ಮಿತಿಮೀರಿದ ಮೀನುಗಾರಿಕೆ
ಮೀನುಗಾರಿಕೆ ಅ೦ದರೆ ಆಹಾರಕ್ಕಾಗಿ ಅಥವಾ ಕ್ರೀಡೆಯಾಗಿ ಮೀನು ಹಿಡಿಯುವ ಚಟುವಟಿಕೆ. ಮಿತಿಮೀರಿದ ಮೀನುಗಾರಿಕೆ(ಓವರ್‌ಫಿಶಿಂಗ್) ಎಂದರೆ ಒಂದೇ ಜಾತಿಯ ಮೀನುಗಳನ್ನು ನೀರಿನಿ೦ದ ಅತಿಯಾದ ಪ್ರಮಾಣದಲ್ಲಿ ಮೀನುಗಾರಿಕೆ ಮಾಡುವುದು. ಇದರ ಪರಿಣಾಮವಾಗಿ ಆ ಪ್ರಭೇದಗಳು ಖಾಲಿಯಾಗುತ್ತವೆ ಅಥವಾ ಆ ಪ್ರದೇಶದಲ್ಲಿ ಕಡಿಮೆ ಸಂಖ್ಯೆಯನ್ನು ಹೊಂದಿರುತ್ತವೆ. ಮಿತಿಮೀರಿದ ಮೀನುಗಾರಿಕೆ ಪ್ರಪಂಚದಾದ್ಯಂತ ಹರಡಿದೆ ಹಾಗು ಶತಮಾನಗಳಿಂದಲೂ ಇದೆ. ಕೊಳಗಳು, ನದಿಗಳು, ಸರೋವರಗಳು ಅಥವಾ ಸಾಗರಗಳಂತಹ ಯಾವುದೇ ಗಾತ್ರದ ಜಲಮೂಲಗಳಲ್ಲಿ ಅತಿಯಾದ ಮೀನುಗಾರಿಕೆ ಸಂಭವಿಸಬಹುದು ಮತ್ತು ಸಂಪನ್ಮೂಲ ಕ್ಷೀಣತೆ, ಜೈವಿಕ ಬೆಳವಣಿಗೆಯ ದರಗಳು(ಬಯಲೋಜಿಕಲ್ ಗ್ರೋತ್ ರೇಟ್) ಮತ್ತು ಕಡಿಮೆ ಜೀವರಾಶಿ ಮಟ್ಟಗಳಿಗೆ ಕಾರಣವಾಗಬಹುದು.ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಒ೦ದು ಮಾಹಿತಿಯನ್ನು ನೀಡಿದೆ.ಅದರ ಪ್ರಕಾರ ಜಾಗತಿಕವಾಗಿ ಅರ್ಧ ಶತಮಾನದಲ್ಲಿ ಮೀನುಗಳ ದಾಸ್ತಾನುಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹಾಗು ಇಂದು ವಿಶ್ವದ ಮೂರನೇ ಒಂದು ಭಾಗದಷ್ಟು ಮೀನುಗಾರಿಕೆಯನ್ನು ಅವುಗಳ ಜೈವಿಕ ಮಿತಿಗಳನ್ನು ಮೀರಿ ತಳ್ಳಲಾಗಿದೆ.ಇದು ಒಂದು ಗಂಭೀರವಾದ ಸಮುದ್ರ ಬೆದರಿಕೆಯಾಗಿರುತ್ತದೆ. ಇದು ಲಕ್ಷಾಂತರ ಮೀನುಗಳ ಜೊತೆಗೆ ನೂರಾರು ಸಾವಿರ ಸಮುದ್ರ ಆಮೆಗಳ ಅನಗತ್ಯ ನಷ್ಟಕ್ಕೆ ಕಾರಣವಾಗಿರುತ್ತದೆ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. |
ಇತಿಹಾಸ:
ಬದಲಾಯಿಸಿ೧೮೦೦ರ ದಶಕದ ಆರಂಭದಲ್ಲಿ ಮಾನವರು ದೀಪದ ಎಣ್ಣೆಗೆ ಬ್ಲಬ್ಬರ್(ತಿಮಿ೦ಗಿಲದ ಕೊಬ್ಬಿನಾ೦ಶ) ಬಯಸುತ್ತಾ ತಿಮಿಂಗಿಲದ ಜನಸಂಖ್ಯೆಯನ್ನು ನಾಶಪಡಿಸಿದಾಗ ಮೊದಲಿನ ಮಿತಿಮೀರಿದ ಮೀನುಗಾರಿಕೆ ಸಂಭವಿಸಿದೆ. ಅಟ್ಲಾಂಟಿಕ್ ಕಾಡ್ ಮತ್ತು ಹೆರಿಂಗ್ ಸೇರಿದಂತೆ ನಾವು ತಿನ್ನುವ ಕೆಲವು ಮೀನುಗಳನ್ನು ೧೯೦೦ರ ದಶಕದ ಮಧ್ಯಭಾಗದಲ್ಲಿ ಅಳಿವಿನ ಅಂಚಿನಲ್ಲಿತ್ತು.