ಮಹಾಲಕ್ಷ್ಮಿ ಧೋಬಿ ಘಾಟ್

18°58′58.52″N 72°49′31.47″E / 18.9829222°N 72.8254083°E / 18.9829222; 72.8254083

ಮುಂಬೈನ ಧೋಬಿಗಳು ಮಹಾಲಕ್ಷ್ಮಿ ಧೋಬಿ ಘಾಟ್‌‌‌ನಲ್ಲಿ ಕೆಲಸ ಮಾಡುತ್ತಿರುವುದು.
ದೋಭಿ ಘಾಟ್ ಮುಂಬೈ
ದೋಭಿ ಘಾಟ್

ಮಹಾಲಕ್ಷ್ಮಿ ಧೋಬಿ ಘಾಟ್ ಭಾರತದ ಮುಂಬೈನಲ್ಲಿರುವ ಲಾಂಡ್ರಿ ಸ್ಥಳವಾಗಿದೆ. ಇದನ್ನು ೧೮೯೦ ರಲ್ಲಿ ನಿರ್ಮಿಸಲಾಯಿತು.[] ಇದು ದಕ್ಷಿಣ ಮುಂಬೈನ ಮಹಾಲಕ್ಷ್ಮಿ ರೈಲು ನಿಲ್ದಾಣದಲ್ಲಿದೆ. ಜಾಕೋಬ್ ಸರ್ಕಲ್ ಮಾನೋರೈಲ್ ನಿಲ್ದಾಣದಿಂದಲೂ ಸಹ ಧೋಬಿ ಘಾಟ್‌ಗೆ ಹೋಗಬಹುದು. ಧೋಬಿ ಎಂದು ಕರೆಯಲ್ಪಡುವ ಬಟ್ಟೆ ಒಗೆಯುವವರು ಮುಂಬೈನ ಹೋಟೆಲ್‌ಗಳು ಮತ್ತು ಆಸ್ಪತ್ರೆಗಳಿಂದ ಬಟ್ಟೆ ಮತ್ತು ಲಿನನ್‌ಗಳನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸುವ ಕೆಲಸವನ್ನು ಮಾಡುತ್ತಾರೆ.

ಬ್ರಿಟಿಷರು ೧೯೦೨ ರಲ್ಲಿ ಕೋಲ್ಕತ್ತಾದಲ್ಲಿ (ಆಗ ಕಲ್ಕತ್ತಾ) ಧೋಬಿ ಘಾಟ್ ಅನ್ನು ನಿರ್ಮಿಸಿದರು. ದಕ್ಷಿಣ ಏಷ್ಯಾದಾದ್ಯಂತ ಇತರ ಧೋಬಿ ಘಾಟ್ ಸ್ಥಳಗಳಿವೆ.

ಅವಲೋಕನ

ಬದಲಾಯಿಸಿ

ಮಹಾಲಕ್ಷ್ಮಿ ಧೋಬಿ ಘಾಟ್ ಪಶ್ಚಿಮ ರೈಲ್ವೆಯ ಸಾತ್ ರಸ್ತಾ ವೃತ್ತದಲ್ಲಿ ಮಹಾಲಕ್ಷ್ಮಿ ರೈಲು ನಿಲ್ದಾಣದ ಪಕ್ಕದಲ್ಲಿದೆ. ಮಹಾಲಕ್ಷ್ಮಿ ನಿಲ್ದಾಣದ ಮೇಲು ಸೇತುವೆಯಿಂದ ಇದನ್ನು ಸುಲಭವಾಗಿ ನೋಡಬಹುದು.[]

ಧೋಬಿ ಕಲ್ಯಾಣ್ ಮತ್ತು ಔದ್ಯೋಗಿಕ್ ವಿಕಾಸ್ ಸಹಕಾರಿ ಸೊಸೈಟಿ ಧೋಬಿಯವರನ್ನು ಪ್ರತಿನಿಧಿಸುವ ಸಂಸ್ಥೆ. ಮಹಾಲಕ್ಷ್ಮಿ ಧೋಬಿ ಘಾಟ್‌ನ ವಾರ್ಷಿಕ ವಹಿವಾಟು ಸುಮಾರು ೧೦೦ ಕೋಟಿ ರೂಪಾಯಿ.[][] ಪ್ರತಿ ದಿನ ೧೮ ರಿಂದ ೨೦ ಗಂಟೆಗಳ ಕಾಲ, ೭೦೦೦ ಕ್ಕೂ ಹೆಚ್ಚು ಜನರು ಕಾಂಕ್ರೀಟ್ ವಾಶ್ ಪೆನ್‌ಗಳಲ್ಲಿ ಬಟ್ಟೆಗಳನ್ನು ಸ್ಕ್ರಬ್, ಡೈ ಮತ್ತು ಬ್ಲೀಚ್ ಮಾಡುತ್ತಾರೆ. ನಂತರೆ ಹಗ್ಗಗಳಲ್ಲಿ ಒಣಗಿಸಿ, ಅಚ್ಚುಕಟ್ಟಾಗಿ ಮಡಚಿ ಮತ್ತು ಬಟ್ಟೆಗಳನ್ನು ನಗರದ ವಿವಿಧ ಭಾಗಗಳಿಗೆ ಸಾಗಿಸುತ್ತಾರೆ. ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು (೧೦೦,೦೦೦) ಬಟ್ಟೆಗಳನ್ನು ಒಗೆಯಲಾಗುತ್ತದೆ. ಧೋಬಿಗಳು ಕೊಲಾಬಾದಿಂದ ವಿರಾರ್‌ವರೆಗೆ ನಗರದ ಎಲ್ಲಾ ಮೂಲೆಗಳಿಂದ ಬಟ್ಟೆಗಳನ್ನು ಸಂಗ್ರಹಿಸುತ್ತಾರೆ.[][]

