ಮುಂಗುರುಳು ಕೂದಲಿನ ಮುಂಭಾಗವನ್ನು ಆಕಾರದಲ್ಲಿ ಕತ್ತರಿಸುವುದು. ಇದರಿಂದ ಕೂದಲು ಹಣೆಯ ಮೇಲೆ ಜೋತುಬೀಳುತ್ತದೆ. ಮುಂಗುರುಳನ್ನು ಸಾಮಾನ್ಯವಾಗಿ ಹುಬ್ಬುಗಳ ಸ್ಥಳದಲ್ಲಿ ಅಥವಾ ಅವುಗಳ ಮೇಲೆ ಸಾಕಷ್ಟು ನೆಟ್ಟಗೆ ಕತ್ತರಿಸಲಾಗುತ್ತದೆ, ಆದರೆ ಅಸಮ ಅಥವಾ ಚೆದರಿರಬಹುದು, ಕೂದಲಿನ ಜೆಲ್, ಮೂಸ್ ಅಥವಾ ಮೇಣದಿಂದ ಮೇಲಕ್ಕೇರಿಸಿರಬಹುದು, ಒಂದು ಅಥವಾ ಇನ್ನೊಂದು ಮಗ್ಗಲಿಗೆ ಬಾಚಿರಬಹುದು, ಅಥವಾ ಕಣ್ಣುಗಳ ಮೇಲೆ ಬೀಳುವಂತೆ ಉದ್ದವಾಗಿ ಕತ್ತರಿಸಿರಬಹುದು.

