ಮನ್ನನ್ ಕೇರಳ ಮತ್ತು ತಮಿಳುನಾಡಿನ ದ್ರಾವಿಡ ಭಾಷೆಯಾಗಿದ್ದು, ಇದನ್ನು ತಮಿಳು ಭಾಷೆಗಳ ಅಡಿಯಲ್ಲಿ ವರ್ಗೀಕರಿಸಲಾಗಿದೆ.[]

ಮನ್ನನ್
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ 
ಪ್ರದೇಶ: ಕೇರಳ, ತಮಿಳುನಾಡು
ಒಟ್ಟು 
ಮಾತನಾಡುವವರು:
೭,೯೦೦
ಭಾಷಾ ಕುಟುಂಬ:
 ದಕ್ಷಿಣ ದ್ರಾವಿಡ
  ತಮಿಳ-ಕನ್ನಡ
   ತಮಿಳು-ಕೊಡಗು
    ತಮಿಳು-ಮಲಯಾಳಂ
     ತಮಿಳು ಭಾಷೆಗಳು
      ಮುತುವನ್-ಮನ್ನನ್
       ಮನ್ನನ್
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: mjv

ಮನ್ನನ್ ಪದ ನಿಷ್ಪತ್ತಿ

ಬದಲಾಯಿಸಿ

'ಮನ್ನನ್' ಎಂಬ ಪದವು 'ಮನ್ನಾ' (ಭೂಮಿ) ಮತ್ತು ಮನುಸಿಯನ್ (ಮನುಷ್ಯ) ಗಳ ಸಂಯೋಜನೆಯಾಗಿದೆ, ಇದರರ್ಥ 'ಮಣ್ಣಿನ ಮಕ್ಕಳು’. []

ಮನ್ನನ್ ಸಮುದಾಯದವರು ಕೇರಳದಾದ್ಯಂತ ಕರಾವಳಿ ಪ್ರದೇಶಗಳಲ್ಲಿ ವಿಸ್ತಾರವಾಗಿ ಇದ್ದಾರೆ. ಅವರು ತಮಿಳು ಮತ್ತು ಮಲಯಾಳಂನ ಉಪಭಾಷೆಯಾಗಿ ಮನ್ನನ್ ಭಾಷೆಯನ್ನು ಮಾತನಾಡುತ್ತಾರೆ.[]

ಮನ್ನನ್‌ ಸಮುದಾಯವು ಆರ್ಥಿಕತೆಗಾಗಿ ಕೃಷಿಯ ಸುತ್ತ ಕೇಂದ್ರೀಕೃತವಾಗಿದೆ. ಸ್ವತಂತ್ರ ಕೃಷಿ ಮತ್ತು ಕಾರ್ಮಿಕರಾಗಿ ಸೇವೆ ಸಲ್ಲಿಸುವುದು ಪ್ರಸ್ತುತ ಇವರ ಪ್ರಮುಖ ಉದ್ಯೋಗ. ಅವರು ಪರ್ವತ ಪ್ರದೇಶಗಳಲ್ಲಿ ವಾಸಿಸುತ್ತ ಯಶಸ್ವಿ ಕೃಷಿಕರಾಗಿದ್ದಾರೆ. ಗುಡ್ಡಗಾಡು ಉತ್ಪನ್ನಗಳನ್ನು ಸಂಗ್ರಹಿಸುವುದು, ಮಾರಾಟ ಮಾಡುವುದರಿಂದ ಅನೇಕರಿಗೆ ಉದ್ಯೋಗವನ್ನು ಒದಗಿಸಿದೆ. ಸಾಂಪ್ರದಾಯಿಕ ಉದ್ಯೋಗವೆಂದರೆ ಬಟ್ಟೆ ಒಗೆಯುವುದು.

ಮನ್ನನ್‌ ಸಮುದಾಯ ಹಿಂದೂಗಳು ಮತ್ತು ಶಿವ, ವಿಷ್ಣು, ಭಗವತಿ ಮತ್ತು ಶಾಸ್ತಾಗಳಂತಹ ದೇವರು ಮತ್ತು ದೇವತೆಗಳನ್ನು ಪೂಜಿಸುತ್ತಾರೆ. ಭಗವತಿ ಅವರ ಕುಲದೇವತೆ. ಅವರು ಮಂಡಲಂ ಅವಧಿಯಲ್ಲಿ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಅವರು ಗುರುವಾಯೂರು, ಕೊಡುಂಗಲ್ಲೂರು ಅಥವಾ ಭಗವತಿ ದೇವಸ್ಥಾನಕ್ಕೂ ಭೇಟಿ ನೀಡುತ್ತಾರೆ. ಓಣಂ, ವಿಷು, ಶಿವರಾತ್ರಿ ಮತ್ತು ಸಂಕ್ರಾಂತಿ ಅವರ ಪ್ರಮುಖ ಹಬ್ಬಗಳು. 2011 ರ ಜನಗಣತಿಯ ಪ್ರಕಾರ, ಅವರ ಜನಸಂಖ್ಯೆಯು 9,780 ಎಂದು ಅಂದಾಜಿಸಲಾಗಿದೆ.[]

ಉಲ್ಲೇಖಗಳು

ಬದಲಾಯಿಸಿ
  1. "About: Mannan language". dbpedia.org.
  2. https://ijcrt.org/papers/IJCRT1813198.pdf
  3. "Mannan language resources | Joshua Project". joshuaproject.net.
  4. "KIRTADS | MANNAN".