"ಮಕರೆನಾ " ಅದೇ ಹೆಸರಿನ ಮಹಿಳೆಯ ಬಗ್ಗೆ ಲಾಸ್ ಡಿ ರಿಯೊ ಹಾಡಿದ ಒಂದು ಸ್ಪ್ಯಾನಿಶ್ ನೃತ್ಯ ಹಾಡಾಗಿದೆ. ಇದು ೧೯೯೫ರಿಂದ ೧೯೯೬ರವರೆಗಿನ ಅವಧಿಯಲ್ಲಿ ಜನಪ್ರಿಯವಾಗಿತ್ತು ಮತ್ತು ಇದು ಈಗಲೂ ಆರಾಧಕ ಅಭಿಮಾನಿವರ್ಗವೊಂದನ್ನು ಹೊಂದಿದೆ. ಈ ಹಾಡಿನ 'ಬೇಸೈಡ್ ಬಾಯ್ಸ್ ಮಿಕ್ಸ್' ರೂಪಾಂತರವು ಇಂಗ್ಲಿಷ್ ಸಾಹಿತ್ಯವನ್ನು ಹೊಂದಿದ್ದರಿಂದ ಅತ್ಯಂತ ಪ್ರಸಿದ್ಧವಾಯಿತು, ಇದನ್ನು ಅಷ್ಟೊಂದು ಪ್ರಸಿದ್ಧರಲ್ಲದ ಕಲಾವಿದರೊಬ್ಬರು ಹಾಡಿದರು. ಇದು ೨೦೦೨ರಲ್ಲಿ VH೧ ನಿಂದ "#೧ ಗ್ರೇಟೆಸ್ಟ್ ಒನ್-ಹಿಟ್ ವಂಡರ್ ಆಫ್ ಆಲ್ ಟೈಮ್" ಸ್ಥಾನವನ್ನು ಪಡೆಯಿತು.

"Macarena (Bayside Boys Mix)"
ಚಿತ್ರ:MacarenaLosDelRio.jpg
Single by Los del Río
from the album A mí me gusta and Fiesta Macarena
ಬಿಡುಗಡೆAugust 15, 1995 (U.S.)
ವಿಧಾನCD single, 7"
ಧ್ವನಿಮುದ್ರಣ1995
ಶೈಲಿLatin
Dance-pop
Flamenco
ಉದ್ದ4:14
ಶೀರ್ಷಿಕೆRCA
ಗೀತ ರಚನಕಾರ(ರು)Rafael Ruiz Perdigones, Antonio Romero Monge
Certification4x Platinum (RIAA)
Los del Río singles chronology
- "Macarena"
(1995)

"Macarena (Bayside Boys Mix)"
(1995)
"Macarena Christmas"
(1996)

ಈ ಹಾಡು ಕ್ಲಾವ್‌ ಎಂಬ ಸಂಗೀತದ ಒಂದು ಪ್ರಕಾರವನ್ನು ಬಳಸುತ್ತದೆ. ಇದು ಬಿಲ್‌ಬೋರ್ಡ್ಸ್ ಆಲ್ ಟೈಮ್ ಟಾಪ್ ೧೦೦ ರಲ್ಲಿ #೫ನೇ ಸ್ಥಾನವನ್ನು ಪಡೆದಿದೆ. ಅಷ್ಟೇ ಅಲ್ಲದೆ ಇದು ಬಿಲ್‌ಬೋರ್ಡ್ಸ್ ಆಲ್ ಟೈಮ್ ಲ್ಯಾಟಿನ್ ಸಾಂಗ್ಸ್ ‌ನಲ್ಲಿ #೧ನೇ ಶ್ರೇಣಿಯನ್ನು ಹೊಂದಿದೆ.[][] ೧೯೫೫ರಲ್ಲಿ ಆಧುನಿಕ ರಾಕ್ ಯುಗವು ಆರಂಭವಾದಂದಿನಿಂದ ಇದು ಬಿಲ್‌ಬೋರ್ಡ್‌ನ #೧ ನೃತ್ಯ-ಹಾಡಾಗಿದೆ ಮತ್ತು #೧ನೇ ಸ್ಥಾನವನ್ನು ಪಡೆದ ಐದು ವಿದೇಶ ಭಾಷಾ ಹಾಡುಗಳಲ್ಲಿ ಒಂದಾಗಿದೆ.

ಮೂಲ ಮತ್ತು ಇತಿಹಾಸ

ಬದಲಾಯಿಸಿ

ಅವರ ತಿರುಗಾಟ ಪ್ರದರ್ಶನದಿಂದಾಗಿ, ಲಾಸ್ ಡೆಲ್ ರಿಯೊ ೧೯೯೨ರ ಮಾರ್ಚ್‌ನಲ್ಲಿ ದಕ್ಷಿಣ ಅಮೇರಿಕಾಕ್ಕೆ ಆಹ್ವಾನಿಸಲ್ಪಟ್ಟರು. ಅವರು ವೆನೆಜುವೆಲಾಕ್ಕೆ ಭೇಟಿ ನೀಡಿದಾಗ, ಒಬ್ಬ ವೆನೆಜುವೆಲನ್ ಸಂಯೋಜಕ (ಕ್ಯೂಬನ್ ಮೂಲದ) ಗುಸ್ಟಾವೊ ಸಿಸ್ನರೋಸ್ ಏರ್ಪಡಿಸಿದ ಖಾಸಗಿ ಪಾರ್ಟಿಯೊಂದಕ್ಕೆ ಆಮಂತ್ರಿಸಲ್ಪಟ್ಟರು. ಆ ರಾತ್ರಿ ಪಾರ್ಟಿಯಲ್ಲಿ ಮಾಜಿ ಅಧ್ಯಕ್ಷ ಕಾರ್ಲೋಸ್ ಆಂಡ್ರೆಸ್ ಪೆರೆಜ್‌ರನ್ನೂ ಒಳಗೊಂಡಂತೆ ಹಲವಾರು ಪ್ರಮುಖ ವೆನೆಜುವೆಲನ್ನರು ಭಾಗವಹಿಸಿದ್ದರು.

