ಮರಿಅನ್ನೆ ಕ್ರೊಕೆರ್

ಮರಿಅನ್ನೆ ಕ್ರೊಕೆರ್
ಬದಲಾಯಿಸಿ

ಮರಿಅನ್ನೆ ಕ್ರೊಕೆರ್(ನೀ ನಿಕೊಲ್ಸನ್ ೧೭೯೧/೨ ಅಕ್ಟೋಬರ್ ೧೮೫೪)ರವರು ಇಂಗ್ಲೀಷ್ ಜಲವರ್ಣ ವರ್ಣಚಿತ್ರಕಾರರು ಹಾಗು ಲೇಖಕರು ೧೯ನೆ ಶತಮಾನ ದವರು.ತಂದೆ ಫ಼್ರಾನ್ಸೀಸ್ ನಿಕೊಲ್ಸನ್.ಹುಟ್ಟಿದ ಊರು ಪಿಕರಿ೦ಗ್,ಯಾರ್ಕಶೈರ್.

ಜೀವನಚರಿತ್ರೆ

ಮರಿಅನ್ನೆ ಕ್ರೊಕೆರ್ರವರು ಪ್ರಸಿಧ್ದ ಜಲವರ್ಣಚಿತ್ರಕಾರರಾದ ಫ಼್ರಾನ್ಸೀಸ್ ನಿಕೊಲ್ಸನ್ ಫ಼್ರಾನ್ಸೀಸ್ ನಿಕೊಲ್ಸನ್ ಮಗಳು. ಫ಼್ರಾನ್ಸೀಸ್ ನಿಕೊಲ್ಸನ್ (೧೪ ನವೆ೦ಬರ್ ೧೭೫೩-೬ ಮಾರ್ಚ್ ೧೮೪೪)ರವರು ಬ್ರಿಟೀಷ್ ಕಲಾವಿದ.ಜಲವರ್ಣ,ಭೂದೃಶ್ಯ ಕಲಾವಿದ.ಇವರನ್ನು ನೀರು ಬಣ್ಣ ವರ್ಣಚಿತ್ರದ ತಂದೆ ಎಂದು ಕರೆಯಲಾಗುತ್ತದೆ.

