ಈ ಪುಟವನ್ನು ಸ್ಥಳಾಂತರಿಸಬೇಕಾಗಿದೆ

ಮಲ್ಲಿಕ್ ಅಥವಾ ಮಲ್ಲಿಕ ಅಥವಾ ಮಲ್ಲಿಕಾ... ಇದು ಸಂಸ್ಕೃತ ಪದದಿಂದ ಪರಿಶೋದಿಸಲ್ಪಟ್ಟ ಪದ. ಮಲ್ಲಿಗೆ ಎಂಬುದು ಇದರ ಅರ್ಥ. ಪಾರ್ವತಿಯನ್ನು ಮಲ್ಲಿಕಾ ಎಂದು ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖಿಸಿದ್ದಾರೆ. ಬಹಳಷ್ಟು ಬಳಕೆಯಲ್ಲಿರುವ ಪದ... ಕೆಲವರು ಇದನ್ನು ಮಾಲಿಕ್ ಎಂಬ ಮುಸಲ್ಮಾನ್ ಪದಕ್ಕೆ ಅಪಾರ್ಥ ಮಾಡಿಕೊಂಡಿರುವುದು ಉಂಟು. ಮಾಲಿಕ್ ಎಂಬುದು ಒಡೆಯ ಎಂಬ ಅರ್ಥ ಕೊಡುತ್ತದೆ ಆದರೆ ಮಲ್ಲಿಕ್ ಎಂಬುದು ಮಲ್ಲಿಗೆ ಎಂಬ ಸುಮಧುರ ಅರ್ಥದ ಪದ. ಮಲ್ಲಿಗೆಯು ಗತಪ್ರಪಂಚದ ಉಷ್ಣವಲಯ ಮತ್ತು ಸುಖೋಷ್ಣ ಪ್ರದೇಶಗಳಿಗೆ ಸ್ಥಳೀಯವಾದ ಸುಮಾರು ೨೦೦ ಜಾತಿಗಳಿರುವ ಆಲಿವ್ ಕುಟುಂಬವಾದ ಓಲಿಯಾಸೀದಲ್ಲಿನ ಪೊದೆ ಮತ್ತು ಬಳ್ಳಿಗಳ ಒಂದು ಪ್ರಜಾತಿ. ಬಹುತೇಕ ಜಾತಿಗಳು ಇತರ ಸಸ್ಯಗಳು ಹಾಗೂ ಗೇಟುಗಳು ಅಥವಾ ಬೇಲಿಗಳಂತಹ ರಚನೆಗಳ ಮೇಲೆ ಬಳ್ಳಿಗಳಾಗಿ ಬೆಳೆಯುತ್ತವೆ. ಎಲೆಗಳು ನಿತ್ಯಹರಿದ್ವರ್ಣ ಅಥವಾ ಪರ್ಣಪಾತಿಯಾಗಿರಬಹುದು. ಮಲ್ಲಿಗೆ ಹೂವಿನಲ್ಲಿ ಹಲವು ಪ್ರಭೇದಗಳಿದ್ದು, ಅವುಗಳಲ್ಲಿ ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಕಾಕಾಡಾ ಮಲ್ಲಿಗೆ ಹೀಗೆ ಅನೇಕ ತರಹಗಳಿದ್ದರೂ ಮೈಸೂರು ಮಲ್ಲಿಗೆ ವಿಶ್ವ ವಿಖ್ಯಾತಿ ಪಡೆದುಕೊಂಡಿದೆ. ಬೋರ್‌ವೆಲ್ ನೀರಾವರಿಯಿಂದ ಸುಮಾರು ಒಂದು ಎಕರೆ ಹೊಲದಲ್ಲಿ ದುಂಡು ಮಲ್ಲಿಗೆಯ ಬಳ್ಳಿಗಳನ್ನು ನಾಟಿ ಮಾಡಿ ಬೆಳೆ ಬೆಳೆಯುತ್ತಿದ್ದಾರೆ. ಬಳ್ಳಿಯನ್ನು ನಾಟಿ ಮಾಡಿದ ಮೇಲೆ ಸುಮಾರು 6-7 ತಿಂಗಳಲ್ಲಿ ಮಲ್ಲಿಗೆಯ ಬಳ್ಳಿಗಳು ಹೂವುಗಳು ಬಿಡಲು ಪ್ರಾರಂಭಿಸುತ್ತವೆ. ವರ್ಷಕ್ಕೆ 2 ಬಾರಿ ಮಾತ್ರ ದುಂಡು ಮಲ್ಲಿಗೆ ಬಳ್ಳಿಗಳು ಹೂವು ಬಿಡುತ್ತವೆ. ಮೊದಲು ಅಕ್ಟೋಬರ್ ಮತ್ತು ಸೆಪ್ಟೆಂಬರ್‌ನಲ್ಲಿ ನಂತರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೂವುಗಳು ಅರಳಲು ಪ್ರಾರಂಭಿಸುವ ದಿನಗಳಾಗಿವೆ.




"https://kn.wikipedia.org/w/index.php?title=ಮಲ್ಲಿಕ್&oldid=718448" ಇಂದ ಪಡೆಯಲ್ಪಟ್ಟಿದೆ