ಮುಂಡೇಶ್ವರಿ ದೇವಾಲಯ

ಮುಂಡೇಶ್ವರಿ ದೇವಿ ದೇವಾಲಯವು[] ಭಾರತದ ಬಿಹಾರ ರಾಜ್ಯದ ಕೈಮೂರ್ ಜಿಲ್ಲೆಯ ಕೌರಾದಲ್ಲಿ ಮುಂಡೇಶ್ವರಿ ಗುಡ್ಡಗಳ ಮೇಲೆ ಸ್ಥಿತವಾಗಿದೆ. ಇದು ಒಂದು ಪ್ರಾಚೀನ ದೇವಾಲಯವಾಗಿದ್ದು ಶಿವ ಮತ್ತು ಶಕ್ತಿಯರ ಪೂಜೆಗೆ ಸಮರ್ಪಿತವಾಗಿದೆ. ಇದು ಭಾರತದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ.[][][] ಇದು ಭಾರತದ ಅತ್ಯಂತ ಹಳೆಯ ಕಾರ್ಯಾತ್ಮಕ ಹಿಂದೂ ದೇವಾಲಯವೆಂದೂ ಪರಿಗಣಿತವಾಗಿದೆ.[][] ಭಾರತದ ಪುರಾತತ್ವ ಸರ್ವೇಕ್ಷಣೆಯು (ಎಎಸ್‍ಐ) ಸ್ಥಳದಲ್ಲಿ ನಿಲ್ಲಿಸಿದ ಮಾಹಿತಿ ಫಲಕವು ಈ ದೇವಾಲಯದ ಕಾಲಮಾನ ನಿರ್ಧಾರವು ಕ್ರಿ.ಶ. ೬೨೫ ಎಂದು ಸೂಚಿಸುತ್ತದೆ. ಕ್ರಿ.ಶ. ೬೩೫ರ ಕಾಲಮಾನದ್ದೆಂದು ನಿರ್ಧರಿಸಲಾದ ಹಿಂದೂ ಶಾಸನಗಳು ದೇವಾಲಯದಲ್ಲಿ ದೊರಕಿವೆ. ಈ ದೇವಾಲಯವು ೧೯೧೫ರಿಂದ ಎಎಸ್‍ಐ ಅಡಿಯಲ್ಲಿ ರಕ್ಷಿತ ಸ್ಮಾರಕವಾಗಿದೆ. ಅಸಾಮಾನ್ಯ ರಾಕ್ಷಸನಾದ ಮಹಿಷಾಸುರನ ಸೋದರರು ಮತ್ತು ದಳವಾಯಿಗಳಾಗಿದ್ದ ಚಂಡ ಮತ್ತು ಮುಂಡರು ಈ ಪ್ರದೇಶವನ್ನು ಆಳುತ್ತಿದ್ದರು ಎಂದು ಸ್ಥಳೀಯ ಜಾನಪದಗಳು ಹೇಳುತ್ತವೆ. ಮುಂಡನು ದೇವಿ ಮುಂಡೇಶ್ವರಿ ಭವಾನಿ ದೇವಾಲಯವನ್ನು ನಿರ್ಮಿಸಿದನು. ಅವನ ತಮ್ಮ ಚಂಡನು ಚೈನ್‍ಪುರ್ ಹತ್ತಿರದ ಮದುರಾನಾ ಗುಡ್ಡದ ಮೇಲಿರುವ ಚಂಡೇಶ್ವರಿ ದೇವಾಲಯವನ್ನು ನಿರ್ಮಿಸಿದನು.

ಉಲ್ಲೇಖಗಳು

ಬದಲಾಯಿಸಿ
  1. https://www.dehuti.com/tag/mundeshwari-devi-temple/[ಶಾಶ್ವತವಾಗಿ ಮಡಿದ ಕೊಂಡಿ]
  2. "Alphabetical List of Monuments – Bihar". Serial number 62. Archaeological Survey of India. Archived from the original on 2011-11-03. Retrieved 2011-06-03.
  3. "BSBRT to renovate Mundeshwari temple". Times of India. 1 January 2011. Archived from the original on 14 ಜೂನ್ 2012. Retrieved 2 June 2011.
  4. "Ma Mundeshwari Temple in Kaimur ,Bihar". Hindu Temples. Archived from the original on 9 November 2018. Retrieved 2 June 2011.
  5. "Film on 'oldest' surviving temple of Gupta Age". The Times Of India. 12 June 2011. Archived from the original on 2011-11-05. Retrieved 2020-10-25.
  6. "Bihar to develop 'oldest' temple". The Times Of India. 18 January 2008. Archived from the original on 2012-09-13. Retrieved 2020-10-25.

ಹೊರಗಿನ ಕೊಂಡಿಗಳು

ಬದಲಾಯಿಸಿ