ಮರುವಿಮೆ ಇದು ಒಂದು ವಿಮಾ ಕಂಪನಿಯು (ವಿಮಾಗಾರ ) ಮತ್ತೊಂದು ವಿಮಾ ಕಂಪನಿಯಿಂದ (ಮರುವಿಮೆಗಾರ ) ಅಪಾಯದ ನಿರ್ವಹಣೆಯ ಒಂದು ವಿಧಾನವಾಗಿ, ವಿಮೆಗಾರರಿಂದ ಮರುವಿಮೆಗಾರರಿಗೆ ನಷ್ಟ ಅಥವಾ ಅಪಾಯವನ್ನು ಹಸ್ತಾಂತರಿಸುವುದಕ್ಕೆ ಮಾಡಿಕೊಳ್ಳಲ್ಪಟ್ಟ ಒಂದು ವಿಮೆಯಾಗಿದೆ. ಮರುವಿಮೆಗಾರ ಮತ್ತು ವಿಮೆಗಾರ ರು ಒಂದು ಮರುವಿಮೆಯ ಒಪ್ಪಂದ ವನ್ನು ಮಾಡಿಕೊಳ್ಳುತ್ತಾರೆ, ಅದು ಮರುವಿಮೆಗಾರ ನು ವಿಮೆಗಾರನ ನಷ್ಟವನ್ನು ಯಾವ ಸಂದರ್ಭದಲ್ಲಿ ಅಥವಾ ಯಾವ ನಿಬಂಧನೆಗಳ ಅಡಿಯಲ್ಲಿ ಭರ್ತಿಮಾಡಿಕೊಡಬೇಕು (ಹೆಚ್ಚುವರಿ ನಷ್ಟ ಅಥವಾ ನಷ್ಟಕ್ಕೆ ಸೂಕ್ತ ಪ್ರಮಾಣಾನುಗುಣವಾಗಿ ) ಎಂಬುದರ ವಿವರವನ್ನು ನೀಡುತ್ತದೆ. ಮರುವಿಮೆಗಾರ ನು ಒಂದು ಮರುವಿಮೆಯ ಕಂತ ನ್ನು ವಿಮೆಗಾರ ನಿಂದ ಪಡೆದುಕೊಳ್ಳುತ್ತಾನೆ, ಮತ್ತು ವಿಮಾಗಾರ ನು ಸಾವಿರಾರು ವಿಮಾ ಪಾಲಿಸಿಗಳನ್ನು ನೀಡುತ್ತಾನೆ.

ಉದಾಹರಣೆಗೆ, ಒಬ್ಬ ವಿಮೆಗಾರ ನು ಪ್ರತಿ ಪಾಲಿಸಿಯು $೧ ಮಿಲಿಯನ್ ಪಾಲಿಸಿ ಮಿತಿಯನ್ನು ಹೊಂದಿರುವ ಒಂದು ಸಾವಿರ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುತ್ತಾನೆ ಎಂದಿಟ್ಟುಕೊಳ್ಳಿ. ಸೈದ್ಧಾಂತಿಕವಾಗಿ (ತತ್ವಕ್ಕೆ ಅನುಗುಣವಾಗಿ), ವಿಮೆಗಾ ರನು ಪ್ರತಿ ಪಾಲಿಸಿಯ ಮೇಲೆ $೧ ಮಿಲಿಯನ್ ನಷ್ಟವನ್ನು ಅನುಭವಿಸುತ್ತಾನೆ – ಅದು ಒಟ್ಟಾರೆಯಾಗಿ $೧ ಬಿಲಿಯನ್ ಆಗುತ್ತದೆ. ಆದ್ದರಿಂದ ಸ್ವಲ್ಪ ಮಟ್ಟದ ನಷ್ಟವನ್ನು ಮರುವಿಮಾ ಕಂಪನಿಗೆ (ಮರುವಿಮೆಗಾರ ) ಹಸ್ತಾಂತರಿಸುವುದು ಉತ್ತಮವಾದ ವಿಧಾನವಾಗಿದೆ, ಏಕೆಂದರೆ ವಿಮೆಗಾರನ ನಷ್ಟ ವನ್ನು ಕನಿಷ್ಠಗೊಳಿಸುತ್ತದೆ.

ಇಲ್ಲಿ ಮರುವಿಮೆಯ ಎರಡು ಮೂಲಭೂತ ವಿಧಾನಗಳಿವೆ:

 1. ಐಚ್ಛಿಕ ಅಥವಾ ಅನುಮೋದಕ ಮರುವಿಮೆ (Facultative Reinsurance) ಐಚ್ಛಿಕ ಮರುವಿಮೆಯಲ್ಲಿ, ವಿಮೆಯನ್ನು ಅನುಮತಿಸುವ ಕಂಪನಿಯು ವಿಮೆಗೆ ಅನುಮತಿಸುತ್ತದೆ ಮತ್ತು ಮರುವಿಮೆಗಾರನು ಒಂದು ನಿರ್ದಿಷ್ಟವಾಗಿ ಸೂಚಿಸಲ್ಪಟ್ಟ ವಿಮಾ ಪಾಲಿಸಿಯಿಂದ ಅನುಮೋದಿಸಲ್ಪಟ್ಟ ನಷ್ಟದ ಎಲ್ಲಾ ಅಥವಾ ಒಂದು ಭಾಗವನ್ನು ತೆಗೆದುಕೊಳ್ಳುತ್ತದೆ. ಐಚ್ಛಿಕ ಮರುವಿಮೆಯು ಮರುವಿಮೆ ಮಾಡಿಸಲ್ಪಟ್ಟ ಪ್ರತಿ ವಿಮಾ ಒಪ್ಪಂದಕ್ಕೆ ಪ್ರತ್ಯೇಕವಾಗಿ ಸಮಾಲೋಚಿಸಲ್ಪಡುತ್ತದೆ. ಐಚ್ಛಿಕ ಮರುವಿಮೆಯು ಸಾಮಾನ್ಯವಾಗಿ ಅನುಮೋದಕ ಕಂಪನಿಯಿಂದ ಅವರ ಮರುವಿಮೆಯ ಒಪ್ಪಂದಗಳಿಂದ ಅನುಮೋದಿಸಲ್ಪಟ್ಟಿರದ ವೈಯುಕ್ತಿಕ ಅಪಾಯಗಳನ್ನು ಖರೀದಿಸುತ್ತದೆ, ಇದು ಅವರ ಮರುವಿಮೆಯ ಒಪ್ಪಂದಗಳ ಹಣದ ಮಿತಿಗಳ ಮತ್ತು ಅಸಾಮಾನ್ಯವಾದ ನಷ್ಟಗಳಿಗಿಂತ ಹೆಚ್ಚಿನ ಮೊತ್ತಕ್ಕೆ ಖರೀದಿಸುತ್ತಾರೆ. ಹೊಣೆಗಾರಿಕೆಯ ವೆಚ್ಚಗಳು ಮತ್ತು, ನಿರ್ದಿಷ್ಟವಾಗಿ, ನೌಕರವರ್ಗದ ವೆಚ್ಚಗಳು ಐಚ್ಛಿಕ ವ್ಯವಹಾರದ ಮೇಲೆ ಬರೆಯಲ್ಪಟ್ಟ ವಿಮೆಯ ಕಂತಿಗಿಂತ ತುಲನಾತ್ಮಕವಾಗಿ ಹೆಚ್ಚಾಗಿರುತ್ತವೆ ಏಕೆಂದರೆ ಪ್ರತಿ ನಷ್ಟವೂ ಕೂಡ ವೈಯುಕ್ತಿಕ ಹೊಣೆಗಾರಿಕೆಯನ್ನು ಹೊಂದಿರುತ್ತದೆ ಮತ್ತು ನಿಯಂತ್ರಿಸಲ್ಪಡುತ್ತದೆ. ಆದಾಗ್ಯೂ, ಮರುವಿಮೆ ಮಾಡಿಸಲ್ಪಟ್ಟ ಪ್ರತಿ ನಷ್ಟವನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಹೊಣೆಗಾರನು (ಖಾತರಿದಾರನು) ವಿಮೆಯಲ್ಲಿನ ನಷ್ಟವನ್ನು ಹೆಚ್ಚು ನಿಖರವಾಗಿ ಪ್ರತಿನಿಧಿಸುವುದಕ್ಕೆ ಒಪ್ಪಂದವನ್ನು ಮೌಲ್ಯಮಾಪನ ಮಾಡುವುದರ ಸಂಭವನೀಯತೆಯನ್ನು ಹೆಚ್ಚಿಸುತ್ತದೆ.
 1. ಒಪ್ಪಂದದ ಮರುವಿಮೆ (Treaty Reinsurance) ಇದು ವಿಮಾಗಾರ ಮತ್ತು ಮರುವಿಮಾಗಾರ ರು ಒಂದು ಮರುವಿಮೆಯ ಒಪ್ಪಂದ ವನ್ನು ನಿರ್ಮಿಸುವುದಕ್ಕೆ ಮತ್ತು ಅದನ್ನು ಕಾರ್ಯಗತಗೊಳಿಸುವುದಕ್ಕೆ ಅವಶ್ಯಕವಾದ ಮರುವಿಮೆಯ ಒಂದು ವಿಧಾನವಾಗಿದೆ. ಮರುವಿಮೆಗಾರ ನು ನಂತರದಲ್ಲಿ ಆ ಒಪ್ಪಂದದ ಮಿತಿಯೊಳಗೆ ಬರುವ ಎಲ್ಲ ವಿಮಾ ಪಾಲಿಸಿಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ. ಒಪ್ಪಂದದ ಮರುವಿಮೆಯಲ್ಲಿ ಎರಡು ಮೂಲಭೂತ ವಿಧಾನಗಳು ಅಸ್ತಿತ್ವದಲ್ಲಿವೆ:
 • ನಿಯತಾಂಶ ಪಾಲು ಒಪ್ಪಂದ ಮರುವಿಮೆ, ಮತ್ತು
 • ಹೆಚ್ಚುವರಿ ನಷ್ಟದ ಒಪ್ಪಂದ ಮರುವಿಮೆ.

ಹಿಂದಿನ ೩೦ ವರ್ಷಗಳಲ್ಲಿ ಸ್ವತ್ತುಗಳು ಮತ್ತು ದುರ್ಘಟನೆಗಳ ವಿಭಾಗಗಳಲ್ಲಿ ನಿಯತಾಂಶ ಪಾಲಿನ ವಿಧಾನದಿಂದ ಹೆಚ್ಚುವರಿ ನಷ್ಟ ದ ವಿಧಾನದವರೆಗೆ ಒಂದು ಮಹತ್ತರ ಬದಲಾವಣೆಯು ಕಂಡುಬಂದಿತು.

