀಯ ವ್ಯಾಪಾರ ಮತ್ತು ವಿದೇಶೀ ವ್ಯಾಪಾರವೆಂದು ಎರಡು ವಿಧದಲ್ಲಿ ವಿಂಗಡಿಸಬಹುದು. 

ಅವುಗಳೆಂದರೆ,(೧)ದೇಶೀಯ ವ್ಯಾಪಾರ, (೨)ವಿದೇಶಿ ವ್ಯಾಪಾರ.

         ದೇಶದ ಭೌಗೋಳಿಕ ಗಡಿಯೊಳಗಿನ ವ್ಯಾಪಾರವನ್ನು ಆಂತರಿಕ ವ್ಯಾಪಾರ ಅಥವಾ ದೇಶೀಯ ವ್ಯಾಪಾರ ಎನ್ನುತ್ತಾರೆ. ಸರಕು ಮತ್ತು ಸೇವೆಗಳು ದೇಶದೊಳಗಡೆ ಇರುವ ಪ್ರಾಂತ್ಯಗಳ ನಡುವೆಯೂ ವಿನಿಮಯವಾಗುತ್ತವೆ. 

ಪ್ರಾಂತ್ಯಗಳ ನಡುವೆ ವ್ಯಾಪಾರವಾಗುವುದರಿಂದ ಈ ವ್ಯಾಪಾರವನ್ನು ಅಂತರ್ ಪ್ರಾಂತೀಯ ವ್ಯಾಪಾರವೆಂದೂ ಕರೆಯಲಾಗುವುದು. ಆಂತರಿಕ ವ್ಯಾಪಾರವನ್ನು ಚಿಲ್ಲರೆ ವ್ಯಾಪಾರ ಎಂಬುದಾಗಿ ವರ್ಗೀಕರಿಸಬಹುದು. ಅಂತರ ರಾಷ್ಟ್ರೀಯ ವ್ಯಾಪಾರವು ಆಮದು ವ್ಯಾಪಾರ ಮತ್ತು ರಫ್ತು ವ್ಯಾಪಾರಗಳನ್ನು ಒಂದು ದೇಶವು ಇತರೆ ದೇಶೀಯ ಸರಕು-ಸೇವೆಗಳನ್ನು ಮಾರಾಟ ಮಾಡುವುದು. ಅಂತರಾಷ್ಟ್ರೀಯ ವ್ಯಾಪಾರವನ್ನು ವಿವಿಧ ರೀತಿಯಲ್ಲಿ ಪರಿಕಲ್ಪಿಸಬಹುದು. ಅಂತರ ರಾಷ್ಟ್ರೀಯ ವ್ಯಾಪಾರದ ವಿವಿಧ ಪರಿಕಲ್ಪನೆಗಳನ್ನು ಈ ಕೆಳಗಿನಂತೆ ವಿಂಗಡಿಸಬಹುದು. ೧)ಏಕ ಪಕ್ಷೀಯ ವ್ಯಾಪಾರ: ಒಂದು ರಾಷ್ಟ್ರವು, ಸಾಮಾನ್ಯವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರ ತನ್ನ ಲಾಭಕ್ಕಾಗಿ ಮತ್ತೊಂದು ರಾಷ್ಟ್ರದ ಮೇಲೆ ವ್ಯಾಪಾರದ ಕರಾರುಗಳನ್ನು ಹೇರಿ ಒತ್ತಾಯಪೂರ್ವಕವಾಗಿ ನಡೆಸುವ ವ್ಯಾಪಾರವನ್ನು ಏಕಪಕ್ಷೀಯ ವ್ಯಾಪಾರ ಎನ್ನಲಾಗುವುದು.ತಾಂತ್ರಿಕವಾಗಿ ಹೇಳುವುದಾದರೆ, ಇಲ್ಲಿ ಯಾವುದೇ ಲಿಖಿತ ವ್ಯಾಪಾರೀ ಕರಾರುಗಳನ್ನು ಹೇರಿ ಒತ್ತಾಯಪೂರ್ವಕವಾಗಿ ನಡೆಸುವ ವ್ಯಾಪಾರವನ್ನು ಏಕಪಕ್ಷೀಯ ವ್ಯಾಪಾರ ಎನ್ನಲಾಗುವುದು. ತಾಂತ್ರಿಕವಾಗಿ ಹೇಳುವುದಾದರೆ, ಇಲ್ಲಿ ಯಾವುದೇ ಲಿಖಿತ ವ್ಯಾಪಾರೀ ಕರಾರುಗಳು ಅಸ್ತಿತ್ವದಲ್ಲಿರುವುದಿಲ್ಲ. ಬದಲಿಗೆ ಬಲಿಷ್ಟ ರಾಷ್ಟ್ರ ದುರ್ಬಲ ರಾಷ್ಟ್ರದಲ್ಲಿ ತನ್ನ ಸರಕುಗಳಿಗೆ ಏಕ ಪಕ್ಷೀಯವಾಗಿ ಮಾರುಕಟ್ಟೆಯನ್ನು ವಿಸ್ತರಿಸುತ್ತದೆ.

