ಮತಾಂತರ

ಧರ್ಮ ಬದಲಾವಣೆ

ಮತಾಂತರ (ಮತಪರಿವರ್ತನೆ, ಧರ್ಮಾಂತರ) ಎಂದರೆ ಒಂದು ನಿರ್ದಿಷ್ಟ ಧಾರ್ಮಿಕ ಪಂಥದೊಂದಿಗೆ ಗುರುತಿಸಲ್ಪಟ್ಟ ನಂಬಿಕೆಗಳ ಸಮೂಹವನ್ನು ಅಳವಡಿಸಿಕೊಳ್ಳುವುದು ಮತ್ತು ಇತರ ನಂಬಿಕೆಗಳನ್ನು ಬಿಟ್ಟುಬಿಡುವುದು/ತ್ಯಜಿಸುವುದು. ಹಾಗಾಗಿ "ಮತಾಂತರ" ಶಬ್ದವು ಒಂದು ಪಂಥದ ಅನುಸರಣೆಯನ್ನು ತ್ಯಜಿಸಿ ಮತ್ತೊಂದು ಪಂಥವನ್ನು ಸೇರಿಕೊಳ್ಳುವುದನ್ನು ವಿವರಿಸುತ್ತದೆ. ಇದು ಒಂದು ಧರ್ಮದ ಪಂಥದಿಂದ ಮತ್ತೊಂದು ಧರ್ಮದ ಪಂಥಕ್ಕೆ, ಅಥವಾ ಒಂದೇ ಧರ್ಮದಲ್ಲಿನ ಒಂದು ಪಂಥದಿಂದ ಮತ್ತೊಂದು ಪಂಥಕ್ಕೆ ಇರಬಹುದು, ಉದಾಹರಣೆಗೆ, ಬ್ಯಾಪ್ಟಿಸ್ಟ್ ಇಂದ ಕ್ಯಾಥಲಿಕ್ ಕ್ರೈಸ್ತ ಧರ್ಮಕ್ಕೆ ಅಥವಾ ಶಿಯಾದಿಂದ ಸುನ್ನಿ ಇಸ್ಲಾಂಗೆ. ಕೆಲವು ಸಂದರ್ಭಗಳಲ್ಲಿ, ಮತಾಂತರವು ಧಾರ್ಮಿಕ ಗುರುತಿಸುವಿಕೆಯ ಪರಿವರ್ತನೆಯನ್ನು ಮಾನ್ಯಮಾಡುತ್ತದೆ ಮತ್ತು ವಿಶೇಷ ಕ್ರಿಯಾವಿಧಿಗಳಿಂದ ಸಂಕೇತಿಸಲ್ಪಡುತ್ತದೆ.[]

ಜನರು ವಿವಿಧ ಕಾರಣಗಳಿಂದ ಬೇರೆ ಧರ್ಮಕ್ಕೆ ಪರಿವರ್ತನೆಗೊಳ್ಳುತ್ತಾರೆ. ಇವುಗಳಲ್ಲಿ ನಂಬಿಕೆಗಳಲ್ಲಿನ ಬದಲಾವಣೆಯಿಂದ ಮುಕ್ತ ಆಯ್ಕೆಯಿಂದ ಸಕ್ರಿಯ ಮತಾಂತರ, ದ್ವಿತೀಯಕ ಮತಾಂತರ, ಅಂತ್ಯಕಾಲದ ಮತಾಂತರ, ಅನುಕೂಲಕ್ಕಾಗಿ ಮತಾಂತರ, ವಿವಾಹ ಕಾಲದ ಮತಾಂತರ ಮತ್ತು ಒತ್ತಾಯದ ಮತಾಂತರಗಳು ಸೇರಿವೆ.

ಉಲ್ಲೇಖಗಳು

ಬದಲಾಯಿಸಿ
  1. Meintel, Deirdre. "When There Is No Conversion: Spiritualists and Personal Religious Change". Anthropologica. 49 (1): 149–162.


"https://kn.wikipedia.org/w/index.php?title=ಮತಾಂತರ&oldid=948951" ಇಂದ ಪಡೆಯಲ್ಪಟ್ಟಿದೆ