ಮಹುವಾ ಮುಖರ್ಜಿ
ಮಹುವಾ ಮುಖರ್ಜಿ | |
---|---|
ವೃತ್ತಿ(ಗಳು) | ನೃತ್ಯಗಾರ್ತಿ, ಸಂಶೋಧಕಿ |
Dances | ಗೌಡಿಯಾ ನೃತ್ಯ |
ಮಹುವಾ ಮುಖರ್ಜಿ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರವಾದ ಗೌಡಿಯಾ ನೃತ್ಯಗರಾರಾಗಿದ್ದಾರೆ. [೧] ಅವರು ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದಲ್ಲಿ ಸಂಶೋಧಕರು ಮತ್ತು ಅಧ್ಯಾಪಕರಾಗಿದ್ದಾರೆ. ಅವರು ಜನವರಿ ೨೦೧೪ ರ ಸಮಯಕ್ಕೆ ಲಲಿತಕಲೆಗಳ ವಿಭಾಗದ ಡೀನ್ ಆಗಿದ್ದರು.[೨] [೩] ಅವರ ಪತಿ ಅಮಿತವ ಮುಖರ್ಜಿ ಜೊತೆಗೆ, ಅವರು ೧೯೮೦ ರ ದಶಕದಿಂದ ತಮ್ಮ ವೃತ್ತಿಜೀವನದ ಮೂಲಕ ನೃತ್ಯ ಶೈಲಿಯನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ. [೪] ಯುಎಸ್‌ಎ, ಓಕ್ಲಹೋಮಾ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅವರು ಪ್ರದರ್ಶನಗಳು ಮತ್ತು ಉಪನ್ಯಾಸಗಳನ್ನು ನೀಡಿದ್ದಾರೆ. [೫] [೬] ಅವರು ಬ್ರತೀಂದ್ರನಾಥ್, ಶಶಿ ಮಹತೋ, ನರೋತ್ತಮ್ ಸನ್ಯಾಲ್, ಗಂಭೀರ್ ಸಿಂಗ್ ಮೂಧಾ, ಮುಕುಂದ್ ದಾಸ್ ಭಟ್ಟಾಚಾರ್ಯ, ಛೌ, ನಾಚ್ನಿ, ಕುಶನ್ ಮತ್ತು ಕೀರ್ತನೀಯ ಸಂಪ್ರದಾಯಗಳ ಇತರ ಅಭ್ಯಾಸಗಾರರಿಂದ ನೃತ್ಯವನ್ನು ಕಲಿತಿದ್ದಾರೆ. [೭]
ಮುಖರ್ಜಿ ಅವರು ಗೌಡೀಯ ನೃತ್ಯ ಭಾರತಿ ಮತ್ತು ಮಿತ್ರಯಾನ್ ಸಂಸ್ಥೆಗಳ ನಿರ್ದೇಶಕರೂ ಆಗಿದ್ದಾರೆ. ಅವರು ಸಸ್ಯಶಾಸ್ತ್ರದಲ್ಲಿ ಎಂ.ಎಸ್ಸಿ., ಪಿಎಚ್.ಡಿ ಪಡೆದಿದ್ದಾರೆ. ಆರಂಭದಲ್ಲಿ ಭರತ ನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ. ಅವರನ್ನು ನೃತ್ಯದ "ಕಾರಂಜಿ" ಎಂದು ಪರಿಗಣಿಸಲಾಗಿದೆ. [೨] "ದಿ ಬ್ಯೂಟಿ ಐ ಹ್ಯಾವ್ ಸೀನ್: ಎ ಟ್ರೈಲಾಜಿ" ಎಂಬ ತನ್ನ ಸಂಗ್ರಹದಲ್ಲಿ ಪ್ರಕಟವಾದ ನೈಜೀರಿಯಾದ ಬರಹಗಾರ ತನುರೆ ಓಜೈಡೆ ಬರೆದ ಕವಿತೆಯ ವಿಷಯವೇ ಅವರಾಗಿದ್ದಾರೆ. [೮] ಅವರು ಭಾರತದ ಫಿಲ್ಮ್ಸ್ ಡಿವಿಷನ್ ಮಾಡಿದ ಗೀತ್ಮಯ್ ತನ್ಮಯ್ - ಟ್ರಾನ್ಸ್ ಇನ್ ಮೋಷನ್ ಎಂಬ ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. [೯]
ಪುಸ್ತಕಗಳು
ಬದಲಾಯಿಸಿಅವರು ಬೆಂಗಾಲ್ ಶಾಸ್ತ್ರೀಯ ನೃತ್ಯ, ಗೌಡಿಯ ನೃತ್ಯ ಎಂಬ ಪುಸ್ತಕವನ್ನು ಬರೆದಿದ್ದಾರೆ. ಇದನ್ನು ಕೋಲ್ಕತ್ತಾದ ಏಷ್ಯಾಟಿಕ್ ಸೊಸೈಟಿಯಿಂದ ಪ್ರಕಟಿಸಲಾಗಿದೆ. [೧೦]
ಉಲ್ಲೇಖಗಳು
ಬದಲಾಯಿಸಿ- ↑ Foster, S. (2009-06-10). Worlding Dance (in ಇಂಗ್ಲಿಷ್). Springer. ISBN 9780230236844.
- ↑ ೨.೦ ೨.೧ Bharatram, Kumudha (9 April 2011). "Dance of the ancients". The Hindu. Retrieved 7 January 2014.
- ↑ "Members of The Faculties". Rabindra Bharati University. Archived from the original on 12 December 2013. Retrieved 14 January 2014.
- ↑ Alom, Zahangir (11 November 2013). "Of euphoria and grace in dancing devotion". The Daily Star (Bangladesh). Archived from the original on 7 ಜನವರಿ 2014. Retrieved 7 January 2014.
- ↑ Parul (7 June 2013). "Summer players". Indian Express. Retrieved 7 January 2014.
- ↑ Alom, Zahangir (25 March 2012). "Presentation of Navarasa through dance". The Daily Star (Bangladesh). Archived from the original on 7 ಜನವರಿ 2014. Retrieved 7 January 2014.
- ↑ Rajan, Anjana (26 December 2006). "The wheel has come full circle". The Hindu. Archived from the original on 8 November 2012. Retrieved 7 January 2014.
- ↑ Tanure Ojaide (2010). The Beauty I Have Seen: A Trilogy. African Books Collective. p. 88. ISBN 978-9788422297.
- ↑ "Trance in Motion : Short film by Films Division". Gadurr Media, YouTube. Retrieved 7 January 2013.
- ↑ Mukherjee, Mahua (2000). Gaudiya Nritya (in Bengali). Kolkata: The Asiatic Society.