೨)ದ್ವಿ ಪಕ್ಷೀಯ ವ್ಯಾಪಾರ: ದ್ವಿ ಪಕ್ಷೀಯ ವ್ಯಾಪಾರ ಎಂದರೆ ಎರಡು ರಾಷ್ಟ್ರ ಅಥವಾ ರಾಷ್ಟ್ರಗಳ ಎರಡು ಗುಂಪುಗಳ ಮಧ್ಯೆ ಸಮಾನ ಲಾಭಕ್ಕಾಗಿ ನಡೆಯುವ ವ್ಯಾಪಾರದ ಪದ್ದತಿ. ಸಾಮಾನ್ಯವಾಗಿ ಈ ಪದ್ದತಿಯ ವ್ಯಾಪಾರ ಎರಡು ಸಮಬಲ ರಾಷ್ಟ್ರಗಳ ನಡುವೆ ನಡೆಯುತ್ತದೆ. ವ್ಯಾಪಾರದ ಈ ಪದ್ದತಿಯು ವ್ಯಾಪಾರದ ಎರಡೂ ಭಾಗೀದಾರರಿಗೆ ಅನುಕೂಲಕರ ವ್ಯಾಪಾರ ಸ್ಥಾನಮಾನವನ್ನು ಒದಗಿಸುತ್ತದೆ.ಸಂಕ್ಷಿಪ್ತವಾಗಿ ಹೇಳುವುದಾದರೆ, ವ್ಯಾಪಾರದಲ್ಲಿ ಭಾಗವಹಿಸುವ ಎರಡು ರಾಷ್ಟ್ರಗಳು ಪರಸ್ಪರ ಸಮಾನ ಗೌರವಗಳನ್ನು, ಹಕ್ಕುಗಳನ್ನು ಮತ್ತು ಲಾಭಗಳನ್ನು ಹೊಂದುತ್ತವೆ ಭಾರತ, ಶ್ರೀಲಂಕಾ ಮುಕ್ತ ವ್ಯಾಪಾರ ಒಪ್ಪಂದಕ್ಕೆ ೨೮ ಡಿಸೆಂಬರ್ ೧೯೯೮ರಂದು ಸಹಿ ಮಾಡಿವೆ. ಒಪ್ಪಂದದ ಕರಾರಿನ ಪ್ರಕಾರ ಹಲವಾರು ಸರಕು ಮತ್ತು ಸೇವೆಗಳನ್ನು ಸುಂಕ ರಹಿತವಾಗಿ ವಹಿವಾಟು ಮಾಡಬಹುದಾಗಿದೆ. ಈ ಒಪ್ಪಂದದನ್ವಯ ಸುಮಾರು ೧೦೦೦ ಸರಕು-ಸೇವೆಗಳನ್ನು ಸುಂಕ ರಹಿತವಾಗಿ ಶ್ರೀಲಮ್ಕಾದಿಂದ ಆಮದು ಮಾಡಿಕೊಳ್ಳಲು ಭಾರತ ಒಪ್ಪಿಕೊಂಡಿದೆ. ಅದೇ ರೀತಿ ಶ್ರೀಲಂಕಾ ಸುಮಾರು ೯೦೦ ಸರಕುಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲು ಅನುಮತಿಸಿದೆ.

