ಮಹೇಶ್ವರೀ ಉದ್ಯಾನ್, ಮಾಟುಂಗ, ಮುಂಬೈ

ಕಿಂಗ್ಸ್ ಸರ್ಕಲ್ ಎಂದು ಹೆಸರಾದ ಈಗಿನ ಮಹೇಶ್ವರೀ ಉದ್ಯಾನ್ ನ ಅಕ್ಕ-ಪಕ್ಕದ ಸ್ಥಳವನ್ನು ಮೊದಲು 'ಕಿಂಗ್ಸ್ ಸರ್ಕಲ್' ಎಂತಲೇ ಕರೆಯಲಾಗುತ್ತಿತ್ತು.[] ವಿಕ್ಟೋರಿಯ ರಾಣಿಯ ತರುವಾಯ ೭ ನೇ ಎಡ್ವರ್ಡ್ ಪಟ್ಟಕ್ಕೆ ಬಂದರು. ಆಗ ಇಂಗ್ಲೆಂಡ್ ನ ಅಧಿಪತ್ಯದಲ್ಲಿದ್ದ ವಿಶ್ವದ ಪ್ರಮುಖ ತಾಣಗಳಿಗೆ ಕಿಂಗ್ ಎಂಬ ಉಪಾಧಿಯನ್ನು ಕೊಟ್ಟರು. ಹಾಗಾಗಿ, ಆಗ ಬೊಂಬಾಯಿನ ಆಸ್ಪತ್ರೆಗೆ ಕಿಂಗ್ ಎಡ್ವರ್ಡ್ ಆಸ್ಪತ್ರೆ,ದಾದರ್ ಕಿಂಗ್ಸ್ ಸ್ಕೂಲ್, ಕಿಂಗ್ಸ್ ಸರ್ಕಲ್, ಕಿಂಗ್ಸ್ ಲಾಂಡ್ರಿ ಇತ್ಯಾದಿ ಹೆಸರುಗಳು ಬಂದವು. ದಕ್ಷಣ ದಿಕ್ಕಿಗೆ ದಾದರ್, ಉತ್ತರಕ್ಕೆ ಸಾಯನ್, ಮತ್ತು ಪಶ್ಚಿಮಕ್ಕೆ ಮಾಟುಂಗ ರೈಲ್ವೆ ನಿಲ್ದಾಣ, ಹಾಗೂ ಪೂರ್ವಕ್ಕೆ ವಡಾಲ ಜಿಲ್ಲೆಗಳಿವೆ. ಈಗ ಮಹೇಶ್ವರಿ ಉದ್ಯಾನದ ಮೇಲ್ವಿಚಾರಣೆಯನ್ನು ಲಾರ್ಸೆನ್ ಅಂಡ್ ಟೂಬ್ರೊ ಕಂಪೆನಿಯವರು ಅತ್ಯಂತ ಸಮರ್ಪಕವಾಗಿ ನೋಡಿಕೊಳ್ಳುತ್ತಿದ್ದಾರೆ. ಉದ್ಯಾನದಲ್ಲಿ ಒಳ್ಳೆಯ ಹೂವಿನ ಗಿಡಗಳನ್ನು ನೆಟ್ಟಿದ್ದಾರೆ. ಉತ್ತಮವಾದ ಹುಲ್ಲಿನ ಹಾಸಿದೆ. ಮಕ್ಕಳಿಗೆ ಉತ್ತಮವಾದ ಜಾರುವ ಬಂಡೆ, ಉಯ್ಯಾಲೆಗಳು, ಮತ್ತು ಬಾರ್ ವ್ಯಾಯಾಮ ಮಾಡುವ ವ್ಯವಸ್ಥೆಯಿದೆ. ಜನರು ಕುಳಿತುಕೊಳ್ಳಲು ಒಳ್ಳೆಯ ಸಿಮೆಂಟಿನ ಮಂಚಗಳಿವೆ. ಎರಡು ಲತಾಗೃಹಗಳಿದೆ. ಅದರ ಒಳಗೆ ಮತ್ತು ಮೇಲೆ, ಹೂವಿನ ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಒಳಗಿನ ಹಾಸು ಕಲ್ಲುಗಳ ಮೇಲೆ ಪರಿವಾರದ ಸದಸ್ಯರುಗಳು ಕುಳಿತು ಆನಂದಿಸಬಹುದು.