ಕಾರ್ಯಚಟುವಟಿಕೆಗಳುಸಂಪಾದಿಸಿ

ಹೆಚ್ಚಿನ್ಜ ಎಲ್ಲಾ ವಿಮಾ ಕಂಪನಿಗಳು ಒಂದು ಮರುವಿಮೆಯ ಯೋಜನೆಯನ್ನು ಹೊಂದಿವೆ. ಈ ಯೋಜನೆಯ ಅಂತಿಮ ಉದ್ದೇಶವೆಂದರೆ ಅವರ ನಷ್ಟಕ್ಕೆ ಒಳಗಾಗುವಿಕೆಯನ್ನು ಒಂದು ಮರುವಿಮೆಗಾರ ಅಥವಾ ಮರುವಿಮೆಗಾರರ ಒಂದು ಗುಂಪಿಗೆ ವರ್ಗಾಯಿಸುವ ಮೂಲಕ ತಮ್ಮ ನಷ್ಟವನ್ನು ಕಡಿಮೆಗೊಳಿಸಿಕೊಳ್ಳುವುದಾಗಿದೆ. ಆದ್ದರಿಂದ, ಅವರು ’ಸ್ವಲ್ಪ ಪ್ರಮಾಣದ ನಷ್ಟವನ್ನು ಮರುವಿಮೆಗಾರ ಅಥವಾ ಮರುವಿಮೆಗಾರರ ಒಂದು ಗುಂಪಿಗೆ ವರ್ಗಾಯಿಸುತ್ತಾರೆ’. ರಾಷ್ಟ್ರ ಮಟ್ಟದಲ್ಲಿ (ಯುಎಸ್‌ಎ ಯಲ್ಲಿ) ನಿಯಂತ್ರಿಸಲ್ಪಡುವ ವಿಮೆಯು ಒಬ್ಬ ವಿಮಾಗಾರ ನಿಗೆ ಅವನ ಲಾಭದ (ನಿವ್ವಳ ಮೊತ್ತ) ೧೦% ಗರಿಷ್ಠ ಮಿತಿಯನ್ನು ಹೊಂದಿರುವ ಪಾಲಿಸಿಗಳನ್ನು ಮಾತ್ರ ಮಾರಾಟ ಮಾಡುವ ಪರವಾನಿಗೆಯನ್ನು ನೀಡುತ್ತದೆ, ಹಾಗಾಗದಿದ್ದಲ್ಲಿ ಅಂತಹ ಪಾಲಿಸಿಗಳನ್ನು ಮರುವಿಮೆ ಮಾಡಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ನಷ್ಟದ ವರ್ಗಾವಣೆಸಂಪಾದಿಸಿ

ಮರುವಿಮೆಯ ಜೊತೆಗೆ, ವಿಮಗಾರ ನು ಅವನಿಗೆ ಅನುಮತಿಸಿದ್ದಕ್ಕಿಂತ ಹೆಚ್ಚಿನ ಮೊತ್ತದ ಪಾಲಿಸಿಗಳನ್ನು ಮಾರಾಟ ಮಾಡಬಹುದಾಗಿದೆ, ಆದ್ದರಿಂದ ಅವನು ಕೆಲವು ನಷ್ಟಗಳನ್ನು ಮರುವಿಮೆಗಾರನಿಗೆ ವರ್ಗಾಯಿಸಲಾಗದ ಕಾರಣದಿಂದ ಹೆಚ್ಚಿನ ನಷ್ಟವನ್ನು ತೆಗೆದುಕೊಳ್ಳುವುದಕ್ಕೆ ಅನುಮತಿಯನ್ನು ನೀಡಲ್ಪಟ್ಟಿರುತ್ತಾನೆ. ಮರುವಿಮೆಯು ಒಂದು ತುಲನಾತ್ಮಕವಾದ ಸುಸಂಸ್ಕೃತವಲ್ಲದ ವ್ಯವಹಾರದಿಂದ ಒಂದು ಹೆಚ್ಚಿನ ಪ್ರಮಾಣದ ಸುಸಂಸ್ಕೃತವಾದ ಉದ್ದಿಮೆಯಾಗಿ ಬೆಳೆಯಲ್ಪಟ್ಟಿದೆ. ಹಲವಾರು ಸಂಖ್ಯೆಯ ಮರುವಿಮೆಗಾರರು ನಷ್ಟಕ್ಕೆ ಒಳಗಾಗಿದ್ದು ಮತ್ತು ಆರ್ಥಿಕವಾಗಿ ದುರ್ಬಲರಾಗಿದ್ದೇ ಇದಕ್ಕೆ ಕಾರಣವಾಗಿದೆ. ೨೦೦೦ ನೇ ವರ್ಷದ ನಂತರದಿಂದ, ಮರುವಿಮೆಗಾರರು ವಿಮಾಗಣಿತದ ಮಾದರಿಗಳಲ್ಲಿ ಹೆಚ್ಚು ಭರವಸೆಯನ್ನು ಹೊಂದುವುದಕ್ಕೆ ಪ್ರಾರಂಭಿಸಿದ್ದಾರೆ ಮತ್ತು ಅವರು ತಾವು ಮರುವಿಮೆ ಮಾಡುವ ಕಂಪನಿಗಳ ಪರಿಶೀಲನೆಯನ್ನು ಬಿಗಿಗೊಳಿಸಿದ್ದಾರೆ (ಕಟ್ಟುನಿಟ್ಟುಗೊಳಿಸಿದ್ದಾರೆ). ಅವರು ಕಂಪನಿಯ ಆರ್ಥಿಕ ಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸುತ್ತಾರೆ, ಮರುವಿಮೆ ಮಾಡಬೇಕಾದ ಉದ್ದಿಮೆಯ ಅನುಭವವನ್ನು ಪರೀಕ್ಷಿಸುತ್ತಾರೆ, ಆ ಉದ್ದಿಮೆಯ ಖಾತರಿದಾರರನ್ನು ಪರಿಶೀಲಿಸುತ್ತಾರೆ, ಅವರ ಮೌಲ್ಯಮಾಪನ ಮಾಡುತ್ತಾರೆ, ಮತ್ತು ಇನ್ನೂ ಹಲವು ವಿಷಯಗಳಲ್ಲಿ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ಹೆಚ್ಚಿನ ಎಲ್ಲಾ ಮರುವಿಮೆಗಾರರು ಪ್ರಸ್ತುತದಲ್ಲಿ ವಿಮಾ ಕಂಪನಿಗೆ ಭೇಟಿ ನೀಡುತ್ತಾರೆ ಮತ್ತು ಹೊಣೆಗಾರಿಕೆಯ ಮತ್ತು ಹಕ್ಕಿನ ಕರಡು ಪತ್ರಗಳ ಮತ್ತು ಹಲವಾರು ಸಂಗತಿಗಳನ್ನು ಪರಿಶೀಲಿಸುತ್ತಾರೆ.

ಲಾಭದ ಸುಗಮವಾಗಿಸುವಿಕೆಸಂಪಾದಿಸಿ

ಮರುವಿಮೆಯು ದೊಡ್ದ ಪ್ರಮಾಣದ ನಷ್ಟಗಳನ್ನು ಕಡಿಮೆಗೊಳಿಸುವ ಮೂಲಕ ಮತ್ತು ವ್ಯಾಪ್ತಿಯನ್ನು ನೀಡುವುದಕ್ಕೆ ಅವಶ್ಯಕವಾದ ಬಂಡವಾಳದ ಮೊತ್ತವನ್ನು ಕಡಿಮೆಗೊಳಿಸುವ ಮೂಲಕ ಒಂದು ವಿಮಾ ಕಂಪನಿಯ ಫಲಿತಾಂಶಗಳನ್ನು ಹೆಚ್ಚು ಊಹಿಸುವುದಕ್ಕೆ ಸಾಧ್ಯವಾಗುವಂತೆ ಮಾಡುತ್ತದೆ. ನಷ್ಟದ ಸಂಗತಿಯು ಸಂಭವಿಸಲ್ಪಟ್ಟ ನಷ್ಟದಲ್ಲಿ ಸ್ವಲ್ಪ ನಷ್ಟವನ್ನು ಮರುವಿಮೆಗಾರನು ಭರಿಸುವುದರ ಜೊತೆಗೆ ವರ್ಗಾಯಿಸಲ್ಪಡುತ್ತದೆ.

ಹೆಚ್ಚಳ ಪರಿಹಾರಸಂಪಾದಿಸಿ

ಒಂದು ವಿಮಾ ಕಂಪನಿಯ ಹೊಣೆಗಾರಿಕೆಗಳು ಅದರ ಅಢಾವೆ ಪತ್ರಿಕೆ (ಬ್ಯಾಲೆನ್ಸ್ ಷೀಟ್)ಯ ಮೂಲಕ ನಿರ್ಬಂಧಿತವಾಗಿರುತ್ತದೆ (ಈ ಪರೀಕ್ಷೆಯು ಸಾಲಪಾವತಿ ಶಕ್ತಿಯ ಮಿತಿ ಎಂಬುದಾಗಿ ಕರೆಯಲ್ಪಡುತ್ತದೆ). ಯಾವಾಗ ಆ ಮಿತಿಯು ಸಾಧಿಸಲ್ಪಡುತ್ತದೆಯೋ ಆಗ ಒಬ್ಬ ವಿಮಾಗಾರ ನು ಈ ಕೆಳಗಿನವುಗಳಲ್ಲಿ ಒಂದು ಕಾರ್ಯವನ್ನು ಮಾಡಬಹುದು: ಹೊಸ ಉದ್ದಿಮೆಯ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸುವುದು, ಬಂಡವಳವನ್ನು ಹೆಚ್ಚಿಸುವುದು, ಅಥವಾ "ಹೆಚ್ಚಳ ಪರಿಹಾರ"ವನ್ನು ಖರೀದಿಸುವುದು

ವಿಮಾ ಮಾರಾಟಸಂಪಾದಿಸಿ

ವಿಮಾ ಕಂಪನಿಗಳು ಮರುವಿಮೆಯ ವ್ಯಾಪ್ತಿಯನ್ನು ಖರೀದಿಸುವಾಗ ಸಂಭಾವ್ಯ ನಷ್ಟಕ್ಕಾಗಿ ವಿಮೆ ತೆಗೆದುಕೊಂಡ ಹಣಕ್ಕಿಂತ ಕಡಿಮೆ ಮೊತ್ತಕ್ಕೆ ವಿಮಾ ಮಾರಾಟ ಮಾಡುವುದಕ್ಕೆ ಪ್ರಚೋದಿಸಲ್ಪಟ್ಟಿರುತ್ತಾರೆ, ಅದು ವಿಮೆ ಮಾಡಲ್ಪಟ್ಟ ಅಥವಾ ಸಾಲವನ್ನು ನೀಡಲ್ಪಟ್ಟ ಯಾವುದೇ ರೀತಿಯ ಸ್ವತ್ತಿನ ಜೊತೆಗೆ ಸಂಬಂಧಿತವಾದ ನಷ್ಟದ ಪ್ರದೆಶವಾಗಿರಬಹುದು. ಇದು ಒಂದು ಕಾರು, ಒಂದು ಗಿರವಿ, ಒಂದು ವಿಮೆ (ವೈಯುಕ್ತಿಕ, ಅಗ್ನಿ, ವ್ಯಾಪಾರ, ಇತ್ಯಾದಿ) ಮತ್ತು ಇನ್ನೂ ಹಲವು ಬಗೆಯದ್ದಾಗಿರಬಹುದು.

