ಮಲ್ಲಿಕಾರ್ಜುನ ಹಿರೇಮಠ


ಕನ್ನಡದ ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಪ್ರವಾಸಕಥನಕಾರ ಹಾಗೂ ಕವಿ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಇನ್ನಿತರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಪ್ರೊ. ಮಲ್ಲಿಕಾರ್ಜುನ ಹಿರೇಮಠ
ಚಿತ್ರ:ಪ್ರೊ. ಮಲ್ಲಿಕಾರ್ಜುನ ಹಿರೇಮಠ
ಸಂಗಾತಿಲಲಿತಾ ಹಿರೇಮಠ (ನಿವೃತ್ತ ಶಿಕ್ಷಕಿ)
ಮಕ್ಕಳುಗೀತಾ, ಮುಕ್ತಾ, ರಾಜೇಶ್ವರಿ, ಚೈತನ್ಯ
ಕುಟುಂಬಚೇತನಾ (ಸೊಸೆ)

ಕೊಪ್ಪಳ ಜಿಲ್ಲೆ/ತಾಲೂಕಿನ ಬಿಸರಹಳ್ಳಿ ಗ್ರಾಮದಲ್ಲಿ ೦೫-೦೬-೧೯೪೬ರಂದು ಜನಿಸಿದರು. ಇವರ ತಂದೆ ವೀರಭದ್ರಯ್ಯ ಗಾಂವಟಿ ಶಾಲಾ ಶಿಕ್ಷಕರಾಗಿದ್ದರು. ತಾಯಿ ಪಾರ್ವತಿದೇವಿ. ಪ್ರಾಥಮಿಕ ಶಿಕ್ಷಣವನ್ನು ಬಿಸರಹಳ್ಳಿ ಮತ್ತು ಕೊಪ್ಪಳದಲ್ಲಿ ಪೂರೈಸಿದರು. ಮಾಧ್ಯಮಿಕ ಶಿಕ್ಷಣವನ್ನು ದಾರವಾಡದ ಆರ್. ಎಲ್. ಎಸ್ ಹೈಸ್ಕೂಲಿನಲ್ಲಿ, ಪದವಿ ಶಿಕ್ಷಣವನ್ನು ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ, ಎಂ.ಎ ಇಂಗ್ಲಿಷ್ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ದಾರವಾಡದಿಂದ ಪಡೆದಿರುತ್ತಾರೆ.

೧೯೬೭ ರಿಂದ ಬಾಗಲಕೋಟ ಜಿಲ್ಲೆಯ ಹುನುಗುಂದದ ವಿ.ಎಂ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ನಂತರ ಅಲ್ಲಿಯೇ ಮಾರ್ಚ್ ೨೦೦೧ ರಿಂದ ಜೂನ್ ೨೦೦೪ರ ವರೆಗೆ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ದಾರವಾಡದಲ್ಲಿ ವಾಸವಾಗಿದ್ದಾರೆ.

ಕೃತಿಗಳು

ಬದಲಾಯಿಸಿ

ಅಕ್ವೇರಿಯಂ ಮೀನು- ಕವನ ಸಂಕಲನ

ಬದಲಾಯಿಸಿ

ಮುದ್ರಣ: 1 (1974), 2 (2018)

ಅಮೀನಪುರದ ಸಂತೆ- ಕಥೆಗಳು

ಬದಲಾಯಿಸಿ

ಮುದ್ರಣ- 1 (1990), 2 (1991), 3 (1997), 4 (2003)


ಜ್ಞಾನೇಶ್ವರನ ನಾಡಿನಲ್ಲಿ- ಪ್ರವಾಸ ಕಥನ

ಬದಲಾಯಿಸಿ

ಮುದ್ರಣ- 1 (1997), 2 (2018)


ಅಂತರ್ಗತ – ವಿಮರ್ಶೆ

ಬದಲಾಯಿಸಿ

ಮುದ್ರಣ- 1 (2000)


ಹವನ – ಕಾದಂಬರಿ

ಬದಲಾಯಿಸಿ

ಮುದ್ರಣ- 1 (2001), 2 (2012), 3 (2019)

ತೆಲುಗು (2004) ಹಾಗೂ ಇಂಗ್ಲಿಷ್ (2019) ಭಾಷೆಗಳಿಗೆ ಅನುವಾದಿತವಾಗಿದೆ.


