ಮಂದಾರ್‌ಮನಿ ಭಾರತದ ಪಶ್ಚಿಮ ಬಂಗಾಳ ರಾಜ್ಯದಲ್ಲಿರುವ ಒಂದು ಕಡಲಬದಿಯ ವಿಹಾರ ಗ್ರಾಮವಾಗಿದೆ. ಇದು ಬಂಗಾಳ ಕೊಲ್ಲಿಯ ಉತ್ತರ ತುದಿಯಲ್ಲಿ ಪೂರ್ವ ಮೇದಿನೀಪುರ್ ಜಿಲ್ಲೆಯಲ್ಲಿ ಸ್ಥಿತವಾಗಿದೆ. ಇದು ಪಶ್ಚಿಮ ಬಂಗಾಳದ ಅತಿ ದೊಡ್ಡ ಕಡಲಬದಿ ವಿಹಾರಧಾಮಗಳಲ್ಲಿ ಒಂದಾಗಿದ್ದು ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ.

ಇದು ಕೊಲ್ಕತ್ತ-ದೀಘಾ ಮಾರ್ಗದಲ್ಲಿ ಕೊಲ್ಕತ್ತ ವಿಮಾನ ನಿಲ್ದಾಣದಿಂದ ಹೆಚ್ಚುಕಡಿಮೆ ೧೮೦ ಕಿ.ಮಿ. ದೂರದಲ್ಲಿದೆ. ಸುಮಾರು ೧೩ ಕಿ.ಮಿ. ಉದ್ದದ ಬೀಚ್‍ನ ಮೇಲೆ ತೆವಳುವ ಕೆಂಪು ಏಡಿಗಳು ಮಂದಾರ್‌ಮನಿಯ ವಿಶೇಷ ಆಕರ್ಷಣೆಯಾಗಿದೆ. ಇದು ಭಾರತದಲ್ಲಿನ ಅತಿ ಉದ್ದದ ಚಾಲನೆ ಮಾಡಬಲ್ಲ ಬೀಚ್ ಎಂದು ವಾದಿಸಲಾಗಿದೆ.[][] ಇದು ಕೊಂಟಾಯ್ ಉಪವಿಭಾಗ ಪ್ರದೇಶದಡಿ ಸ್ಥಿತವಾಗಿದೆ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "West Bengal Tourism, Digha". Archived from the original on 9 February 2012. Retrieved 20 December 2012.
  2. "Mandarmani, A complete travel guide". Archived from the original on 1 ಜನವರಿ 2013. Retrieved 20 December 2012.


ಹೊರಗಿನ ಕೊಂಡಿಗಳು

ಬದಲಾಯಿಸಿ