೩)ಬಹು ಪಕ್ಷೀಯ ವ್ಯಾಪಾರ: ಬಹು ಪಕ್ಷೀಯ ವ್ಯಾಪಾರವೆಂದರೆ ಮೂರು ಅಥವಾ ಹೆಚ್ಚು ರಾಷ್ಟ್ರಗಳ ಅಥವಾ ರಾಷ್ಟ್ರಗಳ ಗುಂಪುಗಳ ನಡುವಿನ ವ್ಯಾಪಾರ. ವ್ಯಾಪಾರದ ಈ ಪದ್ದತಿಯಲ್ಲಿ ರಾಷ್ಟ್ರಗಳ ನಡುವೆ ಯಾವುದೇ ತಾರತಮ್ಯವಿರುವುದಿಲ್ಲ. ಬಹುಪಕ್ಷೀಯ ವ್ಯಾಪಾರದ ಪ್ರಮುಖ ಪ್ರಯೋಜನವೆಂದರೆ ವ್ಯಾಪಾರದಲ್ಲಿ ಭಾಗವಹಿಸಿರುವ ಎಲ್ಲಾ ರಾಷ್ಟ್ರಗಳು ಸಮಾನ ಸ್ಥಾನಮಾನ ಪಡೆಯುತ್ತವೆ. ವ್ಯಾಪಾರದ ಕರಾರುಗಳನ್ನು ನಿರ್ಧರಿಸುವಲ್ಲಿ ಬಡರಾಷ್ಟ್ರಗಳ ಅಭಿಪ್ರಾಯಗಳನ್ನು ಸಮಾನವಾಗಿ ಸ್ವೀಕರಿಸಲಾಗುತ್ತದೆ. ಇಂದಿನ ಮುಕ್ತ ಅರ್ಥವ್ಯವಸ್ಥೆಯಲ್ಲಿ ವ್ಯಾಪಾರವನ್ನು ಉದಾರೀಕರಣ ಮಾಡುವುದರಲ್ಲಿ ಬಹುಪಕ್ಷೀಯ ವ್ಯಾಪಾರದ ಪಾತ್ರ ತುಂಬಾ ಪರಿಣಾಮಕಾರಿ. ದೋಹಾ ಸುತ್ತಿನ ವ್ಯಾಪಾರ ಒಪ್ಪಂದ ಬಹುಪಕ್ಷೀಯ ವ್ಯಾಪಾರವೊಂದಕ್ಕೆ ಸೂಕ್ತ ಉದಾಹರಣೆ.

ವ್ಯಾಪಾರ ಬಾಕಿ ಮತ್ತು ಸಂದಾಯ ಬಾಕಿ

ಬದಲಾಯಿಸಿ
          ವೀದೇಶಿ ವ್ಯಾಪಾರವು ದೇಶಗಳ ನಡುವಿನ ರಪ್ತು ಮತ್ತು ಆಮದು ವ್ಯಾಪಾರವನ್ನು ಒಳಗೊಂಡಿದೆ, ರಪ್ತು ವ್ಯಾಪಾರದಲ್ಲಿ ಎರಡು ವಿಧಗಳಿವೆ.