ಸಾಗರ ವಿಜ್ಞಾನಿಗಳ ಪ್ರಕಾರ ೨೦ನೇ ಶತಮಾನದ ಮಧ್ಯಭಾಗದಲ್ಲಿ, ಪ್ರೋಟೀನ್ ಭರಿತ ಆಹಾರಗಳ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ಹೆಚ್ಚಿಸುಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ಮಾಡಲಾಯಿತು. ಇದು ಮೀನುಗಾರಿಕೆ ಸಾಮರ್ಥ್ಯವನ್ನು ಹೆಚ್ಚಿಸುವ ಸರ್ಕಾರದ ಪ್ರಯತ್ನಗಳಿಗೆ ಕಾರಣವಾಯಿತು. ಅನುಕೂಲಕರ ನೀತಿಗಳು, ಸಾಲಗಳು ಮತ್ತು ಸಬ್ಸಿಡಿಗಳು ದೊಡ್ಡ ಕೈಗಾರಿಕಾ ಮೀನುಗಾರಿಕೆ ಕಾರ್ಯಾಚರಣೆಗಳ ತ್ವರಿತ ಏರಿಕೆಗೆ ಕಾರಣವಾಯಿತು. ಇದು ಸ್ಥಳೀಯ ದೋಣಿಗಾರರನ್ನು ವಿಶ್ವದ ಸಮುದ್ರಾಹಾರದ ಮೂಲವಾಗಿ ಬದಲಿಸಿತು.
ಪರಿಣಾಮಗಳು:
ಬದಲಾಯಿಸಿಮಿತಿಮೀರಿದ ಮೀನುಗಾರಿಕೆ ಸಾಗರ ಮತ್ತು ಭೂ ನಿವಾಸಿಗಳ ಭವಿಷ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಲಕ್ಷಾಂತರ ಜನರು ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ ಮತ್ತು ಶತಕೋಟಿ ಜನರು ತಮ್ಮ ಪ್ರೋಟೀನ್‌ನ ಪ್ರಮುಖ ಮೂಲವಾಗಿ ಮೀನುಗಳನ್ನು ಅವಲಂಬಿಸಿದ್ದಾರೆ. ಮಿತಿಮೀರಿದ ಮೀನುಗಾರಿಕೆಗೆ ಸರಿಯಾದ ನಿರ್ವಹಣೆ ಇಲ್ಲ. ಇದರಿ೦ದ ಅನೇಕ ಮೀನುಗಳು ಸೂಕ್ತ ಮಟ್ಟಕ್ಕಿಂತ ಕಡಿಮೆಯಾಗುತ್ತವೆ. ಹಲವಾರು ಮೀನುಗಳನ್ನು ಹಿಡಿಯುವುದು ಲಾಭದಾಯಕ ಅಭ್ಯಾಸದಂತೆ ತೋರುತ್ತದೆ. ಆದರೆ ಇದು ಪರಿಸರ ವ್ಯವಸ್ಥೆಗಳಿಗೆ ಅಪಾಯವನ್ನುಂಟು ಮಾಡುತ್ತದೆ. ಹಾಗು ಸಾಗರಗಳಲ್ಲಿ ವಾಸಿಸುವ ಸಮತೋಲನವನ್ನು ಪರಿಣಾಮ ಬೀರುತ್ತದೆ. ಮಿತಿಮೀರಿದ ಮೀನುಗಾರಿಕೆಯಿ೦ದ ಉ೦ಟಾಗುವ ಮುಖ್ಯ ಪರಿಣಾಮಗಳು ಕೆಳಕ೦ಡ೦ತಿವೆ:
ಮಿತಿಮೀರಿದ ಮೀನುಗಾರಿಕೆಯ ಅಂಕಿಅಂಶಗಳು:
ಬದಲಾಯಿಸಿ- ವಿಶ್ವಾದ್ಯಂತ 1 ಶತಕೋಟಿಗೂ ಹೆಚ್ಚು ಜನರು ತಮ್ಮ ಪ್ರೋಟೀನ್‌ನ ಪ್ರಾಥಮಿಕ ಮೂಲವಾಗಿ ಮೀನುಗಳನ್ನು ಅವಲಂಬಿಸಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
- ವಿಶ್ವಸಂಸ್ಥೆಯ ಪ್ರಕಾರ, ವಿಶ್ವಾದ್ಯಂತ ೧೭% ಮೀನು ದಾಸ್ತಾನು ಪ್ರಸ್ತುತ ಅತಿಯಾದ ಬಳಕೆಯಲ್ಲಿದೆ. 52% ಸಂಪೂರ್ಣವಾಗಿ ಶೋಷಣೆಗೆ ಒಳಗಾಗಿದೆ ಮತ್ತು 7% ಖಾಲಿಯಾಗಿದೆ.