ಸಾಮಾನ್ಯವಾಗಿ, ಮರುವಿಮಾದಾರ ನು ವಿಮಾದಾರ ನಿಗಿಂತ ಕಡಿಮೆ ಕಂತಿನಲ್ಲಿ ಒಂದು ನಷ್ಟದ ವ್ಯಾಪ್ತಿಯನ್ನು ನಿಗದಿಗೊಳಿಸುವಲ್ಲಿ ಸಮರ್ಥನಾಗಿರುತ್ತಾನೆ ಏಕೆಂದರೆ:

 • ಮರುವಿಮಾದಾರ ನು ಪ್ರಮಾಣದ ಅಥವಾ ಇತರ ಕೆಲವು ಫಲಕಾರಿತ್ವದ ಕಾರಣದಿಂದಾಗಿ ಕೆಲವು ಆಂತರಿಕ ವೆಚ್ಚದ ಲಾಭವನ್ನು ಹೊಂದಿರುತ್ತಾನೆ
 • ಮರುವಿಮಾದಾರರು ತಮ್ಮ ಕಕ್ಷಿದಾರರಿಗಿಂತ ಹೆಚ್ಚು ಸಮರ್ಥರಾಗಿ ದುರ್ಬಲವಾದ ನಿರ್ವಹಣೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಾರೆ. ಇದು ಅವರಿಗೆ ಯಾವುದೇ ನಷ್ಟವನ್ನು ಸರಿಹೊಂದಿಸುವುದಕ್ಕೆ ಕಡಿಮೆ ಬಂಡವಾಳವನ್ನು ಬಳಸಿಕೊಳ್ಳುವಂತೆ ಮಾಡುತ್ತದೆ, ಮತ್ತು ನಷ್ಟದ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಕಡಿಮೆ ಜಾಗರೂಕ ಊಹೆಗಳನ್ನು ಮಾಡುವುದಕ್ಕೆ ಸಹಾಯ ಮಾಡುತ್ತದೆ.
 • ನಿರ್ವಹಣಾ ಮಾನದಂಡಗಳು ಒಂದೇ ರೀತಿಯವಾಗಿದ್ದರೂ ಕೂಡ, ಮರುವಿಮಾದಾರ ನು ಅನುಮೋದಕ ಕಂಪನಿಯು ವಿಧಿಸುವ ಕಂತಿನ ಮೊತ್ತವು ಹೆಚ್ಚಿನ ಪ್ರಮಾಣದಲ್ಲಿ ವಿವೇಕಯುಕ್ತವಾಗಿದೆ ಎಂಬುದಾಗಿ ಆಲೋಚಿಸಿದಲ್ಲಿ, ಅವನು ಅನುಮೋದಕ ಕಂಪನಿಗಿಂತ ಕಡಿಮೆ ವಿಮಾಗಣಿತದ ರಿಸರ್ವ್‌ಗಳನ್ನು ಬಳಸಿಕೊಳ್ಳುವುದಕ್ಕೆ ಸಮರ್ಥನಾಗಿರುತ್ತಾನೆ.
 • ಮರುವಿಮಾದಾರ ನು ಅನುಮೋದಕ ಕಂಪನಿಗಿಂತ (ಸೆಡೆಂಟ್‌ಗಿಂತ) ಸ್ವತ್ತುಗಳಲ್ಲಿ ಮತ್ತು ಪ್ರಮುಖವಾಗಿ ಭಾದ್ಯತೆಗಳಲ್ಲಿ ಒಂದು ಹೆಚ್ಚು ವಿಭಿನ್ನವಾದ ಬಂಡವಾಳ ಪಟ್ಟಿಯನ್ನು ಹೊಂದಿರುತ್ತಾನೆ. ಇದು ಅನುಮೋದಕ ಕಂಪನಿಯು ಮಾತ್ರ ಲಾಭವನ್ನು ತೆಗೆದುಕೊಳ್ಳದೇ ಇರುವಂತೆ ಮಾಡುವುದಕ್ಕೆ ಸಂಭವನೀಯ ನಷ್ಟದ ರಕ್ಷಣೆಗೆ ಸಾಧ್ಯತೆಗಳನ್ನು ಉಂಟುಮಾಡುತ್ತದೆ. ಮರುವಿಮಾದಾರನ ಮೇಲೆ ವಿಧಿಸಲ್ಪಟ್ಟ ಶಾಸನಗಳನ್ನು ಅವಲಂಬಿಸಿ, ಇದು ಅವರು ನಷ್ಟವನ್ನು ಸರಿಹೊಂದಿಸುವುದಕ್ಕೆ ಸ್ವಲ್ಪ ಪ್ರಮಾಣದ ಸ್ವತ್ತುಗಳನ್ನು ಮಾತ್ರ ಹೊಂದಿರಬಹುದು ಎಂಬ ಅರ್ಥವನ್ನು ನೀಡುತ್ತದೆ.
 • ಮರುವಿಮಾದಾರ ನು ವಿಮಾದಾರನಿಗಿಂತ ಹೆಚ್ಚಿನ ಪ್ರಮಾಣದ ನಷ್ಟವನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತಾನೆ.

ಮರುವಿಮಾದಾರರ ಪರಿಣಿತಿಗಳುಸಂಪಾದಿಸಿ

ವಿಮಾ ಕಂಪನಿಯು ಒಂದು ನಿರ್ದಿಷ್ಟ (ವಿಶಿಷ್ಟ) ನಷ್ಟಕ್ಕೆ ಸಂಬಂಧಿತವಾಗಿ ಒಬ್ಬ ಮರುವಿಮಾದಾರ ನ ಪರಿಣಿತಿಯನ್ನು ಪಡೆಯಬಹುದು ಅಥವಾ ಅಸಂಗತವಾದ ನಷ್ಟಗಳ ಸಂದರ್ಭದಲ್ಲಿ ಅವರ ಮೌಲ್ಯಮಾಪನ ಸಾಮರ್ಥ್ಯಗಳನ್ನು ಪಡೆಯಬಹುದು.

ವಿಮಾ ನಷ್ಟಗಳ ಒಂದು ನಿರ್ವಹಣಾತ್ಮಕವಾದ ಮತ್ತು ಲಾಭದಾಯಕವಾದ ಬಂಡವಾಳಗಳ ಪಟ್ಟಿಯ ನಿರ್ಮಾಣಸಂಪಾದಿಸಿ

ಒಂದು ನಿರ್ದಿಷ್ಟ ವಿಧದ ಮರುವಿಮಾ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ವಿಮಾ ಕಂಪನಿಯು ವಿಮೆ ಮಾಡಲ್ಪಟ್ಟ ನಷ್ತಗಳ ಒಂದು ಹೆಚ್ಚು ತುಲನಾತ್ಮಕವಾದ ಮತ್ತು ಏಕಪ್ರಕಾರದ ಬಂಡವಾಳ ಪಟ್ಟಿಯನ್ನು ಮಾಡುವುದಕ್ಕೆ ಸಮರ್ಥವಾಗುತ್ತದೆ. ಇದು ನಿವ್ವಳ ಆಧಾರದ ಮೇಲೆ ಬಂಡವಳ ಪಟ್ಟಿಯ ಫಲಿತಾಂಶಗಳ ಹೆಚ್ಚಿನ ಪ್ರಮಾಣದ ಊಹಿಸುವಿಕೆಗೆ ಸಹಾಯ ಮಾಡುತ್ತದೆ (ಮರುವಿಮೆಯ ನಂತರ) ಮತ್ತು ಅದು ಲಾಭದ ಸರಳೀಕರಣದಲ್ಲಿ ಕಂಡುಬರುತ್ತದೆ. ಲಾಭದ ಸುಗಮವಾಗಿಸುವಿಕೆಯು ಮರುವಿಮೆಯ ಯೋಜನೆಯಲ್ಲಿನ ಒಂದು ಪ್ರಮುಖ ಲಕ್ಷಣವಾಗಿರುವ ಸಂದರ್ಭದಲ್ಲಿ ಬಂಡವಾಳ ಪಟ್ಟಿಯನ್ನು ಸರಿಹೊಂದಿಸುವುದು ಇದರ ಒಂದು ಯಾಂತ್ರಿಕ ವ್ಯವಸ್ಥೆಯಾಗಿದೆ.

ಒಂದು ವಿಮಾ ಕಂಪನಿಗೆ ಬಂಡವಾಳದ ವೆಚ್ಚದ ನಿರ್ವಹಣೆ ಮಾಡುವಿಕೆಸಂಪಾದಿಸಿ

ಒಂದು ಸರಿಹೊಂದುವ ವಿಮೆಯನ್ನು ಪಡೆದುಕೊಳ್ಳುವ ಮೂಲಕ, ವಿಮಾ ಕಂಪನಿಯು ಬರೆಯಲ್ಪಟ್ಟ ಕಂತಿನ ನಿರ್ವಹಣೆಯ ಅವಶ್ಯಕತೆಗಳಿಗೆ ಅನುಗುಣವಾಗಿ "ಬಂಡವಾಳ ಅವಶ್ಯಕತೆ"ಯನ್ನು ಪರ್ಯಾಯವಾಗಿಸುವುದಕ್ಕೆ ಸಮರ್ಥವಾಗುತ್ತದೆ. ವಿಮಾ ವ್ಯವಹಾರವನ್ನು ನಡೆಸುವುದಕ್ಕೆ y% ಬಂಡವಾಳದ ವೆಚ್ಚದ ಜೊತೆಗೆ x ಮೊತ್ತದ ಬಂಡವಾಳವು ಅವಶ್ಯಕವಾಗಿರುತ್ತದೆ ಮತ್ತು ಮರುವಿಮಾ ವೆಚ್ಚವು x*y% ಗಿಂತ ಕಡಿಮೆ ಇರುತ್ತದೆ. ಆದ್ದರಿಂದ ಊಹಿಸುವುದಕ್ಕೆ ಅಸಾಧ್ಯವಾದ ಅಥವಾ ಕಡಿಮೆ ಪುನರಾವರ್ತಿತವಾದ ಒಂದು ವಿಮೆ ಮಾಡಲ್ಪಟ್ಟ ನಷ್ಟದ ಸಂಭವಿಸುವಿಕೆಯು ಕಂಪನಿಯು ಮರುವಿಮೆ ಮಾಡುವುದಕ್ಕೆ ಆಲೋಚಿಸಿದ ಸಂದರ್ಭದಲ್ಲಿ ಹೆಚ್ಚು ಲಾಭದಾಯಕವಾಗಿರುತ್ತದೆ.

ವಿಧಗಳುಸಂಪಾದಿಸಿ

ಪ್ರಮಾಣಾನುಗುಣಸಂಪಾದಿಸಿ

ಪ್ರಮಾಣಾನುಗುಣ ಮರುವಿಮೆಯು (ಇದರ ವಿಧಗಳೆಂದರೆ ನಿಯತಾಂಶ ಪಾ ಲು ಮತ್ತು ಹೆಚ್ಚಳ ಮರುವಿಮೆ ) ಒಂದು ಅಥವಾ ಹೆಚ್ಚು ಮರುವಿಮಾದಾರರು ಪ್ರತಿ ಪಾಲಿಸಿಯ ಒಂದು ನಿಗದಿಪಡಿಸಲ್ಪಟ್ಟ ಪ್ರಮಾಣವನ್ನು ತೆಗೆದುಕೊಳ್ಳುತ್ತಾರೆ ಅದನ್ನು ಒಬ್ಬ ವಿಮಾದಾರ ನು ನೀಡುತ್ತಾನೆ ("ಖಾತರಿಪಡಿಸುತ್ತಾನೆ"). ಇದರ ಅರ್ಥವೇನೆಂದರೆ ಮರುವಿಮಾದಾ ರನು ಕಂತಿನ ಪ್ರತಿ ಡಾಲರಿನ ನಿಗದಿಪಡಿಸಲ್ಪಟ್ಟ ಪ್ರತಿಶತವನ್ನು ಪಡೆದುಕೊಳ್ಳುತ್ತಾನೆ ಮತ್ತು ನಷ್ಟದ ಆ ಪ್ರತಿ ಡಾಲರನ್ನು ಮರಳಿಸುತ್ತಾನೆ. ಅದಕ್ಕೆ ಜೊತೆಯಾಗಿ, ಮರುವಿಮಾದಾರ ನು ವಿಮೆಗೆ ಒಳಪಟ್ಟಿರುವ ವ್ಯಕ್ತಿಗೆ ಪ್ರಾಥಮಿಕ ವೆಚ್ಚಗಳನ್ನು ಭರಿಸುವುದಕ್ಕೆ (ಮಾರುಕಟ್ಟೆ, ಹೊಣೆಗಾರಿಕೆ, ಹಕ್ಕುಕೇಳಿಕೆಗಳು, ಇತ್ಯಾದಿ) ವಿಮಾದಾರ ನಿಗೆ ಒಂದು "ಸೀಡಿಂಗ್ ಕಮಿಷನ್" ಅನ್ನು ಅನುಮತಿಸುತ್ತಾನೆ.