ಅಭಿಮುಖ – ವಿಮರ್ಶೆ

ಬದಲಾಯಿಸಿ

ಮುದ್ರಣ- 1 (2012)


ಮೊಲೆವಾಲು ನಂಜಾಗಿ – ಕಥೆಗಳು

ಬದಲಾಯಿಸಿ

ಮುದ್ರಣ- 1 (2010), 2 (2016)


ಮೂರು ಸಂಜಿ ಮುಂದ ಧಾರವಾಡ- ಲಲಿತ ಪ್ರಬಂಧಗಳು

ಬದಲಾಯಿಸಿ

ಮುದ್ರಣ-1 (2016), 2 (2020)

ಡಾ ಪು.ತಿ.ನ ಪ್ರಬಂಧ ಪುರಸ್ಕೃತ-2019.


ಗಿರಡ್ಡಿ ಗೋವಿಂದರಾಜ : ವ್ಯಕ್ತಿ-ಅಭಿವ್ಯಕ್ತಿ  - ವಿಮರ್ಶೆ

ಬದಲಾಯಿಸಿ

ಮುದ್ರಣ- 1 (2016)

ಪ್ರ: ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು


ಹಾವಳಿ -ಕಾದಂಬರಿ

ಬದಲಾಯಿಸಿ

ಮುದ್ರಣ -1 (2021), 2 (2024)

ಮಾಸ್ತಿ ಕಾದಂಬರಿ ಪುರಸ್ಕಾರ ಮತ್ತು ಶ್ರೀಮತಿ ರಾಜೇಶ್ವರಿ ಬರಗೂರು ಪುಸ್ತಕ ಪ್ರಶಸ್ತಿ.


ಜೀವಶ್ರುತಿ- ವ್ಯಕ್ತಿ ಚಿತ್ರಗಳು

ಬದಲಾಯಿಸಿ

ಮೊದಲ ಮುದ್ರಣ: 2022

ಸಂಪಾದನೆ

ಬದಲಾಯಿಸಿ

1. ತಿರುಳ್ಗನ್ನಡ

ಬದಲಾಯಿಸಿ

ಅಖಿಲ ಭಾರತ 62 ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಕೊಪ್ಪಳ- 1993

2. ಬಾಗಿಲು

ಬದಲಾಯಿಸಿ

ಪ್ರಧಾನ ಸಂಪಾದಕರು

ಸ್ವಾಗತ ಸಮಿತಿ, ಅಖಿಲಭಾರತ 68 ನೆಯ ಕನ್ನಡ ಸಾಹಿತ್ಯ ಸಮ್ಮೇಳನ- 2000

ಬಾಗಲಕೋಟೆ ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕ್ರತಿಕ ಪರಂಪರೆ ಕುರಿತ ಆಕರಗ್ರಂಥ.

3. ಸತ್ಯಾಶ್ರಯ

ಬದಲಾಯಿಸಿ

ಪ್ರಧಾನ ಸಂಪಾದಕರು

ಚಾಲುಕ್ಯ ಉತ್ಸವ ಸಮಿತಿ- 2003

4. ಹಿಡಿಯದ ಹಾದಿ- ಸಮೀಕ್ಷೆ

ಬದಲಾಯಿಸಿ

ಮುದ್ರಣ- 1 (2006)

ಪ್ರ: ಮನೋಹರ ಗ್ರಂಥಮಾಲಾ, ಧಾರವಾಡ

5. ಮರೆಯಲಾಗದ ಕಥೆಗಳು- ರಾಜಶೇಖರ ನೀರಮಾನ್ವಿ

ಬದಲಾಯಿಸಿ

ಸಂಪಾದಕರು

ಮುದ್ರಣ: 1 (2012)

6. ಬಸವರಾಜ ಕಟ್ಟಿಮನಿಯವರ ಕಾದಂಬರಿಗಳ ಸಮೀಕ್ಷೆ

ಬದಲಾಯಿಸಿ

ನಾಲ್ಕು ಸಂಪುಟಗಳು- ಪ್ರಧಾನ ಸಂಪಾದಕ

(ಸಂಪಾದಕರು: ಡಾ. ಬಸವರಾಜ ಸಾದರ, ಡಾ ಕೆ .ಆರ್.  ದುರ್ಗಾದಾಸ, ಡಾ. ರಾಮಕೃಷ್ಣ ಮರಾಠೆ, ಡಾ. ಬಾಳಾ ಸಾಹೇಬ ಲೋಕಾಪುರ)