- ಇದರ ಅರ್ಥವೇನೆಂದರೆ, ವಿಶ್ವಾದ್ಯಂತದ ಮೀನು ಸಂಗ್ರಹದ ಅಂದಾಜು ೨೦% ಮಾತ್ರ ಈಗಾಗಲೇ ಅವುಗಳ ಸಾಮರ್ಥ್ಯದಲ್ಲಿ ಅಥವಾ ಅದಕ್ಕಿಂತ ಹೆಚ್ಚಿಲ್ಲ.
- ದೊಡ್ಡ ಪರಭಕ್ಷಕ ಮೀನುಗಳ ಸರಿಸುಮಾರು ೯೦% ಮೀನು ದಾಸ್ತಾನು ಈಗಾಗಲೇ ನಾಶವಾಗಿದೆ. ಏಕೆಂದರೆ ಅತಿಯಾದ ಮೀನುಗಾರಿಕೆ ಆಹಾರ ಸರಪಳಿಯ ಮೇಲ್ಭಾಗದಲ್ಲಿರುವ ಅತಿದೊಡ್ಡ ಮೀನುಗಳನ್ನು ಅಸಮವಾಗಿ ಗುರಿಯಾಗಿಸಿದೆ.
- ವಿಶ್ವದ ಸಾಗರಗಳಿಂದ ಕಾಡು ಮೀನುಗಳ ಒಟ್ಟು ಕೊಯ್ಲು ಸರಿಸುಮಾರು ೯೦ ಮಿಲಿಯನ್ ಟನ್ಗಳಷ್ಟಿದೆ.
- ವಿಶ್ವದ ಸರೋವರಗಳು ಮತ್ತು ನದಿಗಳಿಂದ ವಾಣಿಜ್ಯ ಮೀನುಗಾರಿಕೆ ಕಳೆದ ೫೦ ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದೆ.
- ಅಂದಾಜಿನ ಪ್ರಕಾರ ಅತಿಯಾದ ಮೀನುಗಾರಿಕೆಯು ಪ್ರತಿವರ್ಷ ಆಹಾರ ಉತ್ಪಾದನಾ ಆದಾಯದಲ್ಲಿ $ ೬ ಬಿಲಿದನ್ ರಿಂದ 36 ಬಿಲಿಯನ್ ನಷ್ಟಕ್ಕೆ ಕಾರಣವಾಗುತ್ತದೆ.
- ಕೃಷಿ ಮೀನುಗಳ ಉತ್ಪಾದನೆಯು ೧೯೯೦ರ ದಶಕದ ಮಧ್ಯಭಾಗದಲ್ಲಿ ೨೪ ದಶಲಕ್ಷ ಟನ್‌ಗಳಿಂದ ೨೦೧೨ ರಲ್ಲಿ ೬೭ ದಶಲಕ್ಷ ಟನ್‌ಗಳಿಗೆ ಏರಿದೆ.
- ಕಳೆದ 30 ವರ್ಷಗಳಿಂದ ಸ್ಥಿರವಾದ ೮% ಬೆಳವಣಿಗೆಯನ್ನು ಹೊಂದಿರುವ ಮೀನು ಸಾಕಾಣಿಕೆ ಈಗ ವಿಶ್ವದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಕೃಷಿ ಉದ್ಯಮವಾಗಿದೆ.
