ಮಾನವ ಶರೀರದ ರಚನಾಂಶಗಳು

ಮಾನವ ಶರೀರದ ಧಾತುರೂಪದ ರಚನೆಯನ್ನು ರಾಶಿ ರಚನೆ ಅಥವಾ ಪರಮಾಣು ರಚನೆಯ ದೃಷ್ಟಿಕೋನದಿಂದ ನೋಡಬಹುದು. ಎರಡೂ ದೃಷ್ಟಿಗಳನ್ನು ವಿವರಿಸಲು, ವಯಸ್ಕ ಪುರುಷ ಮಾನವ ಶರೀರವು ಸುಮಾರು ೫೭% ನೀರು, ಮತ್ತು ನೀರು ದ್ರವ್ಯರಾಶಿಯಲ್ಲಿ ೧೧% ಜಲಜನಕವಾಗಿದೆ ಆದರೆ ಪರಮಾಣುಗಳ ಎಣಿಕೆಯಲ್ಲಿ ೬೭% ಜಲಜನಕವಾಗಿದೆ (ಅಂದರೆ ೬೭ ಪರಮಾಣು ಶೇಕಡ). ಹಾಗಾಗಿ, ಮಾನವ ಶರೀರದ ಬಹುತೇಕ ದ್ರವ್ಯರಾಶಿಯು ಆಮ್ಲಜನಕವಾಗಿದೆ, ಆದರೆ ಮಾನವ ಶರೀರದಲ್ಲಿನ ಬಹುತೇಕ ಪರಮಾಣುಗಳು ಜಲಜನಕ ಪರಮಾಣುಗಳಾಗಿವೆ.