ವಿಮಾದಾರ ನು ಅಂತಹ ಒಂದು ವ್ಯಾಪ್ತಿಯನ್ನು ಹಲವಾರು ಕಾರಣಗಳಿಗಾಗಿ ಮಾಡುತ್ತಾನೆ. ಮೊದಲಿಗೆ, ವಿಮಾದಾರ ನು ಇದು ಸಂಭವನೀಯವಾಗಿ ಉಂಟುಮಾಡುವ ನಷ್ಟವನ್ನು ವಿವೇಕಯುಕ್ತವಾಗಿ ಉಳಿಸಿಕೊಳ್ಳುವುದಕ್ಕೆ ಅಂತಹ ಒಂದು ಬಂಡವಾಳವನ್ನು ಬಳಸಿಕೊಳ್ಳುತ್ತನೆ. ಉದಾಹರಣೆಗೆ, ಇದು ವ್ಯಾಪ್ತಿಯಲ್ಲಿ ಕೇವಲ $೧ ಮಿಲಿಯನ್ ನೀಡುವುದಕ್ಕೆ ಸಮರ್ಥವಾಗಿರಬಹುದು, ಆದರೆ ಪ್ರಮಾಣಾನುಗುಣ ಮರುವಿಮೆಯನ್ನು ಪಡೆದುಕೊಳ್ಳುವ ಮೂಲಕ ಇದು ಆ ಮಿತಿಯನ್ನು ದ್ವಿಗುಣ ಅಥವಾ ತ್ರಿಗುಣವಾಗಿಸಬಹುದು. ಕಂತುಗಳು ಮತ್ತು ನಷ್ಟಗಳು ನಂತರದಲ್ಲಿ ಒಂದು ಪ್ರಮಾಣಾನುಗುಣ ಆಧಾರದ ಮೇಲೆ ವಿಂಗಡಿಸಲ್ಪಡುತ್ತವೆ. ಉದಾಹರಣೆಗೆ, ಒಂದು ವಿಮಾ ಕಂಪನಿಯು ಒಂದು ೫೦% ನಿಯತಾಂಶ ಪಾಲು ಒಪ್ಪಂದವನ್ನು ಪಡೆದುಕೊಳ್ಳುತ್ತದೆ ಎಂದು ಪರಿಗಣಿಸಿ; ಈ ದೃಷ್ಟಾಂತದಲ್ಲಿ ಅವರು ಎಲ್ಲಾ ಕಂತು ಮತ್ತು ನಷ್ಟಗಳ ಅರ್ಧಭಾಗವನ್ನು ಮರುವಿಮೆದಾರರ ಜೊತೆಗೆ ಹಂಚಿಕೊಳ್ಳುತ್ತಾರೆ. ಒಂದು ೭೫% ನಿಯತಾಂಶ ಪಾಲಿನಲ್ಲಿ, ವಿಮಾ ಕಂಪನಿಯು (ಸೀಡ್) ಎಲ್ಲಾ ಕಂತುಗಳು ಮತ್ತು ನಷ್ಟಗಳ ೩/೪ ಪಾಲನ್ನು ಹಂಚಿಕೊಳ್ಳುತ್ತವೆ.

ಪ್ರಮಾಣಾನುಗುಣ ಮರುವಿಮೆಯ ಮತ್ತೊಂದು ವಿಧಾನವೆಂದರೆ ಹೆಚ್ಚಳ ಪಾಲು ಅಥವಾ ಲೈನ್ ಟ್ರೀಟಿಯ ಹೆಚ್ಚಳ. ಈ ದೃಷ್ಟಾಂತದಲ್ಲಿ, ಒಂದು ಉಳಿಸಿಕೊಳ್ಳಲ್ಪಟ್ಟ "ಲೈನ್" ಸೀಡಿಂಗ್ ಕಂಪನಿಯ ಉಳಿಕೆ ಎಂಬುದಾಗಿ ಉಲ್ಲೇಖಿಸಲ್ಪಡುತ್ತದೆ - ಉದಾಹರಣೆಗೆ $೧೦೦,೦೦೦. ಒಂದು ೯ ಲೈನ್ ಹೆಚ್ಚಳ ಒಪ್ಪಂದದಲ್ಲಿ ಮರುವಿಮಾದಾರ ನು ನಂತರದಲ್ಲಿ $೯೦೦,೦೦೦ ವರೆಗೆ (೯ ಲೈನ್‍ಗಳು) ಪಡೆದುಕೊಳ್ಳಬಹುದು. ಆದ್ದರಿಂದ ವಿಮಾ ಕಂಪನಿಯು $೧೦೦,೦೦೦ ಗೆ ಒಂದು ಪಾಲಿಸಿಯನ್ನು ಬಿಡುಗಡೆ ಮಾಡಿದರೆ, ಅವರು ಎಲ್ಲಾ ಕಂತುಗಳು ಮತ್ತು ನಷ್ಟಗಳನ್ನು ಆ ಪಾಲಿಸಿಯಿಂದ ತೆಗೆದುಕೊಳ್ಳುತ್ತಾರೆ. ಅವರು ಒಂದು $೨೦೦,೦೦೦ ಪಾಲಿಸಿಯನ್ನು ಬಿಡುಗಡೆ ಮಾಡಿದ್ದಲ್ಲಿ, ಅವರು ಸೀಡ್‌ಗೆ (cede) ಕಂತುಗಳು ಮತ್ತು ನಷ್ಟಗಳ ಅರ್ಧಭಾಗವನ್ನು ಮರುವಿಮಾದಾರ ರಿಗೆ ನೀಡುತ್ತಾರೆ (ಪ್ರತಿಯೊಬ್ಬರಿಗೆ ೧ ಲೈನ್). ಈ ಉದಾಹರಣೆಯಲ್ಲಿ ಸೆಡೆಂಟ್‌ನ ಗರಿಷ್ಠ ಹೊಣೆಗಾರಿಕೆಯ ಮಿತಿಯು $ ೧,೦೦೦,೦೦೦ ಆಗಿರುತ್ತದೆ. ಹೆಚ್ಚಳ ಒಪ್ಪಂದಗಳು ಅಸ್ಥಿರ ನಿಯತಾಂಶ ಪಾಲುಗಳು ಎಂದೂ ಕರೆಯಲ್ಪಡುತ್ತವೆ.

ಪ್ರಮಾಣಾನುಗುಣ-ಅಲ್ಲದಸಂಪಾದಿಸಿ

ಪ್ರಮಾಣಾನುಗುಣ-ಅಲ್ಲದ ಮರುವಿಮೆ ಯು ವಿಮಾದಾರ ನಿಂದ ಭರಿಸಲ್ಪಟ್ಟ ನಷ್ಟವು ಒಂದು ನಿರ್ದಿಷ್ಟ ಮೊತ್ತವನ್ನು ದಾಟಿದ ಸಂದರ್ಭದಲ್ಲಿ ಮಾತ್ರ ನೀಡಲ್ಪಡುತ್ತದೆ, ಅದು "ರಿಟೆನ್ಷನ್" ಅಥವಾ "ಪ್ರಯೊರಿಟಿ" ಎಂದು ಕರೆಯಲ್ಪಡುತ್ತದೆ. ವಿಮೆಯ ಈ ವಿಧಾನದ ಒಂದು ಉದಾಹರಣೆಯೆಂದರೆ ವಿಮಾದಾರ ನು ಸಂಭವಿಸಬಹುದಾದ ಯಾವುದೇ ನಷ್ಟಕ್ಕೆ $೧ ಮಿಲಿಯನ್ ಅನ್ನು ಪಡೆದುಕೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತಾನೆ ಮತ್ತು ಅವನು $೧ ಮಿಲಿಯನ್‌ಗಿಂತ ಹೆಚ್ಚಾಗಿರುವ ಸಂದರ್ಭದಲ್ಲಿ $೪ ಮಿಲಿಯನ್‌‌ನ ಮರುವಿಮೆಯ ಒಂದು ಹಂತವನ್ನು ಖರೀದಿಸುತ್ತಾನೆ. $೩ ಮಿಲಿಯನ್‌ನ ಒಂದು ನಷ್ಟವು ಸಂಭವಿಸಿದಲ್ಲಿ, ವಿಮಾದಾರ ನು $೧ ಮಿಲಿಯನ್ ಅನ್ನು ತನ್ನಲ್ಲಿ ಉಳಿಸಿಕೊಳ್ಳುತ್ತಾನೆ ಮತ್ತು ಇದರ ಮರುವಿಮಾದಾರರಿಂದ $೨ ಮಿಲಿಯನ್‌ ಅನ್ನು ಪರಿಹಾರವಾಗಿ ಪಡೆದುಕೊಳ್ಳುತ್ತಾನೆ. ಈ ಉದಾಹರಣೆಯಲ್ಲಿ, ಮರುವಿಮೆ ಮಾಡಲ್ಪಟ್ಟವರು $೫ ಮಿಲಿಯನ್‌ಗಿಂತ ಹೆಚ್ಚಾಗಿ ಸುಮಾರು $೧೦ ಮಿಲಿಯನ್ ಹೆಚ್ಚಿನ ಹಂತವನ್ನು (ಎರಡನೆಯ ಹಂತ) ಖರೀದಿಸಿದ್ದ ಸಂದರ್ಭದಲ್ಲಿ $೫ ಮಿಲಿಯನ್‌ಗಿಂತ ಹೆಚ್ಚಿನ ಯಾವುದೇ ಮೊತ್ತದ ನಷ್ಟವನ್ನು ಉಳಿಸಿಕೊಳ್ಳುತ್ತಾರೆ.

ಪ್ರಮಾಣಾನುಗುಣ-ಅಲ್ಲದ ಮರುವಿಮೆಯ ವಿಧಾನಗಳೆಂದರೆ ಹೆಚ್ಚುವರಿ ನಷ್ಟ ಮತ್ತು ನಷ್ಟದ ನಿಲ್ಲಿಸುವಿಕೆ .

