ಮಕ್ಕಿ ದೀ ರೋಟಿ
ಮಕ್ಕಿ ದೀ ರೋಟಿ ಮೆಕ್ಕೆ ಜೋಳದ ಹಿಟ್ಟಿನಿಂದ ತಯಾರಿಸಲಾದ ಹುದುಗು ಸೇರಿಸದ ಚಪ್ಪಟೆಯಾದ ಬ್ರೆಡ್.[೧] ಇದನ್ನು ಮುಖ್ಯವಾಗಿ ಭಾರತೀಯ ಉಪಖಂಡದ ಉತ್ತರ ಭಾಗದಲ್ಲಿರುವ ಪಂಜಾಬ್ ಪ್ರದೇಶದಲ್ಲಿ ತಿನ್ನಲಾಗುತ್ತದೆ. ಭಾರತೀಯ ಉಪಖಂಡದಲ್ಲಿನ ಬಹುತೇಕ ರೋಟಿಗಳಂತೆ ಇದನ್ನು ತವಾದ ಮೇಲೆ ಬೇಯಿಸಲಾಗುತ್ತದೆ.
ಮಕ್ಕಿ ದೀ ರೋಟಿ ಸಿದ್ಧವಾದಾಗ ಹಳದಿ ಬಣ್ಣದ್ದಾಗಿರುತ್ತದೆ. ಇದು ಬಹಳ ಕಡಿಮೆ ಅಂಟಿಕೊಳ್ಳುವ ಶಕ್ತಿ ಹೊಂದಿರುವುದರಿಂದ ಇದನ್ನು ಕೈಯಿಂದ ಹಿಡಿಯುವುದು ಕಷ್ಟವಾಗುತ್ತದೆ.
ಮಕ್ಕಿ ದೀ ರೋಟಿಯನ್ನು ಸಾಮಾನ್ಯವಾಗಿ ಪಂಜಾಬ್‍ನಲ್ಲಿ ಚಳಿಗಾಲದ ವೇಳೆ ತಯಾರಿಸಲಾಗುತ್ತದೆ. ಇದರ ಜೊತೆಗೆ ಹಲವುವೇಳೆ ಸಾಗ್ (ವಿಶೇಷವಾಗಿ ಸರಸ್ಞೋ ದಾ ಸಾಗ್, ಅಂದರೆ ಬೇಯಿಸಿದ ಸಾಸಿವೆಯ ಹಸಿರು ಎಲೆಗಳು), ಬೆಣ್ಣೆ ಮತ್ತು ಮಜ್ಜಿಗೆಯನ್ನು ಬಡಿಸಲಾಗುತ್ತದೆ. ಇದೇ ರೀತಿ ಹಿಮಾಚಲ್ ಮತ್ತು ಪಂಜಾಬ್‍ನಲ್ಲಿ ಇದನ್ನು ಸಾಗ್ ಮತ್ತು ಜೊತೆಗೆ ಮಾಹ್ (ಉದ್ದಿನ) ದಾಲ್‍ನೊಂದಿಗೆ ತಿನ್ನಲಾಗುತ್ತದೆ.
ಉಲ್ಲೇಖಗಳು
ಬದಲಾಯಿಸಿ- ↑ Jaffrey, M. (2014). Madhur Jaffrey's World Vegetarian: More Than 650 Meatless Recipes from Around the World. Potter/TenSpeed/Harmony. pp. 797–799. ISBN 978-0-307-81612-2.
ಹೆಚ್ಚಿನ ಓದಿಗೆ
ಬದಲಾಯಿಸಿ- "Makki di roti' and 'sarson da saag' losing its sheen in Punjabi platter". Hindustan Times. January 14, 2015. Archived from the original on ಮೇ 5, 2015. Retrieved May 5, 2015.
{{cite web}}
: External link in
(help)|ref=
- "This winter, Makki ki Roti is out of reach". NDTV. November 21, 2009. Retrieved May 5, 2015.
- "Winter recipe: Sarson da saag, makki di roti". ದಿ ಟೈಮ್ಸ್ ಆಫ್ ಇಂಡಿಯಾ. January 17, 2015. Retrieved May 5, 2015.
- Marwaha, P. Shakahaari (in ಡಚ್). Xlibris Corporation. p. 149. ISBN 978-1-4771-7170-7.
{{cite book}}
: Invalid|ref=harv
(help)