ಮಧುರ ಚೆನ್ನ
ಮಧುರ ಚೆನ್ನ - ಕನ್ನಡದ ಹೆಸರಾಂತ ಸಾಹಿತಿಗಳಲೊಬ್ಬರು.
ಜೀವನ
ಬದಲಾಯಿಸಿಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. ಇವರು ೧೯೦೭ರ ಜುಲೈ ೩೧ರಂದು ಬಿಜಾಪುರ ಜಿಲ್ಲೆಯ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಪ್ಪ ತಾಯಿ ಅಂಬವ್ವ.
ಕೃತಿಗಳು
ಬದಲಾಯಿಸಿಪ್ರಕಟಿಸಿದ ಪುಸ್ತಕಗಳು-ಶಬ್ದ ಸಾಮ್ರಾಜ್ಯದಲ್ಲಿಯ ಮಂತ್ರಶಕ್ತಿಯ ಪುನರುಜ್ಜೀವನ, ಸತ್ಯ, ಹಲಸಂಗಿಯ ಲಾವಣೀಕಾರ ಖಾಜಾಬಾಯಿ, ಇತಿಹಾಸದ ಕವಿಗಳು,ಬಸವಣ್ಣನವರ ಭೋಜನ ಶಾಲೆ ಮುಖ್ಯ ಲೇಖನ ಮಾಲೆ. ನನ್ನ ನಲ್ಲ ಇವರ ಕವಿತಾ ಸಂಕಲನ. ಮಧುರ ಗೀತ - ಇದೊಂದು ಸ್ನೇಹ ಸೂಕ್ತಿ. ಗದ್ಯಕೃತಿಗಳಲ್ಲಿ ಪೂರ್ವರಂಗ, ಕಾಳರಾತ್ರಿ, ಬೆಳಗು ಈ ಕೃತಿಗಳಲ್ಲಿ ಅವರ ಆತ್ಮ ಕಥನವಿದೆ. 'ಆತ್ಮ ಸಂಶೋಧನೆ'- ಅಧ್ಯಾತ್ಮಿಕ ಅನುಭವದ ಕೃತಿ; ಪೂರ್ವಯೋಗದ ಪಥದಲ್ಲಿ-ಅರವಿಂದರ ತತ್ತ್ವವಿಚಾರ ಗ್ರಂಥ; ನಾಟಕ-ಸಿರಿಯಾಳ ಸತ್ವಪರೀಕ್ಷೆ. ಜೀವನ ಚರಿತ್ರೆ-ಶ್ರೀ ವಿದ್ಯಾರಣ್ಯರು. (ಸಿಂಪಿಲಿಂಗಣ್ಣನವರೊಡನೆ ಸಂಪಾದಿತ ಕೃತಿ). ಅನುವಾದ-ಮಾತೃವಾಣಿ, ಧರ್ಮಕ್ಷೇತ್ರೆ ಕುರುಕ್ಷೇತ್ರೇ, ಪೂರ್ವಯೋಗ, ರಾಕ್ಷಸಿ ಮಹತ್ವಾಕಾಂಕ್ಷೆ, ವಿಸರ್ಜನ, 'ಬಾಳಿನಲ್ಲಿ ಬೆಳಕು'- ಟಾಲ್‌ಸ್ಟಾಯ್‌ರವರ ಆತ್ಮಕಥೆಯ ಅನುವಾದ. ಜನಪದ ಗೀತೆಗಳ ಪ್ರಸಿದ್ಧ ಗಾಯಕರು, ಸಂಗ್ರಾಹಕರು.
ಗೌರವಗಳು
ಬದಲಾಯಿಸಿ- ಬಿಜಾಪುರದಲ್ಲಿ ನಡೆದ ೯ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 'ಬೀಸುವ ಕಲ್ಲಿನ ಹಾಡುಗಳು' ಪ್ರಬಂಧ ಮಂಡಿಸಿ ವಿದ್ವತ್ ಜನರಿಂದ ಪ್ರಶಂಸೆ.
- ಸೊಲ್ಲಾಪುರದಲ್ಲಿ ೩೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆಯ ಗೌರವ.