ಮಲ್ಲಿ ಮಸ್ತಾನ್ ಬಾಬು
ಮಲ್ಲಿ ಮಸ್ತಾನ್ ಬಾಬು (40ವರ್ಷ) ಆಂಧ್ರಪ್ರದೇಶದ ಪರ್ವತಾರೋಹಿ. 172 ದಿನಗಳಲ್ಲಿ, ಜಗತ್ತಿನ ಏಳು ಪರ್ವತ ಶೃಂಗಗಳನ್ನು ಅತ್ಯಂತ ವೇಗವಾಗಿ ಏರಿದ ಗಿನ್ನಿಸ್ ದಾಖಲೆಯನ್ನೂ ಹೊಂದಿದ್ದರು. ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿದ ಮೊದಲಿನ ತೆಲುಗು ಪರ್ವತಾರೋಹಿ. ಪರ್ವತಾರೋಹಣ ಬಾಬು ಅವರ ಅಚ್ಚುಮೆಚ್ಚಿನ ಕೆಲಸವಾಗಿತ್ತು. 40 ವರ್ಷ ವಯಸ್ಸಿನ ಮಸ್ತಾನ್ ಅವರು ಅನೇಕ ದಾಖಲೆಗಳನ್ನು ನಿರ್ಮಿಸಿ, ಯುವ ಪರ್ವತಾರೋಹಿಗಳಿಗೆ ಸ್ಪೂರ್ತಿಯಾಗಿದ್ದಾರೆ.
ಮಲ್ಲಿ ಮಸ್ತಾನ್ ಬಾಬು | |
---|---|
Born | 1974, ಸೆಪ್ಟೆಂಬರ್ 3 ಗಾಂಧಿ ಜನಸಂಘ, ಸಂಗಂ, ನೆಲ್ಲೂರು ಜಿಲ್ಲೆ, ಆಂಧ್ರ ಪ್ರದೇಶ |
Nationality | ಭಾರತೀಯ |
Citizenship | ಭಾರತೀಯ |
Education | ಬಿ.ಟೆಕ್, ಎಂ.ಟೆಕ್, ಎಂ.ಬಿ.ಎ |
Alma mater | ರಾಷ್ಟ್ರೀಯ ತಾಂತ್ರಿಕ ಸಂಸ್ಥೆ ಜೆಮ್ಶೇಠಪುರ, ಐ.ಐ.ಟಿ ಖರಗ್ ಪುರ, ಐ.ಐ.ಎಂ ಕೊಲ್ಕತ್ತಾ |
Occupation | ಸಾಹಸಿ ಹಾಗು ಪ್ರೇರಣಾದಾಯಿ ಮಾತುಗಾರ |
Website | http://www.1stindian7summits.com |
ಜನನ - ಪ್ರಾಥಮಿಕ ವಿದ್ಯಾಭ್ಯಾಸ
ಬದಲಾಯಿಸಿಮಲ್ಲಿ ಮಸ್ತಾನ್ ಬಾಬು ಗಾಂಧಿ ಜನ ಸಂಘ ಗ್ರಾಮದಲ್ಲಿ ಹುಟ್ಟಿದವರು. ಇದು ಆಂಧ್ರಪ್ರದೇಶಕ್ಕೆ ಸೇರಿದ ನೆಲ್ಲೂರು ಜಿಲ್ಲೆಯ ಸಂಗಂ ಎನ್ನುವ ಮಂಡಲದಲ್ಲಿ ಇದ್ದ ಪುಟ್ಟ ಊರು. ತಂದೆ ಮಸ್ತಾನಯ್ಯ, ತಾಯಿ ಸುಬ್ಬಮ್ಮನವರು. ಇವರಿಗೆ ಮಸ್ತಾನ್ ಬಾಬು 5ನೆ ಸಂತಾನ. ಮಸ್ಜಾನ್ ಬಾಬು ಹುಟ್ಟಿದ ತಾರೀಖು 3 ಸೆಪ್ಟೆಂಬರ್ 1974. ಇವರದು ಒಕ್ಕಲತನ ಮಾಡುವ ಕುಟುಂಬ. ಮಸ್ಜಾನ್ ಬಾಬು 1 ತರಗತಿಯಿಂದ 3 ನೆತರಗತಿಯವರೆಗೆ ತಮ್ಮ ಸ್ವಗ್ರಾಮದಲ್ಲೇ ಎಲಿಮೆಂಟರೀ ಪಾಠಶಾಲೆಯಲ್ಲೇ ಓದಿದ್ದಾರೆ. 4 ಮತ್ತು 5ನೇ ತರಗತಿಗಳನ್ನು ಸಂಗಂನಲ್ಲಿರುವ ಒಂದು ಖಾಸಗಿ ಪಾಠಶಾಲೆಯಲ್ಲಿ ಓದಿದ್ದಾರೆ. 1985ರಲ್ಲಿ ವಿಜಯನಗರಂ ಜಿಲ್ಲೆ(ಆಂಧ್ರಪ್ರದೇಶ)ದಲ್ಲಿರುವ ಕೊರು ಕೊಂಡ ಸೈನಿಕ ಸ್ಕೂಲ್ ನಲ್ಲಿ ಸೇರಿ, 6 ನೇ ತರಗತಿಯಿಂದ ಇಂಟರ್ ವರೆಗೆ ಅದೇ ಸ್ಕೂಲಿನಲ್ಲಿ ಓದಿದ್ದಾರೆ.