7. ಕಿತ್ತೂರು ಸಂಸ್ಥಾನ ದಾಖಲೆಗಳು

ಬದಲಾಯಿಸಿ

-ಪ್ರಧಾನ ಸಂಪಾದಕ (ಸಂಪುಟ ೧,೨) (ಸಂಪಾದಕ: ಡಾ. ಎ.ಬಿ ವಗ್ಗರ)

ಅನುವಾದ

ಬದಲಾಯಿಸಿ
  • ಅಸ್ಸಾಮಿ ಗದ್ಯ ಮತ್ತು ಬಂಗಾಲಿ ಗದ್ಯ ಸಮೀಕ್ಷೆಯ ಲೇಖನಗಳು (ಭಾರತೀಯ ಸಾಹಿತ್ಯ ಸಮೀಕ್ಷೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು)
  • ಆ್ಯಂಟನ್ ಚೆಕಾಫನ ಕಥೆಗಳು (ಬಿಡಿಯಾಗಿ)

ಮಲ್ಲಿಕಾರ್ಜುನ ಹಿರೇಮಠರ ಕುರಿತ ಕೃತಿ

ಬದಲಾಯಿಸಿ

ಮಲ್ಲಿಕಾರ್ಜುನ ಹಿರೇಮಠರ ಕೃತಿಗಳ ಅವಲೋಕನ

ಬದಲಾಯಿಸಿ

ಸಂಪಾದನೆ: ಎಚ್.ಎಸ್. ಪಾಟೀಲ,

ಮುದ್ರಣ- 1 (2010), ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ, ಕಲಬುರಗಿ


ಮಲ್ಲಿಕಾರ್ಜುನ ಹಿರೇಮಠರ ಅಭಿನಂದನ ಗ್ರಂಥ

ಬದಲಾಯಿಸಿ

ಸಂಬಂಧ: ಮಲ್ಲಿಕಾರ್ಜುನ ಹಿರೇಮಠರ ವ್ಯಕ್ತಿತ್ವ ಮತ್ತು ಸಾಹಿತ್ಯ

ಪ್ರಧಾನ ಸಂಪಾದಕರು: ಗಿರಡ್ಡಿ ಗೋವಿಂದರಾಜ

ಸಂಪಾದಕರು: ಎಚ್. ಎಸ್. ವೆಂಕಟೇಶಮೂರ್ತಿ, ರಾಘವೇಂದ್ರ ಪಾಟೀಲ

ಪ್ರಕಾಶಕರು: ಸಂಗಾತ

ಪ್ರಶಸ್ತಿಗಳು/ ಗೌರವಗಳು

ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

  • ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ- 2008
  • ಕ ಸಾ ಪ ಗೌರವ ಪ್ರಶಸ್ತಿ - 2023
  • ಮಾಸ್ತಿ ಕಾದಂಬರಿ ಪುರಸ್ಕಾರ - 2022
  • ಶ್ರೀಮತಿ ರಾಜೇಶ್ವರಿ ಬರಗೂರು ಪುಸ್ತಕ ಪ್ರಶಸ್ತಿ – 2021
  • ಡಾ. ಪು.ತಿ.ನ ಪ್ರಬಂಧ ಪುರಸ್ಕಾರ - 2019
  • ‘ಹವನ’ ಕಾದಂಬರಿಗೆ ಪ್ರಶಸ್ತಿಗಳು
  1. ಮುದ್ದಣ ದತ್ತಿನಿಧಿ ಪ್ರಶಸ್ತಿ, ‘ವರ್ಷದ ಅತ್ಯುತ್ತಮ ಗದ್ಯಕೃತಿ’, ಕ.ಸಾ.ಪ. ಬೆಂಗಳೂರು- 2002
  2. ಹಾವೇರಿಯ ಹಾವನೂರು ಪ್ರತಿಷ್ಠಾನ ಪ್ರಶಸ್ತಿ- 2002
  3. ಸಮೀರವಾಡಿ ಪ್ರಶಸ್ತಿ- 2002
  4. ಸಂಗಮ ಪ್ರಶಸ್ತಿ- 2014
  • ಕನ್ನಡ ಪುಸ್ತಕ ಪರಿಷತ್ತು, ಬಾಗಲಕೋಟ ಜಿಲ್ಲಾ ಆರನೆಯ ಸಮ್ಮೇಳನದ ಅಧ್ಯಕ್ಷ- 2003
  • ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ, ಜಿಲ್ಲಾ ಕಲಾವಿಕಾಸ ಪರಿಷತ್, ಕೊಪ್ಪಳ- 2007