ಬೆಳೆಯುತ್ತಿರುವಾಗ ಹಾಗೆ ಕೆಲವು ವರ್ಷಗಳ ನ೦ತರ ೧೮೧೮ ರಲ್ಲಿ ಆಕೆ ಮತ್ತು ಆಕೆಯ ಸಹೋದರ ಆಲ್ಫರ್ಡ್ ,ನಾಗರೀಕ ಸೇವಕರಾಗಿದ್ದ ಮತ್ತು ಪುರಾತತ್ವದ ಬಗ್ಗೆ ಆಸಕ್ತಿ ಹೊ೦ದಿದ್ದ ತೊಮಸ್ ಕ್ರೊಫ಼್ಟನ್ ಕ್ರೊಕರ್ ಅವರ ಪರಿಚಯ ಮಾಡಿಕೊ೦ಡರು.ಮೂವರು ಉತ್ತಮ ಸ್ನೇಹಿತರಾದರು .ಅವರು ಮೂರು ಜನ ಸೇರಿ ಪೂರ್ಣ ದಕ್ಷಿಣ ಐರ್ಲೆ೦ಡ್ ಸುತ್ತಾಡಿ ಒ೦ದು ಪುಸ್ತಕದ ಪ್ರಕಟಣೆಗಾಗಿ(೧೮೨೪) ವಿಷಯಗಳನ್ನು ಸ೦ಗ್ರಹಿಸಿದರು. ಆ ಪ್ರಕಟಣೆಗಾಗಿ ಮರಿಅನ್ನೆ ವಿವರವಾಗಿ ಚಿತ್ರಣಗಳನ್ನು ಬಿಡಿಸಿಕೊಟ್ಟಿದ್ದಾರೆ.ಅದಕ್ಕಾಗಿ ಅವರು ಕಷ್ಟಪಟ್ಟು ಕೆಲಸ ಮಾಡಿದರು ಅದರ ಕಾರಣದಿಂದ ಅವರಿಗೆ ಬಹಳ ಗೌರವ ಸಿಕ್ಕಿತು. ಮರಿಅನ್ನೆ ಮತ್ತು ತೊಮಸ್ ನ ಆಸಕ್ತಿ ಮತ್ತು ಪ್ರತಿಭೆಗಳು ಒ೦ದೇ ತೆರನಾಗಿದ್ದವು.ತೊಮಸ್ ನ ಸೆಲ್ಟಿಕ್ ಜಾನಪದ ಅಧ್ಯಯನಕ್ಕಾಗಿ ಆಕೆ ಅವನ ಜೊತೆಗೆ ದಕ್ಷಿಣ ಐರ್ಲೆ೦ಡ್ ಸುತ್ತಾಡಿ ಆತನಿಗೆ ಸಹಕಾರ ನೀಡಿದಳು.ಆ ಪುಸ್ತಕಕ್ಕೆ ಅವಳು ಕೊಟ್ಟ ಕೊಡುಗೆಯನ್ನು ಜನ ವ್ಯಾಪಕವಾಗಿ ಗುರುತಿಸಿದರು.೧೮೩೦ ರಲ್ಲಿ ಮರಿಅನ್ನೆ ಮತ್ತು ತೊಮಸ್ ಮದುವೆಯಾಗಿ ನ೦ತರದಲ್ಲಿ ಥಾಮಸ್ ಫ್ರಾನ್ಸಿಸ್ ದಿಲ್ಲನ್ ಕ್ರೋಕರ್ ಎ೦ಬ ಮಗುವಿಗೆ ಜನ್ಮವಿತ್ತರು.ಪತಿಯ ಮರನದ ನಂತರ ಮಗ ಪೆನಿನ್ಸುಲರ್ ಮತ್ತು ಓರಿಯಂಟಲ್ ಸ್ಟೀಮ್ ನ್ಯಾವಿಗೇಷನ್ ಕಂಪೆನಿಗಗಿ ಕಾರ್ಯನಿರ್ವಹಿಸಿದರು.ಅವರ ಕೆಲವು ಕೃತಿಗಳನ್ನು ಪರಿಷ್ಕರಿಸಿದರು ಮತ್ತು ಸಂಪಾದಿಸಿ ಅವುಗಳನ್ನು ಪ್ರಕಟಿನಸೆಧರು.

ಮರಿಅನ್ನೆ ಎರಡು ಪುಸ್ತಕಗಳ ಲೇಖಕೆ, ಬಾರ್ನೆ ಮಹೋನಿ ಮತ್ತು ಮ್ಯ ವಿಲೇಜ್ ವರ್ಸಸ್ ಅವರ್ ವಿಲೇಜ್,ಅವಳ ಗಂಡನ ಹೆಸರಿನಲ್ಲಿ ಅವಳ ವಿನಂತಿಯನ್ನು ಪ್ರಕಟಿಸಿದರು.ಅವರು ಹಲವಾರು ಭೂದೃಶ್ಯ ವರ್ಣಚಿತ್ರಗಳನ್ನು ಪ್ರದರ್ಶಿಸಿದರು.

ಆಕೆಯ ಪತಿಯ ಮರಣದ ಎರಡು ತಿಂಗಳ ನಂತರ ಅವರು ೬ ಅಕ್ಟೋಬರ್ ೧೮೫೪ ರಂದು ನಿಧನರಾದರು.

[೧] Archived 2016-07-23 ವೇಬ್ಯಾಕ್ ಮೆಷಿನ್ ನಲ್ಲಿ.

[೨]

http://www.worldcat.org/identities/lccn-no2009-157558/