ಮಹಿಳೆಯ ಜನನಾಂಗ ಹರಣ

ಮಹಿಳೆಯ ಜನನಾಂಗ ಹರಣ (ಫೀಮೇಲ್ ಜೆನಿಟಲ್ ಮ್ಯುಟಿಲೇಷನ್, FGM) ಎಂದರೆ ಮಹಿಳೆಯ ಜನನಾಂಗ ಹರಣ ಮತ್ತು ಜನನಾಂಗ ಕತ್ತರಿಸುವಿಕೆಯನ್ನು ವಿಶ್ವ ಆರೋಗ್ಯ ಸಂಸ್ಥೆಯು (WHO) "ವೈದ್ಯಕೀಯವಲ್ಲದ ಕಾರಣಗಳಿಂದಾಗಿ ಮಹಿಳೆಯ ಬಾಹ್ಯ ಜನನಾಂಗದ ಭಾಗಶಃ ಅಥವಾ ಪೂರ್ಣವಾದ ಹರಣ ಅಥವಾ ಮಹಿಳೆಯ ಜನನಾಂಗಕ್ಕೆ ಉಂಟಾಗುವ ಬೇರೆ ಹಾನಿ" ಎಂದು ವ್ಯಾಖ್ಯಾನಿಸಿದೆ."[] ಮಹಿಳೆಯ ಜನನಾಂಗ ಹರಣವನ್ನು ಆಫ್ರಿಕದಲ್ಲಿನ ಬುಡಕಟ್ಟು ಸಬ್-ಸಹರನ್ ಆಫ್ರಿಕಾದಲ್ಲಿಹಾಗೂ ಈಶಾನ್ಯ ಆಫ್ರಿಕಾದಲ್ಲಿ,ಕಡಿಮೆ ಪ್ರಮಾಣದಲ್ಲಿ ಏಷ್ಯಾದಲ್ಲಿ,ಮಧ್ಯಪ್ರಾಚ್ಯದಲ್ಲಿ ಹಾಗೂ ಬೇರೆಡೆ ಇರುವ ವಲಸೆ ಸಮುದಾಯಗಳಲ್ಲಿ ನಡೆಸಲಾಗುತ್ತದೆ.[] ಇದನ್ನು ನಡೆಸುವ ವಯಸ್ಸು ಜನನ ಸಂದರ್ಭದಿಂದ ಪ್ರಾರಂಭಿಸಿ ಪ್ರಾಯಪ್ರಬುದ್ಧವಾಗುವವರೆಗೂ ಇರಬಹುದು; ಅರ್ಧದಷ್ಟು ದೇಶಗಳಲ್ಲಿ ಇದಕ್ಕಾಗಿ ರಾಷ್ಟ್ರೀಯ ಅಂಕಿ ಅಂಶಗಳು ಲಭ್ಯವಿವೆ, ಹೆಚ್ಚಿನ ಬಾಲಕಿಯರು ಐದು ವರ್ಷ ವಯಸ್ಸಿಗೂ ಮುನ್ನ ಇದಕ್ಕೆ ತುತ್ತಾಗುತ್ತಾರೆ.[]

ಮಹಿಳೆಯ ಜನನಾಂಗ ಹರಣ
photograph
Road sign near Kapchorwa, Uganda, where FGM is outlawed but still practised by the Pokot, Sabiny and Tepeth people.[]
DescriptionPartial or total removal of the external female genitalia or other injury to the female genital organs for non-medical reasons[]
Areas practisedMost common in 27 countries in sub-Saharan and north-east Africa, as well as in Yemen and Iraqi Kurdistan[]
Numbers133 million in those countries[]
Age performedWeeks after birth to puberty and beyond[]

