ಮಿರ್ಲೆ ಸಾಹುಕರ್ ಕೊಟೇಗೌಡ

ಮಿರ್ಲೆ ಸಾಹುಕರ್ ಕೊಟೇಗೌಡರು

ಸಾಹುಕಾರ್ ಕೋಟೆಗೌಡರು ಮಿರ್ಲೆ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಿರ್ಲೆಯಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ೨೮.೮.೧೯೪೧ ರಲ್ಲಿ (ಹೆರಿಗೆ ಆಸ್ಪತ್ರೆಯನ್ನು ಹೊರತುಪಡಿಸಿದಂತೆ) ಮತ್ತು ಶಾರದ ಶೀಶುವಿಹಾರವನ್ನು ದಾನವಾಗಿ ಕಟ್ಟಿಸಿ ಕೊಟ್ಟಿದ್ದರು. ಚುಂಚನಕಟ್ಟೆ ಶ್ರೀ ಕೊದಂಡ ರಾಮ ದೇವಾಲಯದ ಧರ್ಮಧಶೀ೯ಯಾಗಿ ೨೯ ವರ್ಷ (೧೯೨೯-೧೯೫೮) ಸೆವೇಸಲ್ಲಿಸಿದ್ದರು, ಇವರ ಸೇವೆಯನ್ನು ಮನಗಂಡು ಇಂದಿನ ಚುಂಚನಕಟ್ಟೆಯ ಮುಖ್ಯ ವೃತ್ತದಲ್ಲಿರುವ ಬಸವನ ಪ್ರತಿಮೆಯ ಬದಲು ಇವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ತೀರ್ಮಾನವಾಗಿತ್ತು. ಆದರೆ ಅಂದಿನ ಹಲವು ಭಿನ್ನಪರಿಸ್ಥಿತಿಯಲ್ಲಿ ತೀರ್ಮಾನ ಬದಲಿಸಿ ಬಸವನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಯಿತು.ಇಷ್ಟಾದರೂ, ಮೈಸೂರುಸಂಸ್ಥಾನವು ಇವರ ಕಾರ್ಯ ವೈಖರಿ ಮತ್ತು ಸೇವೆಗಳನ್ನು ಗುರ್ತಿಸಿ ಇವರಿಗೆ ಸಾಹುಕರ, ದಾನಶೂರ ಎಂಬ ಭಿನ್ನಮತಳೆಯನ್ನು ನೀಡಿ ಗೌರವಿಸಿತ್ತು,ಇದರಿಂದಲೇ ಇವರಿಗೆ ಕೋಟೆಗೌಡ ಎಂಬ ಹೆಸರ ಬದಲಾಗಿ ಸಾಹುಕಾರ್ ಕೋಟೆಗೌಡ ಎಂಬ ಹೆಸರು ಇಂದಿಗೂ ಚಾಲ್ತಿಯಲ್ಲಿದೆ.

ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.