ಮುಕುಟ್‍ಮಣಿಪುರ್
ಮುಕುಟ್‍ಮಣಿಪುರ್ ಭಾರತದ ಪಶ್ಚಿಮ ಬಂಗಾಳ ರಾಜ್ಯದ ಬ್ಞಾಕುರಾ ಜಿಲ್ಲೆಯ ಒಂದು ಹಳ್ಳಿ. ಇದು ಝಾರ್ಖಂಡ್ ಗಡಿಗೆ ಸಮೀಪದಲ್ಲಿರುವ ಕಂಗ್ಸಾಬತಿ ಮತ್ತು ಕುಮಾರಿ ನದಿಗಳ ಸಂಗಮದಲ್ಲಿದೆ.
ಭೂಗೋಳಶಾಸ್ತ್ರ
ಬದಲಾಯಿಸಿಕಂಗಸಾಬತಿ ಯೋಜನೆ
ಬದಲಾಯಿಸಿ1956 ರಲ್ಲಿ, ಮುಕುಟ್‍ಮಣಿಪುರ್‌ನಲ್ಲಿ ಒಂದು ದೈತ್ಯ ನೀರಿನ ಅಣೆಕಟ್ಟು ಜಲಾಶಯವನ್ನು ಯೋಜಿಸಲಾಯಿತು. ಬ್ಞಾಕುರಾ, ಪುರೂಲಿಯಾ, ಪಶ್ಚಿಮ ಮೇದಿನಿಪುರ್ ಮತ್ತು ಮೇಲಿನ ಹೂಗ್ಲಿಯ ಭಾಗಗಳಲ್ಲಿ ವ್ಯಾಪಿಸಿರುವ ೮,೦೦೦ ಚದರ ಕಿಲೋಮೀಟರ್ ಕೃಷಿ ಭೂಮಿಗೆ ಪ್ರಮುಖ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಮುಕುಟ್‍ಮಣಿಪುರ್ ಅಣೆಕಟ್ಟನ್ನು ಯೋಜಿಸಲಾಗಿತ್ತು.[೧] ಸರೋವರದಿಂದ ಸರಿಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಬನ್‍ಗೋಪಾಲ್‍ಪುರ್ ಮೀಸಲು ಅರಣ್ಯವಿದ್ದು ಇದು ಅನೇಕ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.
ಗಮನಾರ್ಹ ಆಕರ್ಷಣೆಗಳು
ಬದಲಾಯಿಸಿಸರೋವರದಿಂದ ಸರಿಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಬನ್‍ಗೋಪಾಲ್‍ಪುರ್ ಮೀಸಲು ಅರಣ್ಯವಿದೆ. ಇದು ಅನೇಕ ಜಾತಿಯ ಸಸ್ಯ ಮತ್ತು ಪ್ರಾಣಿಗಳ ನೆಲೆಯಾಗಿದೆ. ಅಣೆಕಟ್ಟಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪ್ರಾಚೀನ ಪಟ್ಟಣವಾದ ಅಂಬಿಕಾನಗರ್, ಒಂದು ಕಾಲದಲ್ಲಿ ಜೈನರ ಪ್ರಮುಖ ಯಾತ್ರಾ ಸ್ಥಳವಾಗಿತ್ತು. ಆದರೆ, 1898ರಲ್ಲಿ ಒಂದು ಪ್ರವಾಹವು ಉಳಿದಿರುವ ಹೆಚ್ಚಿನ ಭಾಗವನ್ನು ನಾಶಮಾಡಿತು.[೨]
ಮುಕುಟ್‍ಮಣಿಪುರ್ 10.8 ಕಿಮೀ ಉದ್ದದ ಮಾನವ ನಿರ್ಮಿತ ಮಣ್ಣಿನ ದಂಡೆಯ ಶುದ್ಧ ನೀರಿನ ಅಣೆಕಟ್ಟಿಗೆ ನೆಲೆಯಾಗಿದೆ. ಇದು ಬೇಸಿಗೆಯ ತಿಂಗಳುಗಳಲ್ಲಿ ನೀರಾವರಿಗಾಗಿ ಕಂಗಸಾಬತಿ ಮತ್ತು ಕುಮಾರಿ ನದಿಗಳನ್ನು ಬ್ಞಾಕುರಾ, ಪುರುಲಿಯಾ ಮತ್ತು ಮಿಡ್ನಾಪುರದ ಮೂರು ಬರಪೀಡಿತ ಜಿಲ್ಲೆಗಳಿಗೆ ಕಾಲುವೆ ಮೂಲಕ ಹರಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ The Statesman 7 September 2006 Archived 29 September 2007 ವೇಬ್ಯಾಕ್ ಮೆಷಿನ್ ನಲ್ಲಿ.
- ↑ The Statesman 4 January 2007 Archived 29 September 2007 ವೇಬ್ಯಾಕ್ ಮೆಷಿನ್ ನಲ್ಲಿ.
ಹೊರಗಿನ ಕೊಂಡಿಗಳು
ಬದಲಾಯಿಸಿ- ವಿಕಿಟ್ರಾವೆಲ್ ನಲ್ಲಿ ಮುಕುಟ್‍ಮಣಿಪುರ್ ಪ್ರವಾಸ ಕೈಪಿಡಿ (ಆಂಗ್ಲ)
- Calcutta English daily Telegraph review of Mukutmanipur