೨೦೧೧ ರಲ್ಲಿ ಧೋಬಿ ಘಾಟ್ 'ಹೆಚ್ಚಿನ ಜನರು ಒಂದೇ ಸ್ಥಳದಲ್ಲಿ ಕೈಯಲ್ಲಿ ಬಟ್ಟೆ ಒಗೆಯುವ' ಅಡಿಯಲ್ಲಿ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮಾಡಿತು. ೨೦೧೩ ರಲ್ಲಿ ಧೋಬಿ ಕಲ್ಯಾಣ್ ಮತ್ತು ಔದ್ಯೋಗಿಕ್ ವಿಕಾಸ್ ಕೋ - ಆಪ್ ಸೊಸೈಟಿ ಲಿಮಿಟೆಡ್‌‌‌‌‌ಗೆ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ಮತ್ತು ವರ್ಲ್ಡ್ ಅಮೇಜಿಂಗ್ ರೆಕಾರ್ಡ್ಸ್ ಅವರು ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರವನ್ನು ನೀಡಿತು.

ಬಾಪುರಾವ್ ಜಗತಾಪ್ ರಸ್ತೆಯಿಂದ ಜಾಕೋಬ್ ವೃತ್ತದ ಮೂಲಕ ಮಹಾಲಕ್ಷ್ಮಿ ರೈಲು ನಿಲ್ದಾಣಕ್ಕೆ ಹೋಗಬಹುದು. ನಂತರ ಅಲ್ಲಿಂದ ಧೋಬಿ ಘಾಟ್‌ಗೆ ಹೋಗಬಹುದು. ಇದು ಸಹ ಒಂದು ಪ್ರವಾಸಿ ತಾಣವಾಗಿದೆ.

ಮಹಾಲಕ್ಷ್ಮಿ ಧೋಬಿ ಘಾಟ್ ಎಂದೂ ಕರೆಯಲ್ಪಡುವ ಇದನ್ನು ಮಹಾಲಕ್ಷ್ಮಿ ರೈಲು ನಿಲ್ದಾಣದಿಂದ ಸುಲಭವಾಗಿ ವೀಕ್ಷಿಸಬಹುದು. ಧೋಬಿ ಘಾಟ್‌ಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮುಂಜಾನೆ ಮತ್ತು ಮಧ್ಯಾಹ್ನ. ಮುಂಜಾನೆಯ ಸಮಯದಲ್ಲಿ ಧೋಬಿಗಳು ಬಟ್ಟೆ ತೊಳೆಯುವುದನ್ನು ನೋಡಬಹುದು. ಮಧ್ಯಾಹ್ನದ ಸಮಯವು ಬಟ್ಟೆಗಳು ಒಣಗಿಸುವುದನ್ನು ನೋಡಲು ಸೂಕ್ತ ಸಮಯವಾಗಿದೆ.

ಉಲ್ಲೇಖನಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "the world's largest open air laundry". The Globe and Mail. 8 November 2010. Retrieved 28 August 2014.
  2. https://web.archive.org/web/20120927050713/http://travel.nytimes.com/travel/guides/asia/india/mumbai/21960/dhobi-ghat/attraction-detail.html
  3. https://timesofindia.indiatimes.com/city/mumbai/did-you-know-dhobi-ghat-still-makes-rs-100cr-a-year/articleshow/57352659.cms
  4. https://economictimes.indiatimes.com/nation-world/mumbais-dhobi-ghat-makes-rs-100-crore-a-year/guinness-world-records/slideshow/57372989.cms?from=mdr
  5. https://www.worldrecordsindia.com/2013/04/27/worlds-largest-outdoor-laundry-dhobi-ghat/
  6. https://www.knocksense.com/mumbai/birthed-during-colonialism-and-awash-with-history-heres-a-peek-into-mumbais-133-yo-dhobi-ghat