ಮಾಸೂರು ಕೆರೆ
'ಮಾಸೂರಿನ ಕೆರೆ', 'ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ’ಮದಗ ಮಾಸೂರು ಕೆರೆ’ ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳ ಇಳಿಜಾರಿನಿಂದ ಹರಿದು ಬಂದ ನೀರು ತುಂಬಿಕೊಂಡು ನಿಲ್ಲುವ ಕೆರೆ. ಮತ್ತೊಮ್ಮೆ ನೋಡಬೇಕೆನ್ನಿಸುವ ತಾಣ. ವರ್ಷದಲ್ಲಿ ೬ ತಿಂಗಳು ಕಾಣಸಿಗುವ ನಯನಮನೋಹರ ’ದಬದಬೆ’ ’ಮಿನಿ ಜೋಗ್ ಜಲಪಾತ’, 'ನಿಸರ್ಗ-ಪ್ರಿಯರ', ಮನತಣಿಸಲು ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರ ಸ್ಥಳವಾಗಿದೆ.
ಸ್ಥಳೀಯ ಜನರ ಬಾಯಿನಲ್ಲಿ ಇದು,’ಕೆಂಚಮ್ಮನ ಕೆರೆ'
ಬದಲಾಯಿಸಿನಾಡಿನ ಇತಿಹಾಸದಲ್ಲಿ ’ಕೆಂಚಮ್ಮನ ಕೆರೆ’ಯೆಂದೇ ಹೆಸರಾದ ಈ ಕೆರೆ, ಹಿರೆಕೆರೂರು ತಾಲುಕಿನ ’ರಟ್ಟಿಹಳ್ಳಿಪುಟ್ಟನ ಗೌಡನ ಹಿರಿಮಗಳಾದ, ಕೆಂಚಮ್ಮ’, ’ಮಾಸೂರಿನ ಮಲ್ಲನಗೌಡನ ಸೊಸೆ’ಯಾಗಿ ಬಂದು, ತನ್ನ ಮಾವ ಮಲ್ಲನ ಗೌಡಕಟ್ಟಿಸಿದ ಮದಗದ ಕೆರೆಗೆ ಹಾರವಾಗಿ ನೀರುತಂದ ವಿಷಯ ಇಂದಿಗೂ ಅಲ್ಲಿನ ಮನೆಮನೆಗಳಲ್ಲಿ ಜನಜನಿತ. ಇಂತಹ ’ಕೆಂಚಮ್ಮನ ತ್ಯಾಗ,’ ’ಬಲಿದಾನ’ಗಳ ಪ್ರತೀಕವಾಗಿ ನಿಂತ ಮದಗ ಮಾಸೂರು ಕೆರೆ, ಅಭಿವೃದ್ಧಿಯ ಕಡೆಗೆ ಸರಕಾರ ಗಮನ ಹರಿಸಬೇಕಾಗಿದೆ. ಈ ಪ್ರದೇಶವನ್ನು ಪ್ರವಾಸಿತಾಣವನ್ನಾಗಿ ಮಾಡಲು ಸರಕಾರ ಶ್ರಮಿಸುತ್ತಿದೆ. ಕೆಲಸ ಅರ್ಧಕ್ಕೇ ನಿಂತಿದೆ.