ಸ್ಥಳೀಯ ಫ್ಲಮೆಂಕೊ ಶಿಕ್ಷಕಿ ಡಯಾನ ಪಾಟ್ರಿಸಿಯಾ ಕ್ಯೂಬಿಲ್ಲನ್ ಹೆರ್ರೇರಾ ಅತಿಥಿಗಳಿಗಾಗಿ ಸಣ್ಣ ಪ್ರದರ್ಶನವೊಂದನ್ನು ನಡೆಸಿಕೊಡುವಂತೆ ಸಿಸ್ನೆರೋಸ್ ವ್ಯವಸ್ಥೆಗೊಳಿಸಿದ್ದರು. ಲಾಸ್ ಡೆಲ್ ರಿಯೊ ಕ್ಯುಬಿಲ್ಲನ್ನರ ನೃತ್ಯ ಕೌಶಲಗಳನ್ನು ಕಂಡು ಆಶ್ಚರ್ಯಚಕಿತರಾದರು. ಸ್ಫೂರ್ತಿಯಿಂದ ರೋಮೆರೊ ಕ್ಯುಬಿಲ್ಲನ್ನರಿಗೆ ಗೌರವ ಸೂಚಕವಾಗಿ ಹಾಡಿನ ಪಲ್ಲವಿಯನ್ನು ಪಠಿಸಿದರು, ಆದರೆ ಆಕೆಯನ್ನು "ಮಾಡಲೇನಾ " (ಮ್ಯಾಗ್ಡಲೇನಾ) ಎಂಬುದಾಗಿ ಕರೆದರು: "Dale a tu cuerpo alegría, Ma'dalena, que tu cuerpo e' pa' darle alegría y cosa' güena'" ("ನಿನ್ನ ಶರೀರಕ್ಕೆ ಸ್ವಲ್ಪ ಸಂತೋಷವನ್ನು ನೀಡು ಮ್ಯಾಗ್ಡಲೇನಾ, ಏಕೆಂದರೆ ನೀ ಮಾಡುವ ನೃತ್ಯವು ಬೇರೆಯವರಿಗೆ ಸಂತೋಷ ಮತ್ತು ಆನಂದವನ್ನು ನೀಡುತ್ತದೆ"). ಆಂಡಲುಷಿಯನ್ ಸಂಸ್ಕೃತಿಯಲ್ಲಿ ಒಬ್ಬ ಮಹಿಳೆಯನ್ನು 'ಮ್ಯಾಗ್ಡಲೇನಾ' ಎಂದು ಕರೆಯುವುದರಿಂದ ಆಕೆಯನ್ನು ಮೇರಿ ಮ್ಯಾಗ್ಡಲೇನಾರ ಜರ್ಜರಿತ ಗತಕಾಲದೊಂದಿಗೆ ಹೋಲಿಸಲಾಗುತ್ತದೆ ಮತ್ತು ಆಕೆಯನ್ನು ಅಶ್ಲೀಲ ಅಥವಾ ಇಂದ್ರಿಯಗಳಿಗೆ ಆನಂದವನ್ನುಂಟುಮಾಡುವ ಮಹಿಳೆಯೆಂದು ವಿವರಿಸಲಾಗುತ್ತದೆ.[]

ದಾಖಲೆ ಮುರಿಯುವಿಕೆ ಮತ್ತು ಪ್ರಪಂಚಾದ್ಯಂತದ ಪ್ರಭಾವ

ಬದಲಾಯಿಸಿ

ಈ ಹಾಡನ್ನು ಮೂಲತಃ ೧೯೯೨ರಲ್ಲಿ ಧ್ವನಿಮುದ್ರಣ ಮಾಡಲಾಯಿತು ಮತ್ತು ೧೯೯೩ರಲ್ಲಿ ರಂಬ ಆಗಿ ಬಿಡುಗಡೆ ಮಾಡಲಾಯಿತು. ಇದು ಲಾಸ್ ಡೆಲ್ ರಿಯೊಗೆ ಸಂಬಂಧಿಸಿದ ಹಾಡಿನ ಆರು ರೂಪಾಂತರಗಳಲ್ಲಿ ಮೊದಲನೆಯದಾಗಿತ್ತು. ಮತ್ತೊಂದು ರೂಪಾಂತರ ಸ್ಪ್ಯಾನಿಶ್ ಸಾಹಿತ್ಯವನ್ನು ಹೊಂದಿದ್ದ ಹೊಸ ಫ್ಲಮೆಂಕೊ ರಂಬ ಪಾಪ್ ಮಿಳನವು ಸ್ಪೇನ್ ಮತ್ತು ಮೆಕ್ಸೆಕೊದಲ್ಲಿ ಗಮನಾರ್ಹ ಯಶಸ್ಸನ್ನು ಗಳಿಸಿತು. ಪುಯೆರ್ಟೊ ರಿಕೊದ ಹೊಸ ಪ್ರಗತಿಶೀಲ ಪಕ್ಷದ ಅಭ್ಯರ್ಥಿಗಳ ಪಟ್ಟಿಯಡಿಯಲ್ಲಿ ಮರುಚುನಾವಣೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದ ಆಗಿನ-ಗವರ್ನರ್ ಪೆಡ್ರೊ ರೋಸ್ಸೆಲ್ಲೊ ಇದನ್ನು ಒಂದು ಅನಧಿಕೃತ ಚಳವಳಿ ಹಾಡಾಗಿ ಬಳಸಿದರಿಂದ ಈ ಹಾಡು ಪುಯೆರ್ಟೊ ರಿಕೊದಲ್ಲೂ ಜನಪ್ರಿಯವಾಯಿತು. ಹೆಚ್ಚಿನ ವಸತಿ ಸೌಕರ್ಯವಿರುವ ನೌಕೆಗಳ ಆಧಾರವಾಗಿದ್ದ, ದ್ವೀಪದ ಸಂದರ್ಶಕರು ಪುಯೆರ್ಟೊ ರಿಕೊದಲ್ಲಿ ತಂಗಿದ್ದಾಗ ಈ ಹಾಡಿಗೆ ಯಾವಾಗಲೂ ನೃತ್ಯ ಮಾಡುತ್ತಿದ್ದರು. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ, ನಿರ್ದಿಷ್ಟವಾಗಿ ಮಿಯಾಮಿ ಮತ್ತು ನ್ಯೂಯಾರ್ಕ್ ಸಿಟಿಯಲ್ಲಿ, ಗಮನಾರ್ಹ ಲ್ಯಾಟಿನೊ ಸಮುದಾಯಗಳನ್ನು ಹೊಂದಿರುವ ನಗರಗಳಲ್ಲಿ ಈ ಹಾಡು ಹೇಗೆ ಹರಡಿತು ಮತ್ತು ಜನಪ್ರಿಯವಾಯಿತು ಎಂಬುದನ್ನು ಇದು ವಿವರಿಸುತ್ತದೆ.

ಬೇಸೈಡ್ ಬಾಯ್ಸ್‌ನಿಂದ ಮರುಮಿಶ್ರಿತ ಧ್ವನಿಮುದ್ರಣವಾದುದರಿಂದ ಮತ್ತು ಗ್ರ್ಯಾಮಿ ನಾಮನಿರ್ದೇಶಿತ ನಿರ್ದೇಶಕ ಕ್ರಾಲೋಸ್ ಡಿ ಯಾರ್ಜ ಬರೆದು ಸೇರಿಸಿದ ಇಂಗ್ಲಿಷ್ ಸಾಹಿತ್ಯದಿಂದಾಗಿ ಈ ಹಾಡು ೧೯೯೬ರ ಮಧ್ಯಾವಧಿಯಲ್ಲಿ ಪ್ರಪಂಚದಾದ್ಯಂತ ಯಶಸ್ಸು ಗಳಿಸಿತು. ಈ ಏಕಗೀತವು U.S. ಬಿಲ್‌ಬೋರ್ಡ್ ಹಾಟ್ ೧೦೦ ಏಕಗೀತಗಳ ಪಟ್ಟಿನಲ್ಲಿ ಪ್ರಥಮ ಸ್ಥಾನದಲ್ಲಿ ೧೪ ವಾರಗಳ ಕಾಲವಿತ್ತು, ಇದು ಇತಿಹಾಸದಲ್ಲೇ ಹಾಟ್ ೧೦೦ ಪಟ್ಟಿಯಲ್ಲಿ ದೀರ್ಘಕಾಲವಿದ್ದ ಏಕೈಕ ಹಾಡಾಗಿದೆ. ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಈ ಹಾಡನ್ನು ವೃತ್ತಿಪರ ಕ್ರೀಡೆಗಳು, ಚಳವಳಿಗಳು, ವಿಧ್ಯುಕ್ತ ಸಭೆಗಳು ಮತ್ತು ಇತರ ಸ್ಥಳಗಳಲ್ಲಿ ಹೆಚ್ಚಾಗಿ ನುಡಿಸಲಾಗುತ್ತಿತ್ತು. ೧೯೯೬ರಲ್ಲಿ ನ್ಯೂಯಾರ್ಕ್ ಸಿಟಿಯ ಯಾಂಕೀ ಸ್ಟೇಡಿಯಂನಲ್ಲಿ ೫೦,೦೦೦ ಮಂದಿ ಮಕರೆನಾವನ್ನು ನೃತ್ಯ ಮಾಡಿದಾಗ ಗುಂಪು ನೃತ್ಯದ ಪ್ರಪಂಚ ದಾಖಲೆಯು ಸೃಷ್ಟಿಸಲ್ಪಟ್ಟಿತೆಂದು ಹಲವರು ನಂಬುತ್ತಾರೆ.