೧)ಗೋಚರ ಸರಕುಗಳ ರಪ್ತು. ೨)ಅಗೋಚರ ಸರಕುಗಳ ರಪ್ತು. ಒಂದು ದೇಶ ವಿದೇಶಗಳಿಗೆ ಸಲ್ಲಿಸಿದ ಸೇವೆಗಳಾದ, ಬ್ಯಾಂಕಿಂಗ್, ವಿಮೆ, ಬಂಡವಾಳ ಹೊರ ಹರಿವು, ಹಡಗು ಸಾರಿಗೆ ಸೇವೆಗಳು, ವಿದೇಶಿ ಸಾಲದ ಮೆಲಿನ ಬಡ್ಡಿ ಗಳಿಕೆ, ವಿದೇಶಗಳಲ್ಲಿ ಹೂಡಿದ ಬಂಡವಾಳದಿಂದ ಗಳಿಸಿದ ಲಾಭ ಇತ್ಯಾದಿಗಳನ್ನು ಒಳಗೊಂಡಿದೆ.

ಅದೇ ರೀತಿ ಆಮದು ವ್ಯಾಪಾರದಲ್ಲಿ ಎರಡು ವಿಧಗಳಿವೆ. ೧)ಗೋಚರ ಸರಕುಗಳ ಆಮದು. ೨)ಅಗೋಚರ ಸರಕುಗಳ ಆಮದು. ಇದು ವಿದೇಶಿಯರು ದೇಶೀಯರಿಗೆ ಸಲ್ಲಿಸಿದ ಬ್ಯಾಂಕಿಂಗ್, ವಿಮೆ, ಬಂಡವಾಳದ ಒಳಹರಿವು, ಹಡಗು ಸಾರಿಗೆ ಸೇವೆ, ಸಾಲದ ಮರುಪಾವತಿ, ವಿದೇಶಿ ಸಾಲಗಳ ಮೇಲಿನ ಬಡ್ಡಿಯ ಪಾವತಿ ಇತ್ಯಾದಿಗಳನ್ನು ಒಳಗೊಂಡಿದೆ.

ವ್ಯಾಪಾರ ಬಾಕಿ: ಒಂದು ದೇಶವು ಅನೇಕ ಗೋಚರ ಮತ್ತು ಅಗೋಚರ ಸರಕುಗಳನ್ನು ರಪ್ತು ಮತ್ತು ಆಮದು ಮಾಡಿಕೊಳ್ಳಬಹುದು. ಒಂದು ರಾಷ್ಟ್ರದ ಒಂದು ವರ್ಷದ ಅವಧಿಯ ಗೋಚರ ಸರಕುಗಳ ಆಮದಿನ ಮೌಲ್ಯಗಳ ನಡುವಿನ ವ್ಯತ್ಯಾಸವನ್ನು ವ್ಯಾಪಾರ ಬಾಕಿ ಎನ್ನಲಾಗುತ್ತದೆ. ಅಂದರೆ ರಾಷ್ಟ್ರಗಳ ನಡುವಿನ ಸರಕುಗಳ ಚಲನೆಯನ್ನು ಗೋಚರ ವ್ಯಾಪಾರವೆನ್ನುವರು. ಏಕೆಂದರೆ ಚಲನೆಯು ಮುಕ್ತವಾಗಿರುವುದಲ್ಲದೆ ಕಸ್ಟಂಸ್ ಅಧಿಕಾರಿಗಳು ಅದನ್ನು ದಾಖಲಿಸಬಹುದು.

