ಮಹಾಪ್ರಬಂಧ ಅಥವಾ ಪ್ರೌಢಪ್ರಬಂಧವು ಶೈಕ್ಷಣಿಕ ಪದವಿ ಅಥವಾ ವೃತ್ತಿಪರ ಅರ್ಹತೆಗೆ ಉಮೇದುವಾರಿಕೆಯನ್ನು ಬೆಂಬಲಿಸಿ, ಕೃತಿಕಾರನ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ತೋರಿಸಿ ಮಂಡಿಸಲಾದ ಒಂದು ದಸ್ತಾವೇಜು. ಕೆಲವು ದೇಶಗಳಲ್ಲಿ/ವಿಶ್ವವಿದ್ಯಾಲಯಗಳಲ್ಲಿ, "ಮಹಾಪ್ರಬಂಧ" ಶಬ್ದವನ್ನು ಸ್ನಾತಕ ಅಥವಾ ಸ್ನಾತಕೋತ್ತರ ಪಠ್ಯದ ಭಾಗವಾಗಿ ಬಳಸಿದರೆ, "ಪ್ರೌಢಪ್ರಬಂಧ" ಪದವನ್ನು ಸಾಮಾನ್ಯವಾಗಿ ಡಾಕ್ಟರೇಟ್ ಪದವಿಗೆ ಬಳಸಲಾಗುತ್ತದೆ, ಮತ್ತು ಉಳಿದ ದೇಶಗಳಲ್ಲಿ, ಇದರ ವಿರುದ್ಧ ನಿಜವಾಗಿದೆ. ಪ್ರೌಢಪ್ರಬಂಧ ಶಬ್ದವನ್ನು ಕೆಲವೊಮ್ಮೆ ಶೈಕ್ಷಣಿಕ ಪದವಿಯನ್ನು ಪಡೆಯುವುದಕ್ಕೆ ಸಂಬಂಧವಿಲ್ಲದೆ ಒಂದು ಶಾಸ್ತ್ರಗ್ರಂಥವನ್ನು ವಿವರಿಸಲು ಬಳಸಬಹುದು.