ಮಾವಿನಗುಂಡಿ ಜಲಪಾತ

ಮಾವಿನಗುಂಡಿ ಜಲಪಾತವು ಕರ್ನಾಟಕಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನಲ್ಲಿರುವ ಒಂದು ಜಲಪಾತವಾಗಿದೆ.[] ಇದು ಪ್ರಸಿದ್ಧ ಜೋಗ ಜಲಪಾತದಿಂದ ಸುಮಾರು ೪ ಕಿ.ಮೀ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಜಲಪಾತವು ಸಿದ್ದಾಪುರ ತಾಲ್ಲೂಕಿನ ಗಡಿಭಾಗವಾಗಿದೆ. ಗಡಚಿಕ್ಕುವ ಸದ್ದಿನೊಂದಿಗೆ ಈ ಜಲಪಾತ ಧುಮುಕುವ ಕಾರಣ ಸ್ಥಳೀಯರು ಇದನ್ನು ಕೆಪ್ಪಜೋಗ ಎಂದೂ ಸಹ ಕರೆಯುತ್ತಾರೆ.

ಮಾವಿನಗುಂಡಿ ಜಲಪಾತ

ಮಾವಿನಗುಂಡಿ - ಸಿದ್ದಾಪುರ ಹೆದ್ದಾರಿಯ ಪಕ್ಕದಲ್ಲೇ ಇರುವ ಈ ಜಲಪಾತವು ಸುಮಾರು ೩೦ ಅಡಿ ಎತ್ತರದಿಂದ ರಭಸವಾಗಿ ಧುಮುಕುತ್ತದೆ. ಗುಡ್ಡದ ಮೇಲಿನಿಂದ ಹರಿದು ಬರುವ ಮಾವಿನಗುಂಡಿ ನದಿಯು ಈ ಸ್ಥಳದಲ್ಲಿ ನೊರೆ ನೊರೆಯಾಗಿ ಬೀಳುತ್ತದೆ.[] ಜೂನ್‌ನಿಂದ ನವೆಂಬರ್ ವರೆಗಿನ ಮಳೆಗಾಲದ ಸಮಯದಲ್ಲಿ ಜಲಪಾತಕ್ಕೆ ಹೆಚ್ಚು ನೀರು ಹರಿದುಬಂದು ವಿಜೃಂಭಿಸುತ್ತದೆ. ಈ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.[]

ಪ್ರವಾಸಿಗರಿಗೆ ಮಾರ್ಗದರ್ಶನ

ಬದಲಾಯಿಸಿ

ಇದರ ಹತ್ತಿರವಿರುವ, ಹೆಚ್ಚು ಪ್ರಸಿದ್ಧವಾದ ಜೋಗ ಜಲಪಾತವನ್ನು ನೋಡಲು ಬರುವ ಪ್ರವಾಸಿಗರು ಈ ಜಲಪಾತವನ್ನೂ ನೋಡಬಹುದಾಗಿದೆ. ಜೋಗದಿಂದ ಹೊನ್ನಾವರ ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ೪ ಕಿ.ಮೀ ಕ್ರಮಿಸಿದರೆ ಮಾವಿನಗುಂಡಿ ಸರ್ಕಲ್ ಬರುತ್ತದೆ. ಇಲ್ಲಿಂದ ಸಿದ್ದಾಪುರ ತಾಲ್ಲೂಕು ಕೇಂದ್ರವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ಅರ್ಧ ಕಿ.ಮೀ ದೂರದಲ್ಲಿ ಎಡಭಾಗದಲ್ಲಿ ಈ ಜಲಪಾತವಿದ್ದು, ಪ್ರವಾಸಿಗರಿಗೆ ಕೈಗೆಟಕುವಂತಿದೆ.‌

ಸಿರ್ಸಿ ಮೂಲಕ ಬರುವವರು ಶಿರಸಿಯಿಂದ ೩೦ ಕಿ.ಮೀ ದೂರ ಸಿದ್ದಾಪುರ, ಸಿದ್ದಾಪುರದಿಂದ ೨೮ ಕಿ.ಮೀ ದೂರದಲ್ಲಿ ಮಾವಿನಗುಂಡಿ ಜಲಪಾತ ಸಿಗುತ್ತದೆ.

ಉಲ್ಲೇಖಗಳು

ಬದಲಾಯಿಸಿ
  1. "12 mini hydel power projects proposed in Uttara Kannada". The Hindu, Newspaper. 28 April 2011. Retrieved 22 August 2015.
  2. "Taking the Road back to glory". Deccan Herald. 16 November 2014. Archived from the original on 23 ನವೆಂಬರ್ 2015. Retrieved 22 August 2015.
  3. "When Jog Falls beckon". Deccan Herald. 15 October 2013.