ಕಾಲೇಜುನಲ್ಲಿ ವಿದ್ಯಾಭ್ಯಾಸ
ಬದಲಾಯಿಸಿಮಾಸ್ತಾನ್ ಬಾಬು ಇಂಟರ್ ವಿದ್ಯೆ ಆದ ಮೇಲೆ ಜಂಷೆಡಪುರದಲ್ಲಿಯ ನಿಟ್ ನಲ್ಲಿ (NIT) ಎಲೆಕ್ಟ್ರಿಕಲ್ ಇಂಜನಿಯರಿಂಗ್ (1992-96)ಪಾಸು ಮಾಡಿದ್ದರು. ಆಮೇಲೆ ಖರಾಗ ಪುರ ಐ.ಐ.ಟಿ ನಲ್ಲಿ ಎಂ.ಟೆಕ್ (1996-98) ಪದವೀಧರರಾಗಿದ್ದಾರೆ. 2002-2004 ವರೆಗೆ ಕಲ್ಕತ್ತಾದಲ್ಲಿ ರುವ ಐ.ಐ.ಎಂ ಕಾಲೇಜಿನಲ್ಲಿ ಪೀ.ಜಿ.ಡಿ.ಎ. (PGDA)ಕೋರ್ಸು ಅಭ್ಯಾಸ ಮಾಡಿ ಪದವೀಧರರಾಗಿದ್ದಾರೆ.
ಉದ್ಯೋಗ
ಬದಲಾಯಿಸಿಸತ್ಯಂ ಕಂಪ್ಯೂಟರ್ಸ್ ನಲ್ಲಿ ೧೯೯೮-೨೦೦೦ ವರಗೆ ಸಾಪ್ಟ್ ವೇರ್ ಇಂಜನಿಯರ್ ರಾಗಿ ಕೆಲಸ ಮಾಡಿದ್ದಾರೆ.
ಕುಟುಂಬ
ಬದಲಾಯಿಸಿಇವರ ಸೋದರಿ ದೊರಸಾನಮ್ಮ ತಿರುಪತಿಯಲ್ಲಿ ಡಾಕ್ಟರ್ ಆಗಿ ಕೆಲಸವನ್ನು ಮಾಡುತ್ತಲಿದ್ದಾರೆ[೧]. ಅಣ್ಣ ಪೆದ್ದ ಮಸ್ತಾನಯ್ಯ ತೆಲಂಗಾಣ ರಾಷ್ಟ್ರದಲ್ಲಿ ಟೀಚರ್ ಉದ್ಯೋಗ ಮಾಡುತ್ತಲಿದ್ದಾರೆ.