           ವ್ಯಾಪಾರ ಬಾಕಿಯಲ್ಲಿ ಮೂರು ವಿಧಗಳಿವೆ.ಅವುಗಳೆಂದರೆ: ೧)ಅನಕೂಲಕರ ವ್ಯಾಪಾರ ಬಾಕಿ,೨)ಪ್ರತಿಕೂಲ ವ್ಯಾಪಾರ ಬಾಕಿ,೩)ಸಮತೋಲಿತ ವ್ಯಾಪಾರ ಬಾಕಿ.
       ಗೋಚರ ಸರಕುಗಳ ರಪ್ತು ಮೌಲ್ಯವು ಗೋಚರ ಸರಕುಗಳ ಆಮದು ಮೌಲ್ಯಕ್ಕಿಂತ ಅಧಿಕವಾಗಿದ್ದರೆ ಒಂದು ದೇಶವು ಅನುಕೂಲಕರ ವ್ಯಾಪಾರ ಬಾಕಿಯನ್ನು ಹೊಂದಿದೆ ಎಂದು ಹೇಳುತ್ತೇವೆ. ಗೋಚರ ಸರಕುಗಳ ಆಮದು ಮೌಲ್ಯವು ಗೋಚರ ಸರಕುಗಳ ರಪ್ತು ಮೌಲ್ಯಕ್ಕಿಂತ ಅಧಿಕವಾಗಿದ್ದರೆ ಒಂದು ದೇಶವು ಪ್ರತಿಕೂಲ ವ್ಯಾಪಾರ ಬಾಕಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಗೋಚರ ರಪ್ತುಗಳ ಮೌಲ್ಯವು ಗೋಚರ ಸರಕುಗಳ ಆಮದು ಮೌಲ್ಯಕ್ಕೆ ಸಮನಾಗಿದ್ದರೆ ಅದನ್ನು ಸಮತೋಲಿತ ವ್ಯಾಪಾರ ಬಾಕಿ ಎನ್ನುವರು. ಒಂದು ದೇಶದ ವ್ಯಾಪಾರ ಬಾಕಿಯು ಅಪರೂಪದಲ್ಲಿ ಸಮತೋಲಿತವಾಗಿರುತ್ತದೆ ಎಂಬುದನ್ನು ಗಮನಿಸಬೇಕಾಗಿದೆ.ಸಾಮಾನ್ಯವಾಗಿ ಒಂದು ದೇಶವು ಅನುಕೂಲಕರ ಅಥವಾ ಪ್ರತಿಕೂಲ ವ್ಯಾಪಾರ ಬಾಕಿಯನ್ನು ಹೊಂದಬಹುದು.

ಸಂದಾಯ ಬಾಕಿ : ವ್ಯಾಪಾರ ಬಾಕಿಯು ಒಂದು ದೇಶದ ವಿದೇಶಿ ವ್ಯಾಪರ ಕ್ಷೇತ್ರದ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡುವುದಿಲ್ಲ. ಏಂಕೆದರೆ ಅದು ಕೇವಲ ಗೋಚರ ಸರಕುಗಳ ರಪ್ತು ಮತ್ತು ಗೊಚರ ಸರಕುಗಳ ಆಮದುಗಳಿಗೆ ಮಾತ್ರ ಅನ್ವಯಿಸುತ್ತದೆ . ಅಗೊಚರ ಸರಕುಗಳ ಆಮದು ಮತ್ತು ರಪ್ತುಗಳನ್ನು ಅದು ಒಳಗೊಂಡಿರುವುದಿಲ್ಲ. ಆದುದರಿಂದ ಸಂದಾಯ ಬಾಕಿಯ ಪರಿಕಲ್ಪನೆಯನ್ನು ಬಳಸಲಾಗುತ್ತದೆ .