ಈ ಕೆರೆಗೆ ಹೋಗಿಬರಲು, ಹಲವು ಮಾರ್ಗಗಳಿವೆ
ಬದಲಾಯಿಸಿಈ ಕೆರೆಗೆ ತಲುಪಲು, 'ರಾಣೀಬೆನ್ನೂರಿನಿಂದ' 'ರಟ್ಟೆಹಳ್ಳಿ'ಮಾರ್ಗವಾಗಿ ಸಾಗಿ, ಮಾಸೂರನ್ನು ಮುಟ್ಟಬಹುದು. ಅಥವಾ ಹಿರೆಕೆರೂರಿನಿಂದ ಮಾಸೂರಿಗೆ ಹೋಗಿ, ಅಲ್ಲಿಂದ ಕೆರೆಗೆ ತಲುಪಬಹುದು. ಜಿಲ್ಲಾಕೇಂದ್ರ ಹಾವೇರಿಯಿಂದ ಸುಮಾರು ೭೦ ಕಿ. ಮೀ. ದೂರದಲ್ಲಿರುವ ಕೆರೆಗೆ, 'ಹಿರೆಕೆರೂರಿ'ನ ಕಡೆಯಿಂದ ಬಂದರೆ, ೧೨ ಕಿ. ಮೀ ದೂರವಿದೆ. 'ರಾಣೀಬೆನ್ನೂರಿನ ಕಡೆ'ಯಿಂದ ಬಂದರೆ, ೫೪ ಕಿ. ಮೀ.ದೂರದ ದಾರಿಯನ್ನು ಕ್ರಮಿಸಬಹುದಾಗಿದೆ. ಶಿವಮೋಗ್ಗ - ಶಿಕಾರಿಪುರ ಮಾರ್ಗವಾಗಿ ಕಿಟ್ಟದಹಳ್ಳಿ ಮುಖಾಂತರ ಸೂಮಾರು ೬೦ ಕೀ ಮೀ ದೂರದ ದಾರಿಯನ್ನು ಕ್ರಮಿಸಬಹುದಾಗಿದೆ, ಇಲ್ಲಿ ಪ್ರತಿ ವರ್ಷ ಶಿವರಾತ್ರಿ ಯಾಗಿ ೯ ದಿನಕ್ಕೆ ಕೆಂಚಮ್ಮನ ಜಾತ್ರೆ ನಡೆಯುತ್ತದೆ.
ಈ ಕೆರೆಯನ್ನು ಕುರಿತು ಜನಪದ ಹಾಡುಗಳು ಪ್ರಚಲಿತದಲ್ಲಿವೆ.
೧.ಕಲ್ಲನ ಕೇರಿ ಮಲ್ಲನಗೌಡ ಕೆರಿಯೊಂದ ಕಟ್ಸ್ಯಾನ
ಕೆರಿಯೊಂದ ಕಟ್ಸ್ಯಾನ ಸೆರೆ ಮುಕ್ಕ ನೀರಿಲ್ಲ
ಹೊತ್ತಿಗೆಯ ತೆಗೆಸ್ಯಾನ ಜೋಯಿಸರ ಕೇಳ್ಯಾನ
ದೇವರಲ್ಲ ದಿಂಡ್ರಲ್ಲ ದೆವ್ವಲ್ಲ ಭೂತಲ್ಲ
ಹಿರಿಸೊಸಿ ಮಲ್ಲವ್ವನ ಹಾರವ ಕೊಡಬೇಕು
ಹಾರವ ಕೊಟ್ಟರ ನೀರು ಬೀಳೂವಂದ್ರೂ
ಹಿರಿಸೊಸಿನ್ನ ಕೊಟ್ಟರೆ ಹಿರಿತನಕ ಯಾರಿಲ್ಲ
ಕಡೆ ಸೊಸಿ ಭಾಗೀರತಿನ್ನ ಹಾರವ ಕೊಡಬೇಕು
ಹಾರ ಕೊಡಬೇಕೂಂತ ಮಾತಾತು ಮನೆಯಾಗ
ಹೀಗೆ ಮುಂದುವರಿಯುತ್ತದೆ
೨.ಮಾಯದಂಥ ಮಳೆ ಬಂತಣ್ಣ
ಮದಗಾದ ಕೆರೆಗೆ
ಆರು ಸಾವಿರ ಒಡ್ಡರ ಕರೆಸಿ
ಮೂರು ಸಾವಿರ ಗುದ್ದಲಿ ತರಿಸಿ
ಹೀಗೆ ಮುಂದುವರಿಯುತ್ತದೆ