ಇದು ಶಿವಮೊಗ್ಗ ಜಿಲ್ಲೆಸಾಗರ ತಾಲ್ಲೂಕಿನ ಒಂದು ಪುಟ್ಟ ಹಳ್ಳಿ. 'ಉಳುವವನೆ ಹೊಲದೊಡೆಯ ನೀತಿ 'ಜಾರಿ ಬರಲು ಕಾರಣವಾದ ಕಾಗೂಡು ಸತ್ಯಾಗ್ರಹ ದಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಊರಿನ ಹಿರಿಯರು ಸ್ವಾತಂತ್ರ ಹೋರಾಟದಲ್ಲೂ ಸಕ್ರಯರಾಗಿದ್ದರೆಂದು ಇತಿಹಾಸದ ಪುಟಗಳಿಂದ ತಿಳಿದು ಬಂದಿದೆ.ಜೋಗಕ್ಕೆ ಇಲ್ಲಿಂದ ಹತ್ತಿರ , ಸುಮಾರು ೧೨ ಕಿ.ಮಿ ಆಗುತ್ತದೆ. ಇಲ್ಲಿ ದೀವರು ಜನಾಂಗದ ಈಡಿಗ ಸಮಾಜದವರೆ ಅಧಿಕವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಮುಂದಿದೆ. ಸುಶಿಕ್ಷಿತರ ಗ್ರಾಮವಾಗಿದೆ. ವರದಾ ನದಿ ಕನ್ನೆಹೊಳೆ, ಇಲ್ಲಿ ಹರಿಯುತ್ತದೆ. ಬೆಂಗಳೂರು -ತಾಳಗುಪ್ಪ ರೈಲು ಈ ಊರಿನ ಮೂಲಕವೇ ಸಾಗುತ್ತದೆ. ಶಿಕ್ಷಕರು ಈ ಊರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ನೌಕರರ ಸಂಖ್ಯೆ ಅಧಿಕವಾಗಿದ್ದು ಮುಂದುವರಿದ ಹಳ್ಳಿಯಾಗಿದೆ. ಬಸ್ ಸೌಲಬ್ಯವಿದ್ದು ಜುಲೈ, ಆಗಷ್ಟ ನಲ್ಲಿ ಇಲ್ಲಿ ವರದಾ ನದಿ ಉಕ್ಕಿ ಹರಿದು ನೆರೆ ತರುತ್ತಾ ರೈತರಿಗೆ ಅಪಾರ ನಷ್ಟ ಉಂಟುಮಾಡುತ್ತದೆ. ಈ ಬಗ್ಗೆ ಸರಕಾರಗಳು ಹೆಚ್ಚಿನ ಗಮನ ಹರಿಸಿಲ್ಲ. .ಮಾರಿಕಾಂಬ ಜಾತ್ರೆಯು ಒಂಭತ್ತು ವರುಷಕೊಮ್ಮೆ ಸಡಗರ ಸಂಭ್ರಮದಿಂದ ನಡೆಯುತ್ತದೆ. ಹಾಗೂ ಊರಿನ ಕೆಲವು ವ್ಯಾಜ್ಯಗಳನ್ನು ಗ್ರಾಮ ಸುಧಾರಣಾ ಸಮಿತಿಯೇ ಬಗೆಹರಿಸಿದ ಉದಾಹರಣೆಗಳಿವೆ.ಹಾಗೂ ಊರಿನ ಯುವಕರುಗಳು ವರುಷದಲ್ಲಿ ಅವಾಗವಾಗ ಕ್ರಿಕೆಟ್ ಹಾಗೂ ಕಬ್ಬಡ್ಡಿಯಲ್ಲಿ ಪಾರಿತೋಷಕಗಳನ್ನ ಗೆದ್ದುಕೊಂಡು ಬರುತ್ತಾರೆ.

"https://kn.wikipedia.org/w/index.php?title=ಮಂಡಗಳಲೆ&oldid=1167216" ಇಂದ ಪಡೆಯಲ್ಪಟ್ಟಿದೆ