       ಸಂದಾಯ ಬಾಕಿಯು ಗೋಚರ  ಮತ್ತು ಅಗೋಚರ ಸರಕುಗಳ ರಪ್ತು ಮತ್ತು ಆಮದುಗಳ ಮೌಲ್ಯದ ನಡುವಿರುವ ಅಂತರವಾಗಿದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಒಂದು  ದೇಶವು ಒಂದು ವರ್ಷದ ಅವಧಿಯಲ್ಲಿ ಜಗತ್ತಿನ ಇತರೆ ದೇಶಗಳೊಡನೆ ಮಾಡಿದ ಎಲ್ಲಾ ಆರ್ಥಿಕ ವ್ಯವಹಾರಗಳ ಕ್ರಮಬದ್ದ ದಾಖಲೆ ಪಟ್ಟಿಯೇ ಸಂದಾಯ ಬಾಕಿ. ಅದು ರಾಷ್ಟ್ರವು ವಿದೇಶಗಳಿಗೆ ಏನನ್ನು ಕಳುಹಿಸಿದೆ ಮತ್ತು ಅದಕ್ಕೆ ಪ್ರತಿಯಾಗಿ ಅದು ವಿದೇಶಿಗಳ್ಂದ ಎನನ್ನು ಸ್ವೀಕರಿಸದೆ ಎಂಬುದನ್ನು ತಿಳಿಸುತ್ತದೆ. ಸಂದಾಯ ಬಾಕಿಯು ದೇಶದ ಹಣಕಾಸು ಮತ್ತು ಕೋಶೀಯ ನೀತಿಗಳು, ವಿದೇಶಿ ವ್ಯಾಪಾರ, ವಿದೇಶಿ ವಿನಿಮಯ, ಅಂತರಾಷ್ಟ್ರೀಯ ಪಾವತಿಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳುವಾಗ ಒಂದು ದೇಶದ ಅಂತರಾಷ್ಟ್ರೀಯ ಸ್ಥಾನಮಾನವನ್ನು ಸರ್ಕಾರಕ್ಕೆ ತಿಳಿಸುತ್ತದೆ.

ಸಂದಾಯ ಬಾಕಿಯ ರಚನೆಯಲ್ಲಿ ಮೂರು ಮುಖ್ಯ ಖಾತೆಗಳಿರುತ್ತವೆ.ಅವುಗಳೆಂದರೆ ೧)ಚಾಲ್ತಿ ಖಾತೆ ೨)ವ್ಯಾಪಾರ ಖಾತೆ ೩)ಅಧಿಕೃತ ಮೀಸಲು ಖಾತೆ

ವಿದೇಶಿ ವಿನಿಮಯ ಮಾರುಕಟ್ಟೆ

ಬದಲಾಯಿಸಿ
        ಒಂದು ದೇಶದ ಹಣವನ್ನು ಇನ್ನೋಂದು ದೇಶದ ಹಣದೊಂದಿಗೆ ಪರಿವರ್ತನೆ ಮಾಡುವ ಮಾರುಕಟ್ಟೆಯನ್ನು ವಿದೇಶಿ ವಿನಿಮಯ ಮಾರುಕಟ್ಟೆ ಎಂದು ಕರೆಯಲಾಗುತ್ತದೆ.ಈ ಮಾರುಕಟ್ಟೆಯಲ್ಲಿ ದೇಶಿಯ ಕರೆನ್ಸಿಯನ್ನು ಅವಶ್ಯವಿರುವ ಬೇರೆ ಯಾವುದೇ ದೇಶಿದ ಕರೆನ್ಸಿಯೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.ಕೇಂದ್ರ ಬ್ಯಾಂಕ್ ಮತ್ತು ಅದರ ಅಧಿಕೃತ ವರ್ತಕರು ವಿದೇಶಿ ವಿನಿಮಯ ಮಾರುಕಟ್ಟೆಯ ಮುಖ್ಯ ಭಾಗಗಳಾಗಿವೆ.ವಾಣಿಜ್ಯ ಬ್ಯಾಂಕುಗಳು ಸಹಾ ವಿದೇಶಿ ವಿನಿಮಯ ವ್ಯವಹಾರದ ಅಧಿಕಾರವನ್ನು ಪಡೆದುಕೊಂಡಿರುತ್ತದೆ. ಒಂದೇ ಕರೆನ್ಸಿಯಲ್ಲಿ ಮಾಪನ ಮಾಡಲಾದ ವಿದೇಶಿ ಬೆಲೆ ಮತ್ತು ದೇಶಿಯ ಬೆಲೆಗಳ ನಡುವಿನ ಅನುಪಾತವನ್ನು ನೈಜ್ಯ ವಿನಿಮಯ ದರವೆನ್ನುತ್ತಾರೆ. ಅಥವಾ ವಿದೇಶಿ ವಸ್ತುಗಳ ಸಾಪೇಕ್ಷ ಬೆಲೆಯನ್ನು ದೇಶೀಯ ವಸ್ತುಗಳ ರೂಪದಲ್ಲಿ ವ್ಯಕ್ತಪಡಿಸುವುದೇ ನೈಜ ವಿನಿಮಯ ದರ. 
           ನೈಜ ವಿನಿಮಯ ದರ R=ePf/P  