ಪ್ರಕ್ರಿಯೆಯು ಒಂದು ಅಥವಾ ಹಲವಾರು ಪ್ರಕ್ರಿಯೆಗಳನ್ನು ಒಳಗೊಳ್ಳುವುದು, ಪ್ರಕ್ರಿಯೆಗಳು ಬುಡಕಟ್ಟಿನ ಆಧಾರದ ಮೇಲೆ ಭಿನ್ನವಾಗಿರುತ್ತವೆ. ಇವುಗಳಲ್ಲಿ ಭಗಾಂಕುರ ಮತ್ತು ಭಗಾಂಕುರದ ಮೇಲಿನ ತ್ವಚೆ (ಕ್ಲಿಟೋರಲ್ ಹುಡ್); ಭಗಾಂಕುರದ ಕೆಲ ಅಥವಾ ಎಲ್ಲ ಭಾಗ ಹಾಗೂ ಒಳಯೋನಿ (ಇನರ್ ಲ್ಯಾಬಿಯಾ); ಹಾಗೂ ತೀವ್ರವಾದ ರೂಪದ ಕತ್ತರಿಸುವಿಕೆ ಎಂದರೆ (ಇನ್‌ಫೈಬ್ಯುಲೇಷನ್) ಯೋನಿಯ ಹೊರತುಟಿಯ ಅಥವಾ ಹೊರಯೋನಿಯ ಅಥವಾ ಯೋನಿಯ ಮುಚ್ಚುವಿಕೆಯ ಭಾಗದ ಭಾಗಶಃ ಪೂರ್ಣ ಕತ್ತರಿಸುವಿಕೆ. ಈ ಪ್ರಕ್ರಿಯೆಯಲ್ಲಿ, ಮೂತ್ರದ ಹರಿವಿಗೆಹಾಗೂ ಋತುಚಕ್ರದ ರಕ್ತಪ್ರವಾಹಕ್ಕೆ ಸಣ್ಣ ರಂಧ್ರವನ್ನು ಇರಿಸಲಾಗುವುದು ಹಾಗೂ ಯೋನಿಯನ್ನು ಲೈಂಗಿಕಕ್ರಿಯೆ ಮತ್ತು ಶಿಶುಜನನಕ್ಕಾಗಿ ತೆರೆಯಲಾಗುವುದು.[] ಆರೋಗ್ಯ ಪರಿಣಾಮಗಳು ಪ್ರಕ್ರಿಯೆಯನ್ನು ಸಂದರ್ಭದ ಅನುಸಾರ ಅವಲಂಬಿಸುತ್ತವಾದರೂ ಸೋಂಕುಗಳು, ತೀವ್ರವಾದ ನೋವು, ಛೇದಗಳು, ಗರ್ಭಧಾರಣೆ ಶಕ್ತಿ ನಷ್ಟ, ಶಿಶುಜನನದ ಸಂದರ್ಭದಲ್ಲಿ ವಿಷಮತೆಗಳು ಹಾಗೂ ಮಾರಕ ರಕ್ತಸ್ರಾವ ಒಳಗೊಳ್ಳುವವು.[]

ಅಭ್ಯಾಸವು ಲಿಂಗ ತಾರತಮ್ಯ, ಮಹಿಳೆಯ ಲೈಂಗಿಕತೆಯ ಮೇಲೆ ನಿಯಂತ್ರಣದ ಪ್ರಯತ್ನಗಳು, ಪಾವಿತ್ರ್ಯದ, ಕನ್ಯತ್ವದ ಹಾಗೂ ಸೌಂದರ್ಯದ ಆಲೋಚನೆಗಳಲ್ಲಿ ನೆಲೆಗೊಂಡಿದೆ. ಇದನ್ನು ಸಾಮಾನ್ಯವಾಗಿ ಪ್ರಾರಂಭಿಸುವವರು ಹಾಗೂ ನಡೆಸುವವರು ಮಹಿಳೆಯರೇ, ಅವರು ಇದನ್ನು ಗೌರವದ ತಳಹದಿ ಎಂದು ನೋಡುತ್ತಾರೆ, ಹಾಗೂ ಇವರು ತಮ್ಮ ಹೆಣ್ಣುಮಕ್ಕಳು ಮತ್ತು ಮೊಮ್ಮಕ್ಕಳಿಗೆ ಯೋನಿಛೇದ ಮಾಡದಿರುವುದು ಅವರು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವಂತೆ ಮಾಡುವುದು ಎಂದು ಭಾವಿಸುತ್ತಾರೆ.[೧೦] 29 ದೇಶಗಳಲ್ಲಿನ 130 ಮಿಲಿಯನ್ನಿಗೂ ಹೆಚ್ಚು ಮಹಿಳೆಯರು ಮತ್ತು ಬಾಲಕಿಯರು FGM ಗೆ ಒಳಗಾಗಿದ್ದಾರೆ.[] ಇವರಲ್ಲಿ ಎಂಟು ಮಿಲಿಯನ್ನಿಗೂ ಹೆಚ್ಚು ಜನ ತೀವ್ರ ರೂಪದ ಕತ್ತರಿಸುವಿಕೆಗೆ ಒಳಗಾಗಿದ್ದಾರೆ, ಈ ಅಭ್ಯಾಸವು ಸಾಮಾನ್ಯವಾಗಿ ಡಿಜಿಬೌಟಿ, ಎರಿಟ್ರಿಯಾ, ಸೊಮಾಲಿಯಾ ಹಾಗೂ ಸೂಡಾನುಗಳಲ್ಲಿದೆ.[೧೧]