"ಮಕರೆನಾ" ೧೯೯೬ರವರೆಗೆ ಜನಪ್ರಿಯವಾಗಿಯೇ ಉಳಿಯಿತು, ಆದರೆ ೧೯೯೭ರ ಕೊನೆಯಲ್ಲಿ ಅದರ ಜನಪ್ರಿಯತೆಯು ಕ್ಷೀಣಿಸಿತು. ಈ ಹಾಡು ಹಾಟ್ ೧೦೦ರ ಪಟ್ಟಿಯಲ್ಲಿ ೬೦ ವಾರಗಳವರೆಗೆ ಉಳಿಯುವ ಮೂಲಕ ದಾಖಲೆಗಳನ್ನು ಮುರಿಯಿತು. ಬೇಸೈಡ್ ಬಾಯ್ಸ್ ಮರುಮಿಶ್ರಿತ ಧ್ವನಿಮುದ್ರಣವು ಯಾಜೂ (ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಯಾಜ್ ಎಂದೂ ಕರೆಯುತ್ತಾರೆ) ಹಾಡು ಸಿಚ್ವೇಶನ್ ‌ನ -ಯಾಜೂ ಗಾಯಕಿ ಅಲಿಸನ್ ಮೋಯೆಟ್‌ರ ಲಾಫ್ಟರ್- ಒಂದು ಮಾದರಿಯನ್ನು ಒಳಗೊಳ್ಳುತ್ತದೆ. ಇದಕ್ಕೆ ಹೆಚ್ಚುವರಿಯಾಗಿ, ಇದರ ಪಲ್ಲವಿಯು ದಿ ಫಾರ್ಮ್ ಅದರ ಆಲ್ಬಮ್ ಸ್ಪರ್ಟಾಕಸ್ ‌ನ 'ಹೈಯರ್ ಆಂಡ್ ಹೈಯರ್ (ರಿಮಿಕ್ಸ್)' ಹಾಡಿನಲ್ಲಿ ಬಳಸಿದ ಹೆಣ್ಣು ಧ್ವನಿಯ ಮಾದರಿಗಳನ್ನು ಬಳಸಿಕೊಂಡಿತು. ಈ ಮರುಮಿಶ್ರಿತ ಧ್ವನಿಮುದ್ರಣದಲ್ಲಿನ ಗಾಯಕಿಯು ಬೇಸೈಡ್ ಬಾಯ್ಸ್‌ನಿಂದ ಸೇರಿಸಲ್ಪಟ್ಟಿದ್ದರು ಮತ್ತು ಆಕೆಯ ಕೋರಿಕೆಯು ಪ್ರಸಿದ್ಧವಾಗಲಿಲ್ಲ. ಬೇಸೈಡ್ ಬಾಯ್ಸ್ U.S. ಮತ್ತು ಪ್ರಪಂಚದಾದ್ಯಂತ ಪ್ರವಾಸ ಮಾಡಿತು ಹಾಗೂ ಕಾರ್ಲ ವ್ಯಾನೆಸ್ಸಾ ಮರುಮಿಶ್ರಿತ ಧ್ವನಿಮುದ್ರಣದಲ್ಲಿದ್ದ ಗಾಯಕಿಯಲ್ಲದಿದ್ದರೂ ಆಕೆಯನ್ನು ಒಳಗೊಂಡಿತ್ತು.

೧೯೯೭ರಲ್ಲಿ, ಈ ಹಾಡಿನ ೧೧ ದಶಲಕ್ಷ ಪ್ರತಿಗಳು ಮಾರಾಟವಾದವು. ಈ ಹಾಡಿನ ರಾಯಧನದಲ್ಲಿ ಕೇವಲ ೨೫% ನಷ್ಟನ್ನು ತೆಗೆದುಕೊಂಡರೂ ರೋಮೆರೊ ಮತ್ತು ರುಯಿಜ್ ಭಾರೀ ಶ್ರೀಮಂತರಾದರು. BBC ಸುದ್ದಿ ಸೇವೆಯ ಪ್ರಕಾರ, ೨೦೦೩ರ ವರ್ಷದಲ್ಲಿ -ಹಾಡಿನ ಆರಂಭಿಕ ಬಿಡುಗಡೆಯ ನಂತರದ ಒಂದು ಸಂಪೂರ್ಣ ದಶಕ- ರೋಮೆರೊ ಮತ್ತು ರುಯಿಜ್ ರಾಯಧನದಲ್ಲಿ USD $೨೫೦,೦೦೦ ನಷ್ಟನ್ನು ಗಳಿಸಿದರು. ಜೂಲಿಯೊ ಇಗ್ಲೆಸಿಯಾಸ್ ಈ ಜೋಡಿ ಕಲಾವಿದರಿಗೆ ಈ ರೀತಿಯಲ್ಲಿ ವೈಯಕ್ತಿಕವಾಗಿ ಧನ್ಯವಾದಗಳನ್ನು ಹೇಳಿದ್ದಾರೆ: 'ಮಿಯಾಮಿಯಿಂದ ಬಂದ ನಾನು ಇಂಗ್ಲಿಷ್‌ನಲ್ಲಿ ಪಡೆದ ಯಶಸ್ಸನ್ನು ನಿಮಗೆ ಹೋಲಿಸಿದರೆ ಏನೂ ಅಲ್ಲ; ಸ್ವಲ್ಪ ಮಟ್ಟಿಗೆ ಅಂತಾರಾಷ್ಟ್ರೀಯ ಪ್ರದರ್ಶನವನ್ನು ಮಾಡಿ ಡಾಸ್ ಹರ್ಮನಾಸ್‌ನಿಂದ ಬಂದು ಸ್ಪ್ಯಾನಿಶ್‌ನಲ್ಲಿ ಇಷ್ಟು ರೆಕಾರ್ಡ್‌ಗಳನ್ನು ಮಾರಾಟ ಮಾಡಲು ಹೆಚ್ಚಿನ ಧೈರ್ಯ ಬೇಕಾಗುತ್ತದೆ.'[]