  • “ಕನ್ನಡ ಸಾಹಿತ್ಯಕಾರ” ಪ್ರಶಸ್ತಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ- 2009
  • ಗಳಗನಾಥ – ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಪ್ರಶಸ್ತಿ- 2012
  • ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನಮಠ ಇಲಕಲ್ಲ, ಸನ್ಮಾನ ಪತ್ರ
  • ನೀರಾವರಿ ಟ್ರಸ್ಟ್ ಪ್ರಶಸ್ತಿ- 2016
  • ಧಾರವಾಡ ತಾಲೂಕು ಆರನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ- 2018
  • ಧಾರವಾಡದಲ್ಲಿ ನಡೆದ 68ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ- 2018
  • ‘ಲಕ್ಕವ್ವನ ಮಂದಿ’ ಮತ್ತು ‘ಅಮೀನಪುರದ ಸಂತೆ’ ಕಥೆಗಳು ಆಕಾಶವಾಣಿ ಧಾರವಾಡ ಹಾಗೂ ದೂರದರ್ಶನ (ಚಂದನ) ದಲ್ಲಿ ನಾಟಕಗಳಾಗಿ ಪ್ರಸಾರಗೊಂಡಿವೆ.
  • 'ಹವನ' ರಂಗ ಪ್ರಯೋಗ ಸ್ನೇಹರಂಗ ಇಳಕಲ್ಲ.
  • ಆಕಾಶವಾಣಿಯಲ್ಲಿ ಚಿಂತನಗಳು, ಕಾವ್ಯವಾಚನ, ಸಂದರ್ಶನ
  • ಹಲವಾರು ವಿಚಾರಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಹಾಗೂ ಅಧ್ಯಕ್ಷತೆ.
  • ಅಕಾಡೆಮಿಯ ವಿಮರ್ಶಾ ಕಮ್ಮಟದ ಸಹ ನಿರ್ದೇಶಕ
  • ಕನ್ನಡ ಸಾಹಿತ್ಯ ಪರಿಷತ್ ಕಥಾ ಕಮ್ಮಟದಲ್ಲಿ ನಿರ್ದೇಶಕ
  • ಹಲವಾರು ಸಾಹಿತ್ಯ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿ

ಸಂಘಟನೆ

ಬದಲಾಯಿಸಿ
  • ಅಧ್ಯಕ್ಷ, ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ.
  • ‘ಸಮಾಹಿತ’ ಸಾಹಿತ್ಯ ಪತ್ರಿಕೆ, ಸಹಸಂಪಾದಕ
  • ಧಾರವಾಡ ಸಾಹಿತ್ಯ ಸಂಭ್ರಮ, ಸಲಹೆಗಾರ
  • ಸಾಹಿತ್ಯ ಸಂಸ್ಕ್ರತಿಗೆ ಸಂಬಂಧಪಟ್ಟಂತೆ ಹಲವಾರು ಕಮ್ಮಟಗಳು, ವಿಚಾರ ಸಂಕಿರಣಗಳ ಸಂಘಟನೆ
  • ಚೇತನ ಕಲಾಕ್ಷೇತ್ರದ ಸಂಸ್ಥಾಪಕ
  • ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಸಂಚಾಲಕ- 1994
  • ಅಧ್ಯಕ್ಷ, ಗಿರಡ್ಡಿ ಗೋವಿಂದರಾಜ ಫೌಂಡೇಶನ
  • ಅಧ್ಯಕ್ಷ, ಎಸ್.ಎಸ್. ಭೂಸನೂರಮಠ ಪ್ರತಿಷ್ಠಾನ