ಮಹಾಕವಿ ಕಾಳಿದಾಸ (ಚಲನಚಿತ್ರ)
ಮಹಾಕವಿ ಕಾಳಿದಾಸ, ೧೯೫೫ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಇದು ಕೆ.ಆರ್.ಸೀತಾರಾಮ್ ಶಾಸ್ತ್ರಿಯವರ ನಿರ್ದೇಶನದ ಚೊಚ್ಚಲ ಚಲನಚಿತ್ರ.
ಮಹಾಕವಿ ಕಾಳಿದಾಸ (ಚಲನಚಿತ್ರ) | |
---|---|
ಮಹಾಕವಿ ಕಾಳಿದಾಸ | |
ನಿರ್ದೇಶನ | ಕು.ರಾ.ಸೀತಾರಾಮಶಾಸ್ತ್ರಿ |
ನಿರ್ಮಾಪಕ | ಹೊನ್ನಪ್ಪ ಭಾಗವತರ್ |
ಪಾತ್ರವರ್ಗ | ಹೊನ್ನಪ್ಪ ಭಾಗವತರ್ ಬಿ.ಸರೋಜಾದೇವಿ ಜಿ.ವಿ.ಅಯ್ಯರ್, ರಾಘವೇಂದ್ರರಾವ್, ನರಸಿಂಹರಾಜು |
ಸಂಗೀತ | ಹೊನ್ನಪ್ಪ ಭಾಗವತರ್ |
ಛಾಯಾಗ್ರಹಣ | ಎ.ಎನ್.ಪರಮೇಶ್ |
ಬಿಡುಗಡೆಯಾಗಿದ್ದು | ೧೯೫೫ |
ಚಿತ್ರ ನಿರ್ಮಾಣ ಸಂಸ್ಥೆ | ಲಲಿತಕಲಾ ಫಿಲಂಸ್ |
೪-೫ನೇ ಶತಮಾನದಲ್ಲಿ ಜೀವಿಸಿದ್ದ ಸಂಸ್ಕೃತ ಕವಿ ಮಹಾಕವಿ ಕಾಳಿದಾಸನ ದಂತಕಥೆ ಆಧರಿತ ಈ ಚಿತ್ರದಲ್ಲಿ ಶ್ರೀ ಹೊನ್ನಪ್ಪ ಭಾಗವತರ್ ರವರು ಕಾಳಿದಾಸನ ಪಾತ್ರವನ್ನು ನಿರ್ವಹಿಸಿದ್ದರು. ನರಸಿಂಹರಾಜು,ಬಿ.ರಾಘವೇಂದ್ರ ರಾವ್ ಹಾಗು ಬಿ.ಸರೋಜದೇವಿಯವರು ಈ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಬಿ.ಸರೋಜದೇವಿಯವರ ಚೊಚ್ಚಲ ಚಲನಚಿತ್ರ.
ಈ ಚಿತ್ರವನ್ನು ೧೯೬೦ರಲ್ಲಿ, ಅಕ್ಕಿನೇನಿ ನಾಗೇಶ್ವರ್ ರಾವ್ ಅಭಿನಯದಲ್ಲಿ ಮಹಾಕವಿ ಕಾಳಿದಾಸು ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. ೧೯೬೬ರಲ್ಲಿ ಮತ್ತೆ ತಮಿಳಿನಲ್ಲಿ, ಶಿವಾಜಿ ಗಣೆಶನ್ ಅಭಿನಯದ ಮಹಾಕವಿ ಕಾಳಿದಾಸ್ ಎಂಬ ಹೆಸರಿನಲ್ಲಿ ರಿಮೇಕ್ ಗೊಂಡಿತು.
ಈ ಚಿತ್ರವು ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಒಂದು ಬಹುಮುಖ್ಯ ಹೆಗ್ಗುರುತು ಎಂದು ಗುರುತಿಸಲ್ಪಟ್ಟಿದೆ.[೧]
ಕಥೆ
ಬದಲಾಯಿಸಿಗುರುವಿನಿಂದ ಶಾಪಗ್ರಸ್ಥನಾದ ಒಬ್ಬ ಶ್ರೀಮಂತ ಅಜ್ಞಾನಿಯು ಹೇಗೆ ಸಂಸ್ಕೃತದ ಒಬ್ಬ ಮಹಾನ್ ಕವಿಯಾಗಿ ಬೆಳೆದ ಎಂಬ ಹಂದರವುಳ್ಳ ಕಥೆ. ಈ ಚಿತ್ರವು ೪-೫ನೇ ಶತಮಾನದಲ್ಲಿ ಜೀವಿಸಿದ್ದ ಸಂಸ್ಕೃತದ ಮಹಾಕವಿ ಕಾಳಿದಾಸನ ದಂತಕಥೆಯ ಮೇಲೆ ಅಧಾರಿತವಾಗಿದೆ.
ತಾರಾಗಣ
ಬದಲಾಯಿಸಿ- ಹೊನ್ನಪ್ಪ ಭಾಗವತರ್
- ಬಿ.ರಾಘವೇಂದ್ರ ರಾವ್
- ನರಸಿಂಹರಾಜು
- ಬಿ.ಸರೋಜದೇವಿ
- ರಾಜಸುಲೋಚನ
- ಬಿ.ಕೆ.ಈಶ್ವರಪ್ಪ