ಭಾರತದಲ್ಲಿ ವಿನಿಮಯ ದರದ ನಿರ್ವಹಣೆ: ಎಲ್ಲಾ ದೇಶಗಳಲ್ಲೂ ಅನ್ವಯವಾಗುವ ಏಕ ವಿನಿಮಯ ದರ ಪದ್ದತಿ ಜಾಗತಿಕವಾಗಿ ಜಾರಿಯಾಗಿಲ್ಲ. ಆದ್ದರಿಂದ ಬೇರ ಬೇರೆ ರಾಷ್ಟ್ರಗಳು ವಿಭಿನ್ನವಾದ ವಿನಿಮಯ ದರ ಪದ್ದತಿಗಳನ್ನು ಹೊಂದಿವೆ. ಬದಲಾದ ಜಾಗತಿಕ ಆರ್ಥಿಕ ಪರಿಸ್ಥಿತಿಯಲ್ಲಿ ಬಹಿತೇಕ ರಾಷ್ಟ್ರಗಳು ತೇಲುವ ವಿನಿಮಯ ದರ ಪದ್ದತಿಯನ್ನು ಅಳವಡಿಸಿವೆ.

            ಭಾರತದ  ವಿನಿಮಯ ದರದ ನಿರ್ವಹಣೆ ದೀರ್ಘಕಾಲದಿಂದ ನಡೆದು ಬಂದಿದೆ. ಬ್ರಿಟನ್ನಿನೊಂದಿಗಿದ್ದ ಐತಿಹಾಸಿಕ ಸಂಬಂಧಗಳಿಂದಾಗಿ ಸ್ವಾತಂತ್ರ್ಯಾ ನಂತರ ಭಾರತ ತನ್ನ ರೂಪಾಯಿ ಮೌಲ್ಯವನ್ನು ಬ್ರಿಟನ್ನಿನ ಪೌಂಡ್ ಮೌಲ್ಯದೊಂದಿಗೆ ಸ್ಥಿರಗೊಳಿಸಿತು. ಆದರೆ ಜಾಗತೀಕರಣದ ಪ್ರಭಾವಕ್ಕೊಳಗಾಗಿ ಭಾರತ ತೇಲುವ ವಿನಿಮಯ ದರ ಪದ್ದತಿಯನ್ನು ಅಳವಡಿಸುತ್ತಿದೆ.

ಹೊರ ಕೊಂಡಿಗಳು

ಬದಲಾಯಿಸಿ

1. Mankiw, N. Gregory (2007). Macroeconomics. New York: Worth. ISBN 0-7167-6213-7.[page needed]

2. adam antiam. Exchange Rates and International Finance (4th ed.). Prentice Hall. pp. 10–35. ISBN 0-273-68306-3.

3.Chan, Alaistair. "The U.S. – China Balance of Payments Relationship". Retrieved 2011-02-22.

4. IMF Balance of Payments Manual, Chapter 2 "Overview of the Framework", Paragraph 2.15 [1]

5.http://www.finextra.com/fullstory.asp?id=13480

6.G Gandolfo – International Finance and Open-Economy Macroeconomics Springer, 2002 Retrieved 15 July 2012 ISBN 3540434593