ಮಾಲಿನೀಥಾನ್
ಮಾಲಿನೀಥಾನ್ ಒಂದು ಪುರಾತತ್ತ್ವ ಸ್ಥಳವಾಗಿದೆ. ಇದು ಭಾರತದ ಅರುಣಾಚಲ ಪ್ರದೇಶ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿದೆ. ಇದು ಮಧ್ಯಕಾಲೀನ ಯುಗದ ಹಿಂದೂ ದೇವಾಲಯದ ಅವಶೇಷಗಳನ್ನು ಒಳಗೊಂಡಿದೆ. ಈ ಪ್ರದೇಶದಲ್ಲಿ ಹಿಂದೂ ಧರ್ಮದ ಪ್ರಭಾವದ ಅವಧಿಯಲ್ಲಿ ದೇವಾಲಯವನ್ನು ಗ್ರಾನೈಟ್ ಕಲ್ಲುಗಳಿಂದ ನಿರ್ಮಿಸಲಾಗಿದೆ ಎಂದು ಅವಶೇಷಗಳ ಪುರಾತತ್ವ ಅಧ್ಯಯನಗಳು ಸೂಚಿಸುತ್ತವೆ. ಇದನ್ನು ಸುತಿಯಾ ರಾಜರು 13-14ನೇ ಶತಮಾನದಲ್ಲಿ ನಿರ್ಮಿಸಿದರು.[೧][೨][೩][೪] ಸುತಿಯಾ ರಾಜರು ತಮ್ಮ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಬ್ರಾಹ್ಮಣರಿಗೆ ಭೂಮಿ ಅನುದಾನ ನೀಡಲು ಆರಂಭಿಸಿದ ಅವಧಿ ಇದು.[೫] ಕೆಚೈ-ಖೈತಿ ಎಂಬ ಬುಡಕಟ್ಟು ದೇವತೆ ಪಾಳುಬಿದ್ದ ದೇವಸ್ಥಾನದಲ್ಲಿ ಪೂಜಿಸಲ್ಪಡುತ್ತಿದ್ದ ಮುಖ್ಯ ದೇವತೆ. ಒಂದು ಕಾಲದಲ್ಲಿ ಈ ದೇವಾಲಯದಲ್ಲಿ ಬಲಿಗಳನ್ನು ಅರ್ಪಿಸಲಾಗುತ್ತಿತ್ತು ಎಂದು ಒಂದು ಕಿರಿದಾದ ಹೊಳೆಯ ಸ್ಥಳವು ಸೂಚಿಸುತ್ತದೆ.
ಇತಿಹಾಸ
ಬದಲಾಯಿಸಿಈ ಸ್ಥಳದಲ್ಲಿ ಸಿಕ್ಕ ಪುರಾತತ್ತ್ವ ಪತ್ತೆಗಳಲ್ಲಿ ದುರ್ಗೆಯ ಶಿಲ್ಪಗಳು, ಶಿವಲಿಂಗ ಮತ್ತು ಶಿವನ ವಾಹನವಾದ ಗೂಳಿ ಸೇರಿವೆ. ಹೀಗಾಗಿ ಇವುಗಳು ಶೈವ ಪಂಥದ ಜನರ ಆರಾಧನೆಗೆ ಸಂಬಂಧಿಸಿವೆ. ಇವುಗಳ ಆಧಾರದ ಮೇಲೆ, ಪುರಾತತ್ತ್ವಜ್ಞರು ಈ ಪ್ರದೇಶದಲ್ಲಿ ಶಕ್ತಿ ಪಂಥವನ್ನು ಆಚರಿಸುತ್ತಿದ್ದರು ಎಂದು ಊಹಿಸಿದ್ದಾರೆ. ಇದು ಶಾಕ್ತ ಪಂಥದ ಮೂರು ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು. 