ಮುಂಡ್ಕೂರು (ಮುಂಡೇರ್, ಮುಂಡುಕೂರು, Mundkur, Mundukuru, Mundkooru) ಉಡುಪಿ ಜಿಲ್ಲೆಯ ತೆಂಕಣ ಗಡಿ ಭಾಗದ ಒಂದು ಗ್ರಾಮ. ಮುಂಡ್ಕೂರಿನ ಪಶ್ಚಿಮ ಮತ್ತು ದಕ್ಷಿಣದಲ್ಲಿ ಮಂಗಳೂರು ತಾಲೂಕಿಗೆ ಸೇರಿದ ಉಳೆಪಾಡಿ, ಕರ್ನಿರೆ, ಕಲ್ಲಮುಂಡ್ಕೂರು ಇತ್ಯಾದಿ ಗ್ರಾಮಗಳು ಇವೆ.

ಮುಂಡ್ಕೂರು
ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನ
ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನ
ರಾಷ್ಟ್ರಭಾರತ
ರಾಜ್ಯಕರ್ನಾಟಕ
ಜಿಲ್ಲೆಉಡುಪಿ
ತಾಲೂಕುಕಾರ್ಕಳ
ಗ್ರಾಮ ಪಂಚಾಯತ್ಮುಂಡ್ಕೂರು
ರಥ ಬೀದಿಯ ಒಂದು ನೋಟ, ಮುಂಡ್ಕೂರು, ಸಂಕಲಕರಿಯ-ಬೆಲ್ಮಣ್ ಮುಖ್ಯ ರಸ್ತೆ
ರಥ ಬೀದಿಯ ಒಂದು ನೋಟ, ಮುಂಡ್ಕೂರು, ಸಂಕಲಕರಿಯ-ಬೆಲ್ಮಣ್ ಮುಖ್ಯ ರಸ್ತೆ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರವೇಶ ಅಂಗಣ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರವೇಶ ಅಂಗಣ

ಮಾರ್ಗಸೂಚಿ

ಬದಲಾಯಿಸಿ

ಮಂಗಳೂರು ತಾಲೂಕಿನ ಕಿನ್ನಿಗೋಳಿ ಸನಿಹ ಮೂರುಕಾವೇರಿಯಿಂದ ದಾಮಸ್ಕಟ್ಟೆ ಸಂಕಲಕರಿಯದ ಮೂಲಕ ಬೆಳ್ಮಣ್ಣುಗೆ ಹೋಗುವ ರಾಜ್ಯ ರಸ್ತೆಯಲ್ಲಿ ಮುಂಡ್ಕೂರು ಗ್ರಾಮವಿದೆ. ಮೂರುಕಾವೇರಿಗೆ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ, ಮೂಡಬಿದ್ರೆ, ಕಟೀಲು ಕಡೆಗಳಿಂದ ಹೋಗಲು ರಸ್ತೆಗಳಿವೆ. ಹಾಗೆಯೇ, ಬೆಳ್ಮಣ್ಣುಗೆ ಪಡುಬಿದ್ರಿ (ಪಡ್ಡೆದ್ರ) , ಶಿರ್ವಾ, ನಿಟ್ಟೆ, ಕಾರ್ಕಳ ಕಡೆಗಳಿಂದ ಬರಲು ರಸ್ತೆಗಳಿವೆ.

