ಮಹಾನದಿ ಭಾರತಛತ್ತೀಸ್‌ಗಢ ರಾಜ್ಯದ ಉನ್ನತಪ್ರಾಂತ್ರ್ಯದಲ್ಲಿ ರಾಯ್ ಪುರ ಜಿಲ್ಲೆಗೆ ಸೇರಿದ ಸಿಂಹಾವ ಎಂಬಲ್ಲಿ ಉಗಮಿಸುತ್ತದೆ. ಮುಂದೆ ಒಡಿಶಾ ರಾಜ್ಯದ ಮೂಲಹ ಪ್ರವಹಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಮಹಾನದಿಯ ಉದ್ದ ಸುಮಾರು ೮೬೦ ಕಿ.ಮೀ.ಗಳು. ಈ ನದಿಯ ಜಲಾನಯನ ಪ್ರದೇಶಗಳು ಮಹಾರಾಷ್ಟ್ರ, ಛತ್ತೀಸ್‌ಗಢ, ಝಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಭಾಗಗಳು. ಭಾರತದ ದೊಡ್ಡನದಿಗಳ ಪೈಕಿ ಒಂದಾದ ಮಹಾನದಿಗೆ ಅಡ್ಡಲಾಗಿ ಸಂಬಾಲ್ಪುರದ ಬಳಿ ಜಗತ್ತಿನ ಅತ್ಯಂತ ದೊಡ್ಡ ಮಣ್ಣುಗಾರೆಯ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಗೆ ಹಿರಾಕುಡ್ ಆಣೆಕಟ್ಟು ಎಂಬ ಹೆಸರು. ಮಹಾನದಿ ಕಣಿವೆಯ ಫಲವತ್ತಾದ ನೆಲದಲ್ಲಿ ಭತ್ತವನ್ನು ವ್ಯಾಪಕವಾಗಿ ಬೆಳೆಯಲಾಗುತ್ತದೆ. ಮಹಾನದಿಯು ಬ್ರಾಹ್ಮಣಿ ನದಿಯೊಂದಿಗೆ ಸಂಗಮಿಸಿ ಬಂಗಾಳ ಕೊಲ್ಲಿಯನ್ನು ಸೇರುವೆಡೆಯಲ್ಲಿ ಬೃಹತ್ ಮುಖಜಭೂಮಿಯನ್ನು ಸೃಷ್ಟಿಸಿದೆ. ಈ ಮುಖಜಭೂಮಿಯಲ್ಲಿ ಜಂಬೂದ್ವೀಪದ ಅತ್ಯಂತ ವಿಸ್ತಾರವಾದ ಮ್ಯಾಂಗ್ರೋವ್ ಅರಣ್ಯಗಳಿವೆ. ಅಲ್ಲದೆ ಈ ಪ್ರದೇಶವು ಪೂರ್ವ ಭಾರತದ ಭತ್ತದ ಕಣಜವೆಂದು ಕರೆಯಲ್ಪಡುವುದು.

ನ್ಯಾಸಾ ಉಪಗ್ರಹದಿಂದ ಮಹಾನದಿಯ ನೋಟ.
Mahanadi River
The Mahanadi River Delta at False Point.
Mahanadi River near Satkosia Tiger Reserve, Odisha
Plum-headed parakeet at Tikarpara on the bank of river Mahanadi.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
"https://kn.wikipedia.org/w/index.php?title=ಮಹಾನದಿ&oldid=1116183" ಇಂದ ಪಡೆಯಲ್ಪಟ್ಟಿದೆ