ಮನೆಯೊಂದು ಮೂರು ಬಾಗಿಲು

ಮನೆಯೊಂದು ಮೂರು ಬಾಗಿಲು' ಈ-ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕುಟುಂಬ ಆಧಾರಿತ ಭಾರತೀಯ ಭಾಷೆಯ ಕನ್ನಡ ಧಾರಾವಾಹಿಯಾಗಿದೆ[೧]. ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ 2000ಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿದೆ[೨]. ನಿರ್ದೇಶಕ ಸಕ್ಕರಿಬೈಲ್ ಅವರು ಧಾರಾವಾಹಿಯನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ, ಸಹಾಯಕ ನಿರ್ದೇಶಕರಾಗಿ ದೀಪಕ್ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಮೇಘಾ ಸಂದೇಶ್ ಕಥೆ ಬರೆದಿದ್ದಾರೆ ಮತ್ತು ಸಂಭಾಷಣೆಯನ್ನು ವೈದೇಹಿ ಬರೆದಿದ್ದಾರೆ. ನಿರ್ಮಾಪಕರು ಪ್ರಸಾದ್ ದೇವಿನೇನಿ ಮತ್ತು ಶೋಬು ಯರ್ಲಗಡ್ಡ ಆಗಿದ್ದರು. ಕಾರ್ಯಕಾರಿ ನಿರ್ಮಾಪಕರು ರುಕ್ಮಿಣಿ ಆಗಿದ್ದಾರೆ, ಪ್ರವೀಣ್ ಗೋಲ್ಕುಂಡೆ ಹಿನ್ನೆಲೆ ಸಂಗೀತ ನೀಡಿದ್ದಾರೆ[೩]. ಕನ್ನಡದ ಖ್ಯಾತ ನಟಿ ವನಿತಾ ವಾಸು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.


ಮನೆಯೊಂದು ಮೂರು ಬಾಗಿಲು
ಶೈಲಿದೈನಂದಿನ ಧಾರಾವಾಹಿ
ಬರೆದವರುಮೇಘಾ ಸಂದೇಶ್
ನಿರ್ದೇಶಕರುಸಕ್ಕರಿಬೈಲ್
ಭಾಷೆ(ಗಳು)ಕನ್ನಡ
ಒಟ್ಟು ಸಂಚಿಕೆಗಳು2000+
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)ರುಕ್ಮಿಣಿ
ನಿರ್ಮಾಪಕ(ರು)ಪ್ರಸಾದ್ ದೇವಿನೇನಿ, ಶೋಬು ಯರ್ಲಗಡ್ಡ
ಕ್ಯಾಮೆರಾ ಏರ್ಪಾಡುಮಲ್ಟೀಕ್ಯಾಮೆರಾ
ಸಮಯ20- 22 ನಿಮಿಷಗಳು
ಪ್ರಸಾರಣೆ
ಮೂಲ ವಾಹಿನಿಈ-ಟಿವಿ ಕನ್ನಡ

ಕಥೆ ಬದಲಾಯಿಸಿ

ಮನೆಯೊಂದು ಮೂರು ಬಾಗಿಲು ಸಂಪೂರ್ಣವಾಗಿ ಕುಟುಂಬ ಆಧಾರಿತ ಧಾರವಾಹಿವಾಗಿದೆ. ಕಥೆಯು ಮೂರು ವಿಭಿನ್ನ ಅಂಶಗಳು ಮತ್ತು ಮೂರು ವಿಭಿನ್ನ ಟ್ರ್ಯಾಕ್‌ಗಳನ್ನು ಹೊಂದಿದೆ.

ಮೊದಲ ಟ್ರ್ಯಾಕ್‌ ಆಶಾ ಮತ್ತು ಶ್ರೀಕಾಂತ್ ಅವರಿಗೆ ಸಂಬಂಧಿಸಿದೆ. ಆಶಾ ಕುಟುಂಬಕ್ಕೆ ಹಿರಿಯ ಮಗನಾದ ಶ್ರೀಕಾಂತನ ತಾಯಿ. ಅವಳು ತನ್ನ ಮಗನನ್ನು ತುಂಬಾ ಪ್ರೀತಿಸುತ್ತಾಳೆ ಮತ್ತು ಅವನ ಮಾತುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾಳೆ. ಆದರೆ ಅವನು ಕುತಂತ್ರಿಯಾಗಿರುತ್ತಾನೆ. ಅವನ ಸ್ವಭಾವದಿಂದಾಗಿ, ಕುಟುಂಬದವರು ಅವನನ್ನು ದ್ವೇಷಿಸುತ್ತಿರುತ್ತಾರೆ.