ಪರಿಹಾರಗಳು:
ಬದಲಾಯಿಸಿ"ಮೀನುಗಾರಿಕೆ ಹಕ್ಕುಗಳು" ಎಂದು ಕರೆಯಲ್ಪಡುವ ಚುರುಕಾದ ನಿರ್ವಹಣಾ ವ್ಯವಸ್ಥೆಗಳೊಂದಿಗೆ, ಅತಿಯಾದ ಮೀನುಗಾರಿಕೆಗೆ ಕಾರಣವಾಗುವ ಪ್ರೋತ್ಸಾಹಕಗಳನ್ನು ನಾವು ತಡೆಗಟ್ಟಬಹುದು. ಮೀನುಗಾರಿಕೆ ಹಕ್ಕುಗಳ ಅಡಿಯಲ್ಲಿ, ಮೀನುಗಾರರ ಹಿತಾಸಕ್ತಿಗಳು ಮೀನುಗಾರಿಕೆಯ ದೀರ್ಘಕಾಲೀನ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ. ಮೀನುಗಳ ಸಂಖ್ಯೆಯೊಂದಿಗೆ ಅವರ ಆದಾಯವು ಸುಧಾರಿಸುತ್ತದೆ.ಅತಿಯಾದ ಮೀನುಗಾರಿಕೆಯ ಪರಿಣಾಮಗಳು ಸಾಕಷ್ಟಿವೆ ಹಾಗು ಅವು ಭೂಮಿಯ ಮೇಲಿನ ಮಾನವ ಜೀವನದ ಮೇಲೆ ತು೦ಬಾ ಪರಿಣಾಮವನ್ನು ಬೀರುತ್ತದೆ. ವಿಶ್ವಾದ್ಯಂತ ಹಲವಾರು ಸಂರಕ್ಷಣಾ ಗುಂಪುಗಳಿವೆ. ಅವುಗಳಲ್ಲಿ ಪ್ರಮುಖ ಪರಿಹಾರಗಳು ಕೆಳಕ೦ದ೦ತಿವೆ:
- ಸರ್ಕಾರಗಳೊಂದಿಗೆ ಕೆಲಸ ಮಾಡುವುದು.
- ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಹಾಯ ಮಾಡುವುದು.
- ಮೆರೈನ್ ಸ್ಟೀವರ್ಡ್‌ಶಿಪ್ ಕೌನ್ಸಿಲ್ (ಎಂಎಸ್‌ಸಿ).
- ಚಿಲ್ಲರೆ ವ್ಯಾಪಾರಿಗಳಿಗೆ ಶಿಕ್ಷಣ ನೀಡುವುದು.
- ಸಬ್ಸಿಡಿಗಳನ್ನು ಕಡಿಮೆ ಮಾಡುವುದು.
- ಹೆಚ್ಚು ಸಂರಕ್ಷಿತ ಸಮುದ್ರ ಪ್ರದೇಶಗಳು.
- ಜವಾಬ್ದಾರಿಯುತ ಕೃಷಿ.
ಈ ಪರಿಹಾರಗಳನೆಲ್ಲಾ ನೋಡಿದಾಗ ಇವುಗಳೆಲಾ ಮಿತಿಮೀರಿದ ಮೀನುಗಾರಿಕೆಯನ್ನು ಕಡಿಮೆ ಮಾಡಬಹುದೆ ಎ೦ಬ ಪ್ರಶ್ನೆ ನಮ್ಮೆಲ್ಲರಲ್ಲೂ ಹುಟ್ಟುವುದು ಸಹಜ. ಹೌದು. ಬೆಲೀಜ್, ಡೆನ್ಮಾರ್ಕ್, ನಮೀಬಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಇತರೆಡೆಗಳಲ್ಲಿ ಮೀನುಗಾರಿಕೆ ಹಕ್ಕುಗಳು ಮಿತಿಮೀರಿದ ಮೀನುಗಾರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಿವೆ.ಇದನ್ನು ಅಭ್ಯಾಸ ಮಾಡಿದ ನ೦ತರ ಗಲ್ಫ್ ಆಫ್ ಮೆಕ್ಸಿಕೊದಲ್ಲಿ 'ಕೆಂಪು ಸ್ನ್ಯಾಪರ್' ಎ೦ಬ ಮೀನಿನ ಸಂಖ್ಯೆಯು ೨೦೦೭ ರಲ್ಲಿ ಇದ್ದ ಸಂಖ್ಯೆಗಿ೦ತ ಮೂರು ಪಟ್ಟು ಹೆಚ್ಚಾಗಿದೆ. ಮುಂದಿನ ಐದು ವರ್ಷಗಳಲ್ಲಿ, ಯು.ಎಸ್ ಮತ್ತು ಇತರ ದೇಶಗಳಲ್ಲಿ ಸುಸ್ಥಿರ ಮೀನುಗಾರಿಕೆಯನ್ನು ಅಭ್ಯಾಸ ಮಾಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಉಲ್ಲೇಖ
ಬದಲಾಯಿಸಿhttps://www.conserve-energy-future.com/causes-effects-solutions-of-overfishing.php https://en.wikipedia.org/wiki/Overfishing https://www.worldwildlife.org/threats/overfishing https://www.edf.org/oceans/overfishing-most-serious-threat-our-oceans