ಹೆಚ್ಚುವರಿ ನಷ್ಟ ಮರುವಿಮೆಯು ಮೂರು ವಿಧಗಳನ್ನು ಹೊಂದಿರುತ್ತದೆ - "ಪರ್ ರಿಸ್ಕ್ XL" (ವರ್ಕಿಂಗ್ XL), "ಪರ್ ಒಕರೆನ್ಸ್ ಅಥವಾ ಪರ್ ಈವೆಂಟ್ XL" (ಕ್ಯಾಟಾಸ್ಟ್ರೋಫ್ ಅಥವಾ ಕ್ಯಾಟ್ XL), ಮತ್ತು "ಅಗ್ರಿಗೇಟ್ XL". ಪರ್ ರಿಸ್ಕ್‌ ನಲ್ಲಿ, ಸೆಡೆಂಟ್‌ನ ವಿಮಾ ಪಾಲಿಸಿಯ ಮಿತಿಗಳು ಮರುವಿಮೆಯ ಉಳಿಕೆಗಿಂತ ಹೆಚ್ಚಾಗಿರುತ್ತದೆ. ಉದಾಹರಣೆಗೆ, ಒಂದು ವಿಮಾ ಕಂಪನಿಯು ವಾಣಿಜ್ಯ ಸ್ವತ್ತನ್ನು $೧೦ ಮಿಲಿಯನ್‌ವರೆಗೆ ಪಾಲಿಸಿ ಮಿತಿ ಇರುವ ಪಾಲಿಸಿಯ ಜೊತೆಗೆ ನಷ್ಟಕ್ಕೆ ವಿಮೆ ಮಾಡಿಸಬಹುದು, ಮತ್ತು ನಂತರದಲ್ಲಿ $೫ ಮಿಲಿಯನ್‌ಗಿಂತ ಹೆಚ್ಚಿನ ಮೊತ್ತಕ್ಕೆ ಅಂದರೆ $೫ ಮಿಲಿಯನ್‌ಗೆ ಪರ್ ರಿಸ್ಕ್ ವಿಮೆಯನ್ನು ಪಡೆದುಕೊಳ್ಳಬಹುದು. ಈ ದೃಷ್ಟಾಂತದಲ್ಲಿ ಆ ಪಾಲಿಸಿಯ ಮೇಲಿನ $೬ ಮಿಲಿಯನ್ ನಷ್ಟವು ಮರುವಿಮಾದಾರನಿಂದ $೧ ಮಿಲಿಯನ್ ಅನ್ನು ಪಡೆದುಕೊಳ್ಳುವುದಕ್ಕೆ ಕಾರಣವಾಗುತ್ತದೆ.

ಕ್ಯಾಟಾಸ್ಟ್ರೋಫ್ ಹೆಚ್ಚುವರಿ ನಷ್ಟದಲ್ಲಿ, ಸೆಡೆಂಟ್‌ನ ಪರ್ ರಿಸ್ಕ್ ರಿಟೆನ್ಷನ್ ಸಾಮಾನ್ಯವಾಗಿ ಕ್ಯಾಟ್ ಮರುವಿಮಾ ರಿಟೆನ್ಷನ್‌ಗಿಂತ ಕಡಿಮೆ ಇರುತ್ತದೆ (ಇದು ಅಷ್ಟೊಂದು ಮಹತ್ವವಾದ ಸಂಗತಿಯಲ್ಲ ಏಕೆಂದರೆ ಈ ಒಪ್ಪಂದಗಳು ಸಾಮಾನ್ಯವಾಗಿ ೨ ನಷ್ಟದ ಖಾತರಿಯನ್ನು ಹೊಂದಿರುತ್ತವೆ ಅಂದರೆ ಅವುಗಳು ಒಂದಕ್ಕಿಂತ ಹೆಚ್ಚು ಪಾಲಿಸಿಯನ್ನು ಒಳಗೊಂಡಿರುವ ಕ್ಯಾಟಾಸ್ಟ್ರೋಫಿಕ್ ಘಟನೆಗಳ ವಿರುದ್ಧ ಮರುವಿಮೆ ಮಾಡಲ್ಪಟ್ಟವನನ್ನು ರಕ್ಷಿಸುವುದಕ್ಕೆ ವಿನ್ಯಾಸಗೊಳಿಸಲ್ಪಟ್ಟಿರುತ್ತವೆ). ಉದಾಹರಣೆಗೆ, ಒಂದು ವಿಮಾ ಕಂಪನಿಯು $೫೦೦,೦೦೦ ದವರೆಗೆ ಮಿತಿಯಿರುವ ಹೋಮ್‌ಓನರ್‌ನ ಪಾಲಿಸಿಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ನಂತರದಲ್ಲಿ $೩,೦೦೦,೦೦೦ ಕ್ಕಿಂತ ಹೆಚ್ಚಿನ ಮೊತ್ತದ ಅಂದರೆ $೨೨,೦೦೦,೦೦೦ ಮೊತ್ತದ ಕ್ಯಾಟಾಸ್ಟ್ರೋಫ್ ವಿಮೆಯನ್ನು ಪಡೆದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ, ವಿಮಾ ಕಂಪನಿಯು ಒಂದು ಘಟನೆಯಲ್ಲಿ ಬಹುವಿಧದ ಪಾಲಿಸಿಗಳ ನಷ್ಟದ ಸಂದರ್ಭದಲ್ಲಿ ಮಾತ್ರ ಮರುವಿಮಾದಾರರಿಂದ ಪರಿಹಾರವನ್ನು ಪಡೆದುಕೊಳ್ಳುತ್ತದೆ (ಅಂದರೆ, ಚಂಡಮಾರುತ, ಭೂಕಂಪ, ಪ್ರವಾಹ, ಇತ್ಯಾದಿ).

ಅಗ್ರಿಗೇಟ್ XL ಇದು ಮರುವಿಮೆ ಮಾಡಲ್ಪಟ್ಟವರಿಗೆ ಒಂದು ಆವರ್ತಿತ ರಕ್ಷಣೆಯನ್ನು ಒದಗಿಸುತ್ತದೆ. ಉದಾಹರಣೆಗೆ ಕಂಪನಿಯು ಒಟ್ಟಾರೆಯಾಗಿ $೧೦ ಮಿಲಿಯನ್ ಮಿತಿಯ ಪಾಲಿಸಿಯಲ್ಲಿ ಯಾವುದೇ ಒಂದು ವಿಭಾಗದಲ್ಲಿ $೧ಮಿಲಿಯನ್ ಅನ್ನು ಉಳಿಸಿಕೊಂಡಲ್ಲಿ, ಒಟ್ಟಾರೆಯಲ್ಲಿನ ಹೆಚ್ಚುವರಿ $೫ ಮಿಲಿಯನ್ ೫ ಒಟ್ಟೂ ನಷ್ಟಗಳಿಗೆ (ಅಥವಾ ಹೆಚ್ಚು ಭಾಗಶಃ ನಷ್ಟಗಳು) ಸರಿಸಮನಾಗಿ ಹಂಚಲ್ಪಡುತ್ತದೆ. ಅಗ್ರಿಗೇಟ್ ಮಿತಿಯು ೧೨ ತಿಂಗಳು ಅವಧಿಯಲ್ಲಿ ಸೆಡೆಂಟ್‌ನ ಒಟ್ಟಾರೆ ಕಂತಿನ ಲಾಭಕ್ಕೂ ಕೂಡ ಸಂಯೋಜಿಸಲ್ಪಡುತ್ತದೆ, ಮತ್ತು ಮಿತಿಯ ಜೊತೆಗೆ ಮತ್ತು ಹಿಂತೆಗೆದುಕೊಳ್ಳಬಹುದಾದವುಗಳು ಪ್ರತಿಶತಗಳು ಮತ್ತು ಮೊತ್ತಗಳು ಎಂಬಂತೆ ಅಭಿವ್ಯಕ್ತಗೊಳಿಸಲ್ಪಡುತ್ತವೆ. ಅಂತಹ ಮಿತಿಗಳು ನಂತರದಲ್ಲಿ "ಸ್ಟಾಪ್ ಲಾಸ್" ಅಥವಾ ವಾರ್ಷಿಕ ಅಗ್ರಿಗೇಟ್ XL ಎಂದು ಕರೆಯಲ್ಪಡುತ್ತವೆ.

ನಷ್ಟವನ್ನು-ಸರಿಹೊಂದಿಸುವ ನಿರ್ಣಾಯಕತತ್ವಗಳುಸಂಪಾದಿಸಿ

ಮರುವಿಮೆಯು ನೀಡಲ್ಪಡುವ ಒಂದು ನಿರ್ಣಾಯಕ ತತ್ವ ಅಥವಾ ಆಧಾರವು ವಿಮೆಯು ಸಂಬಂಧಿಸಿರುವ ಅವಧಿಯ ಸಮಯದಲ್ಲಿ ಚಾಲ್ತಿಗೆ ಬರುವ ಪಾಲಿಸಿಗಳಿಂದ ಹೊರಹೊಮ್ಮುವ ಹಕ್ಕುಕೇಳಿಕೆಗಳಿಗೆ ನೀಡಲ್ಪಡುತ್ತದೆ. ವಿಮಾದಾರ ನು ಯಾವಾಗ ಪಾಲಿಸಿಯನ್ನು ತೆಗೆದುಕೊಳ್ಳಲಾಗುತ್ತದೆಯೋ ಆಗ ಅಲ್ಲಿ ಪೂರ್ತಿ ಪಾಲಿಸಿಗೆ ನಷ್ಟದ ಪರಿಮಿತಿಯು ಇರುತ್ತದೆ ಎಂಬುದನ್ನು ತಿಳಿದಿರುತ್ತಾನೆ.

ಮರುವಿಮೆಯ ಒಪ್ಪಂದದ ಅವಧಿಯ ಸಮಯದಲ್ಲಿ ಪ್ರಚಲಿತಕ್ಕೆ ಬರುವ ಪಾಲಿಸಿಗಳಿಗೆ ಸಂಬಂಧಿಸಿದ ಸೆಡೆಂಟ್‌ನಿಂದ ಬರುವ ಎಲ್ಲ ಹಕ್ಕು ಕೇಳಿಕೆಗಳು ಮರುವಿಮೆಯ ಒಪ್ಪಂದದ ಕಾಲಾವಧಿ ಮುಗಿದ ನಂತರ ಸಂಭವಿಸಿದರೂ ಕೂಡ ಪರಿಹಾರ ನೀಡಲ್ಪಡುತ್ತವೆ. ಮರುವಿಮೆಯ ಒಪ್ಪಂದದ ಅವಧಿಯ ನಂತರ ಪ್ರಚಲಿತಕ್ಕೆ ಬರುವ ಪಾಲಿಸಿಗೆ ಸಂಬಂಧಿಸಿದ ಸೆಡೆಂಟ್‌ನಿಂದ ಬರುವ ಯಾವುದೇ ಹಕ್ಕು ಕೇಳಿಕೆಗಳು ಮರುವಿಮೆಯ ಒಪ್ಪಂದದ ಅವಧಿಯ ಸಮಯದಲ್ಲಿಯೇ ಸಂಭವಿಸಿದರೂ ಕೂಡ ಪರಿಹಾರ ನೀಡಲ್ಪಡುವುದಿಲ್ಲ.