VH೧ರ ೨೦೦೨ರ ಸಾಕ್ಷ್ಯಚಿತ್ರ ೧೦೦ ಗ್ರೇಟೆಸ್ಟ್ ಒನ್-ಹಿಟ್ ವಂಡರ್ಸ್ ‌ನಲ್ಲಿ, "ಮಕರೆನಾ" #೧ನೇ ಸ್ಥಾನ ಪಡೆಯಿತು. ಒಂದು ಭಿನ್ನ VH೧ ಸಾಕ್ಷ್ಯಚಿತ್ರ ೪೦ ಅವೇಸಮ್ಲಿ ಬ್ಯಾಡ್ ನಂ. ೧ ಸಾಂಗ್ಸ್ ‌ನಲ್ಲಿಯೂ "ಮಕರೆನಾ" #೧ನೇ ಸ್ಥಾನವನ್ನು ಗಳಿಸಿತು. ಇತ್ತೀಚೆಗೆ ೨೦೧೦ರಲ್ಲಿ, AOL ರೇಡಿಯೊದ ಮ್ಯಾಥಿವ್ ವಿಲ್ಕನಿಂಗ್ ೧೦೦ ಅತ್ಯಂತ ಕೆಟ್ಟ ಹಾಡುಗಳ ಪಟ್ಟಿಯಲ್ಲಿ ಈ ಹಾಡಿಗೆ #೧೦ನೇ ಸ್ಥಾನವನ್ನು ನೀಡಿದರು, ಆ ಸಂದರ್ಭದಲ್ಲಿ ಆತ ಈ ಕೆಳಗಿನ ಆದೇಶವನ್ನು ನೀಡಿದರು: "ಮೊದಲು: ನಿಮ್ಮ ಕೈಯನ್ನು ನೇರವಾಗಿ ನಿಮ್ಮ ಭುಜದಷ್ಟು ಎತ್ತರಕ್ಕೆ ಅಂಗೈ ಕೆಳಮುಖವಾಗಿರುವಂತೆ ಇಟ್ಟುಕೊಳ್ಳಿ. ನಂತರ: DJ ಅನ್ನು ಹೊಡೆಯಿರಿ."[]

ಅಮೇರಿಕಾಸ್ ಬೆಸ್ಟ್ ಡ್ಯಾನ್ಸ್ ಕ್ರೂ ನಲ್ಲಿ, ರಿಂಗ್‌ಮಾಸ್ಟರ್‌ಗಳಿಗೆ ನೀಡಿದ ವಾಕ್ ಟ್ರ್ಯಾಕ್ ಚಾಲೆಂಜ್‌ನಲ್ಲಿ ಈ ಹಾಡಿಗೆ ನೃತ್ಯ ಮಾಡಲಾಯಿತು.

ಈ ಹಾಡು ಆಸ್ಟ್ರೇಲಿಯಾದ ಶಾಲೆಗಳಲ್ಲೂ ಬಹು ಜನಪ್ರಿಯವಾಗಿದೆ, ಫಿಸಿಕಲ್ ಎಜುಕೇಶನ್ ಕರಿಕುಲಮ್ ಶಾಲೆಯಲ್ಲಿ ಇದಕ್ಕೆ ನೃತ್ಯವನ್ನು ಕಲಿಸಿಕೊಡಲಾಗುತ್ತದೆ.

ಯುನೈಟೆಡ್ ಕಿಂಗ್ಡಮ್‌ನಲ್ಲಿ ಈ ಹಾಡು ೧೯೯೬ರ ಜೂನ್‌ನಲ್ಲಿ ಬಿಡುಗಡೆಗೊಂಡಿತು ಮತ್ತು ಅದು ೧೯೯೬ರ ಆಗಸ್ಟ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿತು.[] ಇದು ಸ್ಪೈಸ್ ಗರ್ಲ್ಸ್ ಹಾಡು "ವನ್ನಾಬಿ"ಯಿಂದಾಗಿ ಪ್ರಥಮ ಸ್ಥಾನದಿಂದ ದೂರ ಉಳಿಯಿತು.[]

೧೯೯೬ರ ಪ್ರಜಾಪ್ರಭುತ್ವೀಯ ಅಧಿವೇಶನ

ಬದಲಾಯಿಸಿ

ಈ ಜನಪ್ರಿಯ ಹಾಡನ್ನು ೧೯೯೬ರ ಪ್ರಜಾಪ್ರಭುತ್ವೀಯ ರಾಷ್ಟ್ರೀಯ ಅಧಿವೇಶನದಲ್ಲಿ ವಿನೋದ ನೃತ್ಯ ಹಾಡಾಗಿ ಬಳಸಲಾಯಿತು. ಆ ಅಧಿವೇಶನವು ನಿಧಾನವಾಗಿ ಸಾಗುತ್ತಿದ್ದುದರಿಂದ ಅಥವಾ ಅದಕ್ಕೆ ಬದಲಾವಣೆಯು ಬೇಕಾಗಿದ್ದರಿಂದ, ಅಧಿವೇಶನದ ಮಹಡಿಯಾದ್ಯಂತ ಮಕರೆನಾ ಹಾಡನ್ನು ನುಡಿಸಲಾಯಿತು ಮತ್ತು ಪ್ರತಿನಿಧಿಗಳಿಗೆ ಮಕರೆನಾ ನೃತ್ಯಕ್ಕೆ ಹೆಜ್ಜೆ ಹಾಕುವಂತೆ ಪ್ರೋತ್ಸಾಹಿಸಲಾಯಿತು. ಟೈಮ್ ಮ್ಯಾಗಜಿನ್‌ನ ಪ್ರಕಾರ, ಪ್ರತಿನಿಧಿಗಳನ್ನು ಒಂದುಗೂಡಿಸಿ, ಚುನಾವಣೆಯ ಬಗ್ಗೆ ಪಕ್ಷವನ್ನು ಪ್ರಚೋದಿಸುವಂತೆ ಮಾಡುವ ಉದ್ದೇಶದಿಂದ ಈ ಹಾಡನ್ನು ಅಧಿವೇಶನದಲ್ಲಿ ನುಡಿಸಲಾಗಿತ್ತು. ಬಿಗುಮಾನಕ್ಕೆ ಹೆಸರುವಾಸಿಯಾಗಿರುವ ಉಪಾಧ್ಯಕ್ಷ ಆಲ್ ಗೋರ್ ಮಕರೆನಾವನ್ನು ಮಾಡಿದಾಗ ತನಗೆ ಯಾವುದೇ ಗೋಚರ ಚಲನೆಯು ಕಂಡುಬಂದಿಲ್ಲವೆಂದು ಹೇಳಿದರು.[]

ಸಂಗೀತ ವಿಡಿಯೊ

ಬದಲಾಯಿಸಿ

ಎರಡು ವಿಭಿನ್ನ ಸಂಗೀತ ವೀಡಿಯೊಗಳಿವೆ. ವಿನ್ಸೆಂಟ್ ಕಾಲ್ವೆಟ್ ನಿರ್ದೇಶಿಸಿದ ಹೆಚ್ಚು ಸಾಮಾನ್ಯ ಸಂಗೀತ ವೀಡಿಯೊವನ್ನು ೧೯೯೬ರಲ್ಲಿ ರಚಿಸಲಾಯಿತು, ಇದು ಲಾಸ್ ಡೆಲ್ ರಿಯೊ ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನಿರ್ವಹಿಸುವುದನ್ನು ಒಳಗೊಂಡಿತ್ತು. ಹತ್ತು ಮಂದಿ ಮಹಿಳೆಯರೂ ಸಹ (ಆಗ ತಿಳಿದಿರದಿದ್ದ ಟ್ರಾಸೀ ಎಲ್ಲಿಸ್ ರೋಸ್‌ರನ್ನೂ ಒಳಗೊಂಡು) ಆ ವಾದ್ಯ-ವೃಂದದೊಂದಿಗೆ ನೃತ್ಯ ಮಾಡಿದರು. ಈ ರೂಪಂತರವು ದಿ ಗ್ರಾಜ್ಯುಯೇಟ್ ನ ಒಂದು ಸಾಲನ್ನು ಮಾದರಿಗೆ ತೆಗೆದುಕೊಳ್ಳುತ್ತದೆ ("ಐ ಆಮ್ ನಾಟ್ ಟ್ರೈಯಿಂಗ್ ಟು ಸೆಡ್ಯೂಸ್ ಯು!") ಸಂಭಾವ್ಯ ಹಕ್ಕುಗಳ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ನಂತರದಲ್ಲಿ ತೆಗೆದು ಹಾಕಲಾಯಿತು. ಸಂಗೀತ ವಿಡಿಯೋದ ಮತ್ತೊಂದು ಸದೃಶ ರೂಪಾಂತರವು ಕಪ್ಪು ಹಾಗು ಬಿಳುಪಿನಲ್ಲಿತ್ತು ಹಾಗು ಹೆಚ್ಚು ಮಾಹಿತಿಪೂರ್ಣವಾಗಿತ್ತು, ಇದರಲ್ಲಿ ಸ್ತ್ರೀಯರು ಹಾಗು ಪುರುಷರು ನಿರ್ದಿಷ್ಟವಾದ ನೃತ್ಯದ ಹೆಜ್ಜೆಗಳನ್ನು ಪ್ರದರ್ಶಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತಿತ್ತು.

