ಮಿಥುನ ಮಾಸ
ಹಿಂದೂ ಧರ್ಮದ ಸೌರಮಾನ ಪಂಚಾಂಗದ ಮೂರನೆ ಮಾಸ. ಮಿಥುನಮಾಸವು ನಿರಯನ ಸೂರ್ಯ ಭಚಕ್ರದ ಅರುವತ್ತೊಂದನೆಯ ಅಂಶದಿಂದ ತೊಂಬತ್ತನೆಯ ಅಂಶಪೂರ್ತಿಯ ಅವಧಿಯಲ್ಲಿ ಸಂಚರಿಸುವ ಕಾಲ. ತಮಿಳಿನಲ್ಲಿ ಇದನ್ನು ಅನಿ ಮಾಸ ಎಂದು ಕರೆಯುತ್ತಾರೆ. ಈ ಮಾಸದಲ್ಲಿ ಸೂರ್ಯ ಮೃಗಶೀರಾ 3 ಮತ್ತು 4ನೆಯ ಪಾದಗಳಲ್ಲಿ, ಆದ್ರ್ರಾ, ಪುನರ್ವಸು ನಕ್ಷತ್ರದ 1, 2 ಮತ್ತು 3ನೆಯ ಪಾದಗಳಲ್ಲಿ ಮಿಥುನರಾಶಿಯಲ್ಲಿ ಸಂಚರಿಸುತ್ತಾನೆ. ಸಾಮಾನ್ಯವಾಗಿ ಈ ಮಾಸ ಜೂನ್ ತಿಂಗಳಿನ 14-15ನೆಯ ತಾರೀಕಿನಲ್ಲಿ ಆರಂಭವಾಗಿ ಜುಲೈ ತಿಂಗಳಿನ 15-16ನೆಯ ತಾರೀಕಿನಲ್ಲಿ ಮುಗಿಯುತ್ತದೆ.
ಈ ಮಾಸದ ಪ್ರಮುಖ ಹಬ್ಬಗಳು
ಬದಲಾಯಿಸಿವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಸೌರಮಾನ ಮಾಸಗಳು |
---|
ಮೇಷ • ವೃಷಭ • ಮಿಥುನ • ಕಟಕ • ಸಿಂಹ • ಕನ್ಯಾ • ತುಲಾ • ವೃಶ್ಚಿಕ • ಧನು• ಮಕರ • ಕುಂಭ • ಮೀನ |