ನಷ್ಟ-ಸಂಭವಿಸುವಿಕೆಯ ನಿರ್ಣಾಯಕ ತತ್ವಗಳುಸಂಪಾದಿಸಿ

ಒಪ್ಪಂದದ ಅವಧಿಯ ಒಳಗೇ ಸಂಭವಿಸುವ ಎಲ್ಲಾ ಹಕ್ಕುಕೇಳಿಕೆಯಡಿಯಲ್ಲಿನ ಒಂದು ಮರುವಿಮೆಯ ಒಪ್ಪಂದದಲ್ಲಿ, ಯಾವಾಗ ಸಂಬಂಧಿಸಿದ ಪಾಲಿಸಿಯು ಪ್ರಾರಂಭವಾಗಲ್ಪಟ್ಟಿತು ಎಂಬುದರ ಹೊರತಾಗಿಯೂ, ಎಲ್ಲ ನಷ್ಟಗಳು ಪರಿಹಾರವನ್ನು ನೀಡಲ್ಪಡುತ್ತವೆ. ಒಪ್ಪಂದದ ಕಾಲಾವಧಿಯ ನಂತರ ಸಂಭವಿಸುವ ಯಾವುದೇ ನಷ್ಟದ ಹಕ್ಕುಕೇಳಿಕೆಯು ಮಾನ್ಯತೆಯನ್ನು ಪಡೆಯುವುದಿಲ್ಲ.

ಹಕ್ಕುಕೇಳಿಕೆ-ಮಾಡಲ್ಪಟ್ಟ ಪಾಲಿಸಿಗೆ ವಿರುದ್ಧವಾಗಿ. ವಿಮಾ ಪರಿಹಾರವು ಒಂದು ನಿಗದಿಪಡಿಸಲ್ಪಟ್ಟ ಅವಧಿಯೊಳಗೆ ಸಂಭವಿಸಿದ ನಷ್ಟಗಳಿಗೆ ಮಾತ್ರ ನೀಡಲ್ಪಡುತ್ತದೆ. ಇದು ಹೆಚ್ಚಿನ ಪಾಲಿಸಿಗಳಿಗೆ ನಷ್ಟದ ಪರಿಹಾರದ ಒಂದು ಸಾಮಾನ್ಯ ಮೂಲತತ್ವವಾಗಿದೆ.

ಹಕ್ಕುಕೇಳಿಕೆಗಳು-ಮಾಡಲ್ಪಟ್ಟ ಆಧಾರಗಳುಸಂಪಾದಿಸಿ

ನಷ್ಟವು ಯಾವಾಗ ಸಂಭವಿಸಿದೆ ಎಂಬುದರ ಹೊರತಾಗಿಯೂ ಕೂಡ ಪಾಲಿಸಿಯ ಅವಧಿಯೊಳಗೆ ಒಬ್ಬ ವಿಮಾದಾರ ನಿಗೆ ವರದಿ ಮಾಡಲ್ಪಟ್ಟ ಎಲ್ಲಾ ಹಕ್ಕುಕೇಳಿಕೆಗಳಿಗೆ ಒಂದು ಪಾಲಿಸಿಯು ಪರಿಹಾರವನ್ನು ಒದಗಿಸುತ್ತದೆ.

ಒಪ್ಪಂದಗಳುಸಂಪಾದಿಸಿ

ಈ ಮೇಲೆ ನಮೂದಿಸಿದ ಹೆಚ್ಚಿನ ಉದಾಹರಣೆಗಳು ಒಂದಕ್ಕಿಂತ ಹೆಚ್ಚು ಪಾಲಿಸಿಯನ್ನು (ಟ್ರೀಟಿ) ಒಳಗೊಳ್ಳುವ ಮರುವಿಮಾ ಒಪ್ಪಂದಗಳನ್ನು ಒಳಗೊಳ್ಳುತ್ತವೆ. ಮರುವಿಮೆಯು ಒಂದು ಪ್ರತಿ ಪಾಲಿಸಿ ಆಧಾರದ ಮೇಲೂ ಕೂಡ ತೆಗೆದುಕೊಳ್ಳಲ್ಪಡುತ್ತದೆ, ಅಂತಹ ಸಂದರ್ಭದಲ್ಲಿ ಇದು ಐಚ್ಛಿಕ ಮರುವಿಮೆ ಎಂಬುದಾಗಿ ಕರೆಯಲ್ಪಡುತ್ತದೆ. ಐಚ್ಛಿಕ ಮರುವಿಮೆಯು ಒಂದು ನಿಯತಾಂಶ ಪಾಲಿನ ಆಧಾರದ ಮೇಲೆ ಅಥವಾ ಹೆಚ್ಚುವರಿ ನಷ್ಟದ ಆಧಾರದ ಮೇಲೆ ತೆಗೆದುಕೊಳ್ಳಲ್ಪಡುತ್ತದೆ. ಐಚ್ಛಿಕ ಮರುವಿಮೆಯು ಸಾಮಾನ್ಯವಾಗಿ ತಮ್ಮ ಬಹಿಷ್ಕರಣದ ಕಾರಣದಿಂದಾಗಿ ಮಾನದಂಡಾತ್ಮಕ ಮರುವಿಮಾ ಒಪ್ಪಂದಗಳ ಒಳಗೆ ಸೇರದ ದೊಡ್ದ ಪ್ರಮಾಣದ ಅಥವಾ ಅಸಾಮಾನ್ಯವಾದ ಅಪಾಯಗಳಲ್ಲಿ ಬಳಸಲ್ಪಡುತ್ತದೆ. ಐಚ್ಛಿಕ ಒಪ್ಪಂದ ಎಂಬ ಶಬ್ದವು ಪಾಲಿಸಿಯ ನಿಬಂಧನೆಗಳ ಜೊತೆಗೆ ಸಂಯೋಜಿಸಲ್ಪಡುತ್ತದೆ. ಐಚ್ಛಿಕ ಮರುವಿಮೆಯು ಸಾಮಾನ್ಯವಾಗಿ ಮೂಲ ವಿಮಾ ಪಾಲಿಸಿಯನ್ನು ಖಾತರಿಪಡಿಸಿದ ವಿಮಾ ಖಾತರಿದಾರರಿಂದ ತೆಗೆದುಕೊಳ್ಳಲ್ಪಡುತ್ತದೆ, ಹಾಗೆಯೇ ಒಪಂದದ ಮರುವಿಮೆಯು ವಿಶಿಷ್ಟವಾಗಿ ವಿಮಾ ಕಂಪನಿಯಲ್ಲಿನ ಒಬ್ಬ ಸೀನಿಯರ್ ಅಧಿಕಾರಿಯಿಂದ ತೆಗೆದುಕೊಳ್ಳಲ್ಪಡುತ್ತದೆ.

ಮರುವಿಮೆಯ ಒಪ್ಪಂದಗಳು ಒಂದು "ನಿರಂತರವಾದ" ಅಥವಾ "ತಾತ್ಕಾಲಿಕ" ಆಧಾರದ ಮೇಲೆ ತೆಗೆದುಕೊಳ್ಳಲ್ಪಡುತ್ತವೆ. ಒಂದು ನಿರಂತರವಾದ ಒಪ್ಪಂದವು ಅನಿಯಮಿತ ಅವಧಿಯವರೆಗೆ ಮುಂದುವರೆಯಲ್ಪಡುತ್ತದೆ, ಆದರೆ ಸಾಮಾನ್ಯವಾಗಿ ಒಂದು "ನೋಟೀಸ್" ಅವಧಿಯನ್ನು ಹೊಂದಿರುತ್ತದೆ ಆ ಮೂಲಕ ಯಾವುದೇ ಪಕ್ಷವು (ಇನ್ಷೂರರ್ ಅಥವಾ ಇನ್ಷೂರ್ಡ್) ೯೦ ದಿನಗಳ ಒಳಗೆ ಒಪ್ಪಂದವನ್ನು ರದ್ದುಗೊಳಿಸುವುದಕ್ಕೆ ಅಥವಾ ಬದಲಾಯಿಸುವುದಕ್ಕೆ ತಮ್ಮ ಅನುಮೋದನೆಯನ್ನು ನೀಡುತ್ತವೆ. ಒಂದು ತಾತ್ಕಲಿಕ ಒಪ್ಪಂದವು ಕೊನೆಗೊಳ್ಳುವ ದಿನಾಂಕದ ಜೊತೆಗೆ ನಿರ್ಮಿಸಲ್ಪಟ್ಟಿರುತ್ತದೆ. ವಿಮದಾರರು ಮತ್ತು ಮರುವಿಮಾದಾರರು ಹಲವಾರು ವರ್ಷಗಳವರೆಗೆ ಮುಂದುವರೆಯುವ ದೀರ್ಘ ಅವಧಿಯ ಸಂಭಂಧಗಳನ್ನು ಹೊಂದುವುದು ಸಾಮಾನ್ಯವಾದ ಸಂಗತಿಯಾಗಿದೆ.

ಮಾರುಕಟ್ಟೆಗಳುಸಂಪಾದಿಸಿ

ಹೆಚ್ಚಿನ ಮರುವಿಮೆಯ ಸ್ಥಾಪನೆಗಳು ಒಂದು ಏಕೈಕ ಮರುವಿಮಾದಾರ ರ ಜೊತೆಗೆ ತೆಗೆದುಕೊಳ್ಳಲ್ಪಡುವುದಿಲ್ಲ ಆದರೆ ಹಲವಾರು ಸಂಖ್ಯೆಯ ಮರುವಿಮಾದಾರರ ಜೊತೆಗೆ ಹಂಚಿಕೊಳ್ಳಲ್ಪಡುತ್ತವೆ. ಉದಾಹರಣೆಗೆ $೨೦,೦೦೦,೦೦೦ ಕ್ಕೂ ಹೆಚ್ಚಿನ ಒಂದು $೩೦,೦೦೦,೦೦೦ ಹಂತವು ೩೦ ಅಥವಾ ಅದಕ್ಕೂ ಹೆಚ್ಚಿನ ಮರುವಿಮಾದಾರರಿಂದ ಹಂಚಿಕೊಳ್ಳಲ್ಪಡಬಹುದು. ಮರುವಿಮಾ ಒಪ್ಪಂದಕ್ಕೆ ನಿಬಂಧನೆಗಳನ್ನು (ಕಂತು ಮತ್ತು ಒಪ್ಪಂದದ ಷರತ್ತುಗಳು) ಸ್ಥಾಪಿಸುವ ಮರುವಿಮಾದಾರ ನು ಮುಖ್ಯ ಮರುವಿಮಾದಾರ ಎಂಬುದಾಗಿ ಕರೆಯಲ್ಪಡುತ್ತಾನೆ; ಒಪ್ಪಂದವನ್ನು ಒಪ್ಪಿಕೊಳ್ಳುವ ಇತರ ಕಂಪನಿಗಳು ಅನುಸರಿಸುವ ಮರುವಿಮಾದಾರರು ಎಂಬುದಾಗಿ ಕರೆಯಲ್ಪಡುತ್ತಾರೆ.