"Macarena Christmas"
ಚಿತ್ರ:Macarena Christmas.jpg
Single by Los del Río
ಬಿಡುಗಡೆ1996
ವಿಧಾನCD single, 7", 12"
ಧ್ವನಿಮುದ್ರಣ1996
ಶೈಲಿLatin
Dance-pop
ಉದ್ದ4:04
ಶೀರ್ಷಿಕೆRCA
ಗೀತ ರಚನಕಾರ(ರು)Romero Monge, Rafael Ruiz
Los del Río singles chronology
"Macarena (Bayside Boys Mix)"
(1995)
"Macarena Christmas"
(1996)
"Baila Baila"
(1999)

ಕ್ರಿಸ್ಮಸ್ ರೂಪಾಂತರ: "ಮಕರೆನಾ ಕ್ರಿಸ್ಮಸ್"

ಬದಲಾಯಿಸಿ

ಹಾಡಿನ ಅದ್ಭುತ ಯಶಸ್ಸಿನೊಂದಿಗೆ, ಹಾಡಿನ ಕ್ರಿಸ್ಮಸ್ ರೂಪಾಂತರವನ್ನು ೧೯೯೬ ಕ್ರಿಸ್ಮಸ್ ಋತುವಿಗಾಗಿ ಸಂಯೋಜಿಸಲಾಯಿತು. ಇದು ಮೂಲ ಹಾಡಿನೊಂದಿಗೆ ಸಾಂಪ್ರದಾಯಿಕ ಕ್ರಿಸ್ಮಸ್ ಸ್ತುತಿಗಳ ಸಣ್ಣ ಸಾಲುಗಳನ್ನು ಜನಪ್ರಿಯ ಖಂಡಗಳ ನಡುವೆ ಒಳಗೊಂಡಿತ್ತು (ಇದು ನಿರ್ದಿಷ್ಟವಾಗಿ: "ಜಾಯ್ ಟು ದಿ ವರ್ಲ್ಡ್," "ಜಿಂಗಲ್ ಬೆಲ್ಲ್ಸ್," "ರುಡಾಲ್ಫ್ ದಿ ರೆಡ್-ನೋಸ್ಡ್ ರೇನ್ಡೀರ್," "ವೈಟ್ ಕ್ರಿಸ್ಮಸ್" ಹಾಗು "ಆಲ್ಡ್ ಲಾಂಗ್ ಸಿನೆ" ಸಂಯೋಜನೆಗಳನ್ನು ಒಳಗೊಂಡಿದೆ).

ಸಂಗೀತ ವಿಡಿಯೋನಲ್ಲಿ, ಯುವ ನೃತ್ಯ ಕಲಾವಿದೆಯರು ಕ್ರಿಸ್ಮಸ್ ನಲ್ಲಿ ಧರಿಸಲಾಗುತ್ತಿದ್ದಂತಹ ಉಡುಪುಗಳನ್ನು ಧರಿಸಿದ್ದರು ಆದರೆ ಮೂಲ ಹಾಡಿನಲ್ಲಿ ಕಂಡುಬರುತ್ತಿದ್ದ ಹತ್ತು ಜನರಿಗೆ ಹೋಲಿಸಿದರೆ ಇಲ್ಲಿ ಕೇವಲ ಒಂಬತ್ತು ಮಂದಿ ನೃತ್ಯಗಾರ್ತಿಯರಿದ್ದರು. ಒಂದು ಹೊಸ ವಾಡಿಕೆಯ ಅನುಕ್ರಮದಿಂದ ವಿಶಿಷ್ಟತೆಯನ್ನು ಪಡೆದಿದ್ದ ಸರಣಿಗೆ (ಇಂದು ಸಾಧಾರಣವಾಗಿ ಬಳಸಲಾಗುವ ವಿಧಾನ), ಎಂಟು ಮಂದಿಯನ್ನು ತೋರಿಸಲಾಗುತ್ತಿತ್ತು, ಇದರಲ್ಲಿ ಒಬ್ಬರು ಗಾಯಕ ತಂಡದುದ್ದಕ್ಕೂ ಒಂಬತ್ತನೇ ನೃತ್ಯಗಾರ್ತಿಯೊಂದಿಗೆ ಆಗಾಗ ಪರಸ್ಪರ ಬದಲಾವಣೆ ಮಾಡಿಕೊಳ್ಳುತ್ತಿದ್ದರು.[]

ಅಧಿಕೃತ ರೂಪಾಂತರಗಳು

ಬದಲಾಯಿಸಿ
  • "ಮಕರೆನಾ" (ಮೂಲ) - ೪:೦೯
  • "ಮಕರೆನಾ" (ಬೇಸೈಡ್ ಬಾಯ್ಸ್ ರೀಮಿಕ್ಸ್) - ೩:೫೦
  • "ಮಕರೆನಾ" (ಬೇಸೈಡ್ ಬಾಯ್ಸ್ ರೀಮಿಕ್ಸ್ - ಮೂಲ ಪ್ರಚಾರ ದೃಶ್ಯ ರೂಪಾಂತರ) - ೪:೧೨
  • "ಮಕರೆನಾ" (ಬೇಸೈಡ್ ಬಾಯ್ಸ್ ರೀಮಿಕ್ಸ್- ದೃಶ್ಯ ರೂಪಾಂತರ) ೩:೪೫
  • "ಮಕರೆನಾ" (ಬ್ಯಾಸ್ ಬಂಪರ್ಸ್ ರೀಮಿಕ್ಸ್ - ಕ್ಲಬ್ ಮಿಕ್ಸ್) - ೫:೪೦
  • "ಮಕರೆನಾ" (ಬ್ಯಾಸ್ ಬಂಪರ್ಸ್ ರೇಡಿಯೋ ರೀಮಿಕ್ಸ್) - ೩:೨೭
  • "ಮಕರೆನಾ" (DJ ಪೆರೋ ಲ್ಯಾಟಿನ್ ಪಿಯಾನೋ ಮಿಕ್ಸ್) - ೫:೩೬
  • "ಮಕರೆನಾ" (ಲ ಮೆಜಕ್ಲ ಗೆರಿಲ್ಲೆರ ೧೩೦ BPM) - ೫:೩೫
  • "ಮಕರೆನಾ" (ಪಲ್ಸರ್ ಹೌಸ್ ಮಿಕ್ಸ್) - ೫:೪೦
  • "ಮಕರೆನಾ" (ರಿವರ್ ರೀ-ಮಿಕ್ಸ್೧೦೩ BPM) - ೫:೦೨
  • "ಮಕರೆನಾ" (ಆರನ್ ಸ್ಕೋಫೀಲ್ಡ್'ಸ್ ಪವರ್ ಹೌಸ್ ಮಿಕ್ಸ್) - ೬:೧೪
  • "ಮಕರೆನಾ ಕ್ರಿಸ್ಮಸ್" (ಜಾಯ್ ಮಿಕ್ಸ್) - ೪:೧೨
  • "ಮಕರೆನಾ ಕ್ರಿಸ್ಮಸ್" (ಜಾಯ್ ಮಿಕ್ಸ್ - ಕ್ಲಬ್ ರೂಪಾಂತರ) - ೫:೪೪
  • "ಮಕರೆನಾ ಪ್ರಶಸ್ತಿಗಳು" (ಹಾಂಗ್ಬಿನ್ ವಾಂಗ್ ಮಿಕ್ಸ್ - ಸಮಾರಂಭ ರೂಪಾಂತರ) - ೫:೪೯