  • ಮಂಗಳೂರಿನಿಂದ ಬರುವವರಿಗೆ (1) ಬಿಜೈ-(ಬೊಂದೆಲ್)- ಕಾವೂರು-ಬಜಪೆ- ಕಟೀಲ್-ಮೂರುಕಾವೇರಿ-ಮುಂಡ್ಕೂರು ಹತ್ತಿರದ ದಾರಿ. (2) ಪರ್ಯಾಯವಾಗಿ: ಕೂಳೂರು-ಹಳೆಯಂಗಡಿ-ಪಕ್ಷಿಕೆರೆ-ಕಿನ್ನಿಗೋಳಿ- ಮೂರುಕಾವೇರಿ-ಸಂಕಲಕರಿಯ-ಮುಂಡ್ಕೂರು ಇಲ್ಲವೆ (3) ನಂತೂರು- ಕುಲಶೇಖರ- ಕುಡುಪು-ವಾಮಂಜೂರು-ಗುರುಪುರ-ಕೈಕಂಬ- ಪೆರಾರ್- ಬಜಪೆ-ಕಟೀಲು-ಮೂರುಕಾವೇರಿ-ಮುಂಡ್ಕೂರು ರಸ್ತೆಯಿಂದ ಬರಬಹುದು.
  • ಉಡುಪಿಯಿಂದ ಬರುವವರಿಗೆ ಉಡುಪಿ- ಕಟಪಾಡಿ- ಶಿರ್ವ ಮಂಚಕಲ್- ಬೆಳ್ಮಣ್ಣು-ಮುಂಡ್ಕೂರು ಹತ್ತಿರದ ದಾರಿ.
  • ಕಾರ್ಕಳದಿಂದ ಬರುವವರಿಗೆ ಕಾರ್ಕಳ- ನಿಟ್ಟೆ-ಬೆಳ್ಮಣ್ಣು -ಮುಂಡ್ಕೂರು ಹತ್ತಿರದ ದಾರಿ.
  • ಮೂಡಬಿದ್ರಿಯಿಂದ ಬರುವವರಿಗೆ ಮೂಡಬಿದ್ರಿ -ಅಲಂಗಾರು- ಪುತ್ತಿಗೆ- ಕೊಡ್ಯಡ್ಕ-ಕಡಂದಲೆ-ಪಾಲ್ಡಡ್ಕ-ಸಚ್ಚೇರಿಪೇಟೆ-ಮುಂಡ್ಕೂರು ಹತ್ತಿರದ ದಾರಿ. ಪರ್ಯಾಯವಾಗಿ (2)ಮೂಡಬಿದ್ರಿ- ಕಲ್ಲಮುಂಡ್ಕೂರು-ಮೂರುಕಾವೇರಿ-ಮುಂಡ್ಕೂರು, ಇಲ್ಲವೆ (3) ಮೂಡಬಿದ್ರಿ-ಮಿಜಾರು-ಗಂಜಿಮಠ-ಕೈಕಂಬ- ಬಜಪೆ-ಕಟೀಲು- ಮೂರುಕಾವೇರಿ-ಮುಂಡ್ಕೂರು ದಾರಿಯಿಂದ ಬರಬಹುದಾಗಿದೆ.

ಭೌಗೋಳಿಕ ನಿರ್ದೆಶಾಂಕಗಳು

ಬದಲಾಯಿಸಿ
 
Mundkur Village, Karkal Taluk Udupi district, Karnataka India

ಮುಂಡ್ಕೂರು ಗ್ರಾಮದ (ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪರಿಸರದ) ಭೌಗೋಳಿಕ ನಿರ್ದೇಶಾಂಕಗಳು ಡಿಗ್ರಿ-ಮಿನಿಟ್-ಸೆಕೆಂಡುಗಳಲ್ಲಿ ಹೀಗಿವೆ:

  • ಅಕ್ಷಾಂಶ: 13° 07' 42.18" N
  • ರೇಖಾಂಶ: 74° 52' 00.61" E

ದುರ್ಗಾಪರಮೇಶ್ವರಿ ದೇವಸ್ಥಾನ

ಬದಲಾಯಿಸಿ
 
Mundkur Village, Karkal Taluk Udupi district, Karnataka India
 
Mundkur Village, Karkal Taluk Udupi district, Karnataka India
 
Mundkur Village, Karkal Taluk Udupi district, Karnataka India
 
Mundkur Village, Karkal Taluk Udupi district, Karnataka India

ವಿಠೋಬ ದೇವಸ್ಥಾನ

ಬದಲಾಯಿಸಿ
 
Mundkur Village, Karkal Taluk Udupi district, Karnataka India
 
Mundkur Village, Karkal Taluk Udupi district, Karnataka India

ಉಲ್ಲೇಖ

ಬದಲಾಯಿಸಿ
  1. Gururaja Bhat, P. (1969) Antiquities of south Canara. Prabhakar Press, Udupi. p. 31+ plates 184
  2. Gururaja Bhat, P. (1975,2014) Studies in Tuluva history and culture.( Second impression 2014), Dr Padur Gururaja Bhat Memorial Trust,Udupi, (original published in 1975).p. 457+ plates+preview+ appendix.
  3. https://searchworks.stanford.edu/view/11933303
  4. https://archive.org/stream/in.ernet.dli.2015.129914/2015.129914.Studies-In-Tuluva-History-And-Culture_djvu.txt