ಮುಂಗುರುಳಿನ ಉದಾಹರಣೆ

ಸಾಮಾನ್ಯ ಶೈಲಿಗಳು ಬದಲಾಯಿಸಿ

  • ನೇರ ಅಡ್ಡವಾಗಿ ಅಥವಾ ಪೂರ್ಣ ಮುಂಗುರುಳು: ಕೂದಲನ್ನು ನೇರವಾಗಿ ಕೆಳಗೆ ಏನೂ ಅಡ್ಡವಿರದಂತೆ ಬಾಚಿರಲಾಗುತ್ತದೆ. ಮಗ್ಗಲಿಗೆ ಬಾಚಿದ ಶೈಲಿ ಇದಕ್ಕೆ ವಿರುದ್ಧವಾದುದು. ಕತ್ತರಿಸುವಿಕೆಯನ್ನು ಆಧರಿಸಿ ಇದು ಸ್ವಲ್ಪ ತೆಳುವಾಗಿ ಅಥವಾ ಮೊಂಡಾಗಿರಬಹುದು.
  • ಮಗ್ಗುಲಿಗೆ ಬಾಚಿದ ಮುಂಗುರುಳು: ಕೂದಲನ್ನು ನೇರ ಅಡ್ಡ ಮುಂಗುರುಳಿಗಿಂತ ಹೆಚ್ಚು ಉದ್ದಕ್ಕೆ ಕತ್ತರಿಸಲಾಗುತ್ತದೆ, ಎಷ್ಟು ಉದ್ದವೆಂದರೆ ಬಾಚದಿದ್ದಾಗ ಕೂದಲು ಮುಖದ ಒಂದು ಮಗ್ಗುಲಿಗೆ ಜಾರಿ ಬೀಳುವುದು ಮತ್ತು ಸಂಪೂರ್ಣ ಕಣ್ಣು ಪ್ರದೇಶವನ್ನು ಮುಚ್ಚುವುದು. ಅರೆಪಾರದರ್ಶಕ ಮುಂಗುರುಳಿನಷ್ಟು ತೆಳು ಅಥವಾ ಮೊಂಡು ಮುಂಗುರುಳಿನಷ್ಟು ದಪ್ಪವಿರಬಹುದು.
  • ಮೊಂಡು ಮುಂಗುರುಳು: ಕೂದಲನ್ನು ಮೊಂಡು ರೀತಿಯಲ್ಲಿ ಹಣೆಯ ಮೇಲೆ ನೇರವಾಗಿ ಕತ್ತರಿಸಲಾಗುತ್ತದೆ. ಪೂರ್ಣ ಮುಂಗುರುಳಿಗೆ ಹೋಲುತ್ತದೆ ಆದರೆ ಹೆಚ್ಚು ದಪ್ಪವಾಗಿರುತ್ತದೆ ಮತ್ತು ಕೆಲವೊಮ್ಮೆ ಹೆಚ್ಚು ಭಾರವಾಗಿ ಕಾಣುತ್ತದೆ.[೧]
  • ಕಮಾನು ಅಥವಾ ದುಂಡಗಿನ ಮುಂಗುರುಳು: ಇದು ಹೆಚ್ಚು ದುಂಡಗಿನ ಬಗೆಯ ಕತ್ತರಿಸುವಿಕೆ ಆಗಿದೆ, ಇದರಲ್ಲಿ ಮುಂಗುರುಳು ಕಮಾನಿನ ಆಕಾರವನ್ನು ರೂಪಿಸುತ್ತದೆ, ಮತ್ತು ಮೇಲಕ್ಕೆ ತಿರುಗಿದ ಅರ್ಧ ಚಂದ್ರವನ್ನು ಹೋಲುತ್ತದೆ. ಶೈಲಿಯು ಪೂರ್ಣ ಮುಂಗುರುಳನ್ನು ಹೋಲುತ್ತದೆ ಆದರೆ ಮುಂಗುರುಳು ಹಣೆಯ ಎರಡು ಮಗ್ಗಲುಗಳನ್ನು ಸಮೀಪಿಸಿದಂತೆ ಹೆಚ್ಚು ಉದ್ದವಿರುತ್ತದೆ. ಸಾಮಾನ್ಯವಾಗಿ, ಇದನ್ನು ತಮ್ಮ ಪ್ರಧಾನ ಅಂಗೈ ಬಳಸಿ ಅಂಚು ಪ್ರದೇಶದ ಮೇಲೆ ಕೂದಲನ್ನು ತಿರುಚಿ ನಂತರ ಪ್ರಧಾನವಲ್ಲದ ಅಂಗೈಯಿಂದ ಅಡ್ಡ ಕೂದಲನ್ನು ರೂಪಿಸಿ ಸಾಧಿಸಲಾಗುತ್ತದೆ ಮತ್ತು ಬೆರಳುಗಳ ಕೆಳಗೆ ಕತ್ತರಿಸಬೇಕಾದ ಕೂದಲಿರುತ್ತದೆ. ಸಾಮಾನ್ಯವಾಗಿ, ಈ ಶೈಲಿ ನೇರ ಅಡ್ಡಲ ಮುಂಗುರುಳಿಗಿಂತ ಹೆಚ್ಚು ದಪ್ಪವಿರುತ್ತದೆ ಮತ್ತು ಹೆಚ್ಚು ಭಾರ ಕಾಣಿಸುತ್ತದೆ.
  • ವಿಭಾಗಿಸಿದ ಮುಂಗುರುಳು: ಕೂದಲನ್ನು ಮಧ್ಯದಲ್ಲಿ ಅಥವಾ ಮಧ್ಯದಿಂದ ಸ್ವಲ್ಪ ಆಚೆಗೆ ವಿಭಾಗಿಸಲಾಗುತ್ತದೆ. ಶೈಲಿ ಮತ್ತು ದಪ್ಪದ ವಿಷಯದಲ್ಲಿ ಇದು ಮಗ್ಗುಲಿಗೆ ಬಾಚಿದ ಮುಂಗುರುಳು ಮತ್ತು ಅರೆಪಾರದರ್ಶಕ ಮುಂಗುರುಳನ್ನು ಸಾಕಷ್ಟು ಹೋಲುತ್ತದೆ.

ಉಲ್ಲೇಖಗಳು ಬದಲಾಯಿಸಿ

  1. "Image: large-bangs-27.jpg, (283 × 424 px) – young stare at camera close-up". style-hair-magazine.com. 6 June 2008. Retrieved 5 September 2015.