ಮಚ್ಚೆ
ಮಚ್ಚೆಯು[೧] ನೆವಸ್ ಕೋಶಗಳನ್ನು ಹೊಂದಿರುವ ಒಂದು ಬಗೆಯ ಮೆಲನೋಸೈಟಿಕ್ ಗಂತಿ.
ಬಹುಪಾಲು ಮಚ್ಚೆಗಳು ಒಬ್ಬ ವ್ಯಕ್ತಿಯ ಜೀವನದ ಮೊದಲ ಎರಡು ದಶಕಗಳ ಅವಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಪ್ರತಿ ೧೦೦ ಶಿಶುಗಳಲ್ಲಿ ಸುಮಾರು ಒಂದು ಶಿಶು ಮಚ್ಚೆಗಳೊಂದಿಗೆ ಜನಿಸುತ್ತದೆ. ಮಚ್ಚೆಯು ಚರ್ಮದ ಕೆಳಗೆ ಇರಬಹುದು ಅಥವಾ ಚರ್ಮದ ಮೇಲಿನ ವರ್ಣದ್ರವ್ಯವಿರುವ ಬೆಳೆತವಿರಬಹುದು (ಇದು ಬಹುತೇಕವಾಗಿ ಮೆಲನೊಸೈಟ್ ಎಂದು ಕರೆಯಲ್ಪಡುವ ಜೀವಕೋಶದಿಂದ ರಚನೆಯಾಗಿರುತ್ತದೆ). ದೇಹದ ವರ್ಣದ್ರವ್ಯ ಕಾರಕವಾದ ಮೆಲನಿನ್‍ನ ಹೆಚ್ಚಿನ ಸಾಂದ್ರತೆಯು ಇವುಗಳ ಗಾಢ ಬಣ್ಣಕ್ಕೆ ಕಾರಣವಾಗಿರುತ್ತದೆ. ಮಚ್ಚೆಗಳು ನೆವಿ ಎಂದು ಕರೆಯಲ್ಪಡುವ ಚರ್ಮಹಾನಿಗಳ ಕುಟುಂಬದ ಸದಸ್ಯವಾಗಿವೆ ಮತ್ತು ಎಲ್ಲ ಸಸ್ತನಿ ಪ್ರಜಾತಿಗಳಲ್ಲಿ, ವಿಶೇಷವಾಗಿ ಮಾನವರು, ಬೆಕ್ಕುಗಳು ಮತ್ತು ಕುದುರೆಗಳಲ್ಲಿ ಉಂಟಾಗಬಹುದು.[೨]
ಉಲ್ಲೇಖಗಳು
ಬದಲಾಯಿಸಿ- ↑ James, William D.; Berger, Timothy G.; et al. (2006). Andrews' Diseases of the Skin: clinical Dermatology. Saunders Elsevier. ISBN 0-7216-2921-0.
- ↑ "Melanocytic Nevi: Background, Pathophysiology, Epidemiology". 2017-04-04.
{{cite journal}}
: Cite journal requires|journal=
(help)