10-11ನೇ ಶತಮಾನದ ಕಾಳಿಕಾ ಪುರಾಣದಲ್ಲಿ ಈ ದೇವಾಲಯದ ಉಲ್ಲೇಖವಿಲ್ಲ. ಸ್ಥಳದಲ್ಲಿರುವ ಎಲ್ಲಾ ಪುರಾತತ್ತ್ವ ಶಾಸ್ತ್ರದ ಪುರಾವೆಗಳಿಂದ, ಪುರಾತತ್ತ್ವಜ್ಞರು ದೇವಾಲಯವು 13 ನೇ ಶತಮಾನಕ್ಕೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.[೬] ಕಂಡುಬರುವ ಕಲ್ಲಿನ ಗುರುತುಗಳು ಸಾದಿಯಾದ ಸ್ಥಳಗಳು, ಉದಾ. ತಾಮ್ರೇಶ್ವರಿ ದೇವಸ್ಥಾನ, ಬುರಾ-ಬುರಿ, ಪಾದುಮ್ ಪುಖುರಿ ಮತ್ತು ಇತರ ಸ್ಥಳಗಳಾದ ನಕ್ಷಪರ್ಬತ್ ಮತ್ತು ಬುರೋಯ್ ಕೋಟೆಗಳಲ್ಲಿ ಕಂಡುಬಂದಿವೆ. ಇದು ಈ ಎಲ್ಲಾ ರಚನೆಗಳನ್ನು ಒಂದೇ ಜನರು ನಿರ್ಮಿಸಿದ್ದಾರೆ ಎಂದು ಸೂಚಿಸುತ್ತದೆ. ಅದೂ ಒಂದೇ ಅವಧಿಯಲ್ಲಿ, ಅಂದರೆ ಸುತಿಯಾ ರಾಜರ ಆಳ್ವಿಕೆಯಲ್ಲಿ.[೭][೮]
ವೈಶಿಷ್ಟ್ಯಗಳು
ಬದಲಾಯಿಸಿಪುರಾತತ್ತ್ವ ಉತ್ಖನನಗಳು ಒಂದು ದೇವಾಲಯದ ಉತ್ತಮವಾಗಿ ವಿನ್ಯಾಸಗೊಳಿಸಿದ ಮತ್ತು ಕೆತ್ತಿದ ಸ್ತಂಭ, ದೇವತೆಗಳು ಹಾಗೂ ಪ್ರಾಣಿಗಳ ಶಿಲ್ಪಗಳು, ಹೂವುಗಳ ವಿನ್ಯಾಸಗಳು, ಹಾನಿಗೊಳಗಾದ ಸ್ತಂಭಗಳು ಹಾಗೂ ಫಲಕಗಳನ್ನು ಬಹಿರಂಗಪಡಿಸಿದವು. ದೇವಾಲಯದ ಅವಶೇಷಗಳ ನಾಲ್ಕು ಮೂಲೆಗಳಲ್ಲಿ ಎರಡು ಆನೆಗಳ ಮೇಲೆ ಸಿಂಹಗಳ ನಾಲ್ಕು ಶಿಲ್ಪಗಳು ಕಂಡುಬಂದಿವೆ.
ಮಾಲಿನೀಥಾನ್‌ನಲ್ಲಿ ಕಂಡುಬರುವ ಐದು ಶಿಲ್ಪಗಳಲ್ಲಿ ಗಮನಾರ್ಹವಾದವುಗಳೆಂದರೆ, ಗ್ರಾನೈಟ್ ಕಲ್ಲಿನಿಂದ ಕೆತ್ತಿದ ಇಂದ್ರನು ತನ್ನ ವಾಹನ ಐರಾವತವನ್ನು ಸವಾರಿ ಮಾಡುತ್ತಿರುವ ಶಿಲ್ಪ, ಕಾರ್ತಿಕೇಯ ನವಿಲಿನ ಮೇಲೆ ಸವಾರಿ ಮಾಡುತ್ತಿರುವ ಶಿಲ್ಪ, ಸೂರ್ಯನು ರಥವನ್ನು ಸವಾರಿ ಮಾಡುತ್ತಿರುವ ಶಿಲ್ಪ, ಮತ್ತು ಗಣೇಶನು ಇಲಿಯ ಮೇಲೆ ಕೂತಿರುವ ಶಿಲ್ಪ ಹಾಗೂ ದೊಡ್ಡ ನಂದಿ.[೯] ಇಲ್ಲಿ ವಿವಿಧ ಭಂಗಿಗಳಲ್ಲಿ ಕಂಡುಬರುವ ಕಾಮಪ್ರಚೋದಕ ಮೈಥುನ ಶಿಲ್ಪಗಳ ಆಧಾರದ ಮೇಲೆ ಇಲ್ಲಿ ತಾಂತ್ರಿಕವಾದ ಚಾಲ್ತಿಯಲ್ಲಿತ್ತು ಎಂದು ನಂಬಲಾಗಿದೆ.
