ಮರಗಪ್ಪೆ
ಮರಗಪ್ಪೆ ಆಂಫಿಬಿಯ ವರ್ಗ ಆನ್ಯುರ ಗಣ ಹೈಲಿಡೀ ಕುಟುಂಬಕ್ಕೆ ಸೇರಿದ ಹಲವಾರು ಜಾತಿಯ ಕಪ್ಪೆಗಳಿಗೆ ಅನ್ವಯವಾಗುವ ಸಾಮಾನ್ಯ ಹೆಸರು (ಟ್ರೀ ಫ್ರಾಗ್). ಇವುಗಳ ಪೈಕಿ ಮುಖ್ಯವಾದ್ದು ಉತ್ತರ ಮತ್ತು ದಕ್ಷಿಣ ಅಮೆರಿಕಗಳೆರಡರಲ್ಲೂ ಜೀವಿಸುವ ಹೈಲ ಜಾತಿ.
ವಿವರಗಳು
ಬದಲಾಯಿಸಿಸಾಮಾನ್ಯವಾಗಿ ಕಪ್ಪೆಗಳು ಜಲ ಅಥವಾ ಭೂವಾಸಿಗಳು. ಅದರೆ ಹೈಲ ಮತ್ತಿತರ ಜಾತಿಯವು ತಮ್ಮ ಜೀವನದ ಬಹು ಕಾಲವನ್ನು ಮರಗಳ ಮೇಲೆ ಕಳೆಯುತ್ತವೆ.[೧] ಇಂಥ ವೃಕ್ಷಜೀವನಕ್ಕೆ ಅನುಕೂಲವಾಗುವಂತೆ ಇವುಗಳ ಕಾಲಿನ ರಚನೆಗಳೂ ಮಾರ್ಪಾಟಾಗಿವೆ; ಮರಗಿಡಗಳನ್ನು ಹತ್ತಲು ನೆರವಾಗುವಂತೆ ಬೆರಳುಗಳ ತುದಿಗಳು ಅಂಟುಫಲಕಗಳಾಗಿ ರೂಪುಗೊಂಡಿವೆ. ಜೊತೆಗೆ ಬೆರಳಿನ ತುದಿಮೂಳೆ ಕೆಳಮುಖವಾಗಿ ಬಾಗಿದೆ. ಅಂಟು ಫಲಕಗಳಿಂದ ಜಿಗುಟಾದ ದ್ರವ ಒಸರುತ್ತಿದ್ದು ಕಪ್ಪೆ ಮರವನ್ನೇರಲು ಸಹಾಯಕವಾಗುವ ಹಿಡಿತವನ್ನು ಒದಗಿಸುತ್ತದೆ.
ಮರಗಪ್ಪೆಯ ಗಂಟಲಿನಲ್ಲಿ ಶಬ್ದ ಉಂಟುಮಾಡಲು ಬಳಕೆಯಾಗುವ ದೊಡ್ಡ ಗಾತ್ರದ ಧ್ವನಿಚೀಲಗಳುಂಟು. ಇವು ಹೊರಡಿಸುವ ಸದ್ದು ಉಳಿದ ಕಪ್ಪೆಗಳ ಸದ್ದಿಗಿಂತ ಜೋರುತೆರನಾದುದು.
ಸಂತಾನೋತ್ಪತ್ತಿ
ಬದಲಾಯಿಸಿಮರಗಪ್ಪೆಗಳ ವಿವಿಧ ಪ್ರಭೇದಗಳು ಕೆಲವು ಮೊಟ್ಟೆಗಳಿಂದ ಹಿಡಿದು ಸಾವಿರಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತವೆ. ಹೆಚ್ಚು ಸಂಖ್ಯೆಯಲ್ಲಿ ಮೊಟ್ಟೆಯಿಡುವಂಥ ಪ್ರಭೇದಗಳಲ್ಲಿ ಮೊಟ್ಟೆಗಳು ಪರಸ್ಪರ ಅಂಟಿಕೊಂಡಿದ್ದು ಉದ್ದ ಸರಪಳಿಯಂತಿವೆ. ಕೆಲವು ಪ್ರಭೇದಗಳಲ್ಲಿ ಮೊಟ್ಟೆ ಹಾಗೂ ಮರಿಗಳ ಪಾಲನೆಯ ಪರಿಪಾಟವನ್ನು ಕಾಣಬಹುದು.
