ಮಹಾಮೇಘವಾಹನ ರಾಜವಂಶ
ಮಹಾಮೇಘವಾಹನ ರಾಜವಂಶ (ಕ್ರಿ.ಪೂ. 250ರ ದಶಕದಿಂದ ಕ್ರಿ.ಶ. ೫ನೇ ಶತಮಾನ) ಮೌರ್ಯ ಸಾಮ್ರಾಜ್ಯದ ಪತನದ ನಂತರ ಕಲಿಂಗವನ್ನು (ಆಧುನಿಕ ಒಡಿಶಾ ರಾಜ್ಯ) ಆಳುತ್ತಿದ್ದ ಒಂದು ಪ್ರಾಚೀನ ರಾಜವಂಶವಾಗಿತ್ತು. ಈ ರಾಜವಂಶದ ಮೂರನೇ ಅರಸ ಖಾರವೇಲನು ತನ್ನ ಹಾಥಿಗುಂಫಾ ಶಾಸನದಿಂದ ಪರಿಚಿತನಾಗಿದ್ದಾನೆ.
ಖಾರವೇಲನು ಜೈನ ಧರ್ಮವನ್ನು ಪ್ರೋತ್ಸಾಹಿಸಿದನು, ಆದರೆ ಇತರ ಧರ್ಮಗಳ ವಿರುದ್ಧ ತಾರತಮ್ಯ ಮಾಡಲಿಲ್ಲ.[೧][೨]
ಉದಯಗಿರಿ ಮತ್ತು ಖಂಡಗಿರಿ ಗುಹೆಗಳು ಮಹಾಮೇಘವಾಹನ ರಾಜವಂಶದ ಕೃತಿಯ ಅತ್ಯಂತ ಪ್ರಖ್ಯಾತ ಉದಾಹರಣೆಯಾಗಿವೆ. ಈ ಗುಹೆಗಳನ್ನು ಕ್ರಿ.ಪೂ. ೨ನೇ ಶತಮಾನದಲ್ಲಿ ಖಾರವೇಲನ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿತ್ತು. ಉದಯಗಿರಿ ೧೮ ಗುಹೆಗಳನ್ನು ಹೊಂದಿದೆ, ಖಂಡಗಿರಿ ೧೫ ಗುಹೆಗಳನ್ನು ಹೊಂದಿದೆ. ಹಾಥಿಗುಂಫಾ ಗುಹೆಯು ಹಾಥಿಗುಂಫಾ ಶಾಸನವನ್ನು ಹೊಂದಿದೆ. ಹಾಥಿಗುಂಫಾ ಶಾಸನವು ಬ್ರಾಹ್ಮಿ ಅಕ್ಷರಗಳಲ್ಲಿ ಆಳವಾಗಿ ಕೆತ್ತಲಾದ ಹದಿನೇಳು ಸಾಲುಗಳನ್ನು ಹೊಂದಿದೆ ಮತ್ತು ಜೈನ ಣಮೋಕರ ಮಂತ್ರದಿಂದ ಆರಂಭವಾಗುತ್ತದೆ. ಉದಯಗಿರಿಯಲ್ಲಿ, ಹಾಥಿಗುಂಫಾ (ಗುಹೆ ೧೪) ಮತ್ತು ಗಣೇಶಗುಂಫಾ (ಗುಹೆ ೧೦) ತಮ್ಮ ಶಿಲ್ಪಗಳು ಹಾಗೂ ಉಬ್ಬು ಶಿಲ್ಪಗಳ ಕಲಾ ನಿಧಿಗಳು ಜೊತೆಗೆ ಅವುಗಳ ಐತಿಹಾಸಿಕ ಪ್ರಾಮುಖ್ಯದ ಕಾರಣ ವಿಶೇಷವಾಗಿ ಪ್ರಸಿದ್ಧವಾಗಿವೆ. ರಾನಿ ಕಾ ನೌರ್ (ಗುಹೆ 1) ಕೂಡ ಒಂದು ವ್ಯಾಪಕವಾಗಿ ಕೆತ್ತಲಾದ ಗುಹೆ ಮತ್ತು ಶಿಲ್ಪ ಪಟ್ಟಿಗಳಿಂದ ಸವಿವರವಾಗಿ ಅಲಂಕೃತವಾಗಿವೆ. ಖಂಡಗಿರಿ ತನ್ನ ಶಿಖರದಿಂದ ಭುವನೇಶ್ವರದ ಒಳ್ಳೆ ದೃಶ್ಯವನ್ನು ಒದಗಿಸುತ್ತದೆ. ಅನಂತ ಗುಹೆಯು (ಗುಹೆ 3) ಸ್ತ್ರೀಯರು, ಆನೆಗಳು, ಕ್ರೀಡಾಪಟುಗಳು, ಮತ್ತು ಹೂವುಗಳನ್ನು ಹೊತ್ತೊಯ್ಯುತ್ತಿರುವ ಹೆಬ್ಬಾತುಗಳ ಕೆತ್ತಿದ ಆಕೃತಿಗಳನ್ನು ಚಿತ್ರಿಸುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Hampa Nagarajaiah (1999). A History of the Early Ganga Monarchy and Jainism. Ankita Pustaka. p. 10. ISBN 978-81-87321-16-3.
- ↑ Kailash Chand Jain (2010). History of Jainism. D. K. Print World (P) Limited. p. 437. ISBN 978-81-246-0547-9.