ದೇವಾಲಯವನ್ನು ಸಂಪೂರ್ಣವಾಗಿ ಕಲ್ಲಿನಿಂದ ಕೆತ್ತಲಾಗಿದೆ, ಅಸ್ಮಮಯೈ ಎಂದು ಕರೆಯಲ್ಪಡುವ ಒಂದು ರೀತಿಯ ದೇವಾಲಯ. ಸಾದಿಯಾದ ತಾಮ್ರೇಶ್ವರಿ ದೇವಸ್ಥಾನದಲ್ಲಿ ಕಂಡುಬಂದ ಕಲ್ಲಿನ ದೇವಾಲಯದ ಅವಶೇಷಗಳಲ್ಲಿ ಪತ್ತೆಯಾದ ಕಬ್ಬಿಣದ ಒಳಬೆಣೆಗಳು ಇದನ್ನು ಒಂದೇ ಜನರು ನಿರ್ಮಿಸಿದ್ದಾರೆ ಎಂದು ತೋರಿಸುತ್ತದೆ.[೧೦]
ಚಿತ್ರಸಂಪುಟ
ಬದಲಾಯಿಸಿ-
ಮಾಲಿನೀಥಾನ್ ಮಾತೃ ದೇವತೆ ಶಿಲ್ಪ
-
ಮಾಲಿನೀಥಾನ್ ಗಜ-ಸಿಂಹ
-
ಮಾಲಿನೀಥಾನ್ ಶಿವನ ಶಿಲ್ಪ
-
ಮಾಲಿನೀಥಾನ್ ಕಾರ್ತಿಕ ಶಿಲ್ಪ
-
ಮಾಲಿನೀಥಾನ್ ಅಪ್ಸರಾ ಶಿಲ್ಪ
ಉಲ್ಲೇಖಗಳು
ಬದಲಾಯಿಸಿ- ↑ Sarma, P.C.A study of the temple architecture of Assam from the Gupta period to the end of the Ahom rule: Chutiya architecture, p. 205
- ↑ Choudhury, R.D, Heritage of Architecture of Assam, p.5
- ↑ Sengupta, Gautam, Archeology in Northeast India, p.359
- ↑ Thakur, A.K, Pre-historic Archeological Remains of Arunachal Pradesh and People's perception: An Overview, p.6
- ↑ "Malini Than". Government of Arunachal Pradesh. Archived from the original on 12 May 2015. Retrieved 3 May 2015.
- ↑ Thakur, A.K, Pre-historic Archeological Remains of Arunachal Pradesh and People's perception: An Overview, p.6
- ↑ "The probability is that these ruins are the traces of as Hindu or Hinduised dynasty of local rulers who ruled over a kingdom confined to the north bank of Brahmaputra and extending from Burai in the west to Sadiya in the east. This dynasty is evidently the line of Chutia kings who assumed the surname Pala" Barua, K.L An Early History of Kamrupa 1933, p. 271.
- ↑ "If architectural continuity is admitted between the fortifications in the Sadiya region and the Burai river ruin site, it would be possible to believe that the kingdom of these rulers extended as far as the outer limit of Darrang district." Neog, Maheswar, Lights on a Ruling Dynasty of Arunachal Pradesh, p.218
- ↑ Sali 1998.
- ↑ Religious History of Arunachal Pradesh by Byomakesh Tripathy, p.354
ಗ್ರಂಥಸೂಚಿ
ಬದಲಾಯಿಸಿ- Sali, M. L. (1 January 1998). India-China Border Dispute: A Case Study of the Eastern Sector. APH Publishing. ISBN 978-81-7024-964-1.
- Bhattacharjee, J. B. (1992), "The Kachari (Dimasa) state formation", in Barpujari, H. K. (ed.), The Comprehensive History of Assam, vol. 2, Guwahati: Assam Publication Board, pp. 391–397
- Dutta, Sristidhar (1985), The Mataks and their Kingdom, Allahabad: Chugh Publications
- Shin, Jae-Eun (2020). "Descending from demons, ascending to kshatriyas: Genealogical claims and political process in pre-modern Northeast India, The Chutiyas and the Dimasas". The Indian Economic and Social History Review. 57 (1): 49–75. doi:10.1177/0019464619894134.