ಎರಡನೇ ಟ್ರ್ಯಾಕ್ ಅಶೋಕ್ ಮತ್ತು ಶಿವಾನಂದ್ ಅವರಿಗೆ ಸಂಬಂಧಿಸಿದೆ. ಅಶೋಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ಶಿವಾನಂದ್ ಉನ್ನತ ಅಧಿಕಾರಿ. ಅಶೋಕ್ ಒಬ್ಬ ಭ್ರಷ್ಟ ಅಧಿಕಾರಿಯಾಗಿರುತ್ತಾನೆ. ಹಾಗಾಗಿ ಶಿವಾನಂದ್ ಅಶೋಕ್ ಕೆಲಸದಿಂಧ ಅಮಾನತು ಮಾಡುತ್ತಾನೆ. ನಂತರ ಅಶೋಕ್ ಮುಖ್ಯಮಂತ್ರಿಯಾಗುತ್ತಾನೆ ಮತ್ತು ಶಿವಾನಂದ್ ವಿರುದ್ಧ ಸೇಡು ತೀರಿಸಿಕೊಳ್ಳಲು ಪ್ರಾರಂಭಿಸುತ್ತಾನೆ.

ಮೂರನೇ ಟ್ರ್ಯಾಕ್ ರವಿ ಮತ್ತು ಅಶ್ವಿನಿಗೆ ಸಂಬಂಧಿಸಿದೆ, ಇಬ್ಬರೂ ಗಂಡ ಮತ್ತು ಹೆಂಡತಿ. ಅಶ್ವಿನಿ ಮತ್ತು ರವಿ ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ಕಲಾವಿದರು ಆಗಿರುತ್ತಾರೆ. ಇಬ್ಬರೂ ಆಲ್ಬಮ್ ಅನ್ನು ಬಿಡುಗಡೆ ಮಾಡುತ್ತಾರೆ. ಆದರೆ ರವಿಯ ಆಲ್ಬಂ ಫ್ಲಾಪ್ ಆಗುತ್ತದೆ ಮತ್ತು ಅಶ್ವಿನಿಯ ಆಲ್ಬಂ ಮಾರುಕಟ್ಟೆಯಲ್ಲಿ ಹಿಟ್ ಆಗುತ್ತದೆ. ರವಿಯ ಪ್ರೇಯಸಿ ಇವರಿಬ್ಬರ ಮಧ್ಯೆ ಬಿರುಕು ತರಲು ಸಂಚು ನಡೆಸುತ್ತಾ ಇರುತ್ತಾಳೆ.

ಕಲಾವಿದರು ಬದಲಾಯಿಸಿ

  • ವನಿತಾ ವಾಸು
  • ಸೃಜನ್ ಲೋಕೇಶ್
  • ಝಾನ್ಸಿ ಸುಬ್ಬಯ್ಯ / ಝಾನ್ಸಿ ಕಾವೇರಪ್ಪ[೪]
  • ಸ್ವಪ್ನ ಎಸ್.ಕೃಷ್ಣ
  • ರಾಜೇಶ್ವರಿ
  • ಹರೀಶ್ ರಾಜ್
  • ಸಿರಿಜಾ
  • ವೀಣಾ ಸುಂದರ್


ಉಲ್ಲೇಖಗಳು ಬದಲಾಯಿಸಿ

  1. "ಮನೆಯೊಂದು ಮೂರು ಬಾಗಿಲು ಕೌಟುಂಬಿಕ ಆಧಾರಿತ ಧಾರಾವಾಹಿ". ಕನ್ನಡ ಕಿರುತೆರೆ ಬ್ಲಾಗ್ ಪೋಸ್ಟ್. Retrieved 2 ಜೂನ್ 2009.
  2. "ಮನೆಯೊಂದು 'ಸಾವಿರ ಬಾಗಿಲು' ಧಾರಾವಾಹಿ". ಫಿಲ್ಮಿಬೀಟ್ ಕನ್ನಡ. Retrieved 15 ಡಿಸೆಂಬರ್ 2011.
  3. "ಮನೆಯೊಂದು ಮೂರು ಬಾಗಿಲು". nettv4u. Retrieved 10 ಜೂನ್ 2009.
  4. "ಇತ್ತೀಚಿನ ಧಾರಾವಾಹಿಗಳಲ್ಲಿ ರೊಮ್ಯಾನ್ಸ್ ಜಾಸ್ತಿ, ಮಕ್ಕಳು ನೋಡಲಾಗದು: 'ಮನೆಯೊಂದು ಮೂರು ಬಾಗಿಲು' ಧಾರಾವಾಹಿ ನಟಿ!". ವಿಜಯ ಕರ್ನಾಟಕ. Retrieved 16 ಡಿಸೆಂಬರ್ 2020.