ಪಟ್ಟಿಗಳು

ಬದಲಾಯಿಸಿ

"ಮಕರೆನಾ"

ಬದಲಾಯಿಸಿ
ವರ್ಷದ ಕೊನೆಯಲ್ಲಿ ಹೊರಬಿದ್ದ ಪಟ್ಟಿ (1996) ಸ್ಥಾನ
U.S. ಬಿಲ್ಬೋರ್ಡ್ ಹಾಟ್ 100[೧೦] ೯೮
ವರ್ಷದ ಕೊನೆಯಲ್ಲಿ ಹೊರಬಿದ್ದ ಪಟ್ಟಿ (೧೯೯೭) ಸ್ಥಾನ
U.S. ಬಿಲ್ಬೋರ್ಡ್ ಹಾಟ್ ೧೦೦[೧೧] ೮೨

"ಮಕರೆನಾ (ಬೇಸೈಡ್ ಬಾಯ್ಸ್ ಮಿಕ್ಸ್)"

ಬದಲಾಯಿಸಿ
style="width:50%;"
ಪಟ್ಟಿ (1995/1996)[೧೨][೧೩] ಅದ್ಭುತ ಯಶಸ್ಸು
ಸ್ಥಾನ
ಆಸ್ಟ್ರೇಲಿಯನ್ ARIA ಏಕಗೀತೆಗಳ ಪಟ್ಟಿ
ಆಸ್ಟ್ರಿಯನ್ ಅಗ್ರ ೭೫ ಏಕಗೀತೆಗಳ ಪಟ್ಟಿ
ಬೆಲ್ಜಿಯನ್ (ಫ್ಲ್ಯಾನ್ಡರ್ಸ್) ಅಲ್ಟ್ರಟಾಪ್ ೫೦ ಏಕಗೀತೆಗಳ ಪಟ್ಟಿ
ಬೆಲ್ಜಿಯನ್ (ವಲ್ಲೋನಿಯಾ) ಅಲ್ಟ್ರಾಟಾಪ್ ೪೦ ಏಕಗೀತೆಗಳ ಪಟ್ಟಿ
ಡ್ಯಾನಿಶ್ ಏಕಗೀತೆಗಳ ಪಟ್ಟಿ[೧೪]
ಡಚ್ ಅಗ್ರ ೪೦
ಯುರೋಚಾರ್ಟ್ ಹಾಟ್ ೧೦೦
ಫಿನ್ನಿಶ್ ಏಕಗೀತೆಗಳ ಪಟ್ಟಿ
ಫ್ರೆಂಚ್ SNEP ಏಕಗೀತೆಗಳ ಪಟ್ಟಿ
ಜರ್ಮನ್ ಅಗ್ರ೧೦೦ ಏಕಗೀತೆಗಳ ಪಟ್ಟಿ
ಐರಿಶ್ IRMA ಏಕಗೀತೆಗಳ ಪಟ್ಟಿ
ಇಟಾಲಿಯನ್ FIMI ಏಕಗೀತೆಗಳ ಪಟ್ಟಿ
ನಾರ್ವೇಜಿಯನ್ VG-ಲಿಸ್ಟ ಏಕಗೀತೆಗಳ ಪಟ್ಟಿ
ನ್ಯೂಜಿಲೆಂಡ್ RIANZ ಏಕಗೀತೆಗಳ ಪಟ್ಟಿ
ಸ್ಪ್ಯಾನಿಶ್ ಏಕಗೀತೆಗಳ ಪಟ್ಟಿ
ಸ್ವೀಡಿಶ್ ಏಕಗೀತೆಗಳ ಪಟ್ಟಿ
ಸ್ವಿಸ್ಸ್ ಅಗ್ರ ೧೦೦ ಏಕಗೀತೆಗಳ ಪಟ್ಟಿ
UK ಏಕಗೀತೆಗಳ ಪಟ್ಟಿ
U.S. ಬಿಲ್ಬೋರ್ಡ್ ಹಾಟ್ ೧೦೦
U.S. ಬಿಲ್ಬೋರ್ಡ್ ಅಗ್ರ ೪೦ ಮೇನ್ ಸ್ಟ್ರೀಮ್
U.S. ಬಿಲ್ಬೋರ್ಡ್ ರಿದಮಿಕ್ ಅಗ್ರ ೪೦
U.S. ಬಿಲ್ಬೋರ್ಡ್ ಹಾಟ್ ಲ್ಯಾಟಿನ್ ಟ್ರ್ಯಾಕ್ ಗಳು ೧೨
U.S. ಬಿಲ್ಬೋರ್ಡ್ ಹಾಟ್ ಅಡಲ್ಟ್ ಕಾಂಟೆಂಪರರಿ ೨೮
U.S. ಬಿಲ್ಬೋರ್ಡ್ ವಯಸ್ಕ ಅಗ್ರ ೪೦ ೧೯

ವರ್ಷದ ಕೊನೆಯಲ್ಲಿ ಹೊರಬಿದ್ದ ಪಟ್ಟಿಗಳು

ಬದಲಾಯಿಸಿ
U.S. ಬಿಲ್ಬೋರ್ಡ್ ಹಾಟ್ ೧೦೦[೧೬]

ವರ್ಷದ ಕೊನೆಯಲ್ಲಿ ಹೊರಬಿದ್ದ ಪಟ್ಟಿಗಳು

ಬದಲಾಯಿಸಿ
ಪಟ್ಟಿ (1990-1999) ಸ್ಥಾನ
U.S. ಬಿಲ್ಬೋರ್ಡ್ ಹಾಟ್ 100[೧೭]

"ಮಕರೆನಾ ಕ್ರಿಸ್ಮಸ್"

ಬದಲಾಯಿಸಿ
ಪಟ್ಟಿ (1996) ಅದ್ಭುತ ಯಶಸ್ಸು
ಸ್ಥಾನ
ಆಸ್ಟ್ರೇಲಿಯನ್ ARIA ಏಕಗೀತೆಗಳ ಪಟ್ಟಿ 5
ಫಿನ್ನಿಶ್ ಏಕಗೀತೆಗಳ ಪಟ್ಟಿ 12
ಫ್ರೆಂಚ್ SNEP ಏಕಗೀತೆಗಳ ಪಟ್ಟಿ 34
ನಾರ್ವೇಜಿಯನ್ ಏಕಗೀತೆಗಳ ಪಟ್ಟಿ 16
ಸ್ವೀಡಿಶ್ ಏಕಗೀತೆಗಳ ಪಟ್ಟಿ 40
U.S. ಬಿಲ್ಬೋರ್ಡ್ ಹಾಟ್ 100 57
Preceded by French SNEP number-one single
15 June 1996 - 6 July 1996
3 August 1996 - 17 August 1996
Succeeded by
"Tic, Tic Tac" by Carrapicho
"Killing Me Softly" by The Fugees
Preceded by Billboard Hot 100 number-one single
3 August 1996 - 2 November 1996
Succeeded by
Preceded by Australian ARIA Charts number-one single
31 August 1996 - 25 October 1996
Succeeded by
Preceded by Billboard Hot 100 Single of the Year
1996
Succeeded by

