ಮಾಣಾ

ಉತ್ತರಾಖಂಡದ ಗ್ರಾಮ, ಭಾರತ

ಮಾಣಾ ಭಾರತದ ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಗ್ರಾಮವಾಗಿದೆ. ಇದು 3,200 ಮೀಟರ್ ಎತ್ತರದಲ್ಲಿ ಇದೆ.[] ಮಾಣಾ ಮಾಣಾ ಕಣಿವೆಮಾರ್ಗದ ಮೊದಲು ಬರುವ ಕೊನೆಯ ಹಳ್ಳಿಯಾಗಿದೆ. ಈ ಗ್ರಾಮವು ಭಾರತ ಟಿಬೇಟ್ ಗಡಿರೇಖೆಯ ಹತ್ತಿರವಿದೆ. ಹಿಂದೂ ತೀರ್ಥಯಾತ್ರಾ ಸ್ಥಳವಾದ ಬದ್ರಿನಾಥ್‌ನಿಂದ ಇದು ೩ ಕಿ.ಮೀ ದೂರದಲ್ಲಿದೆ ಮತ್ತು ಈ ಎರಡೂ ಸ್ಥಳಗಳು ಸಾಂಸ್ಕೃತಿಕವಾಗಿ ಸಂಪರ್ಕ ಹೊಂದಿವೆ.

ಮಾಣಾ ಗ್ರಾಮದ ಪ್ರವೇಶದ್ವಾರ

ಚಳಿಗಾಲದ ತಿಂಗಳುಗಳಲ್ಲಿ, ಇಡೀ ಜನಸಂಖ್ಯೆಯು ಕೆಳ ಸ್ಥಳಗಳಿಗೆ ಬರುತ್ತದೆ, ಏಕೆಂದರೆ ಈ ಪ್ರದೇಶವು ಹಿಮದ ಅಡಿಯಲ್ಲಿ ಆವೃತವಾಗಿರುತ್ತದೆ.

ಸಾಂಸ್ಕೃತಿಕ ಗುರುತು

ಬದಲಾಯಿಸಿ

ಈ ಗ್ರಾಮದ ಗ್ರಾಮಸ್ಥರು ಸಾಂಸ್ಕೃತಿಕವಾಗಿ ಬದ್ರೀನಾಥ್ ದೇವಾಲಯದ ಚಟುವಟಿಕೆಗಳು ಮತ್ತು ಮಾತಾ ಮೂರ್ತಿಯ ವಾರ್ಷಿಕ ಜಾತ್ರೆಯೊಂದಿಗೆ ಸಂಬಂಧ ಹೊಂದಿದ್ದಾರೆ.[] ಇವರು ಮುಂಚಿನ ದಿನಗಳಲ್ಲಿ ಟಿಬೆಟ್‌ನೊಂದಿಗೆ ವ್ಯಾಪಾರ ಮಾಡುತ್ತಿದ್ದರು. ಮಾಣಾದಲ್ಲಿ ವ್ಯಾಸ್ ಗುಫಾ ಎಂಬ ಹೆಸರಿನ ಒಂದು ಸಣ್ಣ ಗುಹೆ ಇದೆ ಮತ್ತು ಮಹರ್ಷಿ ವ್ಯಾಸರು ಈ ಗುಹೆಯಲ್ಲಿ ಮಹಾಭಾರತವನ್ನು ರಚಿಸಿದರು ಎಂದು ನಂಬಲಾಗಿದೆ. ಇನ್ನೂ ಒಂದು ಗುಹೆಯನ್ನು ಗಣೇಶ ಗುಫಾ ಎಂದು ಕರೆಯಲಾಗುತ್ತದೆ ಮತ್ತು ಪ್ರವಾಸಿಗರು ಈ ಎರಡೂ ಗುಹೆಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ.

ಇತರ ಸ್ಥಳಗಳು

ಬದಲಾಯಿಸಿ

ಹತ್ತಿರದ ಸ್ಥಳಗಳಲ್ಲಿ ವಸುಧಾರಾ ಜಲಪಾತ, ಸತೋಪಂಥ್ ಸರೋವರ, ಭೀಮ್ ಪುಲ್, ಸರಸ್ವತಿ ದೇವಾಲಯ ಇತ್ಯಾದಿಗಳು ಸೇರಿವೆ.  [ ಉಲ್ಲೇಖದ ಅಗತ್ಯವಿದೆ ]

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ Bisht, Harshwanti (1994). Tourism in Garhwal Himalaya : with special reference to mountaineering and trekking in Uttarkashi and Chamoli Districts. New Delhi: Indus Pub. Co. pp. 90–92. ISBN 9788173870064.
"https://kn.wikipedia.org/w/index.php?title=ಮಾಣಾ&oldid=1023122" ಇಂದ ಪಡೆಯಲ್ಪಟ್ಟಿದೆ