'ಮಹೇಶ್ವರಿ ಉದ್ಯಾನ್'
'ಫ್ಲೈಯ್ ಓವರ್ ಬಂದಮೇಲೆ'

'ಫ್ಲೈಯ್ ಓವರ್' ಈಗ ಉದ್ಯಾನದ ಮಧ್ಯದಲ್ಲಿ ಬಂದಿದೆ

ಬದಲಾಯಿಸಿ
ಚಿತ್ರ:Picasabackground-25.jpg
'ಸುಂದರ ಟುಲಿಪ್ ಹೂಗಳು'
 
'ಫ್ಲೈಓವರ್ ನಿರ್ಮಿಸಿದ ನಂತರ'

ಇತ್ತೀಚೆಗೆ ಫ್ಲೈಯ್ ಓವರ್ ಸಿದ್ಧವಾಗಿದೆ. ಅದನ್ನು ವಾಹನ ಚಾಲಕರಿಗೆ ವಹಿಸಿಕೊಟ್ಟಿದ್ದಾರೆ. ಅದು ಮಹೇಶ್ಚರಿ ಉದ್ಯಾನದ ಮಧ್ಯಭಾಗದಲ್ಲಿ ಹಾದು ಹೋಗಿದೆ. ಚಿಕ್ಕ-ಪುಟ್ಟ ವಾಹನಗಳು ಯಾವ ಅಡೆತಡೆಯಿಲ್ಲದೆ ಥಾಣೆಯ ವರೆಗೆ ಹೋಗಲು ಈ 'ಫ್ಲೈಓವರ್ ಸೇತುವೆ'ಗಳು ನೆರವಾಗುತ್ತವೆಯೆಂಬ ಆಶೆಯ ಮೇರೆಗೆ ಇವನ್ನು ನಿರ್ಮಿಸಿದ್ದಾರೆ. ಮೊದಲು ಮಾಟುಂಗದ ವಾಸಿಗಳಿಗೆ ಸಿಮೆಂಟ್ ಕಾಂಕ್ರೀಟ್ ನ ದೊಡ್ಡ ಕಾಲಂಗಳು ಬಂದು ಆ ಪ್ರದೇಶದ ಸೌಂದರ್ಯ ಕೆಡಬಹುದೆಂದು ಶಂಕಿಸಿದ್ದರು. ಆದರೆ ವಾಹನಗಳ ಓಡಾಟಕ್ಕೆ ಅನುಕೂಲ್ವಾಗುವಂತೆ. ಫ್ಲೈಯ್ ಓವರ್ ರಸ್ತೆ ಅನಿವಾರ್ಯವಾಗಿ ಕಟ್ಟಲೇ ಬೇಕಾಗಿತ್ತು. ಉದ್ಯಾನದ ಮಧ್ಯೆ ಕಂಭಗಳು ಬಂದಿದ್ದರೂ ಅವುಗಳಿಂದ ಪಾರ್ಕ್ ಗೆ ಬರುವ ಮಕ್ಕಳು, ಹೆಣ್ಣುಮಕ್ಕಳು ಮತ್ತು ಹಿರಿಯ ನಾಗರಿಕರಿಗೆ, ಯಾವ ಅನಾನುಕೂಲವೂ ಆಗಿಲ್ಲ. ಈ ಸುಂದರ ಉದ್ಯಾನದ ಮೇಲ್ವಿಚಾರಣೆಯನ್ನು 'ಲಾರ್ಸೆನ್ ಅಂಡ್ ಟೂಬ್ರೊ ಕಂಪೆನಿ'ಯವರು ಅತ್ಯುತ್ತಮವಾಗಿ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಉದ್ಯಾನದ ಅಂದ-ಚೆಂದಗಳು ಚೆನ್ನಾಗಿ ಕಾಪಾಡಲ್ಪಟ್ಟಿವೆ.