ರೀಮಿಕ್ಸ್ ಗಳು, ಕವರ್ ಗಳು ಹಾಗು ಅಣಕಗಳು

ಬದಲಾಯಿಸಿ
"Macarena"
ಚಿತ್ರ:Macarlosmar.jpg
Single by Los del Mar
from the album Macarena: The Hit Album
ಬಿಡುಗಡೆ1996
ವಿಧಾನCD single, 7"
ಧ್ವನಿಮುದ್ರಣ1995
ಶೈಲಿLatin
Dance-pop
ಉದ್ದ3:49
Los del Mar singles chronology
- "Macarena"
(1996)

ಲೋಸ್ ಡೆಲ್ ಮಾರ್ ರೂಪಾಂತರ

ಬದಲಾಯಿಸಿ

ಲೋಸ್ ಡೆಲ್ ಮಾರ್ ರಿಂದ ಚಿತ್ರಿತವಾದ ಹಾಡು ಪೆಡ್ರೋ ಕಾಸ್ಟಾನೋರನ್ನು ಒಳಗೊಂಡಿತ್ತು. ಮೂಲ ಗಾಯನಕ್ಕೆ ಸದೃಶವಾಗಿದ್ದು, ಅದರಿಂದ ಭಿನ್ನತೆಯನ್ನು ಹೊಂದಲು ಬಹಳ ಕಷ್ಟವೆನಿಸಿದ್ದ ಈ ರೂಪಾಂತರವನ್ನು ೧೯೯೫ರಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಾಯಿತು ಹಾಗು ನಂತರದಲ್ಲಿ ಮತ್ತೊಮ್ಮೆ ಮೂಲ ಪ್ರತಿಯು ಬಿಡುಗಡೆಯಾದ ಅದೇ ಸಮಯಕ್ಕೆ ಯುನೈಟೆಡ್ ಕಿಂಗ್ಡಮ್ ಹಾಗು ಆಸ್ಟ್ರೇಲಿಯಾದಲ್ಲಿ ಬಿಡುಗಡೆಯಾಯಿತು. UKಯಲ್ಲಿ ಇದು ಕೇವಲ #೪೩ ಸ್ಥಾನವನ್ನು ಗಳಿಸಿತು, ಆದರೆ ಬಹುತೇಕ ಎರಡು ತಿಂಗಳ ಕಾಲ ಪಟ್ಟಿಯಲ್ಲಿ ಉಳಿಯಿತು, ಲೋಸ್ ಡೆಲ್ ರಿಯೋ ರೂಪಂತರವು ಎರಡನೇ ಸ್ಥಾನವನ್ನು ಗಳಿಸುವ ಮೂಲಕ ಅದ್ಭುತ ಯಶಸ್ಸನ್ನು ಗಳಿಸಿತು. ಆಸ್ಟ್ರೇಲಿಯಾನಲ್ಲಿ, ಲೋಸ್ ಡೆಲ್ ಮಾರ್ ರೂಪಾಂತರವು ಹೆಚ್ಚು ಯಶಸ್ಸನ್ನು ಗಳಿಸಿತು ಹಾಗು ಎರಡನೇ ಸ್ಥಾನವನ್ನು ಗಳಿಸಿತು ಆದರೆ ಲೋಸ್ ಡೆಲ್ ರಿಯೋ ರೂಪಾಂತರವು ತನ್ನ ಅಗ್ರ ಸ್ಥಾನವನ್ನು ಹಾಗೆ ಉಳಿಸಿಕೊಂಡಿತ್ತು. ಕೆನಡಾದಲ್ಲಿ, ಲೋಸ್ ಡೆಲ್ ಮಾರ್ ರೂಪಾಂತರವು ಮಚ್ ಮ್ಯೂಸಿಕ್ ನಲ್ಲಿ ಹೆಚ್ಚು ಜನಪ್ರಿಯವಾಗಿತ್ತು ಹಾಗು ೧೯೯೫ರಲ್ಲಿ ರೇಡಿಯೋನಲ್ಲಿ ಅಗ್ರ ೪೦ನೇ ಸ್ಥಾನವನ್ನು ಗಳಿಸಿತು, ಮೂಲ ಹಾಡಿನ ನಂತರದ ರೂಪಂತರವು ಗಳಿಸಿದ ಜನಪ್ರಿಯತೆಯು ಕಳೆಗುಂದಿತು.

ಧ್ವನಿಮುದ್ರಿಕೆ ಪಟ್ಟಿಗಳು

ಬದಲಾಯಿಸಿ

ಆಸ್ಟ್ರೇಲಿಯನ್ CD ಏಕಗೀತೆ

  1. "ಮಕರೆನಾ" (ರೇಡಿಯೋ ಮಿಕ್ಸ್) - ೩:೪೯
  2. "ಮಕರೆನಾ" (ಬೋಲಾ ಮಿಕ್ಸ್) - ೬:೦೮

ದಿ ಚಿಪ್ ಮಂಕ್ಸ್ ಹಾಗು ದಿ ಚಿಪೆಟ್ಸ್ ರೂಪಾಂತರ

ಬದಲಾಯಿಸಿ

೧೯೯೬ರಲ್ಲಿ, ಆಲ್ವಿನ್ ಅಂಡ್ ದಿ ಚಿಪ್ ಮಂಕ್ಸ್ ಹಾಗು ದಿ ಚಿಪೆಟ್ಸ್ ತಮ್ಮ ಆಲ್ಬಮ್ ಗಾಗಿ ಇಂಗ್ಲಿಷ್ ಹಾಗು ಸ್ಪಾನಿಶ್ ಎರಡೂ ಭಾಷೆಗಳಲ್ಲಿ ಹಾಡನ್ನು ಚಿತ್ರೀಕರಿಸಿತು Club Chipmunk: The Dance Mixes ಇಂಗ್ಲಿಷ್ ರೂಪಾಂತರವು ಅತ್ಯಂತ ಜನಪ್ರಿಯ ಹಾಗು ಗುರುತು ಹಿಡಿಯಲು ಶಕ್ಯವಾದ ಚಿತ್ರಣವಾಗಿ ಹಾಗೆ ಉಳಿದಿದೆ.

ದಿ ಗ್ರೂವ್ ಗ್ರಾಸ್ ಬಾಯ್ಸ್ ರೂಪಾಂತರ

ಬದಲಾಯಿಸಿ

೧೯೯೭ರಲ್ಲಿ, ದಿ ಗ್ರೂವ್ ಗ್ರಾಸ್ ಬಾಯ್ಸ್ "ಮಕರೆನಾ"ದ ಕೌಂಟಿ ಸಂಗೀತದ ರೂಪಾಂತರವನ್ನು ಧ್ವನಿ ಮುದ್ರಣ ಮಾಡಿತು, ಜೊತೆಗೆ ಗೀತೆಯನ್ನು ಮತ್ತೆ-ರಚಿಸಿತು.[೧೮] ಈ ಹಾಡು ಹಾಟ್ ಕೌಂಟಿ ಸಾಂಗ್ಸ್ ಪಟ್ಟಿಯಲ್ಲಿ #೭೦ನೇ ಸ್ಥಾನವನ್ನು ಗಳಿಸಿತು ಹಾಗು ಬಬ್ಲಿಂಗ್ ಅಂಡರ್ ಹಾಟ್ ೧೦೦ನಲ್ಲಿ #೭ನೇ ಸ್ಥಾನವನ್ನು ಗಳಿಸಿತು.

