ಕನ್ನಡ ಚಲನಚಿತ್ರ ಉಯ್ಯಾಲೆ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.

ಉಯ್ಯಾಲೆ ಹೊರಾಂಗಣ ಆಟಗಳಲ್ಲಿ ಒಂದು. ವಿಶೇಷವಾಗಿ ಮಕ್ಕಳ ಮನರಂಜನೆಯ ಆಟವಿದು. ಒಂದು ಮರಕ್ಕೆ ಉದ್ದನೆಯ ಹಗ್ಗವನ್ನು ಕಟ್ಟಿ ಕೆಳಗಡೆ ಹಗ್ಗದ ಮೇಲೊಂದು ಹಾಸು ಹಾಕಿ ಕುಳಿತು, ಹಿಂದೆ ಮುಂದೆ ಹೊಯ್ದಾಡುವುದು, ಇದರ ರೂಪುಗಳಲ್ಲೊಂದು. ಆಧುನಿಕವಾಗಿ, ವಿಶೇಷ ಪರಿಕರಗಳನ್ನು ಉಪಯೋಗಿಸಿ, ಉಯ್ಯಾಲೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲವು ಪ್ರಾಂತ್ಯಗಳಲ್ಲಿ ಕೆಲವು ಹಬ್ಬಗಳಲ್ಲಿ, ವಿಶೇಷವಾಗಿ ನಾಗರ ಪಂಚಮಿ ಹಬ್ಬದ ದಿನ ಉಯ್ಯಾಲೆಕಟ್ಟಿಕೊಂಡು ಆಟವಾಡಿ ನಲಿಯುವ ಸಂಪ್ರದಾಯವಿದೆ. ಉಯ್ಯಾಲೆಯನ್ನು ಜೋಕಾಲಿ ಎಂದೂ ಕರೆಯುತ್ತಾರೆ. ಸಾಹಿತ್ಯದಲ್ಲಿ ಮನಸ್ಸು ಅತ್ತಿಂದಿತ್ತ ಹೊಯ್ದಾಡುವುದನ್ನು ಸಾಮಾನ್ಯವಾಗಿ ಉಯ್ಯಾಲೆಗೆ ಉಪಮೇಯವಾಗಿ, ರೂಪಕವಾಗಿ ಅಲಂಕಾರ ಮಾಡಲಾಗುತ್ತದೆ.

ಉಯ್ಯಾಲೆ ಆಟ

ಉಯ್ಯಾಲೆ ಪದದ ಕೆಲವು ಪ್ರಯೋಗಗಳುಸಂಪಾದಿಸಿ

  • ಕಣ್ಣು ಕಣ್ಣು ಕಲೆತಾಗ, ಮನಸು ಉಯ್ಯಾಲೆಯಾಗಿದೆ ಈಗ (ಚಿತ್ರ: ಕಾಮನಬಿಲ್ಲು)
  • ಭಾವತರಂಗವೆ ಸಪ್ತಪದಿ ನಾಗೋಲೆ | ಭಾವೈಕ್ಯ ಗಾನವೆ ಉರುಟಣೆ ಉಯ್ಯಾಲೆ (ಚಿತ್ರ: ಶುಭಮಂಗಳ)
  • ಉಯ್ಯಾಲೆ ಆಡೋಣ ಬನ್ನಿರೋ|ಉಲ್ಲಾಸದುಯ್ಯಾಲೆ ತೂಗಿರೋ(ಚಿತ್ರ: ಧರಣಿಮಂಡಲ ಮಧ್ಯದೊಳಗೆ )

ಉಯ್ಯಾಲೆ ಹೆಸರಿನ ಕೃತಿಗಳು/ಚಿತ್ರಗಳುಸಂಪಾದಿಸಿ

"https://kn.wikipedia.org/w/index.php?title=ಉಯ್ಯಾಲೆ&oldid=1078330" ಇಂದ ಪಡೆಯಲ್ಪಟ್ಟಿದೆ