ಚಿತ್ರ:Ma32.jpg
'ಹಿಂದಿನ ಉದ್ಯಾನದ ಒಳ ನೋಟದ ಒಂದು ದೃಷ್ಯ

ಹತ್ತಿರವಿರುವ ಕೆಲವು ಪ್ರಮುಖ ಕೇಂದ್ರಗಳು

ಬದಲಾಯಿಸಿ
  • ಮೈಸೂರ್ ಅಸೋಸಿಯೇಷನ್, ಮುಂಬಯಿ
  • ಮುಂಬಯಿ ಕನ್ನಡ ಸಂಘ, ಮುಂಬಯಿ
  • ರಾಮ್ ಮಂದಿರ್,
  • ಕನ್ನಡ ಸ್ಕೂಲ್, ವಡಾಲ,
  • ಯು.ಡಿ.ಸಿ.ಟಿ. ಮಹಾವಿದ್ಯಾಲಯ,
  • ಜೈನ್ ಮಂದಿರ್,
  • ಷಣ್ಮುಖಾನಂದ ಹಾಲ್,
  • ಗಾಂಧಿ ಮಾರ್ಕೆಟ್,
  • ಸಯಾಂ ಹಾಸ್ಪಿಟಲ್,
  • ಮುಂಬಯಿ ತಮಿಳ್ ಸಂಘಂ,
  • ಗೋಕುಲ್ ಹಾಲ್,
  • ಕೇರಳ್ ಆಯುರ್ವೇದಿಕ್ ಶಾಲಾ,
  • ಮಾಟುಂಗಾ ಹಿಂದು ಜಮ್ಖಾನ,
  • ವಿ.ಜೆ.ಟಿ.ಐ. ಮಹಾವಿದ್ಯಾಲಯ,
  • 'ಕೇಂದ್ರೀಯ ಹತ್ತಿ ಪ್ರೌದ್ಯೋಗಿಕಿ ಅನುಸಂಧಾನ ಸಂಸ್ಥೆ', ಮುಂಬಯಿ (CIRCOT)
  • ಕಸ್ಟಂ ಕ್ವಾರ್ಟರ್ಸ್,
  • ಪಾಂಚ್ ಗಾರ್ಡನ್, ಮುಂಬಯಿ
  • ಪಾರ್ಸಿ ಕಾಲೋನಿ,
  • ದಾದರ್ ಪಾರ್ಸಿ, ಯೂತ್ ಅಸೆಂಬ್ಲಿ ಹೈಸ್ಕೂಲ್,
  • ಸೇಂಟ್ ಜೋಸೆಫ್ ಹೈ ಸ್ಕೂಲ್,
  • ಖಲ್ಸಾ ಕಾಲೇಜ್,
  • ಡಾನ್ ಬಾಸ್ಕೊ
  • ಅರೋರ ಸಿನೆಮ,
  • ಎಸ್.ಎನ್.ಡಿ.ಟಿ. ಮಹಿಳಾ ವಿದ್ಯಾಲಯ,
  • ರುಯಾ ಕಾಲೇಜ್,
  • ಪೊದ್ದಾರ್ ವಾಣಿಜ್ಯ ಕಾಲೇಜ್,
  • ಮಾಟುಂಗಾ ಜಮ್ಖಾನ,
  • ಕಿಂಗ್ ಜಾರ್ಜ್ ಹೈಸ್ಕೂಲ್,
  • ನಪ್ಪೂ ಹಾಲ್,
  • ಶಂಕರ್ ಮಠ್,
  • ಆಸ್ತಿಕ್ ಸಮಾಜ್,
  • ಆರ್ಯ ಸಮಾಜ್,
  • ಲಯನ್ಸ್ ಕ್ಲಬ್ ಹಾಸ್ಪಿಟಲ್, ಇತ್ಯಾದಿಗಳು ಇವೆ.

ಉಲ್ಲೇಖಗಳು

ಬದಲಾಯಿಸಿ
  1. 'Mid Day', CM to inaugurate Maheshwari Udyan-Tulpule Chowk flyover, 05-May-2011