ಮರುವಿಮೆಯ ಸುಮಾರು ಅರ್ಧಭಾಗವು ಮರುವಿಮೆಯ ದಲ್ಲಾಳಿಗಳಿಂದ ನಿರ್ವಹಿಸಲ್ಪಡುತ್ತದೆ, ಅವರು ನಂತರದಲ್ಲಿ ಮರುವಿಮೆಯ ಕಂಪನಿಗಳ ಜೊತೆಗೆ ವ್ಯವಹಾರವನ್ನು ಮಾಡುತ್ತಾರೆ. ಉಳಿದ ಅರ್ಧಭಾಗವು ಮರುವಿಮಾದಾರರ ಜೊತೆಗೆ "ನೇರವಾದ ಬರೆಯುವಿಕೆಯ" ಮೂಲಕ ತೆಗೆದುಕೊಳ್ಳಲ್ಪಡುತ್ತದೆ, ಅವರು ತಮ್ಮ ನೌಕರವರ್ಗವನ್ನು ಹೊಂದಿರುತ್ತಾರೆ ಮತ್ತು ಆದ್ದರಿಂದ ವಿಮಾ ಕಂಪನಿಗಳ ಜೊತೆಗೆ ನೇರವಾಗಿ ಮರುವಿಮೆಯನ್ನು ಮಾಡುವುದು ಸುರಕ್ಷಿತ. ಯುರೋಪ್‌ನಲ್ಲಿ ಮರುವಿಮಾದಾರರು ನೇರವಾದ ಮತ್ತು ದಲ್ಲಾಳಿಗಳ ಮೂಲಕದ ಈ ಎರಡೂ ಒಪ್ಪಂದಗಳನ್ನು ಮಾಡುತ್ತಾರೆ.

ಗೇಮ್-ಥಿಯೋರೆಟಿಕ್ ಮಾಡೆಲಿಂಗ್ ಅನ್ನು ಬಳಸಿಕೊಂಡು ಪ್ರೊಫೆಸರ್‌ಗಳಾದ ಮೈಕೆಲ್ ಆರ್. ಪವರ್ಸ್ (ಟೆಂಪಲ್ ವಿಶ್ವವಿದ್ಯಾಲಯ) ಮತ್ತು ಮಾರ್ಟಿನ್ ಶುಬಿಕ್ (ಯೇಲ್ ವಿಶ್ವವಿದ್ಯಾಲಯ) ಇವರುಗಳು ಒಂದು ನೀಡಲ್ಪಟ್ಟ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಕ್ರಿಯಾಶೀಲ ಮರುವಿಮಾದಾರರು ಸರಿಸುಮಾರು ಅದೇ ಮಾರುಕಟ್ಟೆಯಲ್ಲಿ ಕ್ರಿಯಾಶೀಲವಾಗಿರುವ ಪ್ರಾಥಮಿಕ ವಿಮಾದಾರರ ಸಂಖ್ಯೆಯ ವರ್ಗಮೂಲಕ್ಕೆ ಸರಿಸಮನಾಗಿದ್ದಾರೆ ಎಂಬುದಾಗಿ ವಾದಿಸಿದರು.[೧] ಅರ್ಥಮಾಪನ ವಿಶ್ಲೆಷಣೆ (ಇಕೊನೊಮೆಟ್ರಿಕ್ ಅನಾಲಿಸಿಸ್) ಇದು ಪವರ್ಸ್-ಶುಬಿಕ್ ತತ್ವಕ್ಕೆ ಪ್ರಾಯೋಗಿಕ ಬೆಂಬಲವನ್ನು ನೀಡಿತು.[೨]

ವಿಮಾದಾರರು (ಅಂದರೆ ಇದರ ಅರ್ಥ ಮರುವಿಮಾದಾರರು ಎಂದು) ವಿಮೆಯ ನಷ್ಟವನ್ನು ಹಣದ ನಷ್ಟದ ಜೊತೆಗೆ ವಿನಿಮಯ ಮಾಡಿಕೊಳ್ಳುತ್ತಿರುವ ಕಾರಣದಿಂದ ತಮ್ಮ ಮರುವಿಮಾದಾರರನ್ನು ಅತ್ಯಂತ ಜಾಗರೂಕತೆಯಿಂದ ಆಯ್ಕೆಮಾಡಿಕೊಳ್ಳುತ್ತಾರೆ. ಅಪಾಯ ನಿರ್ವಹಣಾಕಾರರು (ರಿಸ್ಕ್ ಮ್ಯಾನೇಜರ್‌ಗಳು) ಮರುವಿಮಾದಾರರ ಆರ್ಥಿಕ ಅರ್ಹತೆಯನ್ನು ಪರಿಶೀಲಿಸುತ್ತಾರೆ (ಎಸ್&ಪಿ, ಎ. ಎಮ್. ಬೆಸ್ಟ್, ಇತ್ಯಾದಿ) ಮತ್ತು ಅದಕ್ಕೆ ಸಂಬಂಧಿಸಿದ ನಷ್ಟಗಳನ್ನು ಪುನರಾವರ್ತಿತವಾಗಿ ಪರಿಶೀಲಿಸುತ್ತಾರೆ.

ಮರುವಿಮೆಗಾರರುಸಂಪಾದಿಸಿ

 1. ಮ್ಯೂನಿಕ್ ರೇ – ಜರ್ಮನಿ (ಯುಎಸ್$೩೧.೪ ಬಿಲಿಯನ್ ಒಟ್ಟಾರೆ ಬರೆಯಲ್ಪಟ್ಟ ಕಂತುಗಳು)
 2. ಸ್ವಿಸ್ ರೇ – ಸ್ವಿಟ್ಜರ್ಲೆಂಡ್ (ಯುಎಸ್$೩೦.೩ ಬಿಲಿಯನ್)
 3. ಬರ್ಕ್‌ಶೈರ್ ಹ್ಯಾಥ್‌ವೇ / ಜನರಲ್ ರೇ – ಯುಎಸ್‌ಎ (n.a.)
 4. ಹ್ಯಾನ್ನೋವರ್ ರೇ – ಜರ್ಮನಿ (ಯುಎಸ್$೧೨ ಬಿಲಿಯನ್)
 5. ಎಸ್‌ಸಿಒಆರ್ – ಫ್ರಾನ್ಸ್(ಯುಎಸ್$೬.೯ ಬಿಲಿಯನ್)
 6. ರೀಇನ್ಷುರೆನ್ಸ್ ಗ್ರುಪ್ ಆಫ್ ಅಮೇರಿಕಾ (ಅಮೇರಿಕಾದ ಮರುವಿಮಾ ಮಂಡಳಿ) – ಯುಎಸ್‌ಎ (ಯುಎಸ್$೫.೭ ಬಿಲಿಯನ್)
 7. ಟ್ರಾನ್ಸ್‌ಅಮೇರಿಕಾ ರೇ – ಯುಎಸ್‌ಎ (ಯುಎಸ್$೪.೨ ಬಿಲಿಯನ್)
 8. ಎವರೆಸ್ಟ್ ರೇ – ಬರ್ಮುಡಾ (ಯುಎಸ್$೪.೦ ಬಿಲಿಯನ್)
 9. ಪಾರ್ಟ್‌ನರ್ ರೇ – ಬರ್ಮುಡಾ (ಯುಎಸ್$೩.೮ ಬಿಲಿಯನ್)
 10. ಎಕ್ಸ್‌ಎಲ್ ರೇ – ಬರ್ಮುಡಾ (ಯುಎಸ್$೩.೪ ಬಿಲಿಯನ್)

(ಕೊನೆಯ ಕಂಪನಿಯ ಸಂಖ್ಯೆಗಳನ್ನು ಆಧರಿಸಿ ಸೂಚಿಸಲಾಗಿದೆ)

ಅದಕ್ಕೆ ಜೊತೆಯಾಗಿ, ಲಂಡನ್‌ನ ಸಿಂಡಿಕೇಟ್ಸ್ ಎಟ್ ಲೊಯ್ಡ್ಸ್೨೦೦೮ ರಲ್ಲಿ ಬಿಲಿಯನ್ £೬.೩ ಮೊತ್ತದ ಮರುವಿಮಾ ಒಪ್ಪಂದಗಳನ್ನು ಮಾಡಿತು

ಹಿಂಚಲನೆ (ವಾಪಸಾತಿ)ಸಂಪಾದಿಸಿ

ಮರುವಿಮಾ ಕಂಪನಿಗಳು ತಮ್ಮಷ್ಟಕ್ಕೇ ತಾವೇ ಮರುವಿಮೆಯನ್ನು ತೆಗೆದುಕೊಳ್ಳುತ್ತವೆ, ಈ ಪದ್ಧತಿಯು ಹಿಂಚಲನೆ ಎಂಬುದಾಗಿ ಕರೆಯಲ್ಪಡುತ್ತದೆ. ಅವರು ಈ ವಿಮೆಯನ್ನು ಇತರ ಮರುವಿಮಾ ಕಂಪನಿಗಳಿಂದ ತೆಗೆದುಕೊಳ್ಳುತ್ತವೆ. ಮರುವಿಮೆಯನ್ನು ಮಾರಾಟಮಾಡುವ ಒಂದು ಮರುವಿಮಾ ಕಂಪನಿಯು "ರಿಟ್ರೋಷನೇರ್" ಎಂದು ಕರೆಯಲ್ಪಡುತ್ತದೆ. ಮರುವಿಮೆಯನ್ನು ಒಂದು ಮರುವಿಮಾ ಕಂಪನಿಯಿಂದ ತೆಗೆದುಕೊಳ್ಳುವ ಕಂಪನಿಯು "ರಿಟ್ರೋಸೆಡೆಂಟ್" ಎಂದು ಕರೆಯಲ್ಪಡುತ್ತದೆ.

ಒಬ್ಬ ಮರುವಿಮಾದಾರ ನಿಗೆ ಇತರ ಮರುವಿಮಾದಾರರಿಂದ ಮರುವಿಮೆಯ ಸುರಕ್ಷತೆಯನ್ನು ಪಡೆದುಕೊಳ್ಳುವುದು ಅಸಾಮಾನ್ಯವಾದ ಸಂಗತಿಯಲ್ಲ. ಉದಾಹರಣೆಗೆ, ವಿಮಾ ಕಂಪನಿಗಳಿಗೆ ಪ್ರಮಾಣಾನುಗುಣವಾಗಿ, ಅಥವಾ ಅನುಪಾತದ ಆಧಾರದ ಮೇಲೆ ಮರುವಿಮೆಯ ಸಾಮರ್ಥ್ಯವನ್ನು ಒದಗಿಸುವ ಒಬ್ಬ ಮರುವಿಮಾದಾರ ನು ನಷ್ಟದ ಸುರಕ್ಷತೆಯ ಮಿತಿಮೀರಿದ ಕೊಳ್ಳುವಿಕೆಯಿಂದ ಕ್ಯಾಟಾಸ್ಟ್ರೋಫ್‌ಗಳಿಗೆ ತಮ್ಮ ಸ್ವಂತ ನಷ್ಟವನ್ನು ಸುರಕ್ಷಿತಗೊಳಿಸಿಕೊಳ್ಳುವುದಕ್ಕೆ ಬಯಸುತ್ತಾನೆ. ಮತ್ತೊಂದು ಸಂದರ್ಭವೆಂದರೆ ನಷ್ಟದ ಮರುವಿಮೆಯ ಹೆಚ್ಚಿನ ಪ್ರಮಾಣವನ್ನು ಒದಗಿಸುವ ಒಬ್ಬ ಮರುವಿಮಾದಾರ ನು ತನ್ನನ್ನು ವ್ಯವಹಾರದ ವಿಭಿನ್ನವಾದ ವಿಭಾಗಗಳಿಂದ ಸಂಯೋಜಿಸಲ್ಪಡುವ ನಷ್ಟದಿಂದ ರಕ್ಷಿಸಿಕೊಳ್ಳುವುದಕ್ಕೆ ಬಯಸುತ್ತಾನೆ, ಆ ಎಲ್ಲಾ ನಷ್ಟಗಳು ಕೂಡ ಒಂದೇ ರೀತಿಯ ಕ್ಯಾಟಾಸ್ಟ್ರೋಫ್‌ನಿಂದ ಸಂಭವಿಸಿದ್ದಾಗಿರಬಹುದು. ಯಾವಾಗ ಒಂದು ಚಂಡಮಾರುತವು ಉದಾಹರಣೆಗೆ ಸ್ವತ್ತುಗಳಿಗೆ, ಆಟೋಮೊಬೈಲ್‌ಗಳಿಗೆ, ಹಡಗುಗಳಿಗೆ, ಏರ್‌ಕ್ರಾಫ್ಟ್‌ಗಳಿಗೆ ಮತ್ತು ಮರಣಕ್ಕೆ ಕಾರಣವಾಗುತ್ತದೆಯೋ ಅಂತಹ ಸಂದರ್ಭದಲ್ಲಿ ತೆಗೆದುಕೊಳ್ಳಲ್ಪಡುತ್ತದೆ.

