ಮಣ್ಣಪಳ್ಳ ಕೆರೆ, ಮಣಿಪಾಲ

ಉಡುಪಿ ಜಿಲ್ಲೆಯ ಮಣಿಪಾಲದ ಪೇಟೆಯಿಂದ ಸುಮಾರು ೧.೫ ಕಿ.ಮೀ ದೂರದಲ್ಲಿ ಪ್ರಾಕೃತಿಕವಾಗಿ ನಿರ್ಮಾಣಗೊಂಡ ಸುಮಾರು ೪೦೦ ಮೀಟರ್ ಸುತ್ತಳತೆಯ ಒಂದು ಕೆರೆ ಇದೆ. ಈ ಕೆರೆಯ ಹೆಸರು ಮಣ್ಣಪಳ್ಳ ಕೆರೆ. ಮಣ್ಣಿನ ಪಾತ್ರೆಗಳನ್ನು ಮಾಡಲು ಬೇಕಾದ ಆವೆಮಣ್ಣು ಈ ಕೆರೆಯಲ್ಲಿ ತುಂಬಾ ಸಿಗುತ್ತದೆ. ಅಲ್ಲಿರುವವರು ಈ ಕೆರೆಯನ್ನು ಪಳ್ಳ ಎಂದು ಕರೆಯುತ್ತಾರೆ. ಮಣ್ಣು ಇರುವ ಪಳ್ಳ ( ಪಳ್ಳ( ಹಳ್ಳ) ಎಂದರೆ ಕನ್ನಡದಲ್ಲಿ ತಗ್ಗಾದ ಜಾಗ ಎಂದರ್ಥ. ಕೆರೆ ಎಂಬ ಅರ್ಥವೂ ಇದೆ.) ಮಣ್ಣಪಳ್ಳ, ಜನರ ಬಾಯಲ್ಲಿ ಇದು ಮಣಿಪಾಲ ಆಯಿತು. ಮಣಿಪಾಲದಲ್ಲಿರುವ ಈ ಮಣ್ಣಪಳ್ಳ ಕೆರೆಯಿಂದಾಗಿ ಈ ಪೇಟೆಗೆ ಮಣಿಪಾಲ ಎಂದು ಹೆಸರು ಬಂದಿತು.

ಮಣ್ಣಪಳ್ಳ ಕೆರೆ

ಈಗ ಈ ಮಣ್ಣಪಳ್ಳ ಕೆರೆಯನ್ನು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ಮಾರ್ಪಡಿಸಿದೆ. ಮಳೆಗಾಲದಲ್ಲಿ ಮಣ್ಣಪಳ್ಳ ಕೆರೆ ಜಲಾಶಯದಂತೆ ಕಾಣುತ್ತದೆ. ಕೆರೆಯಲ್ಲಿ ವರ್ಷಪೂರ್ತಿ ನೀರಿರುತ್ತದೆ. ಕೆರೆಗೆ ಒಂದು ಸುತ್ತು ಬಂದರೆ ಮೂರು ಕಿ.ಮೀ ದೂರದ ನಡಿಗೆ ಆಗುತ್ತದೆ. ನಿತ್ಯವೂ ಜನರು ವ್ಯಾಯಾಮ ಮಾಡುತ್ತಿರುವ ದೃಶ್ಯ ಕಾಣಲು ಸಿಗುತ್ತದೆ. ರವಿವಾರ ಹಾಗೂ ಇತರ ಸರಕಾರಿ ರಜಾ ದಿನಗಳಲ್ಲಿ ಇಲ್ಲಿ ವಿಹಾರಿಗಳು ತುಂಬಾ ಜನ ಸೇರುತ್ತಾರೆ.[]

ಕೆರೆಯ ಸುತ್ತಮುತ್ತಲಿನ ಸೌಲಭ್ಯಗಳು

ಬದಲಾಯಿಸಿ

ಇಲ್ಲಿ ದೋಣಿ ವಿಹಾರ ನಡೆಸಲು ಬೋಟಿಂಗ್ ವ್ಯವಸ್ಥೆ ಇದೆ. ಅದಕ್ಕೆ ನಿಗದಿತ ಶುಲ್ಕ ನೀಡಬೇಕಾಗಿದೆ. ಇಲ್ಲಿ ಜಲವಿಹಾರಿಗಳಿಗೆ ಜೀವರಕ್ಷಕ ಕವಚಗಳನ್ನು ನೀಡುತ್ತಾರೆ. ಕೆರೆ ದಂಡೆ ಸುತ್ತ ವಾಯು ವಿಹಾರಿಗಳಿಗೆ ನಡೆದಾಡಲು ವಾಕಿಂಗ್ ಟ್ರಾಕ್ ಇದೆ. ಆಯಕಟ್ಟಿನ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಲು ಕಲ್ಲು ಬೆಂಚುಗಳನ್ನು ಇಡಲಾಗಿದೆ. ಇಲ್ಲಿ ಮಕ್ಕಳ ಆಟದ ಮೈದಾನವಿದೆ. ಜೋಕಾಲಿ, ಜಾರುಬಂಡಿ, ತಿರುಗುಚಕ್ರ ಮೊದಲಾದ ಆಟಿಕೆ ಪರಿಕರಗಳು ಮೈದಾನದಲ್ಲಿವೆ. ನಗರ ಕೇಂದ್ರ ಶಾಖಾ ವಾಚನಾಲಯವು ಸನಿಹದಲ್ಲಿದೆ. ಸಿಮೆಂಟಿನಿಂದ ರಚಿತವಾದ ಕಲಾಕೃತಿಗಳನ್ನು ಇಲ್ಲಿ ಇಡಲಾಗಿದೆ. ವಾಹನ ನಿಲುಗಡೆ ಮಾಡಲು ಅಚ್ಚುಕಟ್ಟಿನ ಸ್ಥಳಾವಕಾಶವನ್ನು ಇಲ್ಲಿ ಕಲ್ಪಿಸಲಾಗಿದೆ ಹಾಗೂ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಟ್ಟು ಆಕಟ್ಟಿನ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಇಡಲಾಗಿದೆ. ಸಾಕಷ್ಟು ತ್ಯಾಜ್ಯ ತೊಟ್ಟಿಗಳು ಮತ್ತು ಕುಡಿಯುವ ನೀರಿನ ನಲ್ಲಿಗಳನ್ನು ಇಲ್ಲಿ ಇರಿಸಲಾಗಿದೆ. ಕೆರೆಯ ಸುತ್ತಲು ಔಷಧಿ ಸಸ್ಯಗಳನ್ನು ನೆಡಲಾಗಿದೆ. ಬಹುವಿಧ ಪಕ್ಷಿಸಂಕುಲ ಇಲ್ಲಿ ನೆಲೆ ಕಂಡಿದೆ.[]

ಸಹ ನೋಡಿ

ಬದಲಾಯಿಸಿ

ಉಲ್ಲೇಖ

ಬದಲಾಯಿಸಿ