ರ‍್ಯಾಕೋಫೋರಸ್ ಮತ್ತು ಪೈಪ ಎಂಬ ಜಾತಿಯ ಕಪ್ಪೆಗಳನ್ನು ಸಹ ಮರಗಪ್ಪೆಗಳೆಂದು ಕರೆಯುವುದಿದೆ. ಆದರೆ ಇವು ವಾಸ್ತವವಾಗಿ ನೆಲವಾಸಿ ಕಪ್ಪೆಗಳು.
ಛಾಯಾಂಕಣ
ಬದಲಾಯಿಸಿ-
ಬೂದು ಮರಗಪ್ಪೆ, ಹೈಲಾ ವರ್ಸೀಕಲರ್, ಹೈಲಿಡೇ, ಪೂರ್ವ ಉತ್ತರ ಅಮೇರಿಕಾ
-
ಅಮೇರಿಕನ್ ಹಸಿರು ಮರಗಪ್ಪೆ, ಡ್ರೈಯೊಫ಼ೈಟೀಸ್ ಸಿನೀರಿಯಸ್ ಅಥವಾ ಹೈಲಾ ಸಿನೇರಿಯಾ, ಹೈಲಿಡೇ, ಮಧ್ಯ ಮತ್ತು ಆಗ್ನೇಯ ಅಮೇರಿಕ ಸಂಯುಕ್ತ ಸಂಸ್ಥಾನ
-
ಸಾಮಾನ್ಯ ಮರಗಪ್ಪೆ, ಪಾಲಿಪೆಡಾಟೀಸ್ ಲ್ಯೂಕೋಮಿಸ್ಟ್ಯಾಕ್ಸ್, ರ್ಯಾಕೋಫೋರಿಡೇ, ದಕ್ಷಿಣದಿಂದ ಪೂರ್ವ ಏಷ್ಯಾ
-
ಪುಡಿ ಗಾಜು ಕಪ್ಪೆ, ಕಾಕ್ರಾನೆಲಾ ಪಲ್ವರೇಟಾ, ಸೆಂಟ್ರೋಲೆನಿಡೇ, ಹೊಂಡ್ಯೂರಾಸ್ನಿಂದ ಇಕ್ವೆಡಾರ್
-
ದೊಡ್ಡ ಕಣ್ಣಿನ ಮರಗಪ್ಪೆ, ಲೆಪ್ಟೋಪೆಲಿಸ್ ವರ್ಮಿಕ್ಯುಲ್ಯಾಟಸ್, ಹೈಪರೋಲೀಡೇ, ಟಾಂಜ಼ಾನಿಯಾ
-
ಬಿಳಿ ತುಟಿಯ ಹೊಳೆಯುವ ಕಣ್ಣಿನ ಕಪ್ಪೆ, ಬೂಫ಼ಿಸ್ ಆಲ್ಬಿಲ್ಯಾಬ್ರಿಸ್, ಮ್ಯಾಂಟೆಲಿಡೇ, ಮಡಗಾಸ್ಕರ್
-
ಮಲಬಾರ್ ಮರಗಪ್ಪೆ, ಪೆಡೊಸ್ಟಿಬೀಸ್ ಟ್ಯೂಬರ್ಕ್ಯುಲೊಸಸ್, ಹೈಪರೋಲೀಡೇ, ಭಾರತ
ಉಲ್ಲೇಖಗಳು
ಬದಲಾಯಿಸಿ- ↑ Amphibians (2008-04-22). "Tree Frog Info". Animals.howstuffworks.com. Retrieved 2013-06-03.
ಗ್ರಂಥಸೂಚಿ
ಬದಲಾಯಿಸಿ- Langowski, J. K.; Dodou, D.; Kamperman, M.; van Leeuwen, J. L. (2018). "Tree frog attachment: Mechanisms, challenges, and perspectives". Frontiers in Zoology. 15 (1): 32–32. doi:10.1186/s12983-018-0273-x. PMC 6107968.
{{cite journal}}
: CS1 maint: unflagged free DOI (link) - Richardson, C.; Lengagne, T. (2009). "Multiple signals and male spacing affect female preference at cocktail parties in treefrogs". Proceedings of the Royal Society B: Biological Sciences. 277 (1685): 1247–1252. doi:10.1098/rspb.2009.1836. PMC 2842810. PMID 20018785.