ಈ ಪ್ರಕ್ರಿಯೆಯು ಕೆಲವು ವೇಳೆ ಮೂಲ ಮರುವಿಮಾ ಕಂಪನಿಯು ಯಾವುದೇ ತಿಳುವಳಿಕೆಯಿಲ್ಲದೆಯೇ ತನ್ನದೇ ಸ್ವಂತ ವ್ಯವಹಾರದಿಂದ (ಮತ್ತು ಆದ್ದರಿಂದ ತನ್ನ ಸ್ವಂತ ಭಾದ್ಯತೆಗಳಿಂದ) ಸ್ವಲ್ಪ ಪ್ರಮಾಣದ ಲಾಭವನ್ನು ಪಡೆಯುವವರೆಗೆ ಮುಂದುವರೆಯಲ್ಪಡುತ್ತದೆ. ಈ ಪ್ರಕ್ರಿಯೆಯು "ಸ್ಪೈರಲ್" ಎಂದು ಕರೆಯಲ್ಪಡುತ್ತದೆ ಮತ್ತು ವ್ಯವಹಾರದ ಕೆಲವು ವಿಶಿಷ್ಟವಾದ ಲೈನ್‌ಗಳಲ್ಲಿ ಅಂದರೆ ಕಡಲು ಮತ್ತು ವಾಯುಯಾನಗಳಲ್ಲಿ ಸಾಮಾನ್ಯವಾದ ಸಂಗತಿಯಾಗಿತ್ತು. ಅತ್ಯುತ್ತಮಗೊಳಿಸಲ್ಪಟ್ಟ ಮರುವಿಮಾ ಕಂಪನಿಗಳು ಈ ಅಪಾಯದ ಬಗ್ಗೆ ತಿಳಿದಿದ್ದಾರೆ ಮತ್ತು ಇದನ್ನು ಜಾಗರೂಕ ಹೊಣೆಗಾರಿಕಾ (ಅಂಡರ್‌ರೈಟಿಂಗ್) ಪ್ರಯತ್ನದ ಮೂಲಕ ತಪ್ಪಿಸುವ ಪ್ರಯತ್ನಗಳನ್ನು ಮಾಡುತ್ತಾರೆ.

೧೯೮೦ ರ ದಶಕದಲ್ಲಿ, ಲಂಡನ್ ಮಾರುಕಟ್ಟೆಯು ಮರುವಿಮಾ ಸ್ಪೈರಲ್‌ಗಳ ನಿರ್ಮಾಣದ ಮೂಲಕ ಹೆಚ್ಚಿನ ಪರಿಣಾಮಕ್ಕೆ ತುತ್ತಾಗಲ್ಪಟ್ಟಿತು. ಇದು ಒಂದೇ ರೀತಿಯಾದ ನಷ್ಟವು ಮಾರುಕಟ್ಟೆಯ ಎಲ್ಲಾ ಕಡೆಗಳಲ್ಲಿಯೂ ವಿಸ್ತರಿಸುವುದಕ್ಕೆ ಕಾರಣವಾಯಿತು ಆ ಮೂಲಕ ಅದು ಬೃಹತ್ ಹಕ್ಕುಕೇಳಿಕೆಗಳ ಮಾರುಕಟ್ಟೆಯ ಸಂಖ್ಯೆಗಳನ್ನು ಕೃತಕವಾಗಿ ಹೆಚ್ಚಾಗುವಂತೆ ಮಾಡಿತು (ಪಿಪರ್ ಆಲ್ಫಾ ಆಯಿಲ್ ರಿಗ್‌ನಂತಹ). ಎಲ್‌ಎಮ್‌ಎಕ್ಸ್ ಸ್ಪೈರಲ್ (ಎಂಬುದಾಗಿ ಕರೆಯಲ್ಪಡುತ್ತಿದ್ದ) ಇದು ನೇರವಾದ ವಿಮಾ ಒಪ್ಪಂದಗಳನ್ನು ರಕ್ಷಿಸುತ್ತಿದ್ದ ಮರುವಿಮೆಯ ಮಿತಿಗಳಿಂದ ರೆಟ್ರೊಸೆಷನಲ್ ವ್ಯವಹಾರವನ್ನು ಬಹಿಷ್ಕರಿಸುವುದನ್ನು ನಿಲ್ಲಿಸಿತು.

ವಿಮಾ ಕಂಪನಿಯು ತನ್ನ ಮರುವಿಮಾದಾರ ನು ತನ್ನ ನಷ್ಟವನ್ನು ತುಂಬಿಕೊಡುತ್ತಾನೆಯೋ ಇಲ್ಲವೋ ಎಂಬುದರ ಹೊರತಗಿಯೂ ಕೂಡ ತನ್ನ ಪಾಲಿಸಿ ಹೋಲ್ಡರ್‌ಗೆ ವಿಮಾ ಪಾಲಿಸಿಯ ನಿಬಂಧನೆಗಳ ಅಡಿಯಲ್ಲಿ ಸಂಭವಿಸಿದ ನಷ್ಟವನ್ನು ತುಂಬಿಕೊಡುವುದಕ್ಕೆ ಭಾದ್ಯವಾಗಿರುತ್ತದೆ ಎಂಬುದು ತಿಳಿದಿರಬೇಕಾದ ಅಂಶವಾಗಿದೆ. ಹಲವಾರು ವಿಮಾ ಕಂಪನಿಗಳು ತಮ್ಮ ನಷ್ಟದ ಪಾಲನ್ನು ಅಥವಾ ಅವರ ಪಾಲನ್ನು ನೀಡದ ಕಂಪನಿಗಳಿಂದ ಮರುವಿಮೆಯನ್ನು ತೆಗೆದುಕೊಳ್ಳುವ ಮೂಲಕ ಕಷ್ಟವನ್ನು ಅನುಭವಿಸಿವೆ. (ನೀಡಲ್ಪಡದ ಈ ಹಕ್ಕುಕೇಳಿಕೆಗಳು ಅನ್‌ಕಲೆಕ್ಟಿಬಲ್ಸ್ ಎಂಬುದಾಗಿ ಕರೆಯಲ್ಪಡುತ್ತವೆ.) ಇದು ದೀರ್ಘ-ಅವಧಿಯ ಲೈನ್‌ಗಳ ವ್ಯವಹಾರಗಳಲ್ಲಿ ನಿಖರವಾದ ಮಹತ್ವವನ್ನು ಹೊಂದಿರುತ್ತದೆ ಅಲ್ಲಿ ಕ್ಲೇಮ್‌ಗಳು ಕಂತು ತುಂಬಲ್ಪಟ್ಟ ಹಲವಾರು ವರ್ಷಗಳ ನಂತರದಲ್ಲಿ ಸಂಭವಿಸುತ್ತವೆ.

ಇವನ್ನೂ ಗಮನಿಸಿಸಂಪಾದಿಸಿ

 • ಏವನ್‌ ಕಾರ್ಪೊರೇಷನ್‌
 • ಕ್ಯಾಟಸ್ಟ್ರೊಫ್ ಬಾಂಡ್
 • ಕ್ಯಾಟಸ್ಟ್ರೊಫ್ ಮಾಡೆಲಿಂಗ್
 • ಹಣಕಾಸು ಮರುವಿಮೆ
 • ಉದ್ದಿಮೆಯ ನಷ್ಟದ ಸಮರ್ಥನೆಗಳು
 • ಕ್ಯಾಟಸ್ಟ್ರೊಫ್ ಮ್ಯಾನೇಜರ್‌ಗಳ ಅಂತರಾಷ್ಟ್ರೀಯ ಸಮಾಜ
 • ಜೀವ ವಿಮಾ ಸೆಕ್ಯುರಿಟೈಸೇಷನ್
 • ಮಾರ್ಷ್ & ಮ್ಯಾಕ್‌ಲೆನಾನ್ ಕಂಪನಿಗಳು
 • ಮ್ಯೂನಿಕ್ ರೀಇನ್‌ಶುರೆನ್ಸ್ ಅಮೇರಿಕಾ, ಇಂಕ್.
 • ರೀಇನ್‌ಶುರೆನ್ಸ್ ಸೈಡ್‌ಕಾರ್
 • ಮರುವಿಮಾ ಕಂತು ರಕ್ಷಣೆ

ಉಲ್ಲೇಖಗಳುಸಂಪಾದಿಸಿ

 1. ಪವರ್ಸ್, ಎಮ್. ಆರ್. ಮತ್ತು ಶುಬಿಕ್, ಎಮ್. ೨೦೦೬, ಮರುವಿಮೆಗೆ "ಒಂದು 'ಸ್ಕ್ವೇರ್-ರೂಟ್ ರೂಲ್'" ರಿವಿಸ್ತಾ ದೇ ಕಂಟಾಬಿಲಿಡೇಡ್ ಇ ಫಿನಾನ್‌ಕಸ್ (ಅಕೌಂಟಿಮ್ಘ್ ಮತ್ತು ಫೈನಾನ್ಸ್‌ನ ಅವಲೋಕನ), ೧೭, ೫, ೧೦೧-೧೦೭.
 2. ವೆನಿಜಿಯನ್, ಇ. ಸಿ., ವಿಶ್ವನಾಥನ್, ಕೆ. ಎಸ್., ಮತ್ತು ಜುಕಾ, ಇಯಾನಾ ಬಿ., ೨೦೦೫, ಮರುವಿಮೆಗೆ "ಒಂದು 'ಸ್ಕ್ವೇರ್-ರೂಟ್ ರೂಲ್'"? ಹಲವಾರು ರಾಷ್ಟ್ರೀಯ ಮಾರುಕಟ್ತೆಗಳಿಂದ ಸಾಕ್ಷ್ಯಗಳು," ರಿಸ್ಕ್ ಫೈನಾನ್ಸ್‌ನ ಜರ್ನಲ್, ೬, ೪, ೩೧೯-೩೩೪.

ಬಾಹ್ಯ ಕೊಂಡಿಗಳುಸಂಪಾದಿಸಿ

"https://kn.wikipedia.org/w/index.php?title=ಮರುವಿಮೆ&oldid=662155" ಇಂದ ಪಡೆಯಲ್ಪಟ್ಟಿದೆ