ದಿ ಆರ್ಟ್ ಆಫ್ ಸೌಂಡ್ ಗ್ರೂಪ್ ಮಿಕ್ಸ್

ಬದಲಾಯಿಸಿ

೨೦೦೮ರಲ್ಲಿ, ಲೋಸ್ ಡೆಲ್ ರಿಯೋ, ಮಕರೆನಾದ ೧೫ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ ಹಾಡನ್ನು ರೀಮಿಕ್ಸ್ ಮಾಡಿತು. ಕ್ವಿನ್ಸೆಯನೆರ ಮಕರೆನಾ ಎಂಬ ಅವರ ಆಲ್ಬಮ್ ನಲ್ಲಿದ್ದ ಹಾಡನ್ನು, ದಿ ಆರ್ಟ್ ಆಫ್ ಸೌಂಡ್ ಸಂಗೀತ ಸಂಸ್ಥೆಯು ನಿರ್ಮಾಣ ಮಾಡಿತು ಹಾಗು T ಲೋಪೆಜ್ ಹಾಗು ದಿ D.E.Y. ಅವರನ್ನು ಒಳಗೊಂಡಿತ್ತು, ಸ್ಪಾನಿಶ್ ಹಾಗು ನಂತರದಲ್ಲಿ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಧ್ವನಿಮುದ್ರಿತವಾಯಿತು, ಇದರ ಮರುರೂಪಾಂತರವು ಕೆಲವು ಸ್ಪಾನಿಶ್ ಮ್ಯೂಸಿಕ್ ಕೇಂದ್ರಗಳಲ್ಲಿ ಮಧ್ಯಮ ಮಟ್ಟದಲ್ಲಿ ಪ್ರಸಾರಗೊಂಡಿತು, ಉದಾಹರಣೆಗೆ WSKQ-FM, KVVZ, ಹಾಗು WMEG.

ಹಾಡು ಹಾಗು ಆಲ್ಬಮ್ ನ್ನು ನವೆಂಬರ್ ೨೦೦೮ರಲ್ಲಿ IMC ರೆಕಾರ್ಡ್ಸ್ ಬಿಡುಗಡೆ ಮಾಡಿತು, ಸಂಸ್ಥೆಯ ಪ್ರಕಾರ "ಮಿಯಾಮಿಯಲ್ಲಿರುವ ದಿ ಆರ್ಟ್ ಆಫ್ ಸೌಂಡ್ ಬಾಯ್ಸ್ ಹಾಗು ಎಲ್ ಚಿನೋ ಡ್ರೆಡ್ ಲಯನ್ ಹಾಗು ಯೆಯೋನಂತಹ ಕಲಾವಿದರುಗಳ ಸಹಾಯದಿಂದ ನಾನು ಮಕರೆನಾವನ್ನು ಸಂಪೂರ್ಣವಾಗಿ ಮರುಶೋಧಿಸಿದ್ದೇವೆ, ಆದರೆ ಆ ಸ್ತ್ರೀಸಹಜ ಲಕ್ಷಣದ ಕೊರತೆಯನ್ನು ಎದುರಿಸುತ್ತಿದ್ದೇವೆ, ಹಾಗು ಇದನ್ನು T ಲೋಪೆಜ್ ನಲ್ಲಿ ಕಾಣಲು ಅವಕಾಶ ಮಾಡಿಕೊಟ್ಟ ಕ್ಯಾಷ್ ಮನಿ ರೆಕಾರ್ಡ್ಸ್ ನಮ್ಮ ಧನ್ಯವಾದಗಳು," IMC ರೆಕಾರ್ಡ್ಸ್ ಗೆ T ಲೋಪೆಜ್ ಲಾಸ್ ಏಂಜಲಿಸ್ ನ ಕ್ಯಾನ್ಡೋರ್ ಎಂಟರ್ಟೈನ್ಮೆಂಟ್ ಸ್ಟುಡಿಯೋಸ್ ನಲ್ಲಿ ಧ್ವನಿಮುದ್ರಿಸುವಾಗ ಕಣ್ಣಿಗೆ ಬಿದ್ದರು.[೧೯]

ಟಿಪ್ಪಣಿಗಳು

ಬದಲಾಯಿಸಿ
  1. "Billboard Hot 100 Chart 50th Anniversary". Billboard.com. Retrieved 2009-07-21.
  2. "Billboard Hot 100 Chart 50th Anniversary". Billboard.com. Retrieved 2009-07-21.
  3. "Spanish daily El Mundo's interview with Diana Cubillán, 1996". Elmundo.es. 1996-08-25. Retrieved 2009-07-21.
  4. "Short history of the song, featuring a photo of Los Del Rio and Cubillán". Antonioburgos.com. Archived from the original on 2008-05-22. Retrieved 2009-07-21.
  5. Wilkening, Matthew (September 11, 2010). "100 Worst Songs Ever -- Part Five of Five". AOL Radio. Retrieved December 25, 2010.
  6. "Los Del Rio - Macarena". Chart Stats. Retrieved 2010-01-17.
  7. "Singles Chart For 17/08/1996". Chart Stats. 1996-08-17. Retrieved 2010-01-17.
  8. Loevy, Robert D. (1998). The manipulated path to the White House: maximizing advantage in the Presidential Selection Process. Lanham, Maryland: University Press of America, Inc. p. 256. Retrieved 19-23-2010. {{cite book}}: Check date values in: |accessdate= (help)
  9. "YouTube clip of "Macarena Christmas (Joy Mix)"". Youtube.com. 2006-11-18. Retrieved 2009-07-21.
  10. "Billboard Top 100 - 1996". Archived from the original on 2009-06-11. Retrieved 2010-08-27.
  11. "Billboard Top 100 - 1997". Archived from the original on 2009-06-11. Retrieved 2010-08-28.
  12. "( Los del Rio > Charts & Awards > Billboard Singles )". allmusic. Retrieved ೨೦೧೦-೦೧-೧೭. {{cite web}}: Check date values in: |accessdate= (help)
  13. Steffen Hung. "Los del Rio - Macarena". austriancharts.at. Retrieved 2010-01-17.
  14. "Billboard July 6, 1996". Billboard. Retrieved 2010-12-01. {{cite web}}: Italic or bold markup not allowed in: |publisher= (help)
  15. http://www.aria.com.au/pages/aria-charts-end-of-year-charts-top-50-singles-1996.htm%7Caccessdate=2010-10-31}}
  16. "Billboard Top 100 - 1996". Archived from the original on 2009-06-11. Retrieved 2010-08-27.
  17. Geoff Mayfield (December 25, 1999). "1999 The Year in Music Totally '90s: Diary of a Decade - The listing of Top Pop Albums of the '90s & Hot 100 Singles of the '90s". Billboard. Retrieved October 15, 2010. {{cite web}}: Italic or bold markup not allowed in: |publisher= (help)
  18. Ankeny, Jason. "GrooveGrass biography". Allmusic. Retrieved ೨೧ August ೨೦೦೮. {{cite web}}: Check date values in: |accessdate= (help)
  19. "ಆರ್ಕೈವ್ ನಕಲು". Archived from the original on 2014-05-28. Retrieved 2011-05-24.