ಇದು ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ ಜಿಲ್ಲೆಯಲ್ಲಿದೆ. ಇದು ಗುಹಾಂತರ ಶಿವ ದೇವಾಲಯಕ್ಕೆ ಪ್ರಸಿದ್ಧ.

ಶಿವ ದೇವಾಲಯ

ಬದಲಾಯಿಸಿ

ಈ ದೇವಾಲಯವನ್ನು ಗುಹೆಯೊಳಗಿನ ಶಿವ ದೇವಾಲಯವೆಂದು ಕರೆಯುತ್ತಾರೆ. ಸರಿಸುಮಾರು ೧೫೦ಕ್ಕಿಂತಲೂ ಹೆಚ್ಹಿನ ಮೆಟ್ಟಿಲುಗಳನ್ನು ಹತ್ತಿ ಇಳಿದು ಈ ದೇವಾಲಯವನ್ನು ಸಂದರ್ಶಿಸ ಬೇಕು. ನದಿ ತಟದ ಆಹ್ಲಾದಭರಿತ ವಾತಾವರಣದಲ್ಲಿರುವ ಈ ದೇವಾಲಯಕ್ಕೆ ಬಲಬದಿಯಿಂದ ಗುಹೆಯೊಳಗಿನಿಂದ ಹೊಕ್ಕಕೂಡಲೇ ತಣ್ಣೀರಿನ ಕುಂಡವೊಂದಿದೆ, ಅಲ್ಲಿಂದ ಮುಂದೆ ಸಾಗಿ, ಮಾರ್ಲೇಶ್ವರನ ದರ್ಶನ ಮಾಡಬೇಕು. ಇಲ್ಲಿ ನಾಗರ ಹಾವುಗಳು ಸುತ್ತಮುತ್ತ ಸುತ್ತುತ್ತಿದ್ದರೂ, ಈ ವರೆಗೆ ಯಾರಿಗೂ ತೊಂದರೆಯಾಗಿಲ್ಲವಂತೆ. ಇಲ್ಲಿನ ಇನ್ನೊಂದು ಮನಮೋಹನ ತಾಣವೆಂದರೆ, ದೇವಾಲಯದ ಹತ್ತಿರವೇ ಇರುವ ಧಾರೇಶ್ವರ ಜಲಪಾತ. .

 
ಮಾರ್ಲೇಶ್ವರ ಶಿವ ದೇವಸ್ಥಾನದ ಪ್ರವೇಶ
 
(ಮಾರ್ಲೇಶ್ವರ ದೇವಸ್ಥಾನಕ್ಕೆ ಹತ್ತುವಾಗ ಕಾಣುವ ದೃಶ್ಯ-೧
 
ಮಾರ್ಲೇಶ್ವರ ದೇವಸ್ಥಾನಕ್ಕೆ ಹತ್ತುವಾಗ ಕಾಣುವ ದೃಶ್ಯ-೨
 
ಮಾರ್ಲೇಶ್ವರ ಜಲಪಾತ-೧
 
ಮಾರ್ಲೇಶ್ವರ ಜಲಪಾತ-೨

ಪರಿಶೀಲಿಸಿದ ಕೊಂಡಿಗಳು

ಬದಲಾಯಿಸಿ