ಯೋನಿಛೇದವು ಅದು ನಡೆಯುವ ಹೆಚ್ಚಿನ ದೇಶಗಳಲ್ಲಿ ಕಾನೂನುಬಾಹಿರವಾಗಿದೆ ಅಥವಾ ನಿರ್ಬಂಧಿತಗೊಂಡಿದೆ. ಆದರೆ ಕಾನೂನುಜಾರಿಯು ಕಳಪೆಯಾಗಿದೆ.[೧೨] ಯೋನಿಛೇದವನ್ನು ಬಹಿಷ್ಕರಿಸುವುದಕ್ಕಾಗಿ 1970ರಿಂದಲೂ ಅಂತಾರಾಷ್ಟ್ರೀಯ ಪ್ರಯತ್ನಗಳು ನಡೆಯುತ್ತ ಬಂದಿವೆ, ಹಾಗೂ 2012 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು, ಯೋನಿಛೇದವನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಗುರುತಿಸಿದೆ.[೧೩] ಇದಕ್ಕೆ ವಿರೋಧಗಳೂ ಇಲ್ಲದಿಲ್ಲ, ನಿರ್ದಿಷ್ಟವಾಗಿ ಆಂತ್ರೊಪಾಲಜಿಸ್ಟರಿಂದ. ಎರಿಕ್ ಸಿಲ್ವರ್‌ಮ್ಯಾನ್ ಹೇಳುವ ಪ್ರಕಾರ ಯೋನಿಚೇದವು ಆಂತ್ರೊಪಾಲಜಿಯ ಕೇಂದ್ರೀಯ ನೈತಿಕ ವಿಚಾರಗಳಲ್ಲಿ ಒಂದಾಗಿದೆ, ಇದು ಸಾಂಸ್ಕೃತಿಯ ಸಾಪೇಕ್ಷತಾವಾದ, ಸಹ್ಯತೆ ಹಾಗೂ ಮಾನವ ಹಕ್ಕುಗಳ ವಿಶ್ವವ್ಯಾಪಿತ್ವದ ಬಗ್ಗೆ ಕಠಿಣವಾದ ಪ್ರಶ್ನೆಗಳನ್ನು ಎತ್ತುತ್ತಿದೆ.[೧೪]

ಪೂರಕ ಮಾಹಿತಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Masinde, Andrew. "FGM: Despite the ban, the monster still rears its ugly head in Uganda", New Vision, Uganda, 5 February 2013.
  2. ೨.೦ ೨.೧ "Classification of female genital mutilation" Archived 2013-10-25 ವೇಬ್ಯಾಕ್ ಮೆಷಿನ್ ನಲ್ಲಿ., World Health Organization, 2013 (hereafter WHO 2013).
  3. "Female Genital Mutilation/Cutting: A Statistical Overview and Exploration of the Dynamics of Change", United Nations Children's Fund, July 2013 (hereafter UNICEF 2013), p. 2.
  4. ೪.೦ ೪.೧ Female Genital Mutilation/Cutting: What Might the Future Hold?, New York: UNICEF, 22 July 2014 (hereafter UNICEF 2014), p. 3/6: "If nothing is done, the number of girls and women affected will grow from 133 million today to 325 million in 2050." Also see p. 6/6:

    "Data sources: UNICEF global databases, 2014, based on Demographic and Health Surveys (DHS), Multiple Indicator Cluster Surveys (MICS) and other nationally representative surveys, 1997–2013. Population data are from: United Nations, Department of Economic and Social Affairs, Population Division, World Population Prospects: The 2012 revision, CD-ROM edition, United Nations, New York, 2013.

    "Notes: Data presented in this brochure cover the 29 countries in Africa and the Middle East where FGM/C is concentrated and for which nationally representative data are available."

  5. UNICEF 2013, p. 50.
  6. UNICEF 2013 Archived 2015-04-05 ವೇಬ್ಯಾಕ್ ಮೆಷಿನ್ ನಲ್ಲಿ., p. 2
  7. UNICEF 2013 Archived 2015-04-05 ವೇಬ್ಯಾಕ್ ಮೆಷಿನ್ ನಲ್ಲಿ., pp. 47, 50, 183.
  8. WHO 2013 Archived 2013-10-25 ವೇಬ್ಯಾಕ್ ಮೆಷಿನ್ ನಲ್ಲಿ.; WHO 2008 Archived 2011-06-01 ವೇಬ್ಯಾಕ್ ಮೆಷಿನ್ ನಲ್ಲಿ., p. 4
  9. Abdulcadira, Jasmine; Margairaz, C.; Boulvain, M; Irion, O. "Care of women with female genital mutilation/cutting" Archived 2016-07-18 ವೇಬ್ಯಾಕ್ ಮೆಷಿನ್ ನಲ್ಲಿ., Swiss Medical Weekly, 6(14), January 2011 (review).
  10. UNICEF 2013 Archived 2015-04-05 ವೇಬ್ಯಾಕ್ ಮೆಷಿನ್ ನಲ್ಲಿ., p. 15: "There is a social obligation to conform to the practice and a widespread belief that if they [families] do not, they are likely to pay a price that could include social exclusion, criticism, ridicule, stigma or the inability to find their daughters suitable marriage partners."

    Nahid F. Toubia, Eiman Hussein Sharief, "Female genital mutilation: have we made progress?" Archived 2017-01-01 ವೇಬ್ಯಾಕ್ ಮೆಷಿನ್ ನಲ್ಲಿ., International Journal of Gynecology & Obstetrics, 82(3), September 2003, pp. 251–261: "One of the great achievements of the past decade in the field of FGM is the shift in emphasis from the concern over the harmful physical effects it causes to understanding this act as a social phenomenon resulting from a gender definition of women's roles, in particular their sexual and reproductive roles. This shift in emphasis has helped redefine the issues from a clinical disease model (hence the terminology of eradication prevalent in the literature) to a problem resulting from the use of culture to protect social dominance over women's bodies by the patriarchal hierarchy. Understanding the operative mechanisms of patriarchal dominance must also include understanding how women, particularly older married women, are important keepers of that social hegemony." PubMed doi:10.1016/S0020-7292(03)00229-7

  11. P. Stanley Yoder, Shane Khan, "Numbers of women circumcised in Africa: The Production of a Total" Archived 2017-11-22 ವೇಬ್ಯಾಕ್ ಮೆಷಿನ್ ನಲ್ಲಿ., USAID, DHS Working Papers, No. 39, March 2008, pp. 13–14: "Infibulation is practiced largely in countries located in northeastern Africa: Djibouti, Eritrea, Ethiopia, Somalia, and Sudan. Survey data are available for Sudan, Eritrea, Ethiopia and Djibouti. Sudan alone accounts for about 3.5 million of the women. ... [T]he estimate of the total number of women infibulated in [Djibouti, Somalia, Eritrea, northern Sudan, Ethiopia, Guinea, Mali, Burkina Faso, Senegal, Chad, Nigeria, Cameroon and Tanzania, for women 15–49 years old] comes to 8,245,449, or just over eight million women." Also see Appendix B, Table 2 ("Types of FGC"), p. 19.

    UNICEF 2013 Archived 2015-04-05 ವೇಬ್ಯಾಕ್ ಮೆಷಿನ್ ನಲ್ಲಿ., p. 182, identifies "sewn closed" as most common in Djibouti, Eritrea, Somalia for the 15–49 age group (a survey in 2000 in Sudan was not included in the figures), and for the daughters of that age group it is most common in Djibouti, Eritrea, Niger and Somalia. See UNICEF statistical profiles: Djibouti (December 2013), Eritrea (July 2014), Somalia (December 2013).

    Also see Gerry Mackie, "Ending Footbinding and Infibulation: A Convention Account" Archived 2019-07-20 ವೇಬ್ಯಾಕ್ ಮೆಷಿನ್ ನಲ್ಲಿ., American Sociological Review, 61(6), December 1996 (pp. 999–1017), p. 1002: "Infibulation, the harshest practice, occurs contiguously in Egyptian Nubia, the Sudan, Eritrea, Djibouti and Somalia, also known as Islamic Northeast Africa."

  12. For countries in which it is outlawed or restricted, UNICEF 2013 Archived 2015-04-05 ವೇಬ್ಯಾಕ್ ಮೆಷಿನ್ ನಲ್ಲಿ., p. 8; for enforcement, UNFPA–UNICEF 2012, p. 48.
  13. "67/146. Intensifying global efforts for the elimination of female genital mutilation", United Nations General Assembly, adopted 20 December 2012.

    Emma Bonino, "Banning Female Genital Mutilation", The New York Times, 19 December 2012.

  14. Eric K. Silverman, "Anthropology and Circumcision", Annual Review of Anthropology, 33, 2004 (pp. 419–445), pp. 420, 427.