ಪರ್ವತಾರೋಹಣ
ಬದಲಾಯಿಸಿ- ವಿಶ್ವದ ಏಳು ಎತ್ತರದ ಪರ್ವತಗಳನ್ನು ವೇಗವಾಗಿ ಏರಿದ ಕೀರ್ತಿ ಬಾಬು ಅವರಿಗೆ ಸಲ್ಲುತ್ತದೆ. ಅಂಟಾರ್ಕ್ಟಿಕಾದಲ್ಲಿನ ಅತಿ ಎತ್ತರದ ಶಿಖರ ಮೌಂಟ್ ವಿನ್ಸನ್ ಮಾಸ್ಸಿಫ್ ಏರಿದ ಮೊದಲ ಭಾರತೀಯ ಮತ್ತು ಎವರೆಸ್ಟ್ ಹತ್ತಿದ ಆಂಧ್ರಪ್ರದೇಶದ ಮೊದಲ ವ್ಯಕ್ತಿ ಅವರಾಗಿದ್ದರು[೨]
- ಆಂಡಿಸ್ ಪರ್ವತ ಶ್ರೇಣಿಯಲ್ಲಿ ಸಾಹಸ ಕೈಗೊಳ್ಳುವುದಕ್ಕಾಗಿ ದಕ್ಷಿಣ ಅಮೆರಿಕ ದೇಶಗಳನ್ನು ಸುತ್ತಲು ಅವರು ಸ್ಪ್ಯಾನಿಷ್ ಭಾಷೆಯನ್ನು ಕಲಿತಿದ್ದರು. 2006ರಲ್ಲಿ 172 ದಿನಗಳಲ್ಲಿ ವಿಶ್ವದ ಏಳು ಅತಿ ಎತ್ತರದ ಶೃಂಗಗಳನ್ನೇರಿ ಮಲ್ಲಿ ಮಸ್ತಾನ್ ಬಾಬು ದಾಖಲೆ ಬರೆದಿದ್ದರು[೩].
2006ರಲ್ಲಿ 172 ದಿನಗಳಲ್ಲಿ ವಿಶ್ವದ ಏಳು ಅತಿ ಎತ್ತರದ ಶೃಂಗಗಳನ್ನೇರಿದ ವಿವರಗಳು
ಶಿಖರದ ಹೆಸರು | ತಾರೀಖು | ವಾರದ ದಿನ | ಶಿಖರದ ಎತ್ತರ ಮೀಟರುಗಳು |
ವಿನ್ಸನ್ ಮಾನಿಫ್(ಅಂಟಾ ರ್ಕೀಟಿಕಾ ) | 19ಜನವರಿ,20 06 | ಗುರುವಾರ | 4897 |
ಆಕೊನ್ ಕಗುವಾ(ದಕ್ಷಿಣ ಅಮೇರಿಕ) | 17 ಫೆಬ್ರವರಿ,2006 | ಶುಕ್ರವಾರ | 6962 |
ಕಿಲೀಮಂಜರೋ(ಆಫ್ರಿಕಾ) | 15 ಮಾರ್ಚಿ2006 | ಬುಧುವಾರ | 5895 |
ಕೋಸ್ ಕುಯಿಜ್ ಕೋ (ಆಸ್ಟ್ರೇಲಿಯಾ) | 1ಏಪ್ರಿಲ್20 06 | ಶನಿವಾರ | 2228 |
ಎವರೆಸ್ಟು(ಆಸಿಯಾ) | 21 ಮೇ2006 | ಭಾನುವಾರ | 8850 |
ಎಲ್ ಬ್ರಸ್ (ಐರೋಪಾ) | 13 ಜೂನ್2006 | ಮಂಗಳವಾರ | 5642 |
ಡೆನಾಲಿ (ಉತ್ತರ ಅಮೇರಿಕಾ ) | 10 ಜುಲೈ20 06 | ಸೋಮವಾರ | 6194 |
ವಿಶ್ವದ ಎಲ್ಲ ಏಳು ಗಿರಿಶೃಂಗಗಳನ್ನು ಏರಿದ ಭಾರತೀಯ ಎಂಬ ಖ್ಯಾತಿಗೆ ಆಂಧ್ರಪ್ರದೇಶದ ಮಲ್ಲಿ ಮಸ್ತಾನ್ ಬಾಬು ಸಹ ಸೇರಿದ್ದರು.
ಪರ್ವತಾರೋಹಣದಲ್ಲಿನ ವಿಶಿಷ್ಟತೆಗಳು
ಬದಲಾಯಿಸಿ- 14 ರಾಷ್ಟಗಳಲ್ಲಿ, 14 ದಿನಗಳಲ್ಲಿ ಮ್ಯಾರಥಾನ್ ಮಾಡಿ ರೆಕಾರ್ಡ್ ಸ್ಥಾಸಿದ್ದಾರೆ.
- ಏಳು ಶಿಖರಗಳನ್ನು ಏರಿದ ಮೊದಲನೆಯ ಭಾರತೀಯ ಮಸ್ತಾನ್ ಬಾಬು.
- ಒಸಿಯಾನಾದ ಕಾರ್ಸುಟೆಂಜ್ ಪಿರಮಿಡ್ಡನ್ನು ಏರಿದ ಮೊದಲನೆಯ ಭಾರತೀಯ ಮತ್ತು ಆಂಧ್ರಪ್ರದೇಶದ ಪೌರರಾಗಿದ್ದಾರೆ.
- ಅಂಟಾರ್ಟಿಕಾದ ವಿನ್ಸನ್ ಮಾನಿಫ್ ಪರ್ವತ ಶಿಖರವನ್ನು ಏರಿದ ಮೊದಲನೆಯ ಭಾರತೀಯದ ಮತ್ತು ಆಂಧ್ರಪ್ರದೇಶ ಪೌರ/ಪ್ರಜೆ.
ಪುರಸ್ಕಾರ
ಬದಲಾಯಿಸಿಇಂಡಿಯನ್ ಇನಿಸ್ಟ್ ಟ್ಯೂಟ ಆಫ್ ಮೆನೆಜ್ ಮೆಂಟ್ , ಕಲ್ಕತ್ತಾದವರಿಂದ 2011 ರಲ್ಲಿ 'Distinguished Alumnus ಅವಾರ್ಡ್ ಕೊಡಲಾಗಿದೆ[೪].
ಆಂಡಿಸ್ ಪರ್ವತಾರೋಹಣ-ಮರಣ
ಬದಲಾಯಿಸಿ- ಭಾರತ ದೇಶದಿಂದ ಡಿಸೆಂಬರ್ 16, 2014 ನ ಅರ್ಜೆಂಟಿನಾ-ಚಿಲೀ ದೇಶಗಳ ಮಧ್ಯದಲ್ಲಿದ್ದಂತ ಆಂಡಿಸ್ ಪರ್ವತವನ್ನು ಏರುವುದಕ್ಕಾಗಿ ತನ್ನ 4 ಸ್ನೇಹಿತರು ಜೊತೆ ವಿದೇಶಕ್ಕೆ ಹೊರಟು, ಮಾರ್ಚ್ 22 ತಾರೀಕು ಪರ್ವತಾರೋಹಣ ಪ್ರಾರಂಭ ಮಾಡಿದ್ದಾರೆ. ಚಿಲೀ ದೇಶದ ಎರಡನೇ ಎತ್ತರವಾದ ಸೇರ್ರೋ ಟ್ರೇಸ್ ಪರ್ವತವನ್ನು( 6749 ಮೀಟರುಗಳ ಎತ್ತರ) ಒಬ್ಬಂಟಿಯಾಗಿ ಏರುವುದಕ್ಕೆ ಬೇಸ್ ಕ್ಯಾಂಪ್ ನಿಂದ ಪ್ರಯಾಣ ಪ್ರಾರಂಭ ಮಾಡಿದ್ದಾರೆ. 24 ದಿನಾಂಕ, ಸ್ನೇಹಿತರ ಜೊತೆ ಮಾತನಾಡಿದ್ದಾರೆ.
- ಅದೇ ದಿನ ಸಾಯಂಕಾಲ ಸಮಯಕ್ಕೆಲ್ಲಾ ಬರುತ್ತೇನೆಂದು ತಿಳಿಸಿದ್ದಾರೆ. ಆದರೆ ಸಾಯಂಕಾಲ ಸಮಯಕ್ಕೆ ಅವರ ಜಿಪಿಎಸ್ ನೆಟ್ ವರ್ಕ್ ಕೆಲಸ ಮಾಡಿಲ್ಲ. ಸ್ನೇಹಿತರಿಗೂ ಏನೂ ಸಮಾಚಾರವು ಬಂದಿರುವುದಿಲ್ಲ. 31 ಮಾರ್ಚ್, ಚಿಲೀ –ಅರ್ಜೆಂಟಿನಾ ಪ್ರಭುತ್ವಗಳ ರೆಸ್ಕು ಟೀಮ್ ಗಳು ಹೆಲಿಕಾಪ್ಟರ್ ಏರಿಯಲ್ ಸರ್ವೇ ಪ್ರಾರಂಭಿಸಿದ್ದಾರೆ.
- ವಾತಾವರಣ ಅನುಕೂಲವಾಗಿ ಇಲ್ಲದೆಯೇ ಕಾರಣ ಪತ್ತೆ ಹಚ್ಚುವುದಕ್ಕೆ ವಿಳಂಭವಾಗಿದೆ ಕಡೆಗೆ ಬೇಸ್ ಕ್ಯಾಂಪ್ ಗೆ ೫೦೦ ಮೀಟರುಗಳ ಎತ್ತರದಲ್ಲಿ (ಸಮುದ್ರ ಮಟ್ಟದಿಂದ 59೦೦ ಮೀಟರುಗಳು) ಅವರ ಮೃತ ದೇಹ ಪತ್ತೆಯಾಯಿತು. ಇದೇ ವಿಷಯವನ್ನು ಭಾರದ ವಿದೇಶ ಅಧಿಕಾರಿ ಅಕ್ಬರುದ್ದೀನ್ ಪತ್ರಿಕಾ ಸುದ್ದಿಯಲ್ಲಿ(4-4-20 15) ತಿಳಿಸಿದ್ದಾರೆ. ಭಾರತ ಕಾಲಮಾನ ಪ್ರಕಾರ ಶುಕ್ರವಾರ ರಾರ್ತಿ ಒಂದು ಗಂಟೆಗೆ ಮಾಸಾನ್ ಬಾಬು ಮೃತದೇಹವನ್ನು ಪತ್ತೆಮಾಡಲಾಗಿದೆ.
- ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಸ್ತಾನ್ ಬಾಬು ಆಕಸ್ಮಿಕವಾಗಿ ಮರಣ ಹೊಂದಿರುವುದಕ್ಕೆ ಸಂತಾಪವನ್ನು ವ್ಯಕ್ತ ಪಡಿಸಿದ್ದಾರೆ[೫]. ಹಾಗೆಯೇ ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಚಂದ್ರಬಾಬುನಾಯ್ಡು ಅವರು ತಮ್ಮ ಸಂತಾಪವನ್ನು ತಿಳಿಸಿದ್ದಾರೆ[೬]..
ಅಂತಿಮ ಸಂಸ್ಕಾರ
ಬದಲಾಯಿಸಿಮಸ್ತಾನ್ ಬಾಬು ಯವರ ಮೃತದೇಹ ವನ್ನು ೨೪-೦೪-೨೦೧೫ ಉದಯಕಾಲಕ್ಕೆ ಅರ್ಜೆಂಟಿನನಿಂದ ಚೆನ್ಯೈ ತರಲಾಗಿದೆ.ಅದೇ ದಿವಸ ಸಾಂಯಂಕಾಲಕ್ಕೆ ಮಸ್ತಾನ್ ಬಾಬು ದೇಹವನ್ನು ಸ್ವಗ್ರಾಮ ಗಾಂಧಿಸಂಘಕ್ಕೆ ತಂದಿದ್ದಾರೆ.೨೫-೦೪-೨೦೧೫ ದಿವಸ ಮಧ್ಯಹನ್ನ ೧೨.೦೦ ಗಂಟಕ್ಕೆ ಆಂಧ್ರ ರಾಷ್ಟ್ರ ಪ್ರಭುತ್ವ ಪೋಲಿಸು ಲಾಂಛನ ಸಹಿತವಾಗಿ ಅವರ ದೇಹವನ್ನು ಖನನ ಮಾಡಲಾಗಿದೇ.ಹಲಹಾರು ರಾಷ್ಟ್ರಮಂತ್ರಿಗಳು,ರಾಜಕಾರಣಿಗಳು ಮತ್ತು ಅಭಿಮಾನಗಳು ಬಂದು ಶ್ರದ್ಧಾಂಜಲಿ ಘಟೀಸಿದ್ದಾರೆ[೭]
ಉಲ್ಲೇಖ
ಬದಲಾಯಿಸಿ- ↑ http://indianexpress.com/article/india/india-others/mountaineer-malli-mastan-found-dead-in-argentina/
- ↑ http://indiatoday.intoday.in/story/malli-mastan-babu-found-dead-andes-mountains-south-america/1/428421.html
- ↑ http://www.ndtv.com/india-news/missing-indian-mountaineer-malli-mastan-babu-found-dead-mountains-retained-its-favourite-child-reads-752137
- ↑ "ಆರ್ಕೈವ್ ನಕಲು". Archived from the original on 2015-04-18. Retrieved 2015-04-07.
- ↑ http://pib.nic.in/newsite/mbErel.aspx?relid=117961
- ↑ http://www.thehindubusinessline.com/news/states/ap-cm-condoles-death-of-mountaineer-malli-mastan-babu/article7068345.ece
- ↑ http://www.ndtv.com/india-news/last-rites-of-mountaineer-